Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
41ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಅಲ್ಲು ಫಿಟ್‌ನೆಸ್ ಸೀಕ್ರೆಟ್ ಏನು?
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೋಸ್ಟ್ ಫೇವರೇಟ್ ಆಕ್ಟರ್ ಆಗಿ ಗುರುತಿಸಿಕೊಂಡವರು ಸ್ಟೈಲಿಶ್ ಹೀರೋ ಅಲ್ಲ ಅರ್ಜುನ್. ಅಲ್ಲು ಸಿನಿ ಜರ್ನಿ ಶುರುವಾಗಿನಿಂದಾನೂ ಬಹುತೇಕ ಹಿಟ್ ಸಿನಿಮಾಗಳನ್ನೇ ಕೊಟ್ಟಿದ್ದು, ಅಲ್ಲು ಅರ್ಜುನ್ ಅವರ ಡಾನ್ಸ್, ಆಕ್ಟಿಂಗ್ ಹಾಗೂ ಆಕ್ಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ಸಳ್ಳಲ್ಲ. ಕೇವಲ ಸೌತ್‌ನಲ್ಲಿ ಮಾತ್ರ ಅಲ್ಲು ಅರ್ಜುನ್ ಕ್ರೇಜ್ ಇರೋದಲ್ಲ. ಅದ್ಯಾವಾಗ ಪುಷ್ಟ ಸಿನಿಮಾ ರಿಲೀಸ್ ಆಯ್ತೋ ಅಲ್ಲು ಅರ್ಜುನ್ ಕ್ರೇಜ್ ಇನ್ನಷ್ಟು ಹೆಚ್ಚಾಯ್ತು.
ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಒಂದೇ ಸಿನಿಮಾದ ಮುಖಾಂತರ ಅಲ್ಲುಗೆ ಇಡೀ ದೇಶದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡ್ರು. ಇಷ್ಟು ದಿನ ಸ್ಟೈಲಿಶ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಅಲ್ಲು ಅರ್ಜುನ್ ಪುಷ್ಟದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ರು. ಮತ್ತೊಂದು ವಿಚಾರ ಅಂದ್ರೆ ಅಲ್ಲು ಅರ್ಜುನ್ 41ನೇ ವಯಸ್ಸಿನಲ್ಲಿ ಇಷ್ಟೊಂದು ಫಿಟ್ ಆಗಿ ಕಾಣಿಸಿಕೊಳ್ತಿದ್ದು, ಅಲ್ಲು ಫಿಟ್‌ನೆಸ್ ಸೀಕ್ರೆಟ್ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗ್ತಿದೆ. ಅಷ್ಟಕ್ಕು ಫಿಟ್ ಆಗಿರಲು ಅಲ್ಲು ವರ್ಕ್‌ಔಟ್ ಹೇಗಿರುತ್ತೆ ಅನ್ನೋದನ್ನ ಹೇಳ್ತೀವಿ.

1. ಪ್ರತಿನಿತ್ಯ 45 ನಿಮಿಷ ಜಾಗಿಂಗ್ ಮಾಡ್ತಾರೆ
ಅಲ್ಲು ಅರ್ಜುನ್ ಅವರ ಫಿಟ್‌ನೆಸ್ ಸೀಕ್ರೆಟ್ ಏನೆಂದರೆ ಅಲ್ಲು ಬೆಳಗ್ಗೆ ಎದ್ದ ತಕ್ಷಣ 45 ನಿಮಿಷಗಳ ಕಾಲ ಜಾಗಿಂಗ್ ಮಾಡ್ತಾರಂತೆ. ಜಾಗಿಂಗ್ ಮಾಡೋದು ಅವರಿಗೆ ತುಂಬಾನೇ ಇಷ್ಟ ಹಾಗೂ ಅದನ್ನು ನಾನು ತುಂಬಾನೇ ಎಂಜಾಯ್ ಮಾಡ್ತೀನಿ ಅಂತಾನೂ ಅಲ್ಲು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದು ಇವರ ದಿನಚರಿಯ ಭಾಗವಾಗಿದ್ದು ಪ್ರತಿನಿತ್ಯ ಜಾಗಿಂಗ್ ಮಾಡೋದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾನೇ ಒಳ್ಳೆಯದು.
2. ಕ್ಯಾಲಿಸ್ಥೇನಿಕ್ಸ್
ಇದು ಒಂದು ರೀತಿಯ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ಮಾಡುವಾಗ ಯಾವುದೇ ರೀತಿಯ ಉಪಕರಣಗಳನ್ನು ಬಳಕೆ ಮಾಡುವುದಿಲ್ಲ. ಪುಷ್‌ಅಪ್, ಪುಲ್ ಅಪ್, ಚಿನ್‌ಅಪ್, ಡಿಪ್, ಜಂಪ್ಸ್, ಸ್ಕ್ವಾಟ್, ಕ್ರಂಚಸ್ ಮತ್ತು ಜಂಪಿಂಗ್ ರೋಪ್ ಮುಂತಾದ ವ್ಯಾಯಾಮಗಳನ್ನು ಕ್ಯಾಲಿಸ್ಥೇನಿಕ್ಸ್ ಒಳಗೊಂಡಿರುತ್ತದೆ. ಅಲ್ಲು ಅರ್ಜುನ್ ಕೂಡ ಪ್ರತಿನಿತ್ಯ ಕ್ಯಾಲಿಸ್ಥೇನಿಕ್ಸ್ ವ್ಯಾಯಾಮವನ್ನು ತಪ್ಪದೇ ಮಾಡ್ತಾರಂತೆ.
3. ಸೈಕ್ಲಿಂಗ್
ಸೈಕ್ಲಿಂಗ್ ಮಾಡುವುದು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಅಲ್ಲು ಅರ್ಜುನ್ ಯಾವುದೇ ವರ್ಕ್‌ಔಟ್ ಆದ್ರೂ ಅದನ್ನು ತುಂಬಾನೇ ಎಂಜಾಯ್ ಮಾಡ್ತಾರಂತೆ. ಅದ್ರಲ್ಲೂ ಮುಖ್ಯವಾಗಿ ಸೈಕ್ಲಿಂಗ್. ಅವರು ಪ್ರತಿನಿತ್ಯ ಸೈಕ್ಲಿಂಗ್ ಮಾಡೋದಿಲ್ಲ. ಆದರೆ ಯಾವಾಗಲಾದರೂ ಒಮ್ಮೆ ಸೈಕ್ಲಿಂಗ್ ಮಾಡ್ತಾರಂತೆ. ಸೈಕ್ಲಿಂಗ್ ಮಾಡುವುದರಿಂದ ಕೂಡ ನಮ್ಮನ್ನು ನಾವು ಫಿಟ್ ಆಗಿ ಇಟ್ಟುಕೊಳ್ಳಬಹುದು.
4. ಪರಿಶ್ರಮ
ನಾವು ದಿನನಿತ್ಯ ಊಟ, ತಿಂಡಿಯನ್ನು ಯಾವ ರೀತಿ ತಪ್ಪದೇ ಮಾಡುತ್ತೀವೋ ಅದೇ ರೀತಿ ವರ್ಕ್‌ಔಟ್ ಕೂಡ ಮಾಡಲೇಬೇಕು. ಇದಕ್ಕಾಗಿ ಪರಿಶ್ರಮ ಪಡಲೇಬೇಕಾಗುತ್ತದೆ. ವಾರದಲ್ಲಿ ಏಳರಿಂದ ಎಂಟು ಸೆಷನ್‌ಗಳನ್ನು ವರ್ಕ್‌ಔಟ್‌ಗಾಗಿ ಅಲ್ಲು ಮೀಸಲಿಡುತ್ತಾರಂತೆ. ಕೆಲವೊಂದು ಸಲ ನಾಲ್ಕು ಸೆಷನ್‌ಗಳನ್ನು ಅಷ್ಟೇ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅಂತಾರೆ ಅಲ್ಲು ಅರ್ಜುನ್. ಆದರೆ ಫಿಟ್ ಆಗಿರಲು ಎಂಟು ಸೆಷನ್‌ಗಳಲ್ಲಿ ವರ್ಕ್ ಮಾಡಿದ್ರೆ ಒಳ್ಳೆಯದು ಅಂತಾರೆ.
5. ಸಸ್ಯಹಾರಿ ಡಯೇಟ್
ಫಿಟ್ ಆಗಿರಲು ವರ್ಕ್‌ಔಟ್ ಮಾಡಿದರಷ್ಟೇ ಸಾಲೋದಿಲ್ಲ. ಇದರ ಜೊತೆಗೆ ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಅಲ್ಲು ಅರ್ಜುನ್ ಅವರು ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸುತ್ತಿದ್ದು, ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಇನ್ನೂ ಸ್ವೀಟ್ ತಿನ್ನಬೇಕು ಎಂದೆನಿದಾಗ ಬಾರ್ ಚಾಕಲೇಟ್‌ಗಳನ್ನೇ ಅಲ್ಲು ಹೆಚ್ಚಾಗಿ ಸೇವಿಸುತ್ತಾರಂತೆ.
ಇಷ್ಟೆಲ್ಲಾ ಸ್ಟ್ರಿಕ್ಟ್ ಡಯೇಟ್ ಫಾಲೋ ಮಾಡ್ತಿರೋದಕ್ಕೆ ಅಲ್ಲು ಅರ್ಜುನ್ ಈ ವಯಸ್ಸಿನಲ್ಲೂ ಫಿಟ್ ಆಗಿರೋದಕ್ಕೆ ಸಾಧ್ಯವಾಗಿರೋದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

