Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಎಕ್ಸ್‌ಪರ್ಟ್ ಟಿಪ್ಸ್: 60 ವರ್ಷ ಮೇಲ್ಪಟ್ಟ ಈ 8 ವಿಷಯ ಗಮನಿಸಿದರೆ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ
60 ವರ್ಷ ಕಳೆಯುತ್ತಿದ್ದಂತೆ ಅವರನ್ನು ಹಿರಿಯ ನಾಗರಿಕರು (ಸೀನಿಯರ್ ಸಿಟಿಜನ್ ) ಎಂದು ಕರೆಯುತ್ತೇವೆ. ಹಿರಿಯ ನಾಗರಿಕರಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು, ಅದರಲ್ಲೂ ಹೆಚ್ಚಿನವರಿಗೆ ಮರೆವಿನ ಸಮಸ್ಯೆ ಕಾಡುವುದು. ಹಿರಿಯ ನಾರಿಕರು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಡಾ. ದಿನೇಶ್ ವಿ ಕಾಮತ್ (Consultant - Internal Medicine, Manipal Hospitals, Malleshwaram) ಅತ್ಯುತ್ತಮವಾದ ಟಿಪ್ಸ್ ನೀಡಿದ್ದಾರೆ ನೋಡಿ:

* ಮೊದಲಿಗೆ ಮೆದುಳು ಚುರುಕಾಗಿ ಇಡಬೇಕು
ಇಳಿ ವಯಸ್ಸಿನಲ್ಲಿ ಮರೆವು ಉಂಟಾಗುವುದು, ಆದ್ದರಿಂದ 60ರ ಪ್ರಾಯವನ್ನು ಅರಳು-ಮರಳು ಎಂದು ಹೇಳಲಾಗುವುದು. ಆದರೆ ಮೋದಿ ಮುಂತಾದ ನಾಯಕರನ್ನು ನೋಡಿ 65 ವರ್ಷ ದಾಟಿದರೂ ಅವರ ನೆನಪಿನ ಶಕ್ತಿ ತುಂಬಾ ಚೆನ್ನಾಗಿದೆ. ಅದಕ್ಕೆ ಕಾರಣ ಮೆದುಳನ್ನು ಚುರುಕಾಗಿ ಇಡುವುದು. ವೈದ್ಯರು ಕೂಡ ಇದನ್ನೇ ಸೂಚಿಸಿದ್ದಾರೆ. ಆದ್ದರಿಂದ ನಿವೃತಿಯಾಯ್ತು ಎಂದು ಸುಮ್ಮನಿರದೆ ಮೆದುಳನ್ನು ಚುರುಕಾಗಿಸಲು ಏನಾದರೂ ಮಾಡುತ್ತಲೇ ಇರಬೇಕು. ಈ ವಯಸ್ಸಿನಲ್ಲಿ ಹೊಸ ವಿಷಯಗಳನ್ನು ಕಲಿಯಬಹುದು ಅಥವಾ ನಿಮ್ಮ ಆಸಕ್ತಿಯ ಕಾರ್ಯಗಳನ್ನು ಮಾಡಬಹುದು.
ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು
60 ವರ್ಷ ದಾಡಿದ ಮೇಲೆ ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು. ಅಂದರೆ ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಸಂಧಿವಾತ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ, ಅಲ್ಲದೆ ತೂಕವನ್ನು ನಿಯಂತ್ರಣದಲ್ಲಿಡಬಹುದು. ಅಲ್ಲದೆ ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ ಈ ಬಗೆಯ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು. ವ್ಯಾಯಾಮ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.
ಆಹಾರಕ್ರಮದ ಕಡೆಗೆ ಗಮನಹರಿಸಿ
ವಯಸ್ಸಾಗುತ್ತಿದ್ದಂತೆ ಆಹಾರ ಕ್ರಮದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಪೌಷ್ಠಿಕಾಂಶವಿರುವ ಆಹಾರ ಸೇವಿಸಿ. ಅಲ್ಲದೆ ಕ್ಯಾಲ್ಸಿಯಂ ಅಧಿಕವಿರುವ ಆಹಾರ, ಕ್ಯಾಲ್ಸಿಯಂ ಮೂಳೆಯ ಆರೋಗ್ಯ ಕಾಪಾಡುತ್ತದೆ. ಆಹಾರವನ್ನು ಮಿತಿಯಲ್ಲಿ ತಿನ್ನಿ, ನಿಮ್ಮ ಆಹಾರಕ್ರಮದಲ್ಲಿ ಹಣ್ಣು-ತರಕಾರಿಗಳು ಅಧಿಕವಿರಲಿ.
ಸ್ನೇಹಿತರ ಜೊತೆ ಬೆರೆಯಿರಿ
ಈ ವಯಸ್ಸು ಎಂದರೆ ಒಂಟಿಯಾಗಿರುವುದಲ್ಲ, ಬದಲಿಗೆ ನಿಮ್ಮ ಸ್ನೇಹಿತರ ಜೊತೆ ಬೆರೆಯಿರಿ. ಕಾಫಿ ಸೆಂಟರ್ ಅಥವಾ ಪಾರ್ಕ್‌ನಲ್ಲಿ ವ್ಯಾಯಾಮ ಮಾಡುವಾಗ ಭೇಟಿಯಾಗಿ ಕಷ್ಟ-ಸುಖ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುವುದು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ
ನೀವು ಆರೋಗ್ಯವಾಗಿದ್ದರೂ ಶುಗರ್, ಕೊಲೆಸ್ಟ್ರಾಲ್, ಮುಂತಾದ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿ, ಹೀಗೆ ಮಾಡುವ ಮೂಲಕ ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ, ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ
ನೀವು ಏನಾದರೂ ಆರೋಗ್ಯ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದರೆ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ, ನಿರ್ಲಕ್ಷ್ಯ ಮಾಡಿದರೆ ನಿಮ್ಮ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಆದ್ದರಿಂದ ಇತರರು ನಿಮ್ಮ ಮೇಲೆ ಕಾಳಜಿ ತೋರುವುದಕ್ಕಿಂತ ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ಧೂಮಪಾನ ಮಾಡಿ
ವಯಸ್ಸಾದವರು ಧೂಮಪಾನ ಮಾಡುವುದರಿಂದ ಕೆಮ್ಮಿನ ಸಮಸ್ಯೆ ತುಂಬಾ ಕಾಡುವುದು, ವಿಪರೀತ ಕೆಮ್ಮಿನಿಂದ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡಿ. ಧೂಮಪಾನ ಬಿಡುವುದರಿಂದ ಕ್ಯಾನ್ಸರ್, ಮಧುಮೇಹ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
ಚೆನ್ನಾಗಿ ನಿದ್ದೆ ಮಾಡಿ
ನೀವು 8 ಗಂಟೆ ನಿದ್ದೆ ಮಾಡಿ. ಬೇಗ ಮಲಗಿ ಬೇಗ ಎದ್ದೇಳುವ ಅಭ್ಯಾಸ ಇನ್ನೂಒಳ್ಳೆಯದು. ವಯಸ್ಸಾಗುತ್ತಿದ್ದಂತೆ ಕೆಲವರಿಗೆ ನಿದ್ದೆ ಬರಲ್ಲ, ಇನ್ನು ಕೆಲವರಿಗೆ ಕೂತಲ್ಲಿಯೇ ನಿದ್ದೆ ಬರುತ್ತದೆ. ದೈಹಿಕವಾಗಿ ಚಟುವಟಿಕೆಯಾಗಿ ಇರುವುದರಿಂದ ಒಳ್ಲೆಯ ನಿದ್ದೆ ಪಡೆಯಬಹುದು.
ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ
* ಸುಸ್ತು
* ಉಸಿರಾಟದಲ್ಲಿ ತೊಂದರೆ
* ಎದೆ ಭಾಗದಲ್ಲಿ ನೋವು
* ದೇಹದ ಒಂದು ಭಾಗ ಮರಕಟ್ಟಿದಂತಾಗುವುದು
* ದೇಹದ ಸಮತೋಲನ ತಪ್ಪುವುದು
* ಮಾತನಾಡುವಾಗ ಮಾತು ತೊದಲುವುದು
* ತುಂಬಾನೇ ಮೈ ಬೆವರುವುದು
* ಕಣ್ಣುಗಳು ಮಂಜಾಗುವುದು
* ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾಗುವುದು
* ತುಂಬಾ ಗೊಂದಲ
* ಗಾಯವಾಗಿದ್ದರೆ ಅದು ಒಣಗದಿದ್ದರೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
