Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ ಈ 8 ಯೋಗಾಸನ ತುಂಬಾ ಒಳ್ಳೆಯದು
ಯಾರು ಪ್ರತಿದಿನ ಯೋಗ ಮಾಡುತ್ತಾರೋ ಅವರು ಆಸ್ಪತ್ರೆಯಿಂದ, ಕಾಯಿಲೆಯಿಂದ ದೂರವಿರುತ್ತಾರೆ. ಈ ಪ್ಯಾಟಿ ಲಿವರ್ ಎಂಬುವುದು ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಅತ್ಯಧಿಕ ಮದ್ಯಪಾನಿಗಳಲ್ಲಿ ಅಥವಾ ಬೊಜ್ಜಿನ ಮೈ ಇರುವವರಲ್ಲಿ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು. ಈ ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಲು ಯೋಗ ತುಂಬಾ ಪ್ರಯೋಜನಕಾರಿಯಾಗಿದೆ:

ಯೋಗ ಮಾಡುವುದರಿಂದ ಲಿವರ್‌ಗೆ ತುಂಬಾ ಪ್ರಯೋಜನವೇನು?
ಯೋಗ ಮಾನಸಿಕ ಒತ್ತಡ ಕಡಿಮೆ ಮಾಡುವುದರಿಂದ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಲಿವರ್‌ನಲ್ಲಿ ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು
ಲಿವರ್‌ನ ಶುದ್ಧೀಕರಿಸಲು ಸಹಕಾರಿ
ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ.
ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡಲು ಈ ಆಸನಗಳು ಸಹಕಾರಿ
ಕಪಾಲಭಾತಿ ಪ್ರಾಣಯಾಮ
ಈ ಕಪಾಲಭಾತಿ ಪ್ರಾಣಯಾಮ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ಫ್ಯಾಟಿ ಲಿವರ್, ನಿದ್ರಾಹೀನತೆ, ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಧನುರಾಸನ
ಈ ಆಸನ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ, ಈ ಆಸನ ಮಾಡುವುದರಿಂದ ಕಿಬ್ಬೊಟ್ಟೆ, ಕಾಲುಗಳು, ಗಂಟಲು ಹೀಗೆ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ಅರ್ಧ ಮತ್ಸ್ಯಾಸನ
ಈ ಆಸನ ಪ್ರತಿದಿನ ಅಭ್ಯಾಸ ಮಾಡುವುದರಿಂದ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು. ಲಿವರ್ ಹಾನಿ, ಫ್ಯಾಟಿ ಲಿವರ್ ಈ ಬಗೆಯ ಆರೋಗ್ಯ ಸಮಸ್ಯೆ ಇರುವವರು ಈ ಆಸನ ಪ್ರತಿದಿನ ಮಾಡಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ.
ನೌಕಾಸನ
ಈ ನೌಕಾಸನ ಅಭ್ಯಾಸ ಮಾಡುವುದರಿಂದ ಕಿಬ್ಬೊಟ್ಟೆ ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು, ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸಲಂಬ ಭುಜಂಗಾಸನ
ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಈ ಆಸನ ಎಂಡೋಕ್ರೈನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿ.
ಪಶ್ಚಿಮೋತ್ಥಾಸನ
ಈ ಆಸನ ಅಭ್ಯಾಸ ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ನಿದ್ದೆ ಚೆನ್ನಾಗಿ ಬರುವುದು, ಲಿವರ್ ತನ್ನ ಕಾರ್ಯ ಉತ್ತಮವಾಗಿ ನಿರ್ವಹಿಸಲು ತುಂಬಾನೇ ಸಹಕಾರಿ.
ಸೇತು ಬಂಧಾಸನ
ಈ ಆಸನ ಪ್ರತಿದಿನ ಅಭ್ಯಾಸ ಮಾಡುವುದರಿಂದ ಕತ್ತು, ಕರುಳು, ಲಿವರ್, ಕಿಡ್ನಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಆಸನದಲ್ಲಿ ಒಂದು ನಿಮಿಷ ಇರಲು ಪ್ರಯತ್ನಿಸಿ.
ಪವನ ಮುಕ್ತಾಸನ
ಈ ಆಸನ ಅಭ್ಯಾಸ ಮಾಡುವುದರಿಂದ ಕಿಡ್ನಿಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಗ್ಯಾಸ್ಟ್ರಿಕ್, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ.
ಮಂಡೂಕಾಸನ
ಮಂಡೂಕಾಸನ ಕಿಬ್ಬೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಗಟ್ಟಲು ಈ ಆಸನ ಸಹಕಾರಿ.
ಈ ಎಲ್ಲಾ ಆಸನಗಳು ತುಂಬಾ ಸರಳವಾಗಿದೆ, ವಯಸ್ಸಾದವರೂ ಈ ಆಸನ ಅಭ್ಯಾಸ ಮಾಡಬಹುದು, ಕಠಿಣ ಯೋಗಾ ಭಂಗಿಗಳಿಲ್ಲ, ತುಂಬಾ ಸುಲಭವಾಗಿ ಮಾಡಬಹುದಾದ ಯೋಗಾಸನಗಳಿವು. ಈ ಆಸನಗಳನ್ನು ನೀವು ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಫ್ಯಾಟಿ ಲಿವರ್ ಕಡಿಮೆಯಾಗುವುದು.
ಯೋಗವನ್ನು ಯಾವ ಸಮಯದಲ್ಲಿ ಮಾಡಿದರೆ ಒಳ್ಳೆಯದು?
ಯೋಗವನ್ನು ನೀವು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮಾಡಿದರೆ ಒಳ್ಳೆಯದು. ಯೋಗ ಪ್ರಾರಂಭವಿಸುವಾಗ ಹೊಟ್ಟೆ ಖಾಲಿ ಇರಬೇಕು. ಸಂಜೆ ಹೊತ್ತಿನಲ್ಲಿ ಯಹೋಗ ಅಭ್ಯಾಸ ಮಾಡುವವರು ಯೋಗ ಅಭ್ಯಾಸ ಎರಡು ಗಂಟೆ ಮುಂಚೆ ಏನೂ ಸೇವಿಸಬೇಡಿ, ಟೀ, ಸ್ನ್ಯಾಕ್ಸ್ ಸೇವಿಸಬೇಡಿ. ಇನ್ನು ಈ ಯೋಗಾಸನ ಅಭ್ಯಾಸ ಮಾಡುವಾಗ ಪ್ರತಿಯೊಂದು ಆಸನದ ಬಳಿಕ ಒಂದು ನಿಮಿಷ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
