Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
9 ತಿಂಗಳಲ್ಲಿ 50 ಕೆ.ಜಿ ತೂಕ ಇಳಿಸಿಕೊಂಡ ಯುವತಿ.! ಹೇಗೆ ಗೊತ್ತಾ?
ದೇಹದ ಸಣ್ಣಗಿರಬೇಕು, ಹೆಚ್ಚು ದಪ್ಪ ಇರಬಾರದು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಹೀಗಾಗಿ ಸ್ವಲ್ಪವೂ ದಪ್ಪ ಆಗಬಾರದು ಎಂದು ಡಯೆಟ್ ಮಾಡುತ್ತಿರುತ್ತಾರೆ, ಒಂಚೂರು ದಪ್ಪ ಆದರು ಡಯೆಟ್ ಆರಂಭಿಸುವವರನ್ನು ನಾವು ನೋಡಿದ್ದೆವೆ. ಆದ್ರೆ ಕೆಲವರು ಒಂದು ತಿಂಗಳು ವ್ಯಾಯಾಮ, ಜಿಮ್, ಡಯೆಟ್ ಬಿಟ್ಟರೆ ದಪ್ಪವಾಗುತ್ತಾರೆ. ಮತ್ತೆ ಕೆಲವರು ಹುಟ್ಟುವಾಗಲೇ ದಪ್ಪವಾಗಿರುತ್ತಾರೆ.
ಆದ್ರೆ ಇಲ್ಲೊಬ್ಬ ಯುವತಿ ಕೇವಲ 9 ತಿಂಗಳಲ್ಲಿ ಬರೋಬ್ಬರಿ 50 ಕೆ.ಜಿ ತೂಕ ಇಳಿಸಿಕೊಂಡಿದ್ದಾಳೆ. ಹೌದು ರಾಜಿ ಘಂಘಾಸ್ ಎಂಬಾಕೆಯ ಸಾಹಸದ ಕಥೆ ಇದಾಗಿದೆ. ಆಕೆ ಕೋವಿಡ್ ಸಮಯಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ದೇಹದ ತೂಕ ವಿಪರೀತ ಹೆಚ್ಚಾಗಿತ್ತು. 19 ನೇ ವಯಸ್ಸಿನಲ್ಲಿ, ವೈದ್ಯಕೀಯ ವಿದ್ಯಾರ್ಥಿನಿ ರಾಜಿ ಘಂಘಾಸ್ ನಿಗದಿಗಿಂತ ಹೆಚ್ಚಿನ ತೂಕ ಹೊಂದಿದ್ದಳು.
ಆದರೆ ಆಕೆಯ ಹೋರಾಟ ಆಕೆಯ ಜೀವನವನ್ನು ಎಂದಿಗೂ ಊಹಿಸಿಕೊಳ್ಳಲಾಗದಷ್ಟು ಬದಲಾಯಿಸಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದುಂಡು ದುಂಡಾಗಿದ್ದ ಆಕೆ ಬೆಳೆಯುತ್ತಾ ಬಂದಾಘ ತೂಕ ಹೆಚ್ಚಳವಾಗಿದ್ದಳು, ಆದರೆ ಅದು ಆಕೆಯ ಅನಾರೋಗ್ಯಕ್ಕೆ ಅಥವಾ ಆಕೆಯ ಮನಸ್ಸಿನ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ.

ಆದರೆ ಕೋವಿಡ್ ಆರಂಭದಲ್ಲಿ ಆಕೆಯ ತೂಕ ದಿಢೀರ್ ಏರಿಕೆಯಾಗಿತ್ತು. ಶಾಲೆ ಮುಚ್ಚಲ್ಪಟ್ಟಿತ್ತು. ಹೊರಗೆ ಎಲ್ಲಿಯೂ ಹೋಗಲಾಗಿರಲಿಲ್ಲ. ಈ ವೇಳೆ ಆಕೆ ಕುಳಿತಲ್ಲೇ ಕುಳಿತು ತೂಕ ದಪ್ಪಟ್ಟಾಗಿತ್ತು. ಹೀಗೆ ತೂಕ ಹೆಚ್ಚಾದಾಗ ಆಕೆಯ ಆತ್ಮವಿಶ್ವಾಸ ಕಡಿಮೆಯಾಗುತ್ತಾ ಸಾಗಿತ್ತು. ಏನು ಮಾಡಲು ಆಕೆಗೆ ಮನಸ್ಸು ಕೇಳುತ್ತಿರಲಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ಆಕೆ ತನ್ನ ತೂಕ ಇಳಿಸಿಕೊಳ್ಳುವ ಶಪಥ ಮಾಡಿದಳು.
ಆಗಸ್ಟ್ 2023 ರಲ್ಲಿ ಆಕೆಯ ತಂದೆ ಮಿದುಳಿನ ಪಾರ್ಶ್ವವಾಯುವಿಗೆ ಒಳಗಾದಾಗ ಮಹತ್ವದ ತಿರುವು ಬಂದಿತು. ತನ್ನ ಕುಟುಂಬದಲ್ಲಿ ಒಬ್ಬಳೇ ಮಗಳು, ಈ ಕಷ್ಟದ ಸಮಯದಲ್ಲಿ ಅವಳು ದೊಡ್ಡ ಜವಾಬ್ದಾರಿಯನ್ನು ಅನುಭವಿಸಿದಳು. ಹೀಗಾಗಿ ಮನೆ ಜವಾಬ್ದಾರಿ ಗಂಡು ಮಕ್ಕಳಷ್ಟೇ ಹೊರಬೇಕಿಲ್ಲ ಎಂಬುದನ್ನು ಆಕೆ ನಿರೂಪಿಸಬೇಕಾಯಿತು. ಆದರೆ ಆಕೆಯ ದೇಹ ಇದಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಅಂದು ಆಕೆಗೆ ತೂಕ ಇಳಿಸಲೇಬೇಕು ಎಂಬ ಅರಿವಾಗಿತ್ತು.
ಜನವರಿ 2024 ರಲ್ಲಿ, ರಾಜಿ ತನ್ನ ತೂಕ ಇಳಿಸುವ ಕಡೆಗಿನ ಪ್ರಯಾಣ ಆರಂಭಿಸಿದ್ದಳು. ಮೊದಲು ಆಹಾರದಿಂದ ಆಕೆಯ ಹೋರಾಟ ಆರಂಭಗೊಂಡಿತ್ತು. ಆರೋಗ್ಯಕರ ಫುಡ್ ಸೇವಿಸುವ ನಿಯಮ ಹಾಕಿಕೊಂಡಳು, ಹೊರಗಿನ ಆಹಾರ ನಿಷೇಧ, ಹಣ್ಣು, ತರಕಾರಿಗೆ ಮೊದಲ ಆಧ್ಯತೆ ನೀಡುವುದು ಆಕೆಯ ಉದ್ದೇಶವಾಗಿತ್ತು. ತಂಪು, ಪಾನೀಯ, ಟೀ, ಶುಗರ್ ಹಾಕಿರುವ ಜ್ಯೂಸ್ ಎಲ್ಲದಕ್ಕೂ ಬ್ರೇಕ್ ಬಿತ್ತು.
ರಾಜಿ ತನ್ನ ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಿದಾಗ, ಆಕೆಯ ತೂಕ 155.45 ಕೆ.ಜಿ ಇತ್ತು ಈಗ ಅಂದರೆ 9 ತಿಂಗಳ ಬಳಿಕ 103 ಕೆ.ಜಿಗೆ ಇಳಿಸಿದಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು, ಆಕೆಯ ಕಠಿಣ ಆಹಾರ ಕ್ರಮ, ವ್ಯಾಯಾಮದಿಂದ ಎನ್ನುತ್ತಾಳೆ ರಾಜಿ. ಆಕೆಯ ರಾತ್ರಿಯ ಊಟ 7 ಗಂಟೆಯ ಒಳಗೆ ಮುಗಿಸಿದರೆ ಬೇರೇನು ಸೇವಿಸುತ್ತಿರಲಿಲ್ಲವಂತೆ. ಬ್ರೇಕ್‌ಫಾಸ್ಟ್‌ನಲ್ಲಿ ಫೈಬರ್ ತುಂಬಿದ್ದ ಆಹಾರ ಸವಿಯುವುದು ನಿತ್ಯವೂ ಮುಂದುವರೆದಿತ್ತಂತೆ.
ವಾರದಲ್ಲಿ ಆಕೆ 5-6 ದಿನಗಳು ದಿನಕ್ಕೆ 1-1.5 ಗಂಟೆಗಳ ಕಾಲ ಕೆಲಸ ಮಾಡಿದರು, ಪ್ರತಿದಿನ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯುವುದು ನಿತ್ಯದ ನಿಯಮದಲ್ಲಿ ಒಂದಾಗಿತ್ತು. ಆಕೆಯ ಆಹಾರವು ಸಮತೋಲಿತವಾಗಿತ್ತು, ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಸಂಸ್ಕರಿಸಿದ ಕಾರ್ಬ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳ ಸೇವನೆ ಆಕೆಯ ಫುಡ್ ನಿಯಮವಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications