Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಲಕಿ ಹೊಟ್ಟೆಯೊಳಗೆ ಕೂದಲು-ಹಲ್ಲು-ಮೂಳೆಯ ಗಡ್ಡೆ ಪತ್ತೆ..! 3.6 ಕೆ.ಜಿ ತೂಕದ ಟೆರಾಟೋಮಾ
ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ವಿಚಿತ್ರ ಪ್ರಕರಣಗಳು ದಾಖಲಾಗುತ್ತವೆ ಅನ್ನೋದನ್ನ ನಾವು ನೋಡಿರುತ್ತೇವೆ. ಕೆಲವೊಂದು ನಮ್ಮಲ್ಲಿ ಅಚ್ಚರಿ ಮೂಡಿಸುವ ಘಟನೆಗಳಾಗಿರುತ್ತವೆ. ಅದರಲ್ಲೂ ಈ ಹೊಟ್ಟೆಯಲ್ಲಿ ಗಟ್ಟೆ ಬೆಳೆಯುವುದು, ಕ್ಯಾನ್ಸರ್‌ನಂತಹ ಗಡ್ಡೆ ಬೆಳೆಯುವುದು ನೋಡಿರುತ್ತೇವೆ.
ಕೆಲವು ಬಾರಿ ಅವರ ಸಾಮರ್ಥ್ಯಕ್ಕಿಂತ ದೊಡ್ಡ ಗಡ್ಡೆಗಳು ಹೊಟ್ಟೆಯೊಳಗೆ ಬೆಳೆಯುವುದು ನಾವು ನೋಡಿರುತ್ತೇವೆ. ಇಲ್ಲಿಯೂ ಸಹ ಇಂತಹದ್ದ ಘಟನೆಯೊಂದು ನಡೆದಿದೆ. ಡೊಮಿನಿಕನ್ ರಿಪಬ್ಲಿಕ್‌ನ 12 ವರ್ಷದ ಬಾಲಕಿಯು ಹೊಟ್ಟೆ ನೋವಿನಿಂದ ಬಳಲಿ ಕೊನೆಗೆ ಆಸ್ಪತ್ರೆಗೆ ಬಂದಿದ್ದಳು, ಆಕೆಗೆ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು.

ಕೇವಲ ಗಡ್ಡೆ ಇದ್ದರೆ ಇದೊಂದು ಸಾಮಾನ್ಯ ಘಟನೆಯಾಗುತ್ತಿತ್ತು. ಆದರೆ ಆಕೆಯ ಹೊಟ್ಟೆಯಲ್ಲಿ ಬರೋಬ್ಬರಿ 3.6 ಕೆಜಿ ತೂಕದ ಗಡ್ಡೆ ಬೆಳದಿತ್ತು. ಜೊತೆಗೆ ಈ ಗಡ್ಡೆಯಲ್ಲಿ ಕೂದಲು, ಹಲ್ಲು, ಮೂಳೆ ಸೇರಿ ವಿವಿಧ ವಸ್ತುಗಳು ಸೇರಿದ್ದವು ಎಂದು ತಿಳಿದುಬಂದಿದೆ. ರೂಬಿ-ಮೇ ಅವರು ತೀವ್ರವಾದ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದಾಗ ಆಕೆಯ ತಾಯಿ ಸಾರಾ ಡೇವಿಸ್ ಅವರು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ದರು.
ಆಕೆಯ ಹೊಟ್ಟೆ ಸಾಮಾನ್ಯಕ್ಕಿಂತ ಹೆಚ್ಚು ಉಬ್ಬಿಕೊಂಡಿತ್ತು. ಅಲ್ಲದೆ ಅಸಹನೀಯ ನೋವು ಸಹ ಕಾಣಿಸಿಕೊಂಡಿತ್ತು. ಇದರಿಂದ ವೈದ್ಯರಿಗೆ ಇದರಲ್ಲಿ ಯಾವುದೋ ವಸ್ತು ಹೊಟ್ಟೆಯೊಳಗೆ ಸೇರಿದೆ ಎಂಬುದು ಪತ್ತೆಯಾಗಿತ್ತು. ತಡಮಾಡದ ವೈದ್ಯರು ನೇರ ಶಸ್ತ್ರಿಚಿಕಿತ್ಸೆಗೆ ಮುಂದಾದರು. ಈ ವೇಳೆ ಗಡ್ಡೆಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ರೂಬಿ-ಮೇ ಅಪರೂಪದ ರೀತಿಯ ಸೂಕ್ಷ್ಮಾಣು ಕೋಶದ ಗೆಡ್ಡೆಯನ್ನು ಹೊಂದಿದ್ದಾಳೆ ಎಂದು ತಿಳಿದುಬಂದಿತು. ಈ ರೀತಿಯ ಗಡ್ಡೆಯನ್ನು ಟೆರಾಟೋಮಾ ಎಂದು ಕರೆಯಲಾಗುತ್ತದೆ. ಇದು ಹಲ್ಲುಗಳು, ಕೂದಲು ಮತ್ತು ಮೂಳೆಯನ್ನು ಹೊಂದಿರುತ್ತದೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ಜೀವಕೋಶಗಳು ಎಷ್ಟು ಸಾಮಾನ್ಯವಾಗಿ ಕಾಣುತ್ತವೆ ಎಂಬುದರ ಆಧಾರದ ಮೇಲೆ ಟೆರಾಟೋಮಾಗಳು ಪ್ರಬುದ್ಧ ಅಥವಾ ಅಪಕ್ವವಾಗಬಹುದು ಮತ್ತು ಕೆಲವೊಮ್ಮೆ ಎರಡರ ಮಿಶ್ರಣವೂ ಆಗಿರಬಹುದು ಎಂದು ವೈದ್ಯರು ಹೇಳುತ್ತಾರೆ.
ಮತ್ತೊಂದು ಅಚ್ಚರಿ ಎಂದರೆ ಈ ಗಡ್ಡೆಗಳು ಸಾಮಾನ್ಯವಾಗಿ ಮೃದುವಾದ ಮೂಳೆ, ಅಂಡಾಶಯ ಅಥವಾ ವೃಷಣದಲ್ಲಿ ರೂಪುಗೊಳ್ಳುತ್ತವೆ. ಅಂತಹ ಗೆಡ್ಡೆಗಳು ಸಾಮಾನ್ಯವಾಗಿ ಜನನದ ಸಮಯದಲ್ಲಿ ಪತ್ತೆಯಾಗುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ, ಆದರೆ ರೂಬಿ-ಮೇಸ್ ವರ್ಷಗಳವರೆಗೆ ಪತ್ತೆಯಾಗದೆ ಬೆಳೆಯುತ್ತಿದೆ. ಆಕೆ ಗರ್ಭದಲ್ಲಿರುವಾಗಲೇ ಗಡ್ಡೆ ಬೆಳೆದಿತ್ತು ಎಂದು ವೈದ್ಯರು ಶಂಕಿಸಿದ್ದಾರೆ. ಏಕೆಂದರೆ ಇದು ಆಕೆಯ ತಾಯಿ ಗರ್ಭಾವಸ್ಥೆಯಲ್ಲಿದ್ಧಾಗ ಬೆಳೆಯಲು ಆರಂಭಿಸಿದೆ, ಆದರೆ ತಾಯಿಯ ಹೊಟ್ಟೆಯಲ್ಲಿ ಉಂಟಾಗದೆ ಆಗಷ್ಟೇ ಕೋಶ ಪಡೆದಿದ್ದ ಭ್ರೂಣದಲ್ಲಿ ಅದು ಬೆಳೆಯಲು ಆರಂಭಿಸಿದೆ.
ಇದು ಕ್ಯಾನ್ಸರ್ ಅಲ್ಲದಿದ್ದರೂ, ರೂಬಿ-ಮೇ ಜೀವಕ್ಕೆ ಹಾನಿ ಮಾಡುವಷ್ಟು ದೊಡ್ಡದಾಗಿ ಈ ಗಡ್ಡೆ ಬೆಳೆದಿತ್ತು. ಈ ಗಡ್ಡೆ ಬೆಳವಣಿಗೆಯಾಗುತ್ತಾ ಉಳಿದ ಆರೋಗ್ಯಕರ ಕೋಶಗಳಿಗೂ ಹಾನಿ ಮಾಡುತ್ತದೆ. ಹೀಗಾಗಿ ರೂಬಿಯ ಅಪೆಂಡಿಕ್ಸ್‌ಗೆ ಹಾನಿಯಾಗಿತ್ತು. ಆದ್ರೆ ಈಗ ರೂಬಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.
ಟೆರಾಟೋಮಾ ಗಡ್ಡೆ ಅಪಾಯವೇನು?
ನಿಮ್ಮ ಕೋಶಗಳ ಬೆಳವಣಿಗೆಯ ವೇಳೆ ವಿಭಿನ್ನ ಪ್ರಕ್ರಿಯೆಯಲ್ಲಿ ಅಡಚಣೆಗಳು ಉಂಟಾದಾಗ ಟೆರಾಟೋಮಾ ಬೆಳವಣಿಗೆಯಾಗುತ್ತದೆ. ಟೆರಾಟೋಮಾದ ಸಂದರ್ಭದಲ್ಲಿ, ನಿಮ್ಮ ವಿಶೇಷವಲ್ಲದ ಸೂಕ್ಷ್ಮಾಣು ಕೋಶಗಳು ಕೂದಲು, ಸ್ನಾಯು ಮತ್ತು ಮೂಳೆ ಕೋಶಗಳಂತಹ ವಿವಿಧ ರೀತಿಯ ವಿಶೇಷ ಕೋಶಗಳಾಗಿ ಬದಲಾಗುತ್ತವೆ. ಅದಕ್ಕಾಗಿಯೇ ಟೆರಾಟೋಮಾವು ಯಾದೃಚ್ಛಿಕವಾಗಿ ಕಾಣುವ ದೇಹದ ಭಾಗಗಳು ಮತ್ತು ಅಂಗಾಂಶಗಳ ಸಂಗ್ರಹವನ್ನು ಹೊಂದಿರುತ್ತದೆ. ಇದು ಇತರ ಕೋಶಗಳ ಮೇಲೆ ಹಾನಿ ಮಾಡುವ ಕಾರಣ ಸಾವು ಸಹ ಸಂಭವಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
