Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
6 ತಿಂಗಳಲ್ಲಿ 25 ಕೆ.ಜಿ ತೂಕ ಇಳಿಸಿದ ಯುವತಿ..! ಆಕೆ ಏನು ಸೇವಿಸಿದಳು ಗೊತ್ತಾ?
ತೂಕ ಹೆಚ್ಚಳ ಈಗ ಕಾಮನ್ ಆಗಿರುವ ಸಮಸ್ಯೆ. ಏಕಾಏಕಿ ದಪ್ಪ ಆಗುವುದು, ದಪ್ಪ ಆದ ಬಳಿಕ ಮತ್ತೆ ಡಯೆಟ್ ಆರಂಭಿಸಿ ಸಣ್ಣ ಆಗಲು ಹರಸಾಹಸ ಮಾಡುವುದು ಈಗಿನ ಯುವ ಸಮುದಾದಯದ ಬಹುದೊಡ್ಡ ಸಮಸ್ಯೆ. ನಾವು ನಮ್ಮ ತೂಕದ ಮೇಲೆ ಎಷ್ಟೇ ಗಮನವಿಟ್ಟರೂ ಕೂಡ ನಮ್ಮ ಅರಿವಿಲ್ಲದೆಯೇ ತೂಕ ಹೆಚ್ಚಳವಾಗುತ್ತೆ. ತೂಕ ಹೆಚ್ಚಳಕ್ಕೆ ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದು.
ನಮ್ಮ ಜೀವನ ಶೈಲಿ, ಆಹಾರ ಕ್ರಮ ಇದಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ತೂಕ ಇಳಿಸಲು ಜನರು ಏನೆಲ್ಲಾ ಮಾಡುತ್ತಾರೆ ಅನ್ನೋದನ್ನು ನೋಡಿದ್ದೇವೆ. ವಿಪರೀತ ಡಯೆಟ್‌ಗಳು, ಔಷಧಿಗಳು, ಜಿಮ್, ಇಂಜೆಕ್ಷನ್, ಶಸ್ತ್ರ ಚಿಕಿತ್ಸೆಯಂತಹ ಅಪಾಯಕಾರಿ ಹೆಜ್ಜೆ ಇಡುತ್ತಾರೆ. ಕೆಲವೊಂದು ಪ್ರಕರಣದಲ್ಲಿ ಇದು ಅನಿವಾರ್ಯವೂ ಆಗಿರುತ್ತದೆ.

ಆದ್ರೆ ನೈಸರ್ಗಿಕ ವಿಧಾನದಲ್ಲಿ ಸುಲಭವಾಗಿಯೂ ತೂಕ ಇಳಿಸಲು ಹಲವು ಮಾರ್ಗಗಳಿವೆ. ಆದ್ರೆ ಇದು ತ್ವರಿತ ಫಲಿತಾಂಶ ನೀಡುವುದಿಲ್ಲ ಎಂಬ ಕಾರಣಕ್ಕೆ ಜನರು ಇದರ ಹಿಂದೆ ಬೀಳುವುದಿಲ್ಲ. ಬದಲಿಗೆ ದೊಡ್ಡ ದೊಡ್ಡ ಡಯಟಿಷಿಯನ್ಸ್ ಹತ್ತಿರ ಸಹಲೆ ಪಡೆಯುವುದು, ಸಣ್ಣ ಆಗುವ ದುಬಾರಿ ಕೋರ್ಸ್‌ಗಳ ಪಾಲಿಸುವುದು ನಾವು ನೋಡಿದ್ದೇವೆ.
ಆದ್ರೆ ಇಲ್ಲೊಬ್ಬ ಯುವತಿ ಕೇವಲ 6 ತಿಂಗಳ ಅಂತರದಲ್ಲಿ ಬರೋಬ್ಬರಿ 25 ಕೆ.ಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ, ವಿಪರೀತ ವ್ಯಾಯಾಮ, ಡಯೆಟ್ ಮೊರೆ ಹೋಗದೆಯೇ ಈ ಫಲಿತಾಂಶ ಕಂಡುಕೊಂಡಿದ್ದಾರೆ. ಹಾಗಾದ್ರೆ ಆಕೆ ಮಾಡಿದ್ದ ಡಯೆಟ್ ಏನು? ಯಾವ ವಿಧಾನದ ಮೂಲಕ ಇಷ್ಟು ಪ್ರಮಾಣದ ತೂಕ ಇಳಿಸಲು ಮುಂದಾದರು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಕ್ಷಿ ಯಾದವ್ ಎಂಬಾಕೆ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರು ಮಾಹಿತಿಯ ಪ್ರಕಾರ, ಆಕೆ ಯೋಗ ತರಬೇತುದಾರರಂತೆ ಹಾಗೆ ತೂಕ ಇಳಿಸಲು ತರಬೇತಿ ನೀಡುವವರಾಗಿದ್ದಾರೆ. ಇತ್ತೀಚಿನ ಪೋಸ್ಟ್‌ನಲ್ಲಿ ನಾನು ಹೇಗೆ 25 ಕೆ.ಜಿ ತೂಕ ಇಳಿಸಿದೆ ಎಂಬುದನ್ನು ವಿವರಿಸಿದ್ದಾರೆ.
ಕರಿದ ತಿಂಡಿ ಬದಲು ಡ್ರೈ ಫ್ರೂಟ್ಸ್
ಆಕೆ ತನ್ನ ತೂಕ ಇಳಿಸಲು ಮೊದಲು ಮಾಡಿದ ಅಂಶವೇನೆಂದರೆ ಉಪ್ಪು ಹಾಕಿರುವ ಕರಿದ ತಿಂಡಿಗಳನ್ನು ತ್ಯಜಿಸಿರುವುದು. ನಮ್ಕೀನ್ ಬದಲಿಗೆ ಡ್ರೈ ಫ್ರೂಟ್ಸ್ ಸವಿಯಲು ಮುಂದಾಗಿದ್ದು. ಹಾಗೆ ಪ್ಯಾಕ್ ಮಾಡಲಾದ ಜ್ಯೂಸ್ ಬದಲು ಹಣ್ಣನ್ನು ಮನೆಗೆ ತಂದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಕುಡಿಯಲು ಆರಂಭಿಸಿದ್ದು, ಅದರಲ್ಲೂ ಬೀಟ್ ರೂಟ್ ಜ್ಯೂಸ್ ಅವರ ಆಯ್ಕೆಯಾಗಿತ್ತು. ದಾಲ್, ರೈಸ್ ಬದಲಿಗೆ ಸಲಾಡ್ ಮತ್ತು ಮೊಸರು ಸೇವಿಸಿದ್ದು ತೂಕ ಇಳಿಸಲು ನೆರವಾಯಿತ್ತಂತೆ.
ಆರೋಗ್ಯಕರ ಆಹಾರದ ಜೊತೆ ಜೊತೆಗೆ ಅವರು ಮನೆಯಲ್ಲಿ ವ್ಯಾಯಾಮ ಹಾಗೂ ಯೋಗ ಮಾಡಲು ಆರಂಭಿಸಿದರಂತೆ. ಜಂಪಿಂಗ್, ಯೋಗ, ಸ್ಕಿಪ್ಪಿಂಗ್, ಮೌಂಟೇನ್ ಕ್ಲೈಂಬರ್ ಸೇರಿ ಹಲವು ರೀತಿಯ ಸರಳ ವ್ಯಾಯಾಮ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸೋಡಾ, ತಂಪು ಪಾನಿಯ, ಕ್ಯಾಲೋರಿ ಹೆಚ್ಚಿರುವ ಪಾನಿಯ, ಆಹಾರ ತ್ಯಜಿಸುವುದು. ಹಣ್ಣಿನ ರಸ ಹೆಚ್ಚಾಗಿ ಕುಡಿಯುವುದು, ಹೆಚ್ಚು ನೀರು ಸೇವಿಸುವುದು.
ಫ್ರೆಂಚ್ ಫ್ರೈಸ್, ಫ್ರೈಡ್ ಚಿಕನ್ ಮತ್ತು ಇತರ ಜಿಡ್ಡಿನ ಆಹಾರ ತಪ್ಪಿಸಲಾಗುತ್ತದೆ. ಇದರ ಬದಲಾಗಿ ಕಡಿಮೆ ಕ್ಯಾಲೋರಿ, ಕಡಿಮೆ ಎಣ್ಣೆ ಬಳಸಲಾದ ಆಹಾರ, ಹಸಿ ತರಕಾರಿ ಸೊಪ್ಪು ಸೇವನೆ ತೂಕ ಇಳಿಸಲು ಸಹಾಯ ಮಾಡಿತ್ತಂತೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
