Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಹಿಳೆಯರೇ, 30ರ ನಂತರ ಕೊಲೆಸ್ಟ್ರಾಲ್ ಹೆಚ್ಚಾದರೆ ನಾಲಗೆಯಲ್ಲಿ ಕಂಡು ಬರುವ 7 ಲಕ್ಷಣಗಳಿವು
ಕೊಲೆಸ್ಟ್ರಾಲ್ ಎಂಬುವುದು ಮೊದಲೆಲ್ಲಾ 50 ವರ್ಷ ದಾಟಿದ ಮಹಿಳೆಯರಲ್ಲಿ ಕಂಡು ಬರುವ ಸಮಸ್ಯೆಯಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ 30 ವರ್ಷಕ್ಕೆಲ್ಲಾ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬರುತ್ತದೆ. ವಯಸ್ಸು, ಲಿಂಗ ಬೇಧವಿಲ್ಲದೆ ಈ ಸಮಸ್ಯೆ ಕಂಡು ಬರುತ್ತಿದೆ.
ಆದರೆ ಮಹಿಳೆಯರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬಂದಾಗ 7 ಲಕ್ಷಣಗಳು ಕಂಡು ಬರುತ್ತದೆ, ಆದರೆ ಹೆಚ್ಚಿನವರು ಪ್ರಾರಂಭದಲ್ಲಿ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ, ಮಹಿಳೆಯರೇ ಈ 7 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ:

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾ ನಾಲಗೆಯಲ್ಲಿ ಈ 7 ಲಕ್ಷಣಗಳು ಕಂಡು ಬರುವುದು:
ಬಿಳಿ ಪ್ಯಾಚ್ ಕಂಡು ಬರುವುದು: ನಾಲಗೆಯಲ್ಲಿ ವೈಟ್ ಪ್ಯಾಚ್ ಕಂಡು ಬರುವುದು. ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುವುದರ ಸೂಚನೆಯಾಗಿದೆ. ಇದನ್ನು ಲಿಕೊಪ್ಲೇಕಿಯಾ ಎಂದು ಕರೆಯಲಾಗುವುದು.
ನಾಲಗೆ ಮಂದವಾಗುವುದು, ದಪ್ಪವಾಗುವುದು
ನಾಲಗೆ ಸಾಮಾನ್ಯಗಿಂತ ಹೆಚ್ಚು ದಪ್ಪವಿರುತ್ತದೆ, ಆದರೆ ಈ ಲಕ್ಷಣಗಳನ್ನು ಹೆಚ್ಚಿನವರು ನಿರ್ಲಕ್ಷ್ಯ ಮಾಡುತ್ತಾರೆ. ನಾಲಗೆಯಲ್ಲಿ ನರಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಈ ರೀತಿ ನಾಲಗೆ ಮಂದವಾಗುವುದು ಅಥವಾ ದಪ್ಪಗಾಗುವುದು.
ನಾಲಗೆಯಲ್ಲಿ ಉರಿಯೂತ
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಗೆ ಉರಿ ಉರಿಯಾದಂತೆ ಅನಿಸುವುದು, ನಾಲಗೆಯ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಗೆಯಲ್ಲಿ ಉರಿಯೂತ ಉಂಟಾಗುವುದು.
ರುಚಿಯಲ್ಲಿ ಬದಲಾವಣೆ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾಲಗೆಯಲ್ಲಿ ರುಚಿ ಬದಲಾವಣೆಯಾಗುತ್ತದೆ, ಬಾಯಿ ಒಂಥರಾ ಕಹಿ ಕಹಿಯಾದಂತೆ ಅನಿಸುವುದು. ಜ್ವರ ಬಂದಾಗ ಕಹಿಯಾಗುತ್ತದೆ ಅಲ್ವಾ? ಅದೇ ರೀತಿ ಬಾಯಿ ಕಹಿಯಾಗುವುದು.
ಬಾಯಿ ತುಂಬಾ ಒಣಗುವುದು
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಬಾಯಿ ತುಂಬಾ ಒಣಗುವುದು. ಇದನ್ನು ನಿರ್ಲಕ್ಷ್ಯ ಮಾಡಬೇಡಿ, ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುವುದರ ಆರಂಭಿಕ ಸೂಚನೆಯಾಗಿದೆ. ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಿಕೊಂಡರೆ ಬಾಯಿ ತುಂಬಾ ಡ್ರೈಯಾಗುವುದು.
ಆಹಾರ ನುಂಗಲು ಕಷ್ಟವಾಗುವುದು
ಕೆಟ್ಟ ಕೊಲೆಸ್ಟ್ರಾಲ್ ಉಂಟಾದರೆ ನುಂಗಲು ಕಷ್ಟವಾಗುವುದು, ಇದನ್ನು ವೈದ್ಯಕೀಯ ಭಾಷೆಯಲ್ಲಿ dysphagia ಎಂದು ಕರೆಯಲಾಗುವುದು. ಆದ್ದರಿಂದ ಆಹಾರ ನುಂಗಲು ಕಷ್ಟವಾಗುತ್ತಿದ್ದರೆ ನೀವು ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ನಾಲಗೆ ಬಿಳಿ-ಬಿಳಿಯಾಗಿರುವುದು
ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುವ ಲಕ್ಷಣವಾಗಿದೆ. ನಾಲಗೆಯಲ್ಲಿ ಸೂಕ್ಷ್ಮಾಣುಗಳ ಉತ್ಪತ್ತಿ ಹೆಚ್ಚಾದಾಗ ಈ ರೀತಿ ಉಂಟಾಗುವುದು.
ಕೊಲೆಸ್ಟ್ರಾಲ್ ಉತ್ಪತ್ತಿಯಾಗಲು ಕಾರಣವೇನು?
ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಹೆಚ್ಚಾದಾಗ ಕೊಲೆಸ್ಟ್ರಾಲ್ ಹೆಚ್ಚಾಗುವುದು. ತುಂಬಾ ಕೊಬ್ಬಿನಂಶ ಆಹಾರದ ಸೇವನೆ, ವ್ಯಾಯಾಮ ಮಾಡದಿರುವುದು, ಮೈ ತೂಕ ಹೆಚ್ಚಾಗುವುದು, ಧೂಮಪಾನ, ಮದ್ಯಪಾನ ಈ ಬಗೆಯ ಅಭ್ಯಾಸಗಳಿಂದ ಉಂಟಾಗುವುದು. ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಕಂಡು ಬರುವುದು.
ಕೊಲೆಸ್ಟ್ರಾಲ್ ಸಮಸ್ಯೆ ತಡೆಗಟ್ಟುವುದು ಹೇಗೆ?
ಆರೋಗ್ಯಕರವಾದ ಆಹಾರಕ್ರಮ ಸೇವಿಸಿ
ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಸೇವಿಸಿ, ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಹೆಚ್ಚಾಗುವುದು. ಮೀನು ತಿನ್ನದವರು ಒಮೆಗಾ 3 ಕೊಬ್ಬಿನಂಶ ಹೆಚ್ಚಾಗುವುದು. ಅಲ್ಲದೆ ಕೆಂಪು ಮಾಂಸ, ಅಧಿಕ ಕೊಬ್ಬಿನಂಶವಿರುವ ಆಹಾರ ಮಿತಿಯಲ್ಲಿ ಸೇವಿಸಿ.
ಪ್ರತಿದಿನ ವ್ಯಾಯಾಮ ಮಾಡುವುದು
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು.
ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳುವುದು
ಕೊಲೆಸ್ಟ್ರಾಲ್ ಸಮಸ್ಯೆ ತಡೆಗಟ್ಟಲು ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳಿ.
ಮದ್ಯಪಾನ ಮಿತಿಯಲ್ಲಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
