Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ 7 ಪಾನೀಯ ಬೆಸ್ಟ್
ಜೀವಕ್ಕೆ ಅಪಾಯ ತಂದೊಡ್ಡುವ, ನಮ್ಮ ದೇಹದಲ್ಲೇ ಇರುವ ಅಂಶವೆಂದರೆ ಅದು ಕೊಲೆಸ್ಟ್ರಾಲ್. ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದೇ ಆದರೂ, ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚು ಸಂಗ್ರಹವಾಗಿಬಿಟ್ಟರೆ ಮುಂದೊಮ್ಮೆ ಹೃದಯಾಘಾತ, ಪಾರ್ಶ್ವವಾಯುವಿಗೂ ಕಾರಣವಾಗುತ್ತೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗಿಸೋಕೆ ದೈಹಿಕ ವ್ಯಾಯಾಮ, ಡಯಟ್ ಮಾಡುವ ಜೊತೆಗೆ ಬೆಳಗ್ಗೆ ಈ ಪಾನೀಯಗಳನ್ನು ಕುಡಿದ್ರೆ ನಿಮ್ಮ ದೇಹದಲ್ಲಿರುವ ಅನಗತ್ಯ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ. ಹಾಗಾದ್ರೆ ಆ ಪಾನೀಯಗಳು ಯಾವುವು ಎನ್ನುವುದನ್ನು ನೋಡೋಣ.

1. ಸೋಯಾ ಮಿಲ್ಕ್
ವೀಗನ್ ಆಹಾರ ಪದ್ಧತಿಯನ್ನು ಫಾಲೋ ಮಾಡೋರು ಹಸುವಿನ ಹಾಲಿನ ಬದಲಿ ಸೋಯಾ ಮಿಲ್ಕ್ ಬಳಸುವುದನ್ನು ನೀವು ನೋಡಿರಬಹುದು. ಇವರು ಮಾತ್ರವಲ್ಲ ಕೊಲೆಸ್ಟ್ರಾಲ್ ನಿಯಂತ್ರಿಸಲು ಬಯಸುವವರೂ ಸೋಯಾ ಮಿಲ್ಕ್ ಬಳಸಬಹುದು. ಯಾಕೆಂದರೆ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆಯಿರುತ್ತೆ. ಹಾಗಾಗಿ ನೀವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಯಸುವಿರಾದರೆ ಸೋಯಾ ಹಾಲು ಅಥವಾ ಕ್ರೀಂಗಳನ್ನು ಹೆಚ್ಚು ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳ ಬದಲಾಗಿ ಬಳಸಬಹುದು.
2. ಗ್ರೀನ್ ಟೀ
ತೂಕ ಇಳಿಸಿಕೊಳ್ಳಲು ಬಯಸುವವರು, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬೇಕೆಂದರೆ ಬೆಳಗ್ಗೆ ಗ್ರೀ ಟೀ ಕುಡಿಯಿರಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಸ್ ಮತ್ತು ಕ್ಯಾಟೆಚಿನ್ಸ್ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀ ಜೊತೆಗೆ ನೆಂಚಿಕೊಳ್ಳಲು ಹೆಲ್ದೀ ಕುಕೀಸ್ ಜೊತೆಗಿರಲಿ.
3. ಓಟ್ ಮಿಲ್ಕ್
ಓಟ್ಸ್ ಕೊಲೆಸ್ಟ್ರಾಲ್ ನಿಯಂತ್ರಿಸಯಲು ಸಹಾಯ ಮಾಡುತ್ತದೆ. ಇದಕ್ಕಿಂತ ಹೆಚ್ಚು ಓಟ್ ಮಿಲ್ಕ್ ಪರಿಣಾಮಕಾರಿಯಾಗಿದ್ದು ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಇದು ಹೆಚ್ಚೇ ಪ್ರಯೋಜನ ನೀಡುತ್ತದೆ. ಓಟ್ ಮಿಲ್ಕ್ ಬೀಟಾ-ಗ್ಲುಕನ್‌ಗಳನ್ನು ಹೊಂದಿರುತ್ತದೆ, ಇದು ಕರುಳಿನಲ್ಲಿ ಜೆಲ್ ತರಹದ ವಸ್ತುವನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತು ಇದು ಪಿತ್ತರಸದೊಂದಿಗೆ ಮತ್ತಷ್ಟು ಸೇರಿಕೊಳ್ಳುತ್ತದೆ ಮತ್ತು ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಮಿತಿಗೊಳಿಸುತ್ತದೆ.
4. ಟೊಮ್ಯಾಟೋ ಜ್ಯೂಸ್
ಬೊಜ್ಜಿನ ಸಮಸ್ಯೆ ಇರುವವರು ಟೊಮ್ಯಾಟೋ ಸೂಪ್‌ಗಿಂತ ಟೊಮ್ಯಾಟೋ ಜ್ಯೂಸ್ ಬೆಳಗ್ಗೆ ಕುಡಿದರೆ ಒಳ್ಳೆಯದು. ಇದರಲ್ಲಿ ಲೈಕೋಪಿನ್ ಅಂಶವು ಹೆಚ್ಚಾಗಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಮತ್ತು ಲಿಪಿಡ್ ಮಟ್ಟವನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ನಿಯಾಸಿನ್ ಮತ್ತು ಫೈಬರ್ ಅಂಶವೂ ಕೂಡಾ ಟೊಮ್ಯಾಟೋ ಜ್ಯೂಸ್‌ನಲ್ಲಿ ಹೇರಳವಾಗಿರುತ್ತದೆ.
5. ಬೆರ್ರಿ ಸ್ಮೂದಿ
ತೂಕ ಇಳಿಸಿಕೊಳ್ಳುವವರು ಬೆಳಗ್ಗಿನ ಎನರ್ಜಿ ಡ್ರಿಂಕ್ ಆಗಿ ಸ್ಮೂದಿಯನ್ನು ಡಯಟ್‌ಗೆ ಸೇರಿಸಿಕೊಳ್ಳುತ್ತಾರೆ. ಇದರ ಹೊರತಾಗಿ ನೀವು ಕೊಲೆಸ್ಟ್ರಾಲ್ ನಿಯಂತ್ರಿಸಬೇಕೆಂದರೆ ಬೆಳಗ್ಗೆ ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ ಅಥವಾ ರಾಸ್ಬೆರ್ರಿ ಮುಂತಾದುವನ್ನು ಸ್ವಲ್ಪ ಮೊಸರಿನೊಂದಿಗೆ ಬ್ಲೈಂಡ್ ಮಾಡಿ ಸ್ಮೂದಿ ಮಾಡಿಕೊಂಡು ಕುಡಿಯಬಹುದು. ಈ ರೀತಿಯ ಹಣ್ಣುಗಳಲ್ಲಿ ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್ ಇಳಿಕೆಗೆ ಸಹಾಯ ಮಾಡುತ್ತದೆ.
6. ಸಸ್ಯಆಧಾರಿತ ಹಾಲಿನ ಸ್ಮೂದಿ
ಸಸ್ಯಜನ್ಯ ಅಥವಾ ಪ್ಲಾಂಟ್ ಮಿಲ್ಕ್ ಎಂದರೆ ಸೋಯಾ ಮಿಲ್ಕ್, ತೆಂಗಿನ ಹಾಲು, ಬಾದಾಮಿಯ ಹಾಲು (ಆಲ್ಮಂಡ್ ಮಿಲ್ಕ್) ರೈಸ್ ಮಿಲ್ಕ್, ಓಟ್ ಮಿಲ್ಕ್ ಹಾಗೂ ಪೀನಟ್ ಮಿಲ್ಕ್ ಮುಂತಾದುವು. ಸಂಕ್ಷಿಪ್ತವಾಗಿ ಹೇಳುವುದಾದರೆ ಹಸುವಿನ ಹಾಲಿನ ಬದಲಿಯಾಗಿ ಧಾನ್ಯ, ಒಣಹಣ್ಣು ಇತರ ವಸ್ತುಗಳಿಂದ ತಯಾರಿಸಿದ ಹಾಲನ್ನು ಸ್ಮೂದಿಯಲ್ಲಿ ಬಳಸಿ. ಸಸ್ಯ ಆಧಾರಿತ ಹಾಲಿನ ಅನೇಕ ವಿಧಗಳಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ, ನಿಯಂತ್ರಿಸುವ ಅಂಶಗಳಿದ್ದು ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.
7. ಕೋಕೋ ಪಾನೀಯ
ಕೋಕೋ ಪಾನೀಯವೆಂದರೆ ಡಾರ್ಕ್ ಚಾಕೋಲೇಟ್ ಬಳಸಿ ತಯಾರಿಸಿದ ಪಾನೀಯ. ಇದರಲ್ಲಿ ಫ್ಲವನಾಲ್ಸ್ ಎಂದು ಕರೆಯಲ್ಪಡುವ ಆಂಟಿ-ಆಕ್ಸಿಡೆಂಟ್ ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲ ಇದರಲ್ಲಿರುವ ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲವು ಕೆಟ್ಟ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ.
ಈ ಎಲ್ಲಾ ಪಾನೀಯಗಳನ್ನು ಬೆಳಗ್ಗಿನ ಸಮಯದಲ್ಲಿ ಸೇವಿಸಿದರೆ ದೇಹದಲ್ಲಿರುವ ಕೆಟ್ಟಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಆದರೆ ಎಲ್ಲವನ್ನೂ ಅತಿಯಾಗಿ ಸೇವಿಸಬೇಡಿ. ಇಂತಿಷ್ಟು ಪ್ರಮಾಣದಲ್ಲಿ ಪ್ರತಿದಿನ ಕುಡಿದರೆ ಆರೋಗ್ಯಕ್ಕೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


