Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ರೊಟೀನ್ ಪೌಡರ್ ತೆಗೆದುಕೊಳ್ಳುವವರು ಈ ತಪ್ಪುಗಳನ್ನು ಮಾಡಿದರೆ ಮೈ ತೂಕ ಹೆಚ್ಚುವುದು
ಜಿಮ್‌ನಲ್ಲಿ ವರ್ಕೌಟ್ ಮಾಡುವವರು ಪ್ರೊಟೀನ್ ಶೇಕ್ ಕುಡಿಯುತ್ತಾರೆ. ವ್ಯಾಯಾಮದ ಬಳಿಕ ಚೇತರಿಸಿಕೊಳ್ಳಲು ಪ್ರೊಟೀನ್ ಶೇಕ್ ಕುಡಿಯುತ್ತಾರೆ. ಆದರೆ ಈ ಪ್ರೊಟೀನ್ ತೂಕ ಹೆಚ್ಚಿಸುವುದೇ? ಎಷ್ಟು ಪ್ರೊಟೀನ್ ಸೇವಿಸಬೇಕು ಎಂಬೆಲ್ಲಾ ಮಾಹಿತಿ ನೋಡೋಣ ಬನ್ನಿ:
ಪ್ರೊಟೀನ್ ಪೌಡರ್‌ನಿಂದ ತೂಕ ಹೆಚ್ಚಾಗಲು ಕಾರಣವೇನು?
ಪ್ರೊಟೀನ್ ಪೌಡರ್‌ನಿಂದ ಮೈ ತೂಕ ಹೆಚ್ಚಾಗಲು ಕಾರಣಗಳು
* ಕ್ಯಾಲೋರಿ ಸರ್‌ಪ್ಲಸ್: ನಿಮ್ಮ ದಿನದ ಕ್ಯಾಲೋರಿ ಹಾಗೂ ಪ್ರೊಟೀನ್ ಕ್ಯಾಲೋರಿ ಬ್ಯಾಲೆನ್ಸ್ ಮಾಡಬೇಕು, ಇಲ್ಲದಿದ್ದರೆ ಮೈ ತೂಕ ಹೆಚ್ಚಾಗಬಹುದು. ನೀವು ಪ್ರೊಟೀನ್ ಶೇಕ್ ಕುಡಿದಾಗ ನಿಮ್ಮ ದೇಹಕ್ಕೆ ಅಗ್ಯತವಾದ ಕ್ಯಾಲೋರಿ ಇರುತ್ತದೆ, ಆದ್ದರಿಂದ ಆಹಾರದಲ್ಲಿ ಕ್ಯಾಲೋರಿಯಂಶ ಕಡಿಮೆ ಇರುವಂತೆ ನೋಡಿಕೊಳ್ಳಿ.

ಹೊಟ್ಟೆ ಉಬ್ಬುವುದು: ಪ್ರೊಟೀನ್‌ನಲ್ಲಿ ಶುಗರ್ ಆಲ್ಕೋಹಾಲ್ ಪ್ರಮಾಣ ಇರುವುದರಿಂದ ಹೊಟ್ಟೆ ಉಬ್ಬಿದಂತೆ ಅನಿಸುವುದು.
ಪ್ರೊಟೀನ್ ಪೌಡರ್ ಸೇವಿಸುವವರು ಈ ತಪ್ಪು ಮಾಡಿದರೆ ಮೈ ತೂಕ ಹೆಚ್ಚಾಗುವುದು?
ಪ್ರೊಟೀನ್ ಪೌಡರ್ ಸೇವಿಸುವುದರಿಂದ ಮೈ ತೂಕ ಹೆಚ್ಚಾಗುವುದೇ?
ಸರಿಯಾದ ಪ್ರಮಾಣದಲ್ಲಿ ಬಳಸದಿರುವುದು: ಪ್ರತಿಯೊಂದು ಬ್ರ್ಯಾಂಡ್‌ನ ಪ್ರೊಟೀನ್‌ನಲ್ಲಿ ಒಂದು ಸರ್ವ್‌ನಲ್ಲಿ ಇಂತಿಷ್ಟೇ ಪ್ರೊಟೀನ್ ಅಂಶಗಳಿರುತ್ತದೆ, ಅದಷ್ಟೇ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಇದರಲ್ಲಿ ಹೆಚ್ಚು ಕಡಿಮೆಯಾದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.
ಅತ್ಯಧಿಕ ಕಾರ್ಬ್ಸ್ ಮತ್ತು ಕೊಬ್ಬಿನಂಶ: ಪ್ರೊಟೀನ್ ಪೌಡರ್‌ನಲ್ಲಿ ಇತರ ಪೋಷಕಾಂಶಗಳಿರುತ್ತದೆ, ಆದರೆ ಇದರಲ್ಲಿ ಕಾರ್ಬ್ಸ್ ಹಾಗೂ ಕೊಬ್ಬಿನಂಶ ಅಧಿಕವಿರುವುದರಿಂದ ಮೈ ತೂಕ ಹೆಚ್ಚಾಗುವುದು.
ದೈಹಿಕ ಚಟುವಟಿಕೆ ಇಲ್ಲದಿರುವುದು: ಪ್ರೊಟೀನ್ ಕುಡಿದರೆ ಅದಕ್ಕೆ ದೈಹಿಕ ವ್ಯಾಯಾಮ ಮಾಡಬೇಕು, ಆದರೆ ದೈಹಿಕ ವ್ಯಾಯಾಮ ಮಾಡದೇ ಇದ್ದರೆ ಮೈ ತೂಕ ಹೆಚ್ಚಾಗುವುದು.
ಯಾವ ಬಗೆಯ ಪ್ರೊಟೀನ್ ಪೌಡರ್ ಎಂಬುವುದು ಕೂಡ ಮ್ಯಾಟರ್ ಆಗುತ್ತೇ?
ಮಾರ್ಕೆಟ್‌ನಲ್ಲಿ ಅನೇಕ ಬಗೆಯ ಪ್ರೊಟೀನ್ ಪೌಡರ್ ಇರುತ್ತದೆ, ಇದು ಕೂಡ ಕೆಲವರಿಗೆ ಮೈ ತೂಕ ಹೆಚ್ಚಿಸುವುದು.
ಸಾಮಾನ್ಯವಾಗಿ ದೊರೆಯುವ ಪ್ರೊಟೀನ್ ಪೌಡರ್‌ಗಳು
Whey ಪ್ರೊಟೀನ್: ವ್ಹೇ ಪ್ರೊಟೀನ್ ಇದು ಚೀಸ್ ಪ್ರೊಟೀನ್ ಆಗಿದ್ದು ಇದನ್ನು ಸೇವಿಸುವುದರಿಂದ ಸ್ನಾಯು ಖಂಡಗಳು ಬಲವಾಗುವುದು.
ಕೇಸಿನ್ ಪ್ರೊಟೀನ್ (Casein protein) ಇದು ಹಾಲಿನ ಪೊಟೀನ್ ಆಗಿದ್ದು, ಇದನ್ನು ವ್ಯಾಯಾಮದ ಬಳಿಕ ಸೇವಿಸಿದರೆ ಸ್ನಾಯುಗಳು ಬಲವಾಗುವುದು.
ಸೋಯಾ ಪ್ರೊಟೀನ್: ಇದು ಸಸ್ಯಾಹಾರದ ಪ್ರೊಟೀನ್ ಆಗಿದೆ. ಈ ಸೋಯಾ ಪ್ರೊಟೀನ್ ಅನ್ನು ವೇಗನ್ ಡಯಟ್ ಫಾಲೋ ಮಾಡುವವರು ಸೇವಿಸುತ್ತಾರೆ.
Hemp ಪ್ರೊಟೀನ್: ಸೆಣಬಿನ ಬೀಜ ಬಳಸಿ ಈ ಪ್ರೊಟೀನ್ ಪೌಡರ್ ಬಳಸಲಾಗುವುದು.
ಪಿಯಾ ಪ್ರೊಟೀನ್: ಇದು ಕೂಡ ಸಸ್ಯ ಮೂಲದಿಂದ ತಯಾರಿಸಿದ ಪ್ರೊಟೀನ್ ಪೌಡರ್ ಇದಾಗಿದೆ.
ಈ ಪ್ರೊಟೀನ್ ಪೌಡರ್ ಸೇವಿಸಿದಾಗ ಅದಕ್ಕೆ ತಕ್ಕಂತೆ ವರ್ಕೌಟ್ ಮಾಡಬೇಕು, ಇಲ್ಲದಿದ್ದರೆ ಮೈ ತೂಕ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
