Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣ ಈ ಬ್ರೊಕೊಲಿ
ಬ್ರೊಕೊಲಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ನೋಡೋದಕ್ಕೆ ಹೂಕೋಸಿನಂತೆ ಇರುತ್ತೆ, ಆದರೆ ಬಣ್ಣ ಮಾತ್ರ ಕಡು ಹಸಿರು ಬಣ್ಣ. ರುಚಿಯೂ ಹೆಚ್ಚು ಕಡಿಮೆ ಹೂಕೋಸು ತಿಂದಂತೆ ಅನುಭವವಾಗುತ್ತದೆ. ಜಿಮ್‌ಗೆ ಹೋಗುವವರಿಗೆ ಬ್ರೊಕೊಲಿ ತಿನ್ನೋದಕ್ಕೆ ಸೂಚಿಸಲಾಗುತ್ತದೆ. ಅದ್ರಲ್ಲೂ ಆರೋಗ್ಯದ ದೃಷ್ಟಿಯಿಂದ ಇದು ತುಂಬಾನೇ ಒಳ್ಳೆಯದು. ಹಾಗಾದ್ರೆ ಬ್ರೊಕೊಲಿ ಪ್ರತಿ ನಿತ್ಯ ತಿನ್ನುವುದರಿಂದ ಏನು ಲಾಭ? ಇದರಿಂದ ಯಾವೆಲ್ಲಾ ರೋಗಗಳನ್ನು ತಡೆಗಟ್ಟೋದಕ್ಕೆ ಸಹಾಯವಾಗುತ್ತೆ ಅನ್ನೋದನ್ನು ತಿಳಿಯೋಣ.

1. ವಿಟಮಿನ್, ಮಿನರಲ್‌ನಿಂದ ಸಮೃದ್ಧವಾಗಿದೆ
ಬ್ರೊಕೊಲಿಯು ವಿಟಮಿನ್, ಮಿನರಲ್, ಪೈಬರ್‌ನಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಬ್ರೊಕೊಲಿಯನ್ನು ಹಸಿ ಅಥವಾ ಬೇಯಿಸಿ ಕೂಡ ತಿನ್ನಬಹುದು. ಇದ್ರಲ್ಲಿ ಮಿಟಮಿನ್ ಸಿ ಸಮೃದ್ಧವಾಗಿದೆ. ಆದರೆ ಇದನ್ನು ಅತಿಯಾಗಿ ಬೇಯಿಸೋದಕ್ಕೆ ಹೋಗಬೇಡಿ ಸತ್ವ ಕಳೆದುಕೊಂಡು ಬಿಡುತ್ತದೆ. ಹೀಗಾಗಿ ಇದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
2. ಉರಿಯೂತ ಕಡಿಮೆ ಮಾಡುತ್ತದೆ
ಬ್ರೊಕೊಲಿಯು ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದ್ದು ಅದು ನಿಮ್ಮ ದೇಹದ ಅಂಗಾಂಶಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಂಬಾಕು ಸೇವಿಸುವವರ ಮೇಲೆ ಅಧ್ಯಯನವನ್ನು ನಡೆಸಲಾಗಿದ್ದು ಬ್ರೊಕೊಲಿ ಸೇವಿಸುವುದರಿಂದ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂದು ಪತ್ತೆ ಹಚ್ಚಲಾಗಿದೆ.
3. ವಿವಿಧ ರೀತಿಯ ಕ್ಯಾನ್ಸರ್ ತಡೆಗಟ್ಟುತ್ತದೆ
ಬ್ರೊಕೊಲಿಯು ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ. ಇನ್ನೂ ಬ್ರೊಕೊಲಿ ಸೇವಿಸುವುದರಿಂದ ಸ್ತನ, ಮೂತ್ರಪಿಂಡದ, ಕರುಳಿನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆಗೊಳಿಸುತ್ತಂತೆ. ಹೀಗಾಗಿ ನಿತ್ಯ ಬ್ರೊಕೊಲಿ ಸೇವಿಸುವುದು ಉತ್ತಮ.
4. ಹೃದಯ ಆರೋಗ್ಯಕ್ಕೆ ಉತ್ತಮ
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಕ್ಕೆ ತೊಂದರೆ ಉಂಟಾಗುತ್ತದೆ. ಆದರೆ ಬ್ರೊಕೊಲಿ ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಬಹುದು. ಇನ್ನೂ ಕೆಲ ಅಧ್ಯಯನಗಳ ಪ್ರಕಾರ ಫೈಬರ್‌ನಿಂದ ಸಮೃದ್ಧವಾಗ ಬ್ರೊಕೊಲಿ ನಿತ್ಯ ಸೇವಿಸುವುದರಿಂದ ಹೃದಯಾಘಾತದ ಅಪಾಯದಿಂದಲೂ ತಪ್ಪಿಸಿಕೊಳ್ಳಬಹುದು.
5. ಮಲಬದ್ಧತೆ ಹಾಗೂ ಡಯಾಬಿಟೀಸ್ ನಿಯಂತ್ರಿಸುತ್ತದೆ
ಬ್ರೊಕೊಲಿಯು ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು ಇದು ಜೀರ್ಣಕ್ರಿಯೆಗೆ ಸಹಕರಿಸುವುದಲ್ಲದೇ ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನೂ ನಿತ್ಯ ಬ್ರೊಕೊಲಿಯನ್ನು ಸೇವಿಸುವುದು ಮಧುಮೇಹ ರೋಗಿಗಳಿಗೆ ತುಂಬಾನೇ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
6. ಮೆದುಳಿನ ಆರೋಗ್ಯಕ್ಕೆ ಉತ್ತಮ
ಬ್ರೊಕೊಲಿಯಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಮೆದುಳು ಹಾಗೂ ನರ ಅಂಗಾಂಶಕ್ಕೆ ತುಂಬಾನೇ ಒಳ್ಳೆಯದು. ಬ್ರೊಕೊಲಿಯಂತಹ ಕಡು ಹಸಿರು ತರಕಾರಿಗಳನ್ನು ದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ವಯಸ್ಸಾದವರಲ್ಲಿ ಮಾನಸಿಕ ಕುಸಿತವನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಿಂದ ಸಾಭೀತಾಗಿದೆ. ಹೀಗಾಗಿ ವಯಸ್ಸಾದವರ ಆರೋಗ್ಯದ ದೃಷ್ಟಿಯಿಂದಲೂ ಬ್ರೊಕೊಲಿ ಒಳ್ಳೆಯದು.
7. ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಅತಿನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಓಝೋನ್ ಪದರದ ಸವಕಳಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಚರ್ಮದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಬ್ರೊಲಿಯಲ್ಲಿರುವ ಅತ್ಯಗತ್ಯ ಜೈವಿಕ ಸಕ್ರಿಯ ಸಂಯುಕ್ತವು ಸಲ್ಫೊರಾಫೇನ್, ಚರ್ಮದ ಮೇಲೆ ಯುವಿ ವಿಕಿರಣ ಪರಿಣಾಮ ಮತ್ತು ಕಾರ್ಸಿನೋಜೆನಿಕ್ ರೂಪಾಂತರಗಳಿಂದ ರಕ್ಷಿಸುತ್ತದೆ.
8. ಯಕೃತ್ತಿನ ಆರೋಗ್ಯಕ್ಕೆ ಉತ್ತಮ
ಬ್ರೊಕೊಲಿಯಲ್ಲಿರುವ ಸಾರಗಳು ಯಕೃತ್ತನ್ನು ರಕ್ಷಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಯಕೃತ್ತಿಗೆ ಹಾನಿಯುಂಟುಮಾಡುವ ಸೀರಮ್ ಕಿಣ್ವಗಳು ಮತ್ತು ಬೈಲಿರುಬಿನ್ ಕ್ರಿಯೆಗಳನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿಯನ್ನು ಸೇವಿಸುವುದರಿಂದ ಯಕೃತ್ತಿನಲ್ಲಿ ಕಾರ್ಬನ್ ಟೆಟ್ರಾಕ್ಲೋರೈಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಆರೋಗ್ಯದ ದೃಷ್ಟಿಯಿಂದ ಬ್ರೊಕೊಲಿ ತುಂಬಾನೇ ಉತ್ತಮ. ಹೀಗಾಗಿ ಪ್ರತಿನಿತ್ಯದ ನಿಮ್ಮ ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸೋದನ್ನು ಮರೀಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


