Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
21 ದಿನದಲ್ಲಿ 13 ಕೆ.ಜಿ ತೂಕ ಇಳಿಸಿದ ಯುವಕ..! ಸಾಧ್ಯವಾಗಿದ್ದು ನೀರಿನ ಉಪವಾಸದಿಂದ..!
ತೂಕ ಹೆಚ್ಚಳವಾಗುವುದು ಎಷ್ಟು ಸುಲಭವೋ ತೂಕ ಇಳಿಸುವುದು ಅಷ್ಟೇ ಕಷ್ಟ. ತೂಕ ಇಳಿಸಲು ಜನ ಎಷ್ಟೆಲ್ಲಾ ಸಾಹಸಗಳ ಮಾಡುತ್ತಾರೆ ಎಂಬುದು ನಿಮಗೆಲ್ಲಾ ಚೆನ್ನಾಗಿ ತಿಳಿದಿದೆ. ಡಯೆಟ್, ಉಪವಾಸ, ಜಿಮ್ ಹೀಗೆ ಹತ್ತಾರು ಕ್ರಮದ ನಡುವೆ ಕೆಲವು ಔಷಧಿಗಳ ಮೊರೆ ಹೋಗುವವರು ಸಹ ಇದ್ದಾರೆ.
ಮತ್ತೆ ಕೆಲವರು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಜೀವಕ್ಕೆ ಹಾನಿ ತಂದುಕೊಂಡವರು ಸಹ ಇದ್ದಾರೆ. ಆದ್ರೆ ಇಲ್ಲೊಬ್ಬ ಯುವಕ ಮಾತ್ರ 21 ದಿನದಲ್ಲಿ ತೂಕ ಇಳಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ, ಅದು ಸಹ 21 ದಿನಕ್ಕೆ ಆತ ಬರೋಬ್ಬರಿ 13 ಕೆ.ಜಿ ತೂಕ ಇಳಿಸಿದ್ದಾನಂತೆ.

ಕೋಸ್ಟರಿಕಾದ ಅಡಿಸ್ ಮಿಲ್ಲರ್ ಎಂಬ ಯುವಕ ಕೇವಲ 21 ದಿನಗಳಲ್ಲಿ ತೂಕವನ್ನು ಇಳಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾನೆ. ಇದಕ್ಕಾಗಿ ಆತ ನೀರಿನ ಉಪವಾಸ ಅನುಸರಿಸಿರುವುದಾಗಿ ಹೇಳಿಕೊಂಡಿದ್ದಾನೆ. 'ಈ ವರ್ಷದ ಆರಂಭದಲ್ಲಿ, ನಾನು ಕೋಸ್ಟರಿಕಾದಲ್ಲಿ 21 ದಿನಗಳ ನೀರಿನ ಉಪವಾಸವನ್ನು ಪ್ರಾರಂಭಿಸಿದೆ. ಈ ಅನುಭವವು ನನಗೆ ನಿಜವಾಗಿಯೂ ಜೀವನವನ್ನು ಬದಲಾಯಿಸಿತು ಮತ್ತು ನನ್ನ ಪ್ರಯಾಣದ ಕೆಲವು ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಆಡಿಸ್ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾನೆ.
ಆತ 21 ದಿನಗಳ ಕಾಲ ನಿರಂತರವಾಗಿ ಬರಿ ನೀರು ಕುಡಿದು ಜೀವಿಸಿದ್ದನಂತೆ. ಅಂದರೆ ಅನ್ನ ಆಹಾರವಿಲ್ಲದೆ 21 ದಿನ ನೀರು ಕುಡಿದು 13 ಕೆ.ಜಿ ಇಳಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ. 21-ದಿನದಲ್ಲಿ ದೇಹದ ಶೇ.6ರಷ್ಟು ಕೊಬ್ಬು ಕಳೆದುಕೊಂಡಿದ್ದಾನೆ. ಅಲ್ಲದೆ ಈಗಾಗಲೇ ತೆಳ್ಳಗಿರುವ ವ್ಯಕ್ತಿಯೂ ಸಹ ಈ ಉಪವಾಸ ಮಾಡಬಹುದು ಎಂಬುದನ್ನು ಆತ ಖಾತ್ರಿ ಪಡಿಸಲು ವಿಡಿಯೋ ಮಾಡಿ ಅದನ್ನು ಹಂಚಿಕೊಂಡಿದ್ದಾನೆ.
ನೀರಿನ ಉಪವಾಸ ಮಾಡೋದ್ರಿಂದಾಗುವ ಅಪಾಯಗಳು
ಪೌಷ್ಟಿಕಾಂಶದ ಕೊರತೆ
ಆಹಾರವಿಲ್ಲದೆ ಬಹುದಿನಗಳ ವರೆಗೆ ಇರುವುದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶ ಕೊರತೆಗೆ ಕಾರಣವಾಗಲಿದೆ. ಇದು ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಂತಹ ಅಗತ್ಯ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು.
ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ
ದೀರ್ಘಾವಧಿಯ ಉಪವಾಸವು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಏಕೆಂದರೆ ದೇಹವು ಶಕ್ತಿಯನ್ನು ಸಂರಕ್ಷಿಸಲು ಮುಂದಾಗುತ್ತದೆ, ಇದರಿಂದಾಗಿ ಚಯಾಪಚಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದು ಉಪವಾಸ ಬಳಿಕ ನಿಮ್ಮ ದೇಹ ಮತ್ತೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಸುಸ್ತು ಮತ್ತು ಆಯಾಸ
ಆಹಾರ ಸೇವಿಸದೆ ಬರಿ ನೀರು ಕುಡಿಯುವುದರಿಂದಾಗಿ ಆಯಾಸ ಮತ್ತು ಸುಸ್ತಾಗಲಿದೆ. ಇದರಿಂದ ನೀವು ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ತಲೆತಿರುಗುವುದು, ತಲೆ ನೋವಿನಂತಹ ಸಮಸ್ಯೆಗೆ ಒಳಗಾಗಬಹುದು.
ಇದಕ್ಕೂ ಮೊದಲು ತೂಕ ಇಳಿಸಲು ಹೊಸದಾಗಿ 2-2-2 ವಿಧಾನವೊಂದು ವೈರಲ್ ಆಗಿತ್ತು. ದಿನಕ್ಕೆ 2 ಬಾಟಲಿ ನೀರು, 2 ಬಾರಿ ಹಣ್ಣು ತರಕಾರಿ ಹಾಗೂ 2 ಬಾರಿ ವಾಕಿಂಕ್ ಹೋಗುವ ಹೊಸ ವಿಧಾನವಿದು. ಈ ನಿಯಮ ಅಳವಡಿಸಿಕೊಂಡರೆ ಬಹುಬೇಗ ತೂಕ ಇಳಿಸಬಹುದು ಎಂಬ ಹೊಸ ವಾದ ಹುಟ್ಟಿಕೊಂಡಿದೆ. ಆದರೆ ಈ ವಾದದ ಜೊತೆಗೆ ಈಗ ಹೊಸದಾಗಿ ನೀರು ಕುಡಿದು ತೂಕ ಇಳಿಸುವ ಈ ಯುವಕನ ವಿಧಾನ ಸಹ ಸದ್ದು ಮಾಡುತ್ತಿದೆ.
ಪ್ರತಿಯೊಬ್ಬರು ಇಂತಹ ಸುಲಭದ ವಿಧಾನ ಅನುಸರಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ತೂಕ ಇಳಿಸಲು ಮುಂದಾದವರು ಹತ್ತಾರು ರೀತಿಯ ಕಠಿಣ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಉಪವಾಸ ಮಾಡುವುದು, ಅಲ್ಪ ಆಹಾರ ಸೇವನೆ, ಇಡೀ ದಿನ ವ್ಯಾಯಾಮ ಹೀಗೆ ಕಠಿಣ ನಿಯಮದ ನಡುವೆ ತೂಕ ಇಳಿಸಲು ಕೆಲವರು ಕಷ್ಟಪಡುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
