Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೇನಿನಲ್ಲಿ ಸ್ಪೂನ್ ಹಾಕಿಡುತ್ತಿದ್ದೀರಾ? ಯಾವ ಬಾಟಲಿಯಲ್ಲಿ ಜೇನು ತುಂಬಿಡುವದು ಸುರಕ್ಷಿತ?
ಹಿಂದಿನ ಕಾಲದಲ್ಲಿ ಜೇನು ಹೇಗೆ ಸಂಗ್ರಹಿಸಿಡುತ್ತಿದ್ದರು ಎಂದು ನೋಡಿದರೆ ಗಾಜಿನ ಬಾಟಲಿಗಳು, ಭರಣಿ ಇವುಗಳಲ್ಲಿ ಇಡುತ್ತಿದ್ದರು, ಆಧುನಿಕತೆ ಬಂದಂತೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಯ್ತು, ಪ್ಲಾಸ್ಟಿಕ್ ಬಾಟಲಿನಲ್ಲಿ ಜೇನುಗಳನ್ನು ತುಂಬಿಡುವುದನ್ನು ನೋಡುತ್ತೇವೆ, ಅಲ್ಲದೆ ಜೇನು ಬಳಸುವಾಗ ಕೂಡ ನಾವು ಜೇನಿಗೆ ಒಂದು ಸ್ಪೂನ್ ಹಾಕಿರುತ್ತೇವೆ, ಸಾಮಾನ್ಯವಾಗಿ ಸ್ಟೀಲ್‌ನ ಸ್ಪೂನ್ ಬಳಸುತ್ತೇವೆ, ಆದರೆ ಈ ರೀತಿ ಸ್ಪೂನ್ ಹಾಕಬಹುದೇ, ಯಾವ ರೀತಿಯ ಸ್ಪೂನ್ ಬಳಸಬಾರದು ಎಂದು ನೋಡೋಣ ಬನ್ನಿ:

ಜೇನಿಗೆ ಸ್ಪೂನ್ ಹಾಕಬಾರದೇ?
ಜೇನಿಗೆ ಸ್ಪೂನ್ ಹಾಕಿ ಸ್ವಲ್ಪ ಜೇನು ತೆಗೆಯುವುದರಿಂದ ಯಾವುದೇ ತೊಂದರೆಯಿಲ್ಲ, ಆದರೆ ಸ್ಪೂನ್ ಹಾಗೆಯೇ ಜೇನಿನಲ್ಲಿಯೇ ಹಾಕಿಡುವುದು ಅಷ್ಟೊಂದು ಒಳ್ಳೆಯದಲ್ಲ, ನೀವು ಸ್ಪೂನ್ ಹಾಗೆ ಹಾಕಿಟ್ಟಾಗ ಸ್ಪೂನ್‌ನಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಅದು ಸುರಕ್ಷತೆ ಅಲ್ವೇ ಅಲ್ಲ.
ಏಕೆ ಸ್ಪೂನ್ ಬಳಸಬಾರದು ಎಂದು ಹೇಳಲಾಗುವುದು?
ಹಿಂದೆಯಲ್ಲಾ ತಾಮ್ರ, ಕಂಚಿನ ಸ್ಪೂನ್ ಬರ್ತಾ ಇತ್ತು, ಅವುಗಳನ್ನು ಜೇನಿನಲ್ಲಿ ಹಾಕಿಟ್ಟಾಗ ಜೇನಿನೊಂದಿಗೆ ರಿಯಾಕ್ಟ್ ಆಗಿ ಜೇನಿನಲ್ಲಿರುವ ಆರೋಗ್ಯಕರ ಅಂಶಗಳು ಹಾಳಾಗುವ ಸಾಧ್ಯತೆ ಹೆಚ್ಚು.
ಆದರೆ ಸ್ಟೈನ್‌ಲೆಸ್ ಸ್ಟೀಲ್ ಸ್ಪೂನ್ ಬಳಸುವುದರಿಂದ ಆ ಬಗೆಯ ಸಮಸ್ಯೆವಿಲ್ಲ
ಸ್ಟೈನ್‌ಲೆಸ್ ಸ್ಟೀಲ್ ಸ್ಪೂನ್ ಬಳಸಿದಾಗ ಆ ರೀತಿ ಸ್ಪೂನ್‌ನಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ, ಹಾಗಾಗಿಯೇ ಸ್ಪೂನ್ ಬಳಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ತುಂಬಾ ದಿನಗಳವರೆಗೆ ಜೇನಿನಲ್ಲಿ ಸ್ಪೂನ್ ಹಾಕಿಡುವ ಬದಲಿಗೆ ಜೇನು ಬೇಕಾದಾಗ ನೀರಿನಂಶ ಇಲ್ಲದ, ಟವಲ್‌ನಿಂದ ಒರೆಸಿದ ಸ್ಪೂನ್ ಬಳಸುವುದು ಒಳ್ಳೆಯದು.
ಜೇನನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಿ
ಜೇನು ಮಾರಾಟ ಮಾಡುವವರು ಪ್ಲಾಸ್ಟಿಕ್ ಬಾಟಲಿಯನ್ನು ಜೇನು ತುಂಬಿ ಕೊಡ್ತಾರೆ, ಆದರೆ ನೀವು ಅದನ್ನು ತಂದು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದ ಗಾಜಿನ ಬಾಟಲಿಯಲ್ಲಿ ಹಾಕಿಡಿ. ಗಾಜಿನ ಬಾಟಲಿಯಲ್ಲಿ ಹಾಕಿಟ್ಟರೆ ಸುರಕ್ಷಿತ. ಪ್ಲಾಸ್ಟಿಕ್ ಬಾಟಲಿನಲ್ಲಿ ತುಂಬಾ ಸಮಯ ಇಟ್ಟರೆ ಅದು ರಿಯಾಕ್ಟ್ ಆಗಿ ಜೇನಿನಲ್ಲಿರುವ ಒಳ್ಳೆಯ ಗುಣಗಳು ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಗಾಜಿನ ಬಾಟಲಿಯಲ್ಲೇ ಜೇನು ತುಂಬಿಡಿ.
ತುಂಬಾ ಸಮಯ ಇಟ್ಟಾಗ ಜೇನು ಹಾಳಾಗುವುದೇ?
ಜೇನು ಎಷ್ಟು ಸಮಯವಿಟ್ಟರೂ ಹಾಳಾಗುವುದಿಲ್ಲ, ಆದರೆ ತುಂಬಾ ಸಮಯ ಇಟ್ಟಾಗ ಸಕ್ಕರೆ ಹರಳು ರೀತಿಯಲ್ಲಿ ಜೇನು ಗಟ್ಟಿಯಾಗಬಹುದು, ಬಣ್ಣ ಇನ್ನಷ್ಟು ಗಾಢವಾಗಬಹುದು ಆದ್ದರಿಂದ ತಿನ್ನುವುದರಿಂದ ದೇಹಕ್ಕೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಈ ಕಾಡು ಜೇನಾದರೆ ಸ್ವಲ್ಪ ಹುಳಿ ಬರುತ್ತದೆ.
ವರ್ಷ ಕಳೆದ ನೀವು ತಂದ ಜೇನು ಬದಲಾದರೆ ಅದು ಒಳ್ಳೆಯ ಲಕ್ಷಣ
ಜೇನು ತಂದು ವರ್ಷಗಟ್ಟಲೆ ಅಷ್ಟೇ ಏಕೆ ದಶಕಗಳವರೆಗೆ ಇಡಬಹುದು ಅಂಥ ಜೇನು ಬಳಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಅಲ್ಲದೆ ನಿಮ್ಮ ಮನೆಯಲ್ಲಿ ಹಳೆಯ ಜೇನು ಇದ್ದು ಆ ಜೇನು ಸಕ್ಕರೆ ಹರಳು ರೀತಿ ಕಟ್ಟುತ್ತಿದೆ ಎಂದಾದರೆ ಅದು ಗುಣಮಟ್ಟದ ಜೇನು, ಯಾವುದೇ ಕಲಬೆರಿಕೆಯಾಗಿಲ್ಲ ಎಂದು ತಿಳಿಯಬಹುದು.
ಶುದ್ಧ ಜೇನನ್ನು ಮನೆಮದ್ದಾಗಿ ಬಳಸಲಾಗುವುದು, ಅಲ್ಲದೆ ಕೆಲವೊಂದು ಆಹಾರ ಮಾಡುವಾಗ ಬಳಸಬಹುದು. ಜೇನನ್ನು ಕುದಿಸಬಾರದು ಎಂದು ಹೇಳಲಾಗುವುದು. ಜೇನು ಕುದಿಸಿದರೆ ಅದರ ಒಳ್ಳೆಯ ಸತ್ವಗಳು ಹಾಲಾಗುವುದು.
ಪ್ರತಿದಿನ ಜೇನು ಸೇವನೆ ಕೂಡ ಒಳ್ಳೆಯದು, ದಿನಾ ಒಂದು ಚಮಚ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಮೈ ತೂಕ ನಿಯಂತ್ರಿಸಬಹುದು, ಆದರೆ ಅತಿಯಾಗಿ ಬಳಸಬೇಡಿ. ಮಿತಿಯಲ್ಲಿದ್ದರೆ ಯಾವುದೇ ಸಮಸ್ಯೆ ಇರಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications