Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸೀಬೆಕಾಯಿ ಎಲೆಯ ಜ್ಯೂಸ್ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ನಿಯಂತ್ರಣದ ಜೊತೆಗೆ ಈ 6 ಗುಣಗಳಿವೆ
ಸಾಕಷ್ಟು ಔಷಧೀಯ ಗುಣವಿರುವ ಗಿಡಗಳು ನಮ್ಮ ತೋಟದಲ್ಲಿಯೇ ಇರುತ್ತದೆ, ಆದರೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಇರಲ್ಲ ಅಷ್ಟೇ.ಸ್ವಲ್ಪ ತೋಟವಿದ್ದರೂ ಒಂದ ಸೀಬೆಕಾಯಿ ಗಿಡ ನೆಡುತ್ತಾರೆ, ಸೀಬೆಕಾಯಿ ಆದಾಗ ಅದನ್ನು ತಿಂದು ಖುಷಿ ಪಡುತ್ತೇವೆ, ಆದರೆ ಸೀಬೆಕಾಯಿ ಎಲೆ ಹಲವು ಕಾಯಿಲೆಗಳಿಗೆ ರಾಮಬಾಣ ಎಂಬುವುದು ಗೊತ್ತೇ?
ಅಬ್ಬಾಬ್ಬ! ಈ ಸೀಬೆಕಾಯಿ ಎಲೆಯಲ್ಲಿ ಎಷ್ಟೊಂದು ಆರೋಗ್ಯಕರ ಗುಣಗಳಿವೆ ಗೊತ್ತೇ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಈ ಔಷಧೀಯ ಗುಣಗಳನ್ನು ಪಡೆಯಬಹುದು:

ಮಧುಮೇಹ ನಿಯಂತ್ರಣದಲ್ಲಿಡುತ್ತದೆ
ಸೀಬೆಕಾಯಿ ಎಲೆ ಮಧುಮೇಹಕ್ಕೆ ರಾಮಬಾಣವಾಗಿದೆ. ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿಯಾಗಿದೆ. ಇದು ಸಂಶೋಧನೆಯಿಂದ ತಿಳಿದು ಬಂದಿದೆ, ಸೀಬೆಕಾಯಿ ಎಲೆಯ ಜ್ಯೂಸ್ ಕುಡಿದಾಗ ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯಂಶ ಕಡಿಮೆ ಮಾಡುವುದು. ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ತುಂಬಾನೇ ಒಳ್ಳೆಯದು. ಈ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಸುಸ್ತು, ವಿಪರೀತ ಹಸಿವು ಕಡಿಮೆಯಾಗುವುದು.
ಬೇಧಿ ಸಮಸ್ಯೆ ತಡೆಗಟ್ಟುತ್ತದೆ
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೇಧಿ ತಡೆಗಟ್ಟಲು ಈ ಸೊಪ್ಪಿನ ರಸ ತುಂಬಾ ಒಳ್ಳೆಯದು,ಅದರಲ್ಲಿಯೂ ಮಕ್ಕಳಿಗೆ ತುಂಬಾನೇ ಪ್ರಯೋಜನಕಾರಿ. ಬೇಧಿ ಉಂಟಾದಾಗ ಇದರ ರಸ ಹಿಂಡಿ ಒಂದು ಚಮಚ ರಸ ಕುಡಿಸಿ, ಈ ರೀತಿ ಮಾಡಿದರೆ ಬೇಧಿ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಅಜೀರ್ಣ ಸಮಸ್ಯೆ ಇರುವವರಿಗೆ ಸೀಬೆಕಾಯಿ ರಸ ಅತ್ಯುತ್ತಮವಾದ ಮನೆಮದ್ದಾಗಿದೆ, ಅಜೀರ್ಣ ಸಮಸ್ಯೆ ಇರುವವರು 3-4 ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸೀಬೆಕಾಯಿ ಎಲೆಯ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿಯಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದು. ಸೀಬೆ ಕಾಯಿ ಎಲೆ ಸೋಂಕಾಣುಗಳ ವಿರುದ್ಧ ದೇಹ ಹೋರಾಡುವಂತೆ ಮಾಡುತ್ತದೆ, ಸೀಬೆಕಾಯಿ ಹಾಗೂ ಅದರ ಎಲೆಯಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು.
ತೂಕ ನಿಯಂತ್ರಣಕ್ಕೆ ಸಹಕಾರಿ
ತೂಕ ನಿಯಂತ್ರಣದಲ್ಲಿಡಬೇಕು ಅಥವಾ ಮೈ ತೂಕ ಕಳೆದುಕೊಳ್ಳಬೇಕು ಎಂದು ಬಸುವವರು ಸೀಬೆಕಾಯಿ ಎಲೆಯ ಜ್ಯೂಸ್ ಕುಡಿದರೆ ಉತ್ತಮ ಪ್ರಯೋಜನ ಪಡೆಯಬಹುದು. ಈ ಜ್ಯೂಸ್ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ, ಮೈ ತೂಕ ನಿಯಂತ್ರಣಲ್ಲಿಡುವಲ್ಲಿ ಚಯಪಚಯ ಕ್ರಿಯೆ ತುಂಬಾನೇ ಅವಶ್ಯಕವಾಗಿದೆ. ತೂಕ ಇಳಿಕೆಯ ಡಯಟ್ ಮಾಡುವವರು ಸೀಬೆಕಾಯಿ ಎಲೆಯ ಜ್ಯೂಸ್ ಜೊತೆಗೆ ತಮ್ಮ ಆಹಾರಕ್ರಮದಲ್ಲಿಸೀಬೆಕಾಯಿ ಸೇರಿಸಿದರೆ ಒಳ್ಳೆಯದು.
ಸೀಬೆಕಾಯಿ ಎಲೆಯ ಜ್ಯೂಸ್ ಕುಡಿದ ಮಾತ್ರಕ್ಕೆ ಮೈ ತೂಕ ಕಡಿಮೆಯಾಗುವುದೇ?
ಮೈ ತೂಕ ನಿಯಂತ್ರಿಸಲು ಬರಿಜ್ಯೂಸ್ ಕುಡಿದರೆ ಸಾಕಾಗಲ್ಲ, ಜೊತೆಗೆ ನೀವು ವರ್ಕೌಟ್ ಮಾಡಬೇಕು, ಅಲ್ಲದೆ ಆರೋಗ್ಯಕರ ಆಹಾರಶೈಲಿಯತ್ತ ಕಡಿಮೆ ಮಾಡಬೇಕು. ವ್ಯಾಯಾಮ, ಆಹಾರಕ್ರಮ ಜೊತೆಗೆ ಈ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ.
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಸೀಬೆಕಾಯಿ ಎಲೆಯ ಜ್ಯೂಸ್ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಮೊಡವೆ ಕಡಿಮೆ ಮಾಡುತ್ತದೆ, ತ್ವಚೆಯನ್ನು ಬಿಗಿಗೊಳಿಸುತ್ತದೆ, ತ್ವಚೆ ಕೆಂಪಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅಲ್ಲದೆ ಮುಖ ಬೇಗ ಸುಕ್ಕಾಗುವುದನ್ನು ತಡೆಗಟ್ಟಲು ಸಹಕಾರಿ.
ಸೀಬೆಕಾಯಿ ಜ್ಯೂಸ್ ಮಾಡುವುದು ಹೇಗೆ?
ನೀವು 3-4 ಎಲೆ ತೆಗೆದು ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಇನ್ನು ಈ ಜ್ಯೂಸ್ ತೆಗೆದುಕೊಳ್ಳುವುದರ ಬಗ್ಗೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
