Latest Updates
-
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ!
ಆಟಿ 18: ಇಂದು ಕೊಡಗಿನ ಪ್ರತಿ ಮನೆಯಲ್ಲಿರುತ್ತೆ ಈ ಪಾಯಸ
ಇಂದು ಕೊಡಗಿನಲ್ಲಿ ಎಲ್ಲರ ಮನೆಗಳಲ್ಲಿ ಆಟಿ ಪಾಯಸದ್ದೇ ಘಮಲು.... ಇತರರಿಗೆ ಈ ಪಾಯಸ ನೋಡಿದರೆ ಇದೇನು ಕಪ್ಪು ಬಣ್ಣದಲ್ಲಿ ಇದೆ ಎಂದು ಅಚ್ಚರಿ ಪಡಬಹುದು, ಆದರೆ ಇದರ ರುಚಿ ನೋಡಿದವರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಈ ಪಾಯಸವನ್ನು ಸವಿಯಬೇಕೆಂದರೆ ಇನ್ನೊಂದು ವರ್ಷ ಕಾಯಬೇಕಾಗುತ್ತದೆ. ವರ್ಷಕ್ಕೊಮ್ಮೆ ಮಾಡುವ ಪಾಯಸ ಇದಾಗಿದೆ.
ಕೊಡಗಿನಲ್ಲಿ ಇದೀಗ ಆಟಿ ತಿಂಗಳು, ಆಟಿ ತಿಂಗಳೆಂದರೆ ಗದ್ದೆಗಳಲ್ಲಿ ನಾಟಿ ಕಾರ್ಯಗಳು ನಡೆಯುತ್ತಿರುತ್ತದೆ, ಮಳೆ ಜೋರಾಗಿರುತ್ತೆ, ಈ ಸಮಯದಲ್ಲಿ ಔಷಧೀಯ ಸಸ್ಯಗಳನ್ನು ಬಳಸಿ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳುತ್ತಿದ್ದರು. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯಾ ಕಾಲದಲ್ಲಿ ಸಿಗುವ ಔಷಧೀಯ ಸಸ್ಯಗಳನ್ನು ಬಳಸುತ್ತಾರೆ.

ಅದರಲ್ಲೂ ಆಟಿ 18ಕ್ಕೆ ಔಷಧೀಯ ಗುಣವಿರುವ ಸೊಪ್ಪಿನಿಂದ ಆಟಿ ಪಾಯಸ ತಯಾರಿಸಿ ಕುಡಿಯುವ ಪದ್ಧತಿ ಇದೆ. ಇದರಿಂದ ಪಾಯಸ ಮಾತ್ರವಲ್ಲ ಇಡ್ಲಿ, ತಟ್ಟೆ ಇಡ್ಲಿ ಹೀಗೆ ವಿವಿಧ ರುಚಿಕರವಾದ ತಿನಿಸು ತಯಾರಿಸುತ್ತಾರೆ.
ಈ ಕಡೆ ಆಟಿ ಸೊಪ್ಪು ಸಿಗುತ್ತದೆ, ಅದರಲ್ಲಿ ಈ ಆಟಿ ತಿಂಗಳಿನಲ್ಲಿ ವಿಶೇಷ ಔಷಧೀಯ ಗುಣಗಳು ಸೇರಲ್ಪಡುತ್ತದೆ, ಈ ಸೊಪ್ಪನ್ನು ತಂದು ಬೇಯಿಸಿದರೆ ನೀರಿನ ಬಣ್ಣ ಕಡು ನೀಲಿಯಾಗುತ್ತದೆ, ಉಳಿದ ಸಮಯದಲ್ಲಿ ತಂದು ಈ ಸೊಪ್ಪು ಕಾಯಿಸಿದರೆ ಬಣ್ಣ ಬದಲಾಗಲ್ಲ, ಈ ಸಮಯದಲ್ಲಿ ಬೇಯಿಸಿದಾಗ ಮಾತ್ರ ಅಂಥ ಕಡು ಬಣ್ಣ ಜೊತೆಗೆ ಸುವಾಸನೆ ಕೂಡ ಇರುತ್ತದೆ. ನಂತರ ಆ ನೀರಿಗೆ ಅಕ್ಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ ಪಾಯಸವನ್ನು ಮಾಡಿ ಸವಿಯಲಾಗುವುದು.
ಈ ಸೊಪ್ಪನ್ನು ಈ ದಿನ ಕೊಡಗಿನ ಮಾರುಕ್ಟೆಟಯೆಲ್ಲಿ ಮಾರುತ್ತಿರುತ್ತಾರೆ, ಉಳಿದ ಕಡೆ ಸಿಗುವುದು ಕಡಿಮೆ, ಒಂದು ವೇಳೆ ಇದ್ದರೂ ಬೇರೆ ಕಡೆ ಇದರ ಗುಣಗಳ ಬಗ್ಗೆ ತಿಳಿದಿರುವುದಿಲ್ಲ, ಕೊಡಗಿನವರಿಗಷ್ಟೇ ಈ ಸೊಪ್ಪಿನ ಬಗ್ಗೆ ಗೊತ್ತಿರುತ್ತದೆ, ಬೇಲಿಗಳಲ್ಲಿ, ತೋಟಗಳಲ್ಲಿ ಈ ಸೊಪ್ಪಿರುತ್ತದೆ. ಒಂದು ವೇಳೆ ಈ ಸಮಯದಲ್ಲಿ ನೀವು ಕೂರ್ಗ್‌ಗೆ ಟೂರ್ ಮಾಡುತ್ತಿದ್ದರೆ ಅಲ್ಲಿಯವರ ಬಳಿ ಕೇಳಿ ಈ ಪಾಯಸವನ್ನು ಸವಿಯಲು ಮರೆಯದಿರಿ.
ಆಟಿ ಪಾಯಸ ರೆಸಿಪಿ
ಆಟಿ ಸೊಪ್ಪು
1 ಲೋಟ ಅಕ್ಕಿ
1/4 ಕೆಜಿ ಬೆಲ್ಲ
1 ಚಮಚ ತುಪ್ಪ
ಏಲಕ್ಕಿ
ಗೋಡಂಬಿ
ಆಟಿ ಸೊಪ್ಪನ್ನು ತಂದು ಅದನ್ನು ತೊಳೆದು ಬೇಯಿಸಬೇಕು. ಆಗ ನೀರು ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ದಿನ ಇದರಲ್ಲಿ 18 ವಿಧದ ಔಷಧೀಯ ಗುಣಗಳಿರುತ್ತದೆಯಂತೆ.
- ನಂತರ ಆ ನೀರಿಗೆ ಅಕ್ಕಿ ಬೇಯಿಸಬೇಕು, ಬೆಲ್ಲದ ಪಾಕ ಮಾಡಿ ಸೇರಿಸಬೇಕು.
- ಅಕ್ಕಿ ಬೆಂದ ಮೇಲೆ ಸ್ವಲ್ಪ ತುಪ್ಪ ಬಿಸಿ ಮಾಡಿ ಅದರಲ್ಲಿ ಗೋಡಂಬಿ, ತೆಂಗಿನಕಾಯಿಯ ಚಿಕ್ಕ ತುಂಡುಗಳನ್ನು ಹಾಕಿ ಫ್ರೈ ಮಾಡಿ ಸೇರಿಸಿದರೆ ಆಟಿ ಪಾಯಸ ರೆಡಿ.
ಬೆಂಗಳೂರಿನಲ್ಲಿಯೂ ಕೊಡಗಿನವರು ಇರುವುದರಿಂದ ಅಲ್ಲಿಯ ಕೆಲ ತರಕಾರಿ ಅಂಗಡಿಗಳಲ್ಲಿ ಈ ಸೊಪ್ಪು ಸಿಕ್ಕರೆ ಇದರ ಪಾಯಸ ಮಾಡಿ ಸವಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications