Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಈ 7 ಕಾರಣಕ್ಕೆ ಸಿಹಿ ಗೆಣಸನ್ನು ಚಳಿಗಾಲದ ಸೂಪರ್‌ಫುಡ್ ಎಂದು ಹೇಳುವುದು
ಸೀಸನಲ್ ಫುಡ್ ಅಥವಾ ಋತುಮಾನದ ಆಹಾರ ಎಂದು ಕರೆಯಲ್ಪಡುವ ಕೆಲವು ಹಣ್ಣು ತರಕಾರಿ ಸೊಪ್ಪು ಮೊದಲಾದವುಗಳನ್ನು ಆಯಾ ಕಾಲಕ್ಕೆ ತಕ್ಕ ಹಾಗೆ ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಕೆಲವು ಹಣ್ಣು ತರಕಾರಿಗಳು ಎಲ್ಲಾ ಸಮಯದಲ್ಲಿಯೂ ಸಿಗುವುದಿಲ್ಲ ಅದು ಯಾವ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆಯೋ ಆ ಋತುವಿನಲ್ಲಿಯೇ ಖರೀದಿ ಮಾಡಿ ಸೇವಿಸಬೇಕು. ಇಂತಹ ಒಂದು ಋತುಮಾನದ ತರಕಾರಿ ಅಂದ್ರೆ ಸ್ವೀಟ್ ಪೊಟ್ಯಾಟೋ ಅಥವಾ ಸಿಹಿ ಆಲೂಗಡ್ಡೆ.

ಚಳಿಗಾಲದಲ್ಲಿ ಸಿಹಿ ಆಲೂಗಡ್ಡೆ ಸೇವನೆ!
ಸಾಮಾನ್ಯ ಆಲೂಗಡ್ಡೆ ಎಲ್ಲಾ ಋತುವಿನಲ್ಲಿಯೂ ಲಭ್ಯವಾಗಬಹುದು ಆದರೆ ಸ್ವೀಟ್ ಪೊಟ್ಯಾಟೋ ಹಾಗಲ್ಲ ಚಳಿಗಾಲದಲ್ಲಿ ಹೆಚ್ಚಾಗಿ ಈ ಬೆಳೆ ಬೆಳೆಯಲಾಗುತ್ತದೆ ಹಾಗಾಗಿ ಚಳಿಗಾಲದಲ್ಲಿ ಸಿಹಿ ಗೆಣಸು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಮಣ್ಣಿನ ಆಳದಲ್ಲಿ ಬೆಳೆಯುವ ಸಿಹಿ ಗೆಣಸು ಅಥವಾ ಇದನ್ನ ಶಕರ್ಖಂಡಿ ಎಂದು ಕೂಡ ಕರೆಯಲಾಗುತ್ತದೆ. ಇದೊಂದು ಅತ್ಯಂತ ರುಚಿಕರವಾದ ಹಾಗೂ ಪೌಷ್ಟಿಕಾಂಶಗಳ ಆಗರ ಎಂದೇ ಹೇಳಬಹುದು. ಬೇರು ತರಕಾರಿಗಳಲ್ಲಿ ಒಂದಾಗಿರುವ ಸಿಹಿ ಆಲೂಗಡ್ಡೆಯ ಪ್ರಯೋಜನ ಸಾಕಷ್ಟು ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿರುವುದರಿಂದ ಚಳಿಗಾಲದಲ್ಲಿ ಸಿಹಿ ಆಲೂಗಡ್ಡೆ ಸೇವನೆ ಒಳ್ಳೆಯದು.
ಇನ್ನೇನು ಚಳಿಗಾಲ ಆರಂಭವಾಗುತ್ತಿದೆ ಈ ಸಮಯದಲ್ಲಿ ನೀವು ಸಿಹಿ ಗೆಣಸು ಸೇವನೆ ಮಾಡುವುದು ಬಹಳ ಮುಖ್ಯ. ಸಿಹಿ ಗೆಣಸು ಸೇವನೆಯಿಂದ ಯಾವೆಲ್ಲ ಆರೋಗ್ಯಕರ ಪ್ರಯೋಜನಗಳು ಇವೆ ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
1. ಚರ್ಮಕ್ಕೆ ಉತ್ತಮ!
ಚಳಿಗಾಲದಲ್ಲಿ ನಮ್ಮ ತ್ವಚೆಯನ್ನ ಸುರಕ್ಷಿತವಾಗಿ ಕಾಯ್ದುಕೊಳ್ಳುವುದು ಬಹಳ ದೊಡ್ಡ ವಿಷಯ ಯಾಕೆಂದರೆ ಚಳಿಗಾಲದಲ್ಲಿ ತ್ವಚೆ ಬೇಗ ಶುಷ್ಕಗೊಳ್ಳುತ್ತದೆ, ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹೀಗಾದಾಗ ನಮ್ಮ ತ್ವಚೆ ಹಾಳಾಗುತ್ತದೆ ಇಂತಹ ಸಂದರ್ಭದಲ್ಲಿ ಸಿಹಿ ಆಲೂಗಡ್ಡೆ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯಕ್ಕೆ ಬಹಳಾನೇ ಒಳ್ಳೆಯದು. ತ್ವಚೆ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುವ ಸಮಸ್ಯೆ ಕಾಡುತ್ತಿದ್ದರೆ ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಟ ಮಾಡಿ ಚರ್ಮಕ್ಕೆ ಸುರಕ್ಷತೆ ನೀಡುವಂತಹ ಸಿಹಿ ಪೊಟ್ಯಾಟೋ ಸೇವನೆ ಮಾಡಬೇಕು. ಇದು ತ್ವಚೆಯನ್ನು ಮೃದುವಾಗಿಸುತ್ತದೆ ಜೊತೆಗೆ ತೇವಾಂಶವನ್ನು ಕಳೆದುಕೊಳ್ಳದೆ ಉಳಿದ ಋತುವಿನಲ್ಲಿ ಇರುವಂತೆ ಚಳಿಗಾಲದಲ್ಲಿ ನಿಮ್ಮ ತ್ವಚೆ ಚೆನ್ನಾಗಿರುತ್ತೆ.
2. ಚಳಿಗಾಲದಲ್ಲಿ ಮಾನಸಿಕ ಆರೋಗ್ಯಕ್ಕೂ ಇದೆ ಬೆಸ್ಟ್!
ಚಳಿಗಾಲದ ಋತು ಎಷ್ಟೋ ಸಮಯದಲ್ಲಿ ದೇಹಕ್ಕೆ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ಬದಲಾವಣೆಗಳನ್ನು ತರುತ್ತದೆ. ಚಳಿ ಅಂದ್ರೆ ಮನೆಯಿಂದ ಹೊರಗೆ ಹೋಗುವುದು ಬೇಡ ಎನ್ನುವಂತಹ ಮನಸ್ಥಿತಿ ಇರುವವರು ಹೆಚ್ಚು. ಇಂತಹ ಸಂದರ್ಭದಲ್ಲಿ ನಿಮ್ಮ ಮೂಡ್ ಫ್ರೆಶ್ ಮಾಡಲು ನಮ್ಮ ಮೇಲಿನ ಒತ್ತಡದ ವಿರುದ್ಧ ಹೋರಾಡುವಂತಹ ಮ್ಯಾಗ್ನಿಷಿಯಂ ಅಂಶವನ್ನು ಹೆಚ್ಚಾಗಿ ಹೊಂದಿರುವ ಸಿಹಿ ಪೊಟ್ಯಾಟೋ ಸೇವನೆ ಮಾಡುವುದು ಒಳ್ಳೆಯದು.
3. ಶಾಖ ಉತ್ಪಾದಿಸುವ ಗುಣಲಕ್ಷಣ!
ಸಿಹಿ ಆಲೂಗಡ್ಡೆಯಲ್ಲಿ ನಮನ ಬೆಚ್ಚಗೆಡುವಂತಹ ಶಕ್ತಿ ಇದೆ ಇದರಲ್ಲಿ ಸಾಮಾನ್ಯವಾಗಿ ಶಾಖ ಉತ್ಪಾದಿಸುವ ಗುಣ ಇರುವುದರಿಂದ ಸಿಹಿ ಆಲೂಗಡ್ಡೆ ಸೇವನೆ ಮಾಡಿದರೆ ದೇಹ ಹೆಚ್ಚು ತಂಪಾಗಿರದೆ ಉಷ್ಣಾಂಶದಿಂದ ಕೂಡಿರುತ್ತದೆ. ನೈಸರ್ಗಿಕ ಸಕ್ಕರೆ ಅಂಶ ಇರುವ ಸಿಹಿ ಆಲೂಗಡ್ಡೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಕೂಡ ನೀಡುತ್ತದೆ.
4. ಹೃದಯದ ಆರೋಗ್ಯಕ್ಕೆ ಸಹಾಯಕಾರಿ!
ಸಿಹಿ ಆಲೂಗಡ್ಡೆಯಲ್ಲಿ ಫೈಬರ್ ಅಂಶ ಹೇರಳವಾಗಿದೆ. ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉಪಯೋಗಕಾರಿಯಾಗಿದೆ. ಇದರಿಂದಾಗಿ ರಕ್ತದ ಒತ್ತಡ ಮಟ್ಟ ಕೂಡ ಸುಧಾರಿಸುತ್ತದೆ ಪೊಟ್ಯಾಶಿಯಂ ಅಂಶ ಅಧಿಕವಾಗಿರುವುದರಿಂದ ಹೃದಯದ ಆರೋಗ್ಯಕ್ಕೂ ಕೂಡ ಇದು ಬಹಳ ಮುಖ್ಯ. ದೇಹದಲ್ಲಿ ಕೆಂಪು ರಕ್ತ ಕಣ ತಯಾರಿಕೆಯಲ್ಲಿ ಹಾಗೂ ಹೃದಯದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿಹಿ ಆಲೂಗಡ್ಡೆಯ ಸೇವನೆ ಹೆಚ್ಚು ಪ್ರಯೋಜನಕಾರಿಯಾಗಿದೆ.
5. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ!
ಸಿಹಿ ಆಲೂಗಡ್ಡೆಯಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಅಂಶ ಅಧಿಕವಾಗಿರುತ್ತದೆ ಹಾಗಾಗಿ ಇದು ದೇಹದಲ್ಲಿ ಅಗತ್ಯವಾಗಿರುವ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಜೊತೆಗೆ ಹೊರಗಿನ ಸೋಂಕುಗಳ ಜೊತೆಗೆ ಹೋರಾಡಲು ದೇಹವನ್ನು ಸಿದ್ಧಪಡಿಸುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಇವೆ. ಇದರಲ್ಲಿ ಇರುವ ಕಾರ್ಬೋಹೈಡ್ರೇಟ್ ಗಳು ಆರೋಗ್ಯವನ್ನು ಕಾಪಾಡುವುದರಲ್ಲಿ ದೇಹಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತವೆ ಎನ್ನಬಹುದು.
6. ಕ್ಯಾನ್ಸರ್ ರೋಗ ತಡೆಯುತ್ತೆ!
ಸಿಹಿ ಆಲೂಗಡ್ಡೆ ಎನ್ನುವುದು ಚಳಿಗಾಲದ ಪ್ರಮುಖ ತರಕಾರಿಗಳು ಆಗಿದ್ದರೂ ಕೂಡ ಇದನ್ನು ಬೇಸಿಗೆ ಹಾಗೂ ಮಳೆಗಾಲದ ಋತುವಿನಲ್ಲಿಯೂ ಕೂಡ ಸೇವನೆ ಮಾಡಬಹುದು. ಸಿಹಿ ಆಲೂಗಡ್ಡೆಯಲ್ಲಿ ಬೀಟಾ ಕ್ಯಾರೋಟಿನ್ ಅಂಶ ಇದ್ದು ಇದು ಸ್ಥಾನ ಹಾಗೂ ಅಂಡಾಶಯದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿ ಇರುವುದರಿಂದ ಇದು ಮಹಿಳೆಯರಲ್ಲಿ ಫರ್ಟಿಲಿಟಿ ಅಥವಾ ಫಲವತ್ತತೆ ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಹಾಗಾಗಿ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ಮಹಿಳೆಯರು ಕೂಡ ಸಿಹಿ ಆಲೂಗಡ್ಡೆ ಸೇವನೆ ಮಾಡುವುದು ಬಹಳ ಒಳ್ಳೆಯದು.
ನಿತ್ಯವೂ ಸೇವಿಸುವ ಆಹಾರದಲ್ಲಿ ಸಿಹಿ ಆಲೂಗಡ್ಡೆಯನ್ನು ಸೇರಿಸಬಹುದು. ಅಥವಾ ನೀವು ಸಲಾಡ್ ಸೇವನೆ ಮಾಡುತ್ತಿದ್ದರೆ ಸಿಹಿ ಆಲೂಗಡ್ಡೆಯನ್ನು ಸ್ವಲ್ಪ ಬೇಯಿಸಿ ಅದನ್ನ ಸೇವನೆ ಮಾಡಬಹುದು. ನಾವು ಹಿಂದಿನ ಕಾಲಕ್ಕೆ ಹೋದರೆ ಸಿಹಿ ಆಲೂಗಡ್ಡೆ ಎನ್ನುವುದು ಎನರ್ಜಿ ಕೊಡುವಂತಹ ಬಹಳ ಮುಖ್ಯವಾದ ಆಹಾರವಾಗಿತ್ತು. ಬಡವರ ಮನೆಗಳಲ್ಲಿಯಂತೂ ಪ್ರತಿದಿನ ಸಿಹಿ ಆಲೂಗಡ್ಡೆಯನ್ನು ಉಪ್ಪು ಹಾಕಿ ಬೇಯಿಸಿಕೊಂಡು ತಿಂದು ಹೊಟ್ಟೆ ತುಂಬಿಸಿಕೊಳ್ಳುವವರು ಅದೆಷ್ಟೋ ಜನ ಇದ್ರು. ಇದೇ ಕಾರಣಕ್ಕೆ ಆಗಿನ ಜನರಲ್ಲಿ ಅತಿ ಹೆಚ್ಚು ಎನರ್ಜಿ ಕೂಡ ಇರುತ್ತಿತ್ತು. ಇದೀಗ ಸಿಹಿ ಆಲೂಗಡ್ಡೆಯ ಪ್ರಯೋಜನ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಚಳಿಗಾಲದಲ್ಲಿ ತಪ್ಪದೆ ಒಮ್ಮೆಯಾದರೂ ಸಿಹಿ ಆಲೂಗಡ್ಡೆ ಸೇವನೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications