Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
Cancer Survivors Day 2023 : ಕ್ಯಾನ್ಸರ್ ಚಿಕಿತ್ಸೆಯ ನಂತರ ತೂಕ ಹೆಚ್ಚಿಸಿಕೊಳ್ಳುವುದು ಹೇಗೆ?
ಸ್ತನ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಅನೇಕರು ತಮ್ಮ ತೂಕ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಜನರು ಸಿಕ್ಕಾಪಟ್ಟೆ ತೂಕ ಕಳೆದುಕೊಂಡು ಸಣ್ಣಗಾಗಿ ಬಿಡುತ್ತಾರೆ. ಇದಕ್ಕೆ ಕಾರಣ ಕಿಮೋಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಾಂತಿ ಅಥವಾ ಅತಿಸಾರದಂತಹ ಸಮಸ್ಯೆಗಳು ಅವರನ್ನು ಕಾಡುತ್ತದೆ. ಇದರಿಂದ ಆಯಾಸಗೊಂಡು ತೂಕ ಕಳೆದುಕೊಳ್ಳು ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸರಿಯಾದ ತೂಕವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ಈ ಎಲ್ಲಾ ಸಮಸ್ಯೆಗಳು ಕಿಮೋಥೆರಪಿ ಚಿಕಿತ್ಸೆಯ ಅಡ್ಡಪರಿಣಾಮದಿಂದ ಉಂಟಾಗುತ್ತದೆ. ಇನ್ನೂ ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಮತ್ತು ನಿಮ್ಮನ್ನು ಸೋಂಕಿಗೆ ಒಳಗಾಗುವಂತೆ ಮಾಡುತ್ತದೆ. ಅಷ್ಟಕ್ಕು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅಥವಾ ಕ್ಯಾನ್ಸರ್ ನ ಚಿಕಿತ್ಸೆಯ ನಂತರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ತೂಕ ಹೆಚ್ಚಿಸಿಕೊಳ್ಳೋದಕ್ಕೆ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

ತೂಕವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ:
* ಪ್ರತಿ 1 ಅಥವಾ 2 ಗಂಟೆಗಳಿಗೊಮ್ಮೆ ಸಣ್ಣದಾಗಿ ಊಟ ಅಥವಾ ತಿಂಡಿಗಳನ್ನು ತಿನ್ನಲು ಪ್ರಯತ್ನಿಸಿ. ಸ್ಟ್ರಿಂಗ್ ಚೀಸ್, ಉಪ್ಪು ರಹಿತ ಕಾಳುಗಳು, ಕಡಲೆಕಾಯಿ, ಡ್ರೈ ಫ್ರೂಟ್ಸ್, ಬೇಯಿಸಿದ ಮೊಟ್ಟೆಗಳು, ಎನರ್ಜಿ ಬಾರ್‌ಗಳು ಮತ್ತು ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಸೇವಿಸುತ್ತಿರಿ
* ಆದಷ್ಟು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಸ್ತನ ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಕೆಲವು ಮಹಿಳೆಯರಿಗೆ ಕೊಬ್ಬಿನಾಂಶವಿರೋ ಆಹಾರಗಳು ಇಷ್ಟ ಆಗೋದಿಲ್ಲ. ಅಂತವರು ಪ್ರೋಟೀನ್ ಹೆಚ್ಚಿರುವ ಆದರೆ ಕಡಿಮೆ ಕೊಬ್ಬಿನಂಶವಿರುವ ಮೊಸರು, ಚೀಸ್, ಮೊಟ್ಟೆಗಳು, ಮಾಂಸ, ಮತ್ತು ಮೀನು ತಿನ್ನಿರಿ.
* ಪೌಷ್ಠಿಕಾಂಶವುಳ್ಳ, ಪಿಷ್ಟಯುಕ್ತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಹಣ್ಣು ಅಥವಾ ತರಕಾರಿ ರಸ, ಜೋಳ, ಬಟಾಣಿ, ಬಾಳೆಹಣ್ಣುಗಳು, ಚೆರ್ರಿ ಹಣ್ಣುಗಳು, ಮಾವಿನಹಣ್ಣುಗಳು, ಸಿಹಿ ಗೆಣಸು ಸೇವಿಸಿ.
ಕ್ಯಾನ್ಸರ್ ಚಿಕಿತ್ಸೆ ನಂತರ ತೂಕ ಹೆಚ್ಚಿಸಲು ಏನು ಮಾಡಬೇಕು?
ನೀವು ಚಿಕಿತ್ಸೆಯ ಸಮಯದಲ್ಲಿ ಕಳೆದುಕೊಂಡ ತೂಕವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೆ ನೀವು ಸಾಕಷ್ಟು ಪ್ರೋಟೀನ್ ಪಡೆಯುತ್ತಿರೋದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ಡಯೇಟಿಶನ್ ಸಲಹೆ ಕೂಡ ಪಡೆಯಬಹುದು.
* ಯಾವುದಾದರೂ ಆಹಾರ ತಯಾರಿಸುವಾಗ ಹಾಲು ಹೆಚ್ಚಾಗಿ ಬಳಸಿ
* ಕುಕೀಗಳು, ಬ್ರೆಡ್‌ಗಳು, ಕೇಕ್‌ಗಳು, ಪ್ಯಾನ್‌ಕೇಕ್‌ಗಳನ್ನು ತಿನ್ನಿ
* ಸ್ಯಾಂಡ್ ವಿಚ್ ಜೊತೆಗೆ ಬೇಯಿಸಿದ ಮೊಟ್ಟೆ ಸೇರಿಸಬಹುದು. ಇನ್ನೂ ಸಲಾಡ್ ಆಗಾಗ್ಗೆ ತಿನ್ನುತ್ತಿರಿ
* ಆದಷ್ಟು ಸಿಹಿ ಗೆಣಸನ್ನು ಸೇವಿಸಿ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಮತ್ತು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ ಹೆಚ್ಚಿನ ಪ್ರೊಟೀನ್ ಪಡೆಯಲು ಎಂತಹ ಆಹಾರ ಉತ್ತಮ?
* ಚೀಸ್, ಸ್ಯಾಂಡ್ ವಿಚ್, ತರಕಾರಿಗಳು, ಸೂಪ್, ಪಾಸ್ತಾ, ಅನ್ನ ಮತ್ತು ನೂಡಲ್ಸ್ ಸೇವಿಸಬಹುದು
* ಮಾಂಸಾಹಾರ, ಮೀನು, ತರಕಾರಿಗಳು
* ಯಾವಗೆಲ್ಲಾ ಸಾಧ್ಯವೋ ಆಗ ನೀರಿನ ಬದಲಿಗೆ ಹಾಲಿನಲ್ಲಿ ನಿಮ್ಮ ಆಹಾರವನ್ನು ತಯಾರಿಸಿ ತಿನ್ನಿ
* ಮೊಸರು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಉತ್ತಮ
* ಕಾಫಿ, ಟೀ, ಹಾಟ್ ಚಾಕಲೇಟ್ ಮತ್ತು ಐಸ್ ಕ್ರೀಮ್ ಇತ್ಯಾದಿಗಳನ್ನು ಸೇವಿಸಿ
* ಬೆಣ್ಣೆಹಣ್ಣು ಕೂಡ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು ಇದನ್ನು ಕೂಡ ಸೇವನೆ ಮಾಡಬಹುದು
ಒಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಯ ನಂತರ ತೂಕ ಕಳೆದುಕೊಳ್ಳುವ ಭಯ ಇದ್ದರೆ ಅಥವಾ ತೂಕ ಕಳೆದುಕೊಂಡಿದ್ದರೆ ಈ ಆಹಾರಗಳನ್ನು ಚೆನ್ನಾಗಿ ತಿನ್ನಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
