Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
2030ಕ್ಕೆ ಬೆಂಗಳೂರಲ್ಲಿ ದೆಹಲಿಗಿಂತ ಹೆಚ್ಚು ತಾಪಮಾನ..! ಆತಂಕ ಹುಟ್ಟಿಸುತ್ತೆ ಈ ವರದಿ.!
ಜಾಗತಿಕ ತಾಪಮಾನ ಏರಿಕೆ ಅನ್ನೋದು ಈಗ ಇಡೀ ಭೂಮಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಪ್ರವಾಹ, ಚಳಿಯಲ್ಲಿ ವಿಪರೀತ ಚಳಿ, ಹಾಗೆ ಬೇಸಿಗೆಯಲ್ಲಿ ಅತೀ ಹೆಚ್ಚಿನ ಉರಿ ನೋಡುವುದು ಸಾಮಾನ್ಯ ಎನ್ನುವಂತಾಗುತ್ತಿದೆ. ಹಾಗೆ ಕಾಲ ಕಾಲಕ್ಕೆ ಮಳೆ, ಬೇಸಿಗೆ, ಚಳಿಗಾಲ ಆರಂಭವಾಗಬೇಕೋ ಅದು ಆಗುತ್ತಿಲ್ಲ. ಅನಿರೀಕ್ಷಿತ ಸಮಯದಲ್ಲಿ ಮಳೆ, ಅವಧಿ ಮುನ್ನ ಬೇಸಿಗೆ ಆರಂಭವಾಗುವುದು ಈಗ ಭೂಮಿಗೆ ಸಮಸ್ಯಾತ್ಮಕವಾಗುತ್ತಿದೆ.
ಆದ್ರೆ ಈ ವರ್ಷ ಬೇಸಿಗೆಯ ಆರಂಭವೇ ಆತಂಕಕ್ಕೆ ಕಾರಣವಾಗುತ್ತಿದೆ. ಏಕೆಂದರೆ ಈಗಾಗಲೇ ಭಾರತದ ಹಲವು ಭಾಗದಲ್ಲಿ ಮಳೆ ಆಗಮನದಿಂದ ಹಲವರಲ್ಲಿ ಸಂತಸ ತಂದಿದೆ, ಆದ್ರೆ ನಿಜವಾದ ಆತಂಕ ಮುಂದಿನ ದಿನಗಳಲ್ಲಿ ಎದುರಾಗುತ್ತಿದೆ ಎಂಬುದನ್ನು ತಜ್ಞರು ಹೇಳಿರುವ ಅಂಶಗಳು ಬೆಚ್ಚಿಬೀಳಿಸುವಂತಿದೆ. ಏಪ್ರಿಲ್‌ನಲ್ಲಿ ನೀವು ಮಳೆಯ ಆಗಮನದಿಂದ ಮುಂದೆ ಬೇಸಿಗೆಯ ಅವಧಿ ಕಡಿಮೆಯಾಗಬಹುದು ಎಂಬ ಆಲೋಚನೆಯಲ್ಲಿದ್ದರೆ ನಿರಾಸೆ ಕಾದಿದೆ.

ಈ ವರ್ಷ ಏಪ್ರಿಲ್‌ನಿಂದ ಜೂನ್ ವರೆಗೆ ಬೇಸಿಗೆಯ ಸುಡು ಬಿಸಿಲು ದಾಖಲೆ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಈ ಬಾರಿ ಫೆಬ್ರವರಿಯಿಂದಲೇ ನಿರೀಕ್ಷಿತ ತಾಪಮಾನಕ್ಕಿಂತಲು ಹೆಚ್ಚಿನ ತಾಪಮಾನ ಏರಿಕೆ ಕಂಡುಬಂದಿದೆ. ಇನ್ನು ಈ ವರ್ಷದ ಏಪ್ರಿಲ್ ಮೇ ನಲ್ಲಿ ಮಳೆಯ ನಡುವೆಯೂ ಹೀಟ್ ವೇವ್ ಎದುರಿಸಬೇಕಾದ ಅನಿವಾರ್ಯತೆ ಇದೆ.
ಹಾಗೆ ಈ ಸಮಯದಲ್ಲಿ ಉಂಟಾಗುವ ದಾಖಲೆಯ ತಾಪಮಾನವು ಅನೇಕ ರೀತಿಯಲ್ಲಿ ಸಮಸ್ಯೆಯ ತರಲಿದೆ ಎಂಬುದು ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಲಿದೆ. ಪಶ್ಚಿಮ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಕಂಡುಬರಲಿದೆ. ಮಾನ್ಸೂನ್ ಆರಂಭಿಕ ಹಂತದಲ್ಲಿ ಎಲ್ ನಿನೊ ಪರಿಸ್ಥಿತಿಯ ಕಾರಣ ಬಿಸಿಗಾಳಿಗೆ ಕಾರಣವಾಗುತ್ತಿದೆ, ಇದರಿಂದ ಹೀಟ್ ವೇವ್ ಸೇರಿ ನಿಗದಿಗಿಂತ ಹೆಚ್ಚು ಉಷ್ಣಾಂಶ ನೋಡಬಹುದು.
IMD ಮಾನದಂಡಗಳ ಪ್ರಕಾರ ಬಯಲು ಪ್ರದೇಶಗಳಲ್ಲಿ ಕನಿಷ್ಠ 40C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ, ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಕರಾವಳಿ ಪ್ರದೇಶಗಳಲ್ಲಿ 37C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಇದ್ದರೆ ಹೀಟ್ ವೇವ್ ಎಂದು ಘೋಷಿಸಲಾಗುತ್ತೆ.
ಹೀಟ್ ವೇವ್ ಸಂಭವಿಸುವುದು ಹೇಗೆ?
ಜಾಗತಿಕ ತಾಪಮಾನ ಏರಿಕೆಯ ಜೊತೆಗೆ ಸ್ಥಳೀಯ ವಾತಾವರಣದಲ್ಲಿನ ಬದಲಾವಣೆಯು ಈ ಹೀಟ್‌ವೇವ್‌ಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಈ ಹೀಟ್ ವೇವ್ ಆರಂಭವಾಗುತ್ತೆ. ಇನ್ನು ಆತಂಕದ ವಿಚಾರವೆಂದರೆ 2030ರ ವೇಳೆಗೆ ಬೆಂಗಳೂರು ದೆಹಲಿಗಿಂತ ಹೆಚ್ಚಿನ ತಾಪಮಾನ ಎದುರಿಸಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರ ತಿಳಿಸಿದ್ದಾರೆ.
ಮಹಾನಗರಗಳು ವೇಗವಾಗಿ ಬೆಳೆಯಲು ಅರಣ್ಯ ನಾಶ ಹೆಚ್ಚಾಗುವ ಪರಿಣಾಮ ಸ್ಥಳೀಯ ತಾಪಮಾನ ಏರಿಕೆಯಿಂದ ಉಷ್ಣಾಂಶ ಹೆಚ್ಚಾಗುವುದು ಸಾಮಾನ್ಯವಾಗಿದೆ. ಹಾಗೆ ಉತ್ತರ ಭಾರತದಲ್ಲಿ ಹೆಚ್ಚಿನ ವಾತಾವರಣದ ಕಡಿಮೆ ಗಾಳಿಯ ಒತ್ತಡದ ಕಾರಣದಿಂದಾಗಿ ಅಲ್ಲಿ ಮಳೆ ಕಡಿಮೆಯಾಗುತ್ತದೆ. ಹಾಗೆ ಥಾರ್ ಮರುಭೂಮಿಯ ಕಡೆಯಿಂದ ಬೀಸುವ ಬಿಸಿಗಾಳಿಯು ಉತ್ತರ ಭಾರತದಲ್ಲಿ ಬಿಸಿ ಗಾಳಿ ಹಾಗೂ ತಾಪಮಾಣ ಏರಿಕೆಗೆ ಕಾರಣವಾಗುತ್ತಿದೆ.
ಏಪ್ರಿಲ್ 15ರ ಬಳಿ40 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡುಬರುತ್ತಿತ್ತು, ಆದ್ರೆ ಈ ವರ್ಷ ಏಪ್ರಿಲ್ ಆರಂಭದಲ್ಲಿಯೇ ದೆಹಲಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. 1998 ರಲ್ಲಿ ಉತ್ತರ ಭಾರತದಾದ್ಯಂತ ಅರದಲ್ಲೂ ಉತ್ತರ ಪ್ರದೇಶ, ಬಿಹಾರ ಮತ್ತು ಒರಿಸ್ಸಾದಲ್ಲಿ 2,500 ಕ್ಕೂ ಹೆಚ್ಚು ವ್ಯಕ್ತಿಗಳು ತೀವ್ರ ಶಾಖದ ಪರಿಸ್ಥಿತಿಯಿಂದ ಮೃತಪಟ್ಟಿದ್ದರು. ಇದು ಭಾರತದ ಇತಿಹಾಸದಲ್ಲೇ ಹೀಟ್ ವೇವ್ ಕಾರಣಕ್ಕೆ ಮೃತಪಟ್ಟ ಅತ್ಯಧಿಕ ಜನರ ಸಂಖ್ಯೆಯಾಗಿದೆ. ಬಳಿಕ 2002ರಲ್ಲಿ ಆಂಧ್ರ ಪ್ರದೇಶದಲ್ಲಿ 48 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿತ್ತಲ್ಲದೆ ಈ ವೇಳೆ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟರು.
ಈ ಘಟನೆಯು ಭಾರತದ ಇತಿಹಾಸದಲ್ಲಿ ಅತ್ಯಂತ ತೀವ್ರವಾದ ಶಾಖದ ಅಲೆಗಳಲ್ಲಿ ಒಂದಾಗಿದೆ, ಇದು ತಂಪಾಗಿಸುವಿಕೆ ಮತ್ತು ನೀರಿನ ಸಂಪನ್ಮೂಲಗಳಿಗೆ ಪ್ರವೇಶವನ್ನು ನಿರ್ಬಂಧಿಸಿರುವ ಬಡ ಗ್ರಾಮೀಣ ಸಮುದಾಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. 2002 ರಲ್ಲಿ, ಆಂಧ್ರಪ್ರದೇಶದಲ್ಲಿ, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ತಾಪಮಾನವು 48°C ಗಿಂತ ಹೆಚ್ಚಾದಾಗ ಸುಮಾರು 1,030 ಸಾವುಗಳು ಸಂಭವಿಸಿವೆ ಎಂದು ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಪ್ರಕಾರ 1992 ಮತ್ತು 2020 ರ ನಡುವೆ ಭಾರತದಲ್ಲಿ ಹೀಟ್ ವೇವ್ ಕಾರಣದಿಂದಾಗಿಯೇ 25,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ.
ಸದ್ಯ ಈ ವರ್ಷ ಕೂಡ ತಾಪಮಾನ ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಮಳೆಯಿಂದ ಸಂತಸಗೊಂಡ ಮಂದಿ ಮುಂದಿನ ಆಘಾತ ಎದುರಿಸಲು ಸಿದ್ದರಾಗಬೇಕಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications