Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಹೀಗೆ ಮಾಡಿದರೆ ಕೊಲೆಸ್ಟ್ರಾಲ್ ಇದ್ದರೂ ಆ ಸಮಸ್ಯೆ ಹೊರಬಹುದು ನೋಡಿ
40ರ ನಂತರ ಕೊಲೆಸ್ಟ್ರಾಲ್ ಸಮಸ್ಯೆ ಇಲ್ಲದವರ ಸಂಖ್ಯೆ ತುಂಬಾನೇ ವಿರಳ ಎಂಬಂತಾಗಿದೆ. ಏಕೆಂದರೆ ಬಹುತೇಕ ಜನರ ಜೀವನಶೈಲಿಯೇ ಆ ರೀತಿ ಇದೆ, ಇದರಿಂದಾಗಿ ಈ ಕೊಲೆಸ್ಟ್ರಾಲ್, ಮಧುಮೇಹದಂಥ ಸಮಸ್ಯೆಯೂ ಹೆಚ್ಚಾಗುತ್ತಲೇ ಇದೆ.
ಕೊಲೆಸ್ಟ್ರಾಲ್ ಬಂದ ಮೇಲೆ ಕೂಡ ಆತಂಕ ಪಡಬೇಕಾಗಿಲ್ಲ ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಸಾಕು ಯಾವುದೇ ಟೆನ್ಷನ್ ಇಲ್ಲದೆ ಆರೋಗ್ಯಕರ ಜೀವನ ನಡೆಸಬಹುದು, ಆರೋಗ್ಯಕರ ಜೀವನಶೈಲಿ ಎಂದರೆ ಆಹಾರ ಶೈಲಿ ಹಾಗೂ ವ್ಯಾಯಾಮ.

ಈ ಬಗೆಯ ಆಹಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುವಲ್ಲಿ ತುಂಬಾನೇ ಸಹಕಾರಿಯಂತೆ
ಓಟ್ಸ್: ನೀವು ನಿಮ್ಮ ಆಹಾರಕ್ರಮದಲ್ಲಿ ಓಟ್ಸ್ ಸೇರಿಸಿದಷ್ಟೂ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಓಟ್ಸ್ ರುಚಿಯಿರಲ್ಲ ಅಂತ ಹಲವರ ಅಭಿಪ್ರಾಯ, ಆದರೆ ಓಟ್ಸ್‌ನಿಂದ ಹಲವಾರು ರುಚಿಕರ ಬ್ರೇಕ್‌ಫಾಸ್ಟ್ ತಯಾರಿಸಬಹುದು. ನಮ್ಮ ದೇಹಕ್ಕೆ 20-35ಗ್ರಾಂ ನಾರಿನಂಶ ಅವಶ್ಯಕ, ನೀವು ಓಟ್ಸ್ ತಿನ್ನುವುದರಿಂದ ದೇಹಕ್ಕೆ ನಾರಿನಂಶ ದೊರೆಯಲಿದೆ.
ಬಾರ್ಲಿ: ಬಾರ್ಲಿ ರುಚಿ ಅನಿಸಲ್ಲ ಆದರೆ ಅದರ ಜೊತೆಗೆ ಪಲ್ಯ, ಕಾಳುಗಳ ಒಗ್ಗರಣೆ ಇದ್ದರೆ ರುಚಿ ಅನಿಸುವುದು ರಾತ್ರಿ ಊಟಕ್ಕೆ ಇದನ್ನು ಸವಿಯಿರಿ.
ಮಧ್ಯಾಹ್ನ: ಮಧ್ಯಾಹ್ನ ನಿಮಗಿಷ್ಟವಾದ ಆಹಾರ ಸವಿಯಿರಿ, ಆದರೆ ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರ ಸೇವಿಸಿ ಅಷ್ಟೇ.
ಈ ಆಹಾರಕ್ರಮದಲ್ಲಿ ಈ ಬಗೆಯ ಆಹಾರಗಳನ್ನೂ ಸೇರಿಸಿ
ಬೀನ್ಸ್: ಇದರಲ್ಲಿ ನಾರಿನಂಶ ಹೆಚ್ಚಿದೆ, ಹಾಗಾಗಿ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು, ಬೀನ್ಸ್‌ನಲ್ಲಿಯೂ ಹಲವು ವಿಧದ ಬೀನ್ಸ್‌ಗಳಿವೆ, ಅದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು.
ನಟ್ಸ್: ನಟ್ಸ್ ಎಲ್ಲರಿಗೆ ಒಳ್ಳೆಯದು, ಅಲ್ಲದೆ ನಟ್ಸ್‌ನಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ.
ಸೋಯಾ: ಈ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸೋಯಾ ಕೂಡ ತುಂಬಾನೇ ಪರಿಣಾಮಕಾರಿಯಾಗಿದೆ.ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಪ್ರತಿದಿನ 25 ಗ್ರಾಂ ಸೋಯಾ ಪ್ರೊಟೀನ್ ಸೇವನೆ ಮಾಡಿದರೆ ಒಳ್ಳೆಯದು.
ಮೀನು ಒಳ್ಳೆಯದು
ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಮಟನ್ ಒಳ್ಳೆಯದಲ್ಲ, ಆದರೆ ಮೀನು ಒಳ್ಳೆಯದು. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಮೀನು ಸೇರಿಸಿ, ಆದರೆ ಮೀನು ಫ್ರೈ ಮಾಡಬೇಡಿ, ಬದಲಿಗೆ ಸಾರು ಮಾಡಿ ಸೇವಿಸಿ.
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಉಂಟಾಗುವ ಸಮಸ್ಯೆಯೇನು?
ಹೃದಯ ಸಂಬಂಧಿ ಸಮಸ್ಯೆ ಉಂಟಾಗುವುದು. ಹೃದಯಾಘಾತವನ್ನು ತಡೆಗಟ್ಟಲು ಕೊಲೆಸ್ಟ್ರಾಲ್ ನಿಯಂತ್ರನ ತುಂಬಾನೇ ಮುಖ್ಯ.
ಪುರುಷ ಹಾಗೂ ಮಹಿಳೆಯರ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ
ಕೊಲೆಸ್ಟ್ರಾಲ್ ಹೆಚ್ಚಾದರೆ ಮಹಿಳೆಯರಲ್ಲಿ ಈಸ್ಟ್ರೋಜನ್, ಪುರುಷರಲ್ಲಿ ಟೆಸ್ಟೋಸ್ಟಿರೋನೆ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಥೈರಾಯ್ಡ್ ಹಾರ್ಮೋನ್‌ಗಳಲ್ಲಿಯೂ ವ್ಯತ್ಯಾಸ ಉಂಟಾಗುವುದು.
ನರಗಳ ಮೇಲು ಪರಿಣಾಮ ಬೀರುವುದು
ಕೊಲೆಸ್ಟ್ರಾಲ್ ಹೆಚ್ಚಾದರೆ ನರಗಳ ಮೇಲೆ ಪರಿಣಾಮ ಬೀರಿ ಇದರಿಂದ ನೆನಪಿನ ಶಕ್ತಿ ಕಡಿಮೆಯಾಗುವುದು, ಮಾತನಾಡುವಾಗ ತೊಂದರೆ, ಆಹಾರ ನುಂಗಲು ಕಷ್ಟವಾಗುವುದು ಈ ಬಗೆಯ ಸಮಸ್ಯೆಯೂ ಕಂಡು ಬರುವುದು.
ಜೀರ್ಣಕ್ರಿಯೆಗೂ ತೊಂದರೆ ಉಂಟಾಗುವುದು: ಕೊಲೆಸ್ಟ್ರಾಲ್ ಕಡಿಮೆಯಾದರೆ ಆರೋಗ್ಯ ಚೆನ್ನಾಗಿರುತ್ತದೆ, ಅದೇ ಹೆಚ್ಚಾದರೆ ಜೀರ್ಣಕ್ರಿಯೆಯಲ್ಲಿಯೂ ತೊಂದರೆ ಉಂಟಾಗುವುದು.
ಕೊನೆಯದಾಗಿ: ಕೊಲೆಸ್ಟ್ರಾಲ್ ಬಾರದಂತೆ ತಡೆಗಟ್ಟುವುದು ಒಳ್ಳೆಯದು, ಒಂದು ವೇಳೆ ಕೊಲೆಸ್ಟ್ರಾಲ್ ಸಮಸ್ಯೆ ಬಂದಾಗಿದೆ ಎಂದಾದರೆ ಆಹಾರಕ್ರಮ ಹಾಗೂ ದಿನಾ ವ್ಯಾಯಾಮ ಮಾಡುವ ಮೂಲಕ ಅದನ್ನು ರಿವರ್ಸ್ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications