Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತೀಯರಿಗೆ ಪ್ರಿಯವಾದ ಈ 7 ಆಹಾರ ವಿದೇಶದಲ್ಲಿ ಬ್ಯಾನ್
ನಾವು ತಿನ್ನುವ ಎಷ್ಟೋ ಆಹಾರಗಳನ್ನು ವಿದೇಶದಲ್ಲಿ ಬ್ಯಾನ್ ಮಾಡಲಾಗಿದೆ, ಅವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಬ್ಯಾನ್ ಆಗಿದೆ, ಆದರೆ ಅಂಥ ಆಹಾರಗಳ ಪಟ್ಟಿಯಲ್ಲಿ ನಾವು ಆರೋಗ್ಯಕರ ಎಂದು ಸೇವಿಸುವ ಬೆಲ್ಲ, ತುಪ್ಪ, ಬದನೆಕಾಯಿ ಸಾಂಬಾರ್ ಕೂಡ ಬಳಸುವುದು ಬ್ಯಾನ್ ಆಗಿದೆ, ಭಾರತದಲ್ಲಿ ನಾವು ಬಳಸುವ ಯಾವೆಲ್ಲಾ ಆಹಾರಗಳು ವಿದೇಶದಲ್ಲಿ ಬ್ಯಾನ್ ಆಗಿದೆ ನೋಡೋಣ:

ವೀಳ್ಯೆ
ನಮ್ಮಲ್ಲಿ ಮದುವೆ ಮುಂತಾದ ಸಮಾರಂಭದಲ್ಲಿ ವೀಳ್ಯೆ ಕೊಡುವ ಸಂಪ್ರದಾಯವಿದೆ. ಮದುವೆ ಮನೆಗಳಲ್ಲಿ ವೀಳ್ಯೆ ಇಡಲಾಗುವುದು, ಪಾನ್ ಮಾಡಿ ಕೊಡಲಾಗುವುದು. ಆದರೆ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ, ಆದರೆ ವೀಳ್ಯೆಯನ್ನು ಅಡಿಕೆ ಜೊತೆ ಜಗಿದು ತಿನ್ನಲಾಗುವುದು. ವಿದೇಶದಲ್ಲಿ ಪಾನ್ ನಿಷೇಧಿಸಲಾಗಿದೆ.
ಕಿಂಡರ್ ಜಾಯ್
ಇದು ನಮ್ಮಲ್ಲಿನ ತಿಂಡಿಯಲ್ಲ, ಆದರೆ ಭಾರತದಲ್ಲಿ ಮಕ್ಕಳು ಕೇಳುವುದೇ ಕಿಂಡರ್‌ಜಾಯ್. ಈ ಕಿಂಡರ್ ಜಾಯ್ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದು ನಮಗೂ ಗೊತ್ತಿರುವ ಸಂಗತಿ ಆದರೂ ಇಲ್ಲಿಯ ಅಂಗಡಿಗಳಲ್ಲಿ ಅದುವೇ ಕಿಂಗ್, ನಾವು ಅದನ್ನು ತೆಗೆದುಕೊಡುವುದು ನಿಲ್ಲಿಸಿಯೂ ಇಲ್ಲ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಿಂಡರ್ ಜಾಯ್ ಮಕ್ಕಳ ಆರೋಗ್ಯಕ್ಕೆ ಒಳ್ಳೆದಲ್ಲ.
ಬದನೆಕಾಯಿ ಸಾಂಬಾರ್
ಸಾಂಬಾರ್‌ಗೆ ಬದನೆಕಾಯಿ ಹಾಕಿದರೆ ರುಚಿ ತುಂಬಾ ಚೆನ್ನಾಗಿರುತ್ತೆ ಅಲ್ವಾ? ಆದರೆ ಬದನೆಕಾಯಿ ಹಾಕಿದ ಸಾಂಬಾರ್ ಕೆಲವೊಂದು ರಾಷ್ಟ್ರಗಳಲ್ಲಿ ಈ ಬಗೆಯ ಸಾಂಬಾರ್ ನಿಷೇಧಿಸಲಾಗಿದೆ, ಯುರೋಪಿಯ್ ಯೂನಿಯನ್‌ನಲ್ಲಿ ಬದನೆಕಾಯಿ ಸಾಂಬಾರ್ ಮಾಡುವಂತಿಲ್ಲ.
ಕೆಂಪು ಬಣ್ಣದ ತುಪ್ಪ
ಭಾರತದಲ್ಲಿ ದೊರೆಯುವ ಮಿಠಾಯಿಗಳಲ್ಲಿ ಕೆಂಪು ಬಣ್ಣದ ಮಿಠಾಯಿಗಳೇ ಕಣ್ಣಿಗೆ ಬೀಳುತ್ತದೆ, ಆದರೆ ಇಂಥ ಕೆಂಪು ಬಣ್ಣದ ಮಿಠಾಯಿ ಮಾಡಲು ಬಳಸುವ ಕೆಮಿಕಲ್ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಇದನ್ನು ಬ್ಯಾನ್ ಮಾಡಲಾಗುವುದು.
ಬೆಲ್ಲ
ಬೆಲ್ಲ ನಮ್ಮೆಲ್ಲರ ಅಡುಗೆ ಮನೆಯಲ್ಲಿ ಇರುತ್ತದೆ, ಅಲ್ಲದೆ ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಎಂದು ಬಯಸುತ್ತೇವೆ, ಆದರೆ ಯುಎಸ್‌ಎಯಲ್ಲಿ ಬೆಲ್ಲವನ್ನು ಬ್ಯಾನ್ ಮಾಡಲಾಗಿದೆ. ಈ ಆಹಾರ ಅಲ್ಲಿಯ ಫುಡ್ ಸ್ಟ್ಯಾಂಡರ್ಡ್‌ನಂತೆ ಗುಣಮಟ್ಟದ್ದಲ್ಲ ಎಂಬ ಕಾರಣ ನೀಡಿ ಬ್ಯಾನ್ ಮಾಡಲಾಗಿದೆ.
ತುಪ್ಪವನ್ನು ಬ್ಯಾನ್ ಮಾಡಲಾಗಿದೆ
ನಾವು ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸಿದರೆ ಅದೇ ಆರೋಗ್ಯ ಕಾರಣ ನೀಡಿ ಅಮೆರಿಕ ತುಪ್ಪವನ್ನು ಬ್ಯಾನ್ ಮಾಡಿದೆ. ಇದರಲ್ಲಿರುವ ಕೊಬ್ಬಿನಂಶ ಒಬೆಸಿಟಿ, ರಕ್ತದೊತ್ತಡ, ಹೃದಯಾಘಾತ ಸಮಸ್ಯೆ ಉಂಟು ಮಾಡುತ್ತದೆ ಎಂದು ಇದನ್ನು ಬ್ಯಾನ್ ಮಾಡಲಾಗಿದೆ.
ಸಮೋಸಾ
ಮುಂಬೈನಂಥ ಮಹಾ ನಗರದಲ್ಲಿ ಸಮೋಸಾ ತಿಂದು ಕೆಲಸ ಕಾರ್ಯಕ್ಕೆ ಹೋಗುವವರು ಇದ್ದಾರೆ, ಎಷ್ಟೋ ಜನರ ಹಸಿವು ನೀಗಿಸುವುದು 10 ರುಪಾಯಿಯ ಸಮೋಸಾ, ಇದು ಎಣ್ಣೆಯಲ್ಲಿ ಕರಿಯುವ ಆಹಾರವಾಗಿರುವುದರಿಂದ ಇದನ್ನು ಸೊಮಾಲಿಯಾದಲ್ಲಿ ಬ್ಯಾನ್ ಮಾಡಲಾಗಿದೆ, ತಿಂದರೆ ಕಠಿಣ ಶಿಕ್ಷೆಯೂ ಆಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications