Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಜಿಮ್‌ಗೆ ಹೋಗಿಲ್ಲ, ಸ್ಟ್ರಿಕ್ಟ್ ಡಯಟ್ ಮಾಡಿಲ್ಲ ಆದರೂ 20 ಕೆಜಿ ತೂಕ ಕಳೆದುಕೊಂಡರು: ಇವರು ಪಾಲಿಸಿದ 6 ಸರಳ ಸೂತ್ರಗಳು
ಇತ್ತೀಚೆಗೆ ತುಂಬಾನೇ ದಪ್ಪವಾಗಿ ಬಿಟ್ಟೆ, ಮೈ ತೂಕ ಕಡಿಮೆ ಮಾಡಬೇಕೆಂದು ತುಂಬಾ ಜನ ಪ್ರಯತ್ನ ಪಡುತ್ತಾರೆ, ಅದಕ್ಕಾಗಿ ಡಯಟ್ ಮಾಡ್ತಾರೆ, ಕೆಲವರು ಸರಿಯಾಗಿ ಆಹಾರವನ್ನೇ ಸೇವಿಸದೆ ಕಾಯಿಲೆ ಬರಿಸುತ್ತಾರೆ, ಆದರೂ ಮೈ ತೂಕ ಕಡಿಮೆಯಾಗಲ್ಲ, ಆದರೆ ಮೈ ತೂಕ ಕಡಿಮೆ ಮಾಡಲೇಬೇಕೆಂದರೆ ತುಂಬಾನೇ ಕಷ್ಟಪಡಬೇಕಾಗಿಲ್ಲ, 6 ಸರಳ ಸೂತ್ರ ಅನುಸರಿಸಿದರೆ ಸಾಕು ಮೈ ತೂಕ ಕಡಿಮೆ ಮಾಡಿಕೊಳ್ಳಬಹುದು, ನಾನು ಬರೋಬರಿ 20 ಕೆಜಿ ಮೈ ತೂಕ ಕಡಿಮೆ ಮಾಡಿರುವೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ತಮ್ಮ ವೇಯ್ಟ್‌ಲಾಸ್ ಜರ್ನಿ ಸೀಕ್ರೆಟ್ ಹಂಚಿಕೊಂಡಿದ್ದಾರೆ.
getfitwithrid ಇನ್‌ಸ್ಟಾಖಾತೆಯಲ್ಲಿ ಅವರು ಪ್ರತಿಯೊಬ್ಬರು ಪಾಲಿಸಬಹುದಾದ ವೇಯ್ಟ್‌ಲಾಸ್ ಟಿಪ್ಸ್ ನೀಡಿದ್ದಾರೆ, ಆ ಟಿಪ್ಸ್ ಹೀಗಿದೆ ನೋಡಿ:

ಮನೆಯಲ್ಲಿಯೇ ವರ್ಕೌಟ್ ಮಾಡುವುದು: ಪ್ರತಿದಿನ ಮನೆಯಲ್ಲಿಯೇ ವರ್ಕೌಟ್ ಮಾಡುವುದು. ದಿನದಲ್ಲಿ 30-40 ನಿಮಿಷ ಮಾಡಿದರೆ ಸಾಕು. ಸ್ಟ್ರೆಂಥ್ ಟ್ರೈನಿಂಗ್ ಹಾಗೂ ಪೈಲೇಟ್ಸ್ ಮಾಡ್ತಾ ಇದ್ದೆ. ನಾನು ವ್ಯಾಯಾಮವನ್ನು ಯೋಗಾ ಮ್ಯಾಟ್‌ನಲ್ಲಿ ಮಾಡ್ತಾ ಇದ್ದೆ, ಸ್ಟ್ರೆಂಥ್ ವ್ಯಾಯಾಮಕ್ಕೆ 2 ಡಂಬಲ್ಸ್ ಇತ್ತು, ಇಷ್ಟರಲ್ಲಿಯೇ ವ್ಯಾಯಾಮ ಮಾಡಿದೆ. ಈ ವ್ಯಾಯಾಮವನ್ನು ವಾರದಲ್ಲಿ 5-6 ದಿನ ಮಾಡ್ತಾ ಇದ್ದೆ. ಇದು ನನ್ನ ತ್ವಚೆ ಬಿಗಿಯಾಗಿಸಲು ಸಹಾಯ ಮಾಡಿತು.
ಮನೆ ಆಹಾರ ಮಾತ್ರ ತಿನ್ನುತ್ತಿದ್ದೆ: ಇಂಥದ್ದೇ ಡಯಟ್ ಅಂತ ಓಳಾಲೋ ಮಾಡ್ತಾ ಇರ್ಲಲಿಲ್ಲ, ಏನು ತಿನ್ನ ಬೇಕೆನಿಸಿತೋ ಅದನ್ನು ತಿನ್ನುತ್ತಿದ್ದೆ, ಆದರೆ ಅತಿ ಹೆಚ್ಚು ತಿನ್ನದಂತೆ ಕಂಟ್ರೋಲ್ ಮಾಡ್ತಾ ಇದ್ದೆ, ಪ್ರೊಟೀನ್ ಅಧಿಕವಿರುವ ಆಹಾರದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದೆ, ಟೋಫು, ಪನ್ನೀರ್, ಸೋಯಾ, ಧಾನ್ಯಗಳು, ಬೀನ್ಸ್ ಈ ಬಗೆಯ ಆಹಾರ ಸೇವಿಸುತ್ತಿದ್ದೆ, ಇದು ಹೊಟ್ಟೆ ಬೇಗನೆ ತುಂಬಿಸುತ್ತಿತ್ತು, ಹಾಗಾಗಿ ಹಸಿವು ಅನಿಸುತ್ತಿರಲಿಲ್ಲ.
ಸಕ್ಕರೆಯಂಶದ ಆಹಾರ, ಸಂಸ್ಕರಿಸಿದ ಆಹಾರ ಸಂಪೂರ್ಣ ಬಿಟ್ಟೆ: ಅನಗ್ಯತ ಕ್ಯಾಲೋರಿ ಸೇವನೆ ಬಿಟ್ಟೆ, ಸಂಸ್ಕರಿಸಿದ ಆಹಾರ ಬಿಟ್ಟೆ, ಅಧಿಕ ಪೋಷಕಾಂಶವಿರುವ ಆಹಾರದ ಕಡೆಗೆ ಗಮನಹರಿಸಿದೆ.
ದಿನದಲ್ಲಿ 10 ಸಾವಿರ ಹೆಜ್ಜೆ ಹಾಕುತ್ತಿದ್ದೆ: ನಾನು ಹೆಚ್ಚು ನಡೆಯಲಾರಂಭಿಸಿದೆ, ನಡೆದು ಹೋಗುವ ದೂರಕ್ಕೆ ನಡೆದುಕೊಂಡು ಹೋಗಲಾರಂಭಿಸಿದೆ,. ಲಿಫ್ಟ್ ಬದಲಿಗೆ ಸ್ಟೆಪ್ಸ್ ಬಳಸುತ್ತಿದ್ದೆ, ಹೆಚ್ಚು ನಡೆಯಲಾರಂಭಿಸಿದೆ, ಹೆಚ್ಚು ನಡೆಯಲಾರಂಭಿಸುತ್ತಿದ್ದಂತೆ ನಡಿಗೆ ಗೇಮ್ ಚೇಂಜರ್‌ನಂತೆ ತೂಕ ಇಳಿಕೆಯಲ್ಲಿ ತುಂಬಾನೇ ಸಹಾಯ ಮಾಡಿತು.
ನಿದ್ದೆಗೆ ಪ್ರಾಮುಖ್ಯತೆ ನೀಡಲಾರಂಭಿಸಿದೆ: ನಾನು ಪ್ರತಿದಿನ 7-8 ಗಂಟೆ ನಿದ್ದೆ ಮಾಡಲಾರಂಭಿಸಿದೆ. ಇದು ನನ್ನ ತೂಕ ಇಳಿಕೆಯಲ್ಲಿ ತುಂಬಾನೇ ಸಹಾಯ ಮಾಡಿತು, ಇದು ಕೂಡ ತೂಕ ಇಳಿಕೆಗೆ ತುಂಬಾನೇ ಸಹಾಯ ಮಾಡಿತು.
ಈ ಅಭ್ಯಾಸಗಳನ್ನು ತಪ್ಪಿಸಲಿಲ್ಲ: ನಾನು ತೂಕ ಇಳಿಕೆಗೆ ಮಾಡುತ್ತಿದ್ದ ವ್ಯಾಯಾಮವಾಗಲಿ, ನಡೆಯುವುದಾಗಿ, ಮನೆ ಆಹಾರ ಮಾತ್ರ ಸೇವನೆ ಮಾಡುವುದಾಗಲಿ, ನಿದ್ದೆ ಕಡೆ ಗಮನ ನೀಡುವುದು, ಸಕ್ಕರೆಯಂಶ ತಿನ್ನದಿರುವುದು ಯಾವುದೂ ತಪ್ಪಿಸಲಿಲ್ಲ, ಪ್ರತಿನಿತ್ಯ ಈ ಅಭ್ಯಾಸಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬರ್ತಾ ಇದ್ದೆ, ಇದರಿಂದ ದಿನದಿಂದ ದಿನಕ್ಕೆ ನನ್ನ ಆರೋಗ್ಯದಲ್ಲಿ ತುಂಬಾನೇ ಒಳ್ಳೆಯ ಬದಲಾವಣೆ ಕಾಣಲಾರಂಭಿಸಿತು, ದೇಹದ ಆಕಾರ ಬದಲಾಯ್ತು, 20 ಕೆಜಿ ಮೈ ತೂಕ ಕಳೆದುಕೊಂಡು ಈಗ ಫಿಟ್ ಅಂಡ್ ಫೈನ್ ಆಗಿರುವೆ.
ಇಲ್ಲಿ ಇವರು ಹೇಳಿದ ಈ 6 ಸೂತ್ರಗಳು ತುಂಬಾನೇ ಸರಳವಾಗಿದೆ, ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ, ನಮ್ಮ ದೇಹದ ಆರೋಗ್ಯದಲ್ಲಿ ತಿಂಗಳಿಂ ತಿಂಗಳಿಗೆ ಬದಲಾವಣೆ ಕಾಣುವುದು, ಕೆಲವೇ ತಿಂಗಳಿನಲ್ಲಿ ನಾವು ಬಯಸಿದಂಥ ಮೈಕಟ್ಟು ಪಡೆಯಬಹುದು. ಇವರು ಇಲ್ಲಿ ನಾನ್‌ವೆಜ್ ಆಹಾರದ ಬಗ್ಗೆ ಹೇಳಿಲ್ಲ, ಹಾಗಂತ ನೀವು ನಾನ್‌ವೆಜ್ ತಿನ್ನುವವರಾದರೆ ಮೊಟ್ಟೆ, ಗ್ರಿಲ್ಡ್ ಚಿಕನ್, ಫಿಸ್ ನಿಮ್ಮ ಆಹಾರಕ್ರಮದಲ್ಲಿ ಸೇವಿಸಬಹುದು.
ಹೆಚ್ಚಿನ ಜನರಿಗೆ ಜೀವನಶೈಲಿಯಿಂದಾಗಿ ಮೈ ತೂಕ ಹೆಚ್ಚಾದರೆ , ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆ, ಹಾರ್ಮೋನ್‌ಗಳ ವ್ಯತ್ಯಾಸದಿಂದ ಮೈ ತೂಕ ಹೆಚ್ಚಾಗುವುದು. ಈ ಸರಳ ಟಿಪ್ಸ್ ಜೀವನಶೈಲಿ ಸರಿಪಡಿಸಲು, ಹಾರ್ಮೋನ್‌ಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದನ್ನು ಸರಿಪಡಿಸಲು ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications