Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜೇಡ ಕಚ್ಚಿ ಬ್ರೆಜಿಲ್ ಗಾಯಕ ಸಾವು: ಜೇಡ ಅಷ್ಟೊಂದು ವಿಷಕಾರಿಯೇ? ಯಾವ ಮನೆಮದ್ದು ಒಳ್ಳೆಯದು?
ಜೇಡ ಕಚ್ಚಿ ಸಾವು ಬಂದಿದೆ ಎಂದು ಕೇಳಿದರೆ ನಂಬಲು ಕಷ್ಟವಾಗುವುದು ಅಲ್ಲವೇ? ಆದರೆ ಇಂಥದ್ದೊಂದು ಘಟನೆ ನಡೆದಿದೆ. ಬ್ರೆಜಿಲ್‌ನ ಡಾರ್ಲಿನ್ ಮೋರಿಯಸ್ ಎಂಬ 28 ಹರೆಯದ ಗಾಯಕನ ಮುಖಕ್ಕೆ ಜೇಡ ಕಚ್ಚಿ ಅದರ ವಿಷವೇರಿ ಸಾವನ್ನಪ್ಪಿದ್ದಾರೆ!
ಅವರ 18ರ ಹರೆಯದ ಮಲ ಮಗಳಿಗೂ ಜೇಡ ಕಚ್ಚಿದೆ. ಇಬ್ಬರಿಗೂ ಜೇಡ ಕಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಮಲ ಮಗಳು ಚೇತರಿಸಿಕೊಂಡಿದ್ದಾಳೆ. ಗಾಯಕ ಸಾವನ್ನಪ್ಪಿದ್ದಾರೆ. ಜೇಡ ಕಚ್ಚಿದ ಭಾಗದಲ್ಲಿ ಬಣ್ಣ ಕೂಡ ಬದಲಾಗಿತ್ತು, ಅವರ ಕ್ಲೋಸ್‌ಅಪ್ ಫೋಟೋವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ತಮ್ಮ ಗಾಯನದಿಂದ ತುಂಬಾ ಪ್ರಸಿದ್ಧಿ ಪಡೆದಿದ್ದ ಗಾಯಕನಿಗೆ ಜೇಡ ಕಚ್ಚಿದ್ದರೂ ಏನೂ ಸಮಸ್ಯೆಯಾಗಲ್ಲ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಗಾಯಕನ ಸಾವು ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದೀಗ ಜೇಡ ಕಚ್ಚಿದರೆ ಸಾಯುವುದೇ ಎಂಬುವುದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಜೇಡ ಕಚ್ಚಿದರೆ ತುಂಬಾನೇ ವಿಷಕಾರಿಯೇ, ಇದಕ್ಕೆ ಮನೆಮದ್ದುಗಳೇನು ಎಂದು ನೋಡೋಣ ಬನ್ನಿ:

ಜೇಡ ತುಂಬಾ ವಿಷಕಾರಿಯೇ?
ತುಂಬಾ ಬಗೆಯ ಜೇಡಗಳಿವೆ, ಅವುಗಳಲ್ಲಿ ಬಹುತೇಕ ಜೇಡಗಳು ವಿಷಕಾರಿಯಲ್ಲ, ಆದರೆ ಕೆಲವೊಂದು ಜೇಡಗಳು ತುಂಬಾನೇ ವಿಷಕಾರಿ. ಜೇಡ ಕಚ್ಚಿದರೆ ಆ ಭಾಗದಲ್ಲಿ ಕೆಲವರಿಗೆ ತುರಿಕೆ ಅಥವಾ ನೋವು ಕಂಡು ಬರುವುದು, ಅದು ವಾರದೊಳಗಾಗಿ ಹೋಗುತ್ತದೆ. ಆದರೆ ಕೆಲವೊಂದು ಜೇಡ ಕಚ್ಚಿದರೆ ಇದರಿಂದ ತುಂಬಾನೇ ಆರೋಗ್ಯ ಸಮಸ್ಯೆ ಉಂಟಾಗುವುದು.
ಜೇಡ ಕಚ್ಚಿದೆ ಎಂದು ತಿಳಿಯುವುದು ಹೇಗೆ
* ಆ ಭಾಗದಲ್ಲಿ ಊತ ಕಂಡು ಬರುವುದು
* ಕೆಂಪಾಗುವುದು
* ಕಚ್ಚಿದ ಗುರುತು ಕಂಡು ಬರುವುದು.
ಜೇಡ ಕಚ್ಚಿದಾಗ ಈ ಬಗೆಯ ಸಮಸ್ಯೆಗಳು ಕಂಡು ಬರುವುದು
* ಆ ಭಾಗದಲ್ಲಿ ತುರಿಕೆ
* ಆ ಭಾಗದ ಸುತ್ತ ನೋವು
* ಬೆವರುವುದು
* ತಲೆನೋವು
* ಜ್ವರ
* ಮೈ ತುಂಬಾ ಚಳಿಯಾಗುವುದು
* ಅಸ್ವಸ್ಥತೆ
* ಅತ್ಯಧಿಕ ರಕ್ತದೊತ್ತಡ
ಜೇಡ ಕಚ್ಚಿದಾಗ ಏನು ಮಾಡಬೇಕು?
* ಕಚ್ಚಿದ 10 ನಿಮಿಷದೊಳಗಾಗಿ ಐಸ್ ಪ್ಯಾಕ್ ಇಡಿ
* ಆ ಭಾಗವನ್ನು ಸೋಪು ಹಚ್ಚಿ ತೊಳೆಯಿರಿ
* ಆ್ಯಂಟಿಬಯೋಟಿಕ್ ಕ್ರೀಮ್ ಹಚ್ಚಿ
ಕಂದು ಬಣ್ಣದ ಜೇಡರ ಹುಳು ಕಚ್ಚಿದಾಗ
ಕಂದು ಬಣ್ಣದ ಜೇಡ ಕಚ್ಚಿದಾಗ 2-8 ಗಂಟೆಯವರೆಗೆ ಯಾವುದೇ ನೋವು ಕಂಡು ಬರುವುದಿಲ್ಲ, ನಂತರ ತುರಿಕೆ, ನೋವು ಕಂಡು ಬರುವುದು, ಚಳಿಜ್ವರ ಬರುವುದು, ಸೂಕ್ತ ಚಿಕಿತ್ಸೆ ದೊರೆಯದಿದ್ದರೆ
* ವ್ಯಕ್ತಿ ಕೋಮಾಗೆ ಜಾರಬಹುದು
* ಕಾಮಲೆ ರೋಗ ಬರಬಹುದು
* ಮೂತ್ರವಿಸರ್ಜನೆ ಮಾಡುವಾಗ ರಕ್ತ ಕಾಣಿಸಿಕೊಳ್ಳುವುದು
* ಕಿಡ್ನಿ ಫೈಲ್ಯೂರ್ ಆಗುವುದು
ಕಪ್ಪು ಜೇಡ ಕಚ್ಚಿದಾಗ
* ಕಚ್ಚಿದ ಭಾಗದಲ್ಲಿ ಉರಿ, ನೋವು
* ತಲೆನೋವು
* ಅತ್ಯಧಿಕ ರಕ್ತದೊರ್ತಡ
* ಬೆವರುವುದು, ಬಾಯಲ್ಲಿ ಎಂಜಲು ಬರುವುದು
* ಮರಗಟ್ಟಿದ ಅನುಭವ
* ಅಸ್ವಸ್ಥತೆ
ಹೋಬೋ ಜೇಡ
* ಕಚ್ಚಿದ ಭಾಗ ಕೆಂಪಾಗುವುದು
* ಕಣ್ಣುಗಳು ಮಂಜಾಗುವುದು
* ಮೈಕೈ ನೋವು
* ತಲೆನೋವು
* ವಾಂತಿ
* ಮೈ ಬೆವರುವುದು
Tarantula
ಈ ಜೇಡದ ಮೇಲೆ ತುಂಬಾ ರೋಮ-ರೋಮ ಇರುತ್ತದೆ
ಇದು ತುಂಬಾನೇ ವಿಷಕಾರಿ'
ಕೆಮಲ್ ಸ್ಪೈಡರ್, ಬ್ರೆಜಿಲಿಯನ್ ಸ್ಪೈಡರ್ ಕೂಡ ತುಂಬಾನೇ ವಿಷಕಾರಿ.
ಯಾವಾಗ ವೈದ್ಯರಿಗೆ ತೋರಿಸಬೇಕು?
ತುಂಬಾ ಚಳಿ ಜ್ವರ
* ಉಸಿರಾಟದಲ್ಲಿ ತೊಂದರೆ
* ಸ್ನಾಯುಗಳಲ್ಲಿ ಸೆಳೆತ
* ಪ್ರಜ್ಞೆ ತಪ್ಪುವುದು
* ತುಂಬಾನೇ ನೋವು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
