Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಈ 6 ಯೋಗಾಸನ ಮಾಡುವುದರಿಂದ ಅತ್ಯಧಿಕ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು
ಕೊಲೆಸ್ಟ್ರಾಲ್ ಎಂಬುವುದು ಬಹುತೇಕ ಜನರ ಸಮಸ್ಯೆಯಾಗಿದೆ. ಕೊಲೆಸ್ಟ್ರಾಲ್ ಬರಲು ಪ್ರಮುಖ ಕಾರಣ ಜೀವನಶೈಲಿ. ದೇಹದ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಇದರಿಂದ ಹೃದಯದ ರಕ್ತನಾಳಗಳು ಬ್ಲಾಕ್ ಆಗುವುದು, ಹೃದಯಾಘಾತ ಈ ಬಗೆಯ ಸಮಸ್ಯೆ ಉಂಟಾಗುವುದು. ಆದರೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುವಲ್ಲಿ ಈ 6 ಯೋಗಾಸನಗಳು ತುಂಬಾನೇ ಸಹಕಾರಿಯಾಗಿದೆ ನೋಡಿ:

1. ಕಪಾಲಬಾತಿ ಪ್ರಾಣಯಾಮ
ಕಪಾಲಬಾತಿ ಪ್ರಾಣಯಾಮ ಮಾಡುವುದರಿಂದ ದೇಹದ ರಕ್ತ ಶುದ್ಧವಾಗುವುದು, ರಕ್ತ ಸಂಚಾರಕ್ಕೂ ತುಂಬಾನೇ ಸಹಕಾರಿ. ಈ ವ್ಯಾಯಾಮ ಮಾಡಲು ಧ್ಯಾನ ಸ್ಥಿತಿಯಲ್ಲಿ ಕುಳಿತು ನಂತರ 10-15 ನಿಮಿಷ ಕಪಾಲಬಾತಿ ಅಭ್ಯಾಸ ಮಾಡಿ.
2. ಚಕ್ರಾಸನ
ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಈ ಆಸನಕ್ಕೆ ಊರ್ಧ್ವ ಧನುರಾಸನ ಅಥವಾ ತ್ರ್ಯಂಗ ಮುಖೋತ್ತಾನಾಸನ ಎಂದು ಕೂಡ ಕರೆಯಲಾಗುವುದು. ಪ್ರಾರಂಭದಲ್ಲಿ ಈ ಆಸನ ಮಾಡಿದಾಗ ಗೋಡೆಯ ಸಮೀಪದಲ್ಲಿ ಅಭ್ಯಾಸ ಮಾಡಿ, ಏಕೆಂದರೆ ಚಕ್ರದಂತೆ ಬಾಗಿದ ಮೇಲೆ ಗೋಡೆಯ ಸಹಾಯ ಎದ್ದೇಳಲು ಸಹಾಯವಾಗುವುದು. ಸ್ವಲ್ಪ ಕಾಲ ಅಭ್ಯಾಸ ಮಾಡಿದ ಮೇಲೆ ಗೋಡೆಯಿಂದ ದೂರಸರಿದು ಅಭ್ಯಾಸ ಮಾಡಿ.
ಈ ಆಸನ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವುದು. ಬೆನ್ನು ಮೂಳೆ ಬಲವಾಗುವುದು. ಈ ಆಸನ ಮಾಡಿದರೆ ವಯಸ್ಸಾದರೂ ಬೆನ್ನು ಬಾಗುವುದಿಲ್ಲ ಎಂದು ಹೇಳಲಾಗುವುದು.
3. ಶಲಾಬಾಸನ
ಈ ಆಸನ ಕೂಡ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಈ ಆಸನ ಮಾಡಲು ಮೊದಲು ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗಿ, ನಂತರ ಎರಡು ಕೈಗಳನ್ನು ನಿಮ್ಮ ದೇಹದ ಸಮೀಪಕ್ಕೆ ತನ್ನಿ, ನಂತರ ನಿಧಾನಕ್ಕೆ ತಲೆಯನ್ನು ಹಾಗೂ ಕಾಲುಗಳನ್ನು ಎತ್ತಿ, ಎದೆ ಮಾತ್ರ ಮ್ಯಾಟ್‌ಗೆ ತಾಗಿದಂತೆ ಇರಬೇಕು. ಈ ಆಸನ ಮಾಡುವುದರಿಂದ ಬೊಜ್ಜು ಕರಗುವುದು, ಬೆನ್ನು ಮೂಳೆಯ ಆರೋಗ್ಯ ಉತ್ತಮವಾಗುವುದು, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
4. ಸರ್ವಾಂಗಾಸನ
ಸರ್ವಾಂಗಾಸನ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸರ್ವಾಂಗಾಸನ ಮಾಡುವುದರಿಂದ ವೀರ್ಯದೋಷ, ರಕ್ತದೋಷ, ಕೊಲೆಸ್ಟ್ರಾಲ್ ಈ ಸಮಸ್ಯೆ ಕಡಿಮೆಯಾಗುವುದು. ಈ ಆಸನ ಅಭ್ಯಾಸ ಮಾಡುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿರಲಿದೆ, ಥೈರಾಯ್ಡ್ ಸಮಸ್ಯೆಗೂ ಆಸನ ತುಂಬಾನೇ ಒಳ್ಳೆಯದು.
5. ಪಶ್ಚಿಮೋತ್ತಾಸನ
ಈ ಆಸನ ಅಭ್ಯಾಸ ಮಾಡುವುದರಿಂದ ಕೂಡ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ನಡೆಯುವುದು. ಇದರಿಂದ ಮಲಬದ್ಧತೆ ಸಮಸ್ಯೆ ಇದ್ದರೆ ಆ ಸಮಸ್ಯೆ ದೂರಾಗುವುದು, ಹೊಟ್ಟೆ ಬೊಜ್ಜು ಸಮಸ್ಯೆ ಇರುವುದಿಲ್ಲ. ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.
6. ಆರ್ಧಮತ್ಸ್ಯಾಸನ
ಮಧುಮೇಹ, ಕೊಲೆಸ್ಟ್ರಾಲ್ ಸಮಸ್ಯೆ ನಿಯಂತ್ರಣದಲ್ಲಿಡುವಲ್ಲಿ ಇದು ತುಂಬಾನೇ ಸಹಕಾರಿಯಾಗಿದೆ. ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿರುತ್ತದೆ. ಇದರಿಮದ ಅನೇಕ ಹೊಟ್ಟೆ ಸಂಬಂಧಿತ ಸಮಸ್ಯೆಗಳು ದೂರಾಗುವುದು, ಥೈರಾಯ್ಡ್ ಸಮಸ್ಯೆಯಿದ್ದರೆ ಈ ಆಸನ ಅಭ್ಯಾಸ ಮಾಡುವುದರಿಂದ ಹಾರ್ಮೋನ್‌ಗಳನ್ನು ಸಮತೋಲನದಲ್ಲಿ ಇಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
