ನಿಗದಿತ ಸಮಯಕ್ಕೆ ನೀವು ಮಲಗುವುದಿಲ್ಲವೇ? ಇದು ಹೃದಯಘಾತ, ಪಾರ್ಶ್ವವಾಯು ಅಪಾಯ ಹೆಚ್ಚಿಸಲಿದೆ..!

ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ಉತ್ತಮ ವಿಟಮಿನ್ ಹಾಗೂ ಪೋಷಕಾಂಶ ಭರಿತ ಆಹಾರ ಸೇವಿಸಬೇಕಾಗುತ್ತದೆ. ಹಾಗೆ ಆಹಾರ ಎಷ್ಟು ಮುಖ್ಯವೋ ನಮಗೆ ನಿದ್ರೆ ಕೂಡ ನಮ್ಮ ಆರೋಗ್ಯದ ಗುಟ್ಟುಗಳಲ್ಲಿ ಒಂದಾಗಿದೆ. ನಾವು ಎಷ್ಟು ಉತ್ತಮ ನಿದ್ರೆ ಮಾಡುತ್ತೆವೋ ಅಷ್ಟು ನಮ್ಮ ಆರೋಗ್ಯ ಸುಧಾರಿಸುತ್ತದೆ, ಆದರೆ ಇತ್ತೀಚಿಗೆ ಆಧುನಿಕ ಜೀವನ ಶೈಲಿ ನಮ್ಮ ನಿದ್ರೆಯನ್ನೇ ಕಸಿದುಬಿಟ್ಟಿದೆ.

ಇತ್ತಿಚಿಗೆ ನಿದ್ರಾಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಹಲವರಿಗೆ ಇದೊಂದು ಬಹುದೊಡ್ಡ ಸಮಸ್ಯೆ. ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರುದೆ ಒದ್ದಾಡುತ್ತಾರೆ. ಹಲವರು ನಿದ್ರಾಹೀನತೆಯಿಂದಾಗಿ ಖಿನ್ನತೆಯಂತಹ ಸಮಸ್ಯೆಗೂ ಒಳಗಾಗುತ್ತಾರೆ. ನಿದ್ರೆ ಸರಿಯಾಗಿ ಬರುವಂತೆ ಮಾಡಲು ಅವರು ದುಬಾರಿ ಟ್ರೀಟ್‌ಮೆಂಟ್ ಸೇರಿ ದೇವಾಲಯ ಕೂಡ ಸುತ್ತುವುದು ನಾವು ನೋಡಿದ್ದೇವೆ.

Are You Not Sleeping At The Right Time Will Increase Risk Of Heart Attack

ನಿದ್ರೆ ಬಾರದೇ ಇರಲು ಒಂದಿಷ್ಟು ಕಾರಣಗಳಿವೆ. ಅದು ನಮ್ಮ ಜೀವನ ಶೈಲಿಯಿಂದ ಹಿಡಿದು ಹತ್ತಾರು ಕಾರಣಗಳ ಪಟ್ಟಿ ಮಾಡಬಹುದು. ಒತ್ತಡದ ಜೀವನ ಶೈಲಿಯಲ್ಲಿ ಕೆಲವರಿಗೆ ನಿದ್ರೆಗೂ ಸಮಯ ಸಿಗುವುದಿಲ್ಲ, ತಡವಾಗಿ ಮಲಗುವುದು, ಬೆಳಗ್ಗೆ ಬೇಗ ಏಳುವುದು ಅವರ ದೈನಂದಿನ ಕಾರ್ಯವಾಗಿರುತ್ತೆ. ಬೆಳಗ್ಗೆ ಬೇಗ ಏಳುವುದು ಹಲವರಿಗೆ ಉತ್ತಮ ಅಭ್ಯಾಸ ಆಗಿದ್ದರೂ ಮತ್ತೆ ಕೆಲಸವರಿಗೆ ಇದೊಂದು ಸಮಸ್ಯೆಯಾಗಬಹುದು.

ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಾ ಸಾಗಿದ ಹಾಗೆಯೇ ನಿದ್ರೆಯ ಮಟ್ಟ ಕಡಿಮೆಯಾಗುವುದು ನೋಡಬಹುದು. ಈ ರೀತಿ ನಿದ್ರೆ ಬಿಡುವುದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಲಿದೆ. ನಿತ್ಯ ದಿನಕ್ಕೆ 7ರಿಂದ 8 ಗಂಟೆಯ ನಿದ್ರೆಯ ಅವಶ್ಯಕತೆ ಇರಲಿದೆ. ಆದ್ರೆ ನೀವು 1ರಿಂದ 2 ಗಂಟೆ ಡೀಪ್ ಸ್ಲೀಪ್ ಮಾಡಿದರೂ ಕೂಡ ಆ ಇಡೀ ದಿನದ ನಿದ್ರೆಯ ಪ್ರಮಾಣ ನಾವು ಸರಿದೂಗಿಸಬಹುದು.

ಹಾಗೆ ಈಗ ಹೊಸದೊಂದು ಅಧ್ಯಯನದ ಪ್ರಕಾರ ನೀವು ಸಮಯಕ್ಕೆ ಸರಿಯಾಗಿ ಮಲಗಿದ್ದರೆ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಲಿದೆ ಎಂದು ತಿಳಿದುಬಂದಿದೆ. ಅನಿಯಮಿತ ನಿದ್ರೆಯ ವೇಳಾಪಟ್ಟಿ ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಹೃದಯರಕ್ತನಾಳ ಸಮಸ್ಯೆಗಳ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ನೀವು ಎಷ್ಟು ನಿದ್ರೆ ಮಾಡುತ್ತೀರಿ ಎನ್ನುವುದಕ್ಕಿಂತ ಎಷ್ಟು ಗಂಟೆಗೆ ಮಲಗುತ್ತೀರಿ ಎಂಬುದು ಮುಖ್ಯವಾಗುತ್ತದೆ.

ಈ ಅಧ್ಯಯನಕ್ಕಾಗಿ 40 ರಿಂದ 79 ವರ್ಷ ವಯಸ್ಸಿನ 72,269 ಜನರನ್ನು ಬಳಸಿಕೊಳ್ಳಲಾಗಿದೆ. ಅವರನ್ನು ಒಂದು ವಾರದ ಕಾಲ ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ನಿದ್ರೆಯ ಪ್ರಮಾಣ, ನಿದ್ರೆಯ ಮಟ್ಟ ಹೀಗೆ ಎಲ್ಲಾ ಆಯಾಮನಗಳಿಂದಲೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುಂಪಿನ ಮಂದಿಗೆ ನಿತ್ಯ ಬೇರೆ ಬೇರೆ ಸಮಯದಲ್ಲಿ ನಿದ್ರಿಸಲು ಸೂಚಿಸಲಾಗಿತ್ತು, ಇದರಿಂದ ಅವರ ಆರೋಗ್ಯದ ಮಟ್ಟ ಪರಿಶೀಲಿಸಲು ಮುಂದಾಗಲಾಗಿತ್ತು.

ಈ ಗುಂಪಿನಲ್ಲಿ ಸಂಶೋಧಕರು ಹೃದಯಾಘಾತ ಮತ್ತು ಪಾರ್ಶ್ವವಾಯು ಘಟನೆಗಳನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಪ್ರತಿ ರಾತ್ರಿ ಸರಿಸುಮಾರು ಅದೇ ಸಮಯದಲ್ಲಿ ಮಲಗಲು ಹೋದವರಿಗಿಂತ ಅನಿಯಮಿತ ನಿದ್ರಿಸುತ್ತಿರುವವರು ಪ್ರಮುಖ ಹೃದಯರಕ್ತನಾಳ ಸಮಸ್ಯೆಯ ಅಪಾಯ ಅನುಭವಿಸುವ ಸಾಧ್ಯತೆ ಶೇ. 26 ರಷ್ಟು ಹೆಚ್ಚಾಗಿತ್ತು ಎಂದು ಕಂಡುಕೊಡರು.

ಅನಿಯಮಿತ ನಿದ್ರೆಯ ಮಾದರಿಗಳನ್ನು ಹೊಂದಿರುವವರಿಗೆ ಹೋಲಿಸಿದರೆ ನಿಯಮಿತ ಮಲಗುವ ಸಮಯವನ್ನು ನಿರ್ಧರಿಸಿದ್ದರು ಆರೋಗ್ಯವಾಗಿದ್ದರು. ಹಾಗೆ ಇವರಲ್ಲಿ ನಿದ್ರಾಹೀನತೆ, ಒತ್ತಡದ ಅಂಶಗಳು ಕೂಡ ಕಡಿಮೆಯಾಗಿದ್ದವು. ಇನ್ನು ನಿಗದಿತ ಸಮಯಕ್ಕೆ ಮಲಗುವುದು ಹಲವು ಸಮಸ್ಯೆಗಳಿಂದ ದೂರ ಮಾಡಬಹುದು ಎಂದು ಕಂಡಕೊಳ್ಳಲಾಗಿದೆ. ನಿತ್ಯ ಒಂದೇ ಸಮಯದಲ್ಲಿ ಮಲಗುವುದರಿಂದ ದೇಹದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಂಡರು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Are You Not Sleeping At The Right Time? Will Increase Risk Of Heart Attack

It has been found that not sleeping on time can lead to heart-related problems. Irregular sleep schedules and the risk of cardiovascular problems such as heart disease and stroke are likely to increase.
Story first published: Sunday, December 1, 2024, 16:55 [IST]
X
Desktop Bottom Promotion