Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಬಾದಾಮಿ Vs ಕಡಲೆ ಬೀಜ : ಯಾವುದನ್ನು ಸೇವಿಸಿದ್ರೆ ಆರೋಗ್ಯ ಚೆನ್ನಾಗಿರುತ್ತೆ?
ನಮ್ಮ ದೇಹದ ಸರ್ವತೋಮುಖ ಬೆಳವಣಿಗೆಗೆ ಕೇವಲ ಊಟ, ಬೆಳಗ್ಗಿನ ತಿಂಡಿ ಸಾಲೋದಿಲ್ಲ. ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಕಡಲೆ ಬೀಜ, ಬಾದಾಮಿ ಈ ರೀತಿ ನಟ್ಸ್ ಗಳನ್ನು ತಿನ್ನೋದು ಕೂಡ ತುಂಬಾನೇ ಮುಖ್ಯವಾಗುತ್ತದೆ.
ಈ ನಟ್ಸ್ ಗಳು ಸಮತೋಲಿತ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದ್ದು, ಹೆಚ್ಚಿನ ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಲಭ್ಯವಿರುವ ವೈವಿಧ್ಯಮಯ ಬೀಜಗಳಲ್ಲಿ ಕಡಲೆಕಾಯಿಗಳು ಮತ್ತು ಬಾದಾಮಿಗಳು ಎರಡು ಜನಪ್ರಿಯ ಆಯ್ಕೆಗಳಾಗಿವೆ. ಆದರೆ ಇವು ಎರಡರಲ್ಲಿ ಹೆಚ್ಚು ಪೋಷಕಾಂಶ ಹೊಂದಿರುವ ವಸ್ತು ಯಾವುದು? ಆರೋಗ್ಯಕ್ಕೆ ಯಾವುದು ತುಂಬಾನೇ ಒಳ್ಳೆಯದು ಅನ್ನೋದನ್ನು ತಿಳಿಯೋಣ.

ಕಡಲೆ ಬೀಜ
ಕಡಲೆ ಬೀಜವನ್ನು ಬಡವರ ಬಾದಾಮಿ ಅಂತ ಕರೆಯಲಾಗುತ್ತದೆ. ಬಾದಾಮಿಗೆ ಹೋಲಿಕೆ ಮಾಡಿದ್ರೆ ಇದರ ಕಡಲೆ ಬೀಜದ ಬೆಲೆ ತುಂಬಾನೇ ಕಡಿಮೆ. ತಿನ್ನೋದಕ್ಕೂ ರುಚಿಕರವಾಗಿರುತ್ತೆ. ಹಾಗೂ ಪೌಷ್ಠಿಕಾಂಶಗಳಿಂದ ತುಂಬಿರುತ್ತದೆ. ಕಡಲೆ ಕಾಯಿಯ ವೈಜ್ಞಾನಿಕ ಹೆಸರು "ಅರಾಚಿಸ್ ಹೈಪೋಗಿಯಾ". ಇದು ಹೆಚ್ಚು ಜನಪ್ರಿಯವಾಗಿದ್ದು, ಅವುಗಳ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯಕ್ಕಾಗಿ ಇದನ್ನು ವ್ಯಾಪಕವಾಗಿ ಸೇವನೆ ಮಾಡಲಾಗುತ್ತದೆ.
ಕಡಲೆಬೀಜ ಪ್ರೋಟೀನ್ ಖಾರ್ಕಾನೆಯಾಗಿದೆ
ಕಡಲೆಕಾಯಿಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದು ಸಸ್ಯಾಹಾರಿಗಳು ಮತ್ತು ವೀಗನ್ ಆಹಾರ ಕ್ರಮ ಪಾಲಿಸುವವರಿಗೆ ಅತ್ಯುತ್ತಮವಾದ ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿದೆ. ಇದರಲ್ಲಿ ಮಾನವನ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ನಮ್ಮ ಹೃದಯದ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇದ್ದೇ ಇರುತ್ತದೆ. ಕಡಲೆಕಾಯಿಗಳು ಮೊನೊಸಾಚುರೇಟೆಡ್ ಕೊಬ್ಬಿನ ಪ್ರಮುಖ ಮೂಲವಾಗಿದೆ. ನಿರ್ದಿಷ್ಟವಾಗಿ ಒಲೀಕ್ ಆಮ್ಲ ಎಂತಲೂ ಕರೆಯಲಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಫೈಬರ್ ಸಮೃದ್ಧವಾಗಿದೆ
ಕಡಲೆ ಬೀಜ ಫೈಬರ್ ನ ಸಮೃದ್ಧ ಮೂಲವಾಗಿದೆ. ಕಡಲೆಕಾಯಿಯೂ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ನಿರ್ವಹಣೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಹಾಗೂ ಮಿನರಲ್ ಹೊಂದಿದೆ
ಕಡಲೆಕಾಯಿಯಲ್ಲಿ ನಿಯಾಸಿನ್ (ವಿಟಮಿನ್ ಬಿ3), ಫೋಲೇಟ್ (ವಿಟಮಿನ್ ಬಿ9), ಮತ್ತು ವಿಟಮಿನ್ ಇ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಮಿಟಮಿನ್ ಹಾಗೂ ಖನಿಜಗಳ ಮೂಲವಾಗಿದೆ.
ಬಾದಾಮಿ
ಬಾದಾಮಿಯನ್ನು ವೈಜ್ಞಾನಿಕವಾಗಿ ಪ್ರುನಸ್ ಡಲ್ಸಿಸ್ ಎಂದು ಕರೆಯಲಾಗುತ್ತದೆ. ಇದನ್ನು ಶತಮಾನಗಳಿಂದ ಸೇವಿಸಲಾಗುತ್ತಿದೆ. ಹಾಗೂ ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಬಾದಾಮಿ ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ನಿತ್ಯ ಬಾದಾಮಿ ತಿಂದರೆ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಕೊಂಚ ದುಬಾರಿಯಾಗಿರೋದ್ರಿಂದ ಜನ ಬಾದಾಮಿಯನ್ನು ಖರೀದಿ ಮಾಡೋದಕ್ಕೆ ಇಷ್ಟ ಪಡೋದಿಲ್ಲ.
ಫೈಟೊನ್ಯೂಟ್ರಿಯೆಂಟ್ಸ್ ನ ಮೂಲವಾಗಿದೆ
ಬಾದಾಮಿಯು ವಿವಿಧ ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿರುತ್ತದೆ. ಉದಾಹರಣೆಗೆ ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳು. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ಕ್ಯಾಲ್ಸಿಯಂ ಸಮೃದ್ಧವಾಗಿದೆ
ಬಾದಾಮಿಯು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನಿತ್ಯ ಬಾದಾಮಿ ಸೇವನೆ ಮಾಡೋದು ತುಂಬಾನೇ ಒಳ್ಳೆಯದು.
ಆರೋಗ್ಯಕರ ಕೊಬ್ಬಿನ ಮೂಲವಾಗಿದೆ
ಬಾದಾಮಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು ಹೇರಳವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಇ ಸಮೃದ್ಧವಾಗಿದೆ
ಬಾದಾಮಿಯಲ್ಲಿ ವಿಟಮಿನ್ ಇ ಹೇರಳ ಪ್ರಮಾಣದಲ್ಲಿದೆ.
ಬಾದಾಮಿಯು ವಿಟಮಿನ್ ಇ ನಲ್ಲಿ ನಂಬಲಾಗದಷ್ಟು ಸಮೃದ್ಧವಾಗಿದೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
ಕಡಲೆಕಾಯಿ ಮತ್ತು ಬಾದಾಮಿ ಇವು ಎರಡರಲ್ಲೂ ಪೋಷಕಾಂಶ ಸಮೃದ್ಧವಾಗಿದ್ದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದರೆ, ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬು ಉತ್ತಮವಾಗಿದೆ. ಇವು ಎರಡರಲ್ಲೂ ಕೂಡ ವಿಶೇಷವಾದ ಗುಣಗಳಿದೆ. ಸಮತೋಲಿತ ಆರೋಗ್ಯವನ್ನು ಕಾಪಾಡಿಕೊಳ್ಳಲು ಎರಡೂ ಕೂಡ ಸಹಾಯ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










