Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ತೂಕ ಇಳಿಸುವಲ್ಲಿ ಮಾಡುತ್ತಿರುವ 6 ತಪ್ಪುಗಳಿವು..!! ಯಾವುದೆಲ್ಲಾ ಗೊತ್ತಾ?
ತೂಕ ಇಳಿಸಿಕೊಳ್ಳಬೇಕು ಎಂದು ಹಲವರು ಹಲವು ರೀತಿಯ ಸಾಹಸಗಳ ಮಾಡುತ್ತಿರುತ್ತಾರೆ. ಉಪವಾಸ, ಡಯೆಟ್, ಜಿಮ್, ಔಷಧಿಗಳು ಹೀಗೆ ಒಂದಲ್ಲ ಒಂದು ಕಸರತ್ತು ಮಾಡಿಯೇ ಮಾಡುತ್ತಾರೆ. ಇಷ್ಟಾದರು 1 ಕೆ.ಜಿ ತೂಕ ಇಳಿಸಲು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಮತ್ತೆ ಕೆಲವರಲ್ಲಿ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಅವರು ಹಗಲು ರಾತ್ರಿ ಎನ್ನದೆ ಕಸರತ್ತು ಮಾಡಿದಾಗಲೂ ತೂಕ ಇಳಿಸೋದು ಕಷ್ಟವಾಗುತ್ತಲೇ ಹೋಗುತ್ತೆ.
ಹಾಗಾದ್ರೆ ತೂಕ ಇಳಿಸಲು ಮುಂದಾದ ಮಂದಿ ಇದು ಕಷ್ಟವಾಗೋದು ಏಕೆ? ಏನು ಮಾಡಿದರೂ ತೂಕ ಇಳಿಯುವುದಿಲ್ಲವೇಕೆ? ಏಕೆಂದರೆ ನಾವು ಮಾಡುವ ಸಣ್ಣ ತಪ್ಪುಗಳು ತೂಕ ಇಳಿಸಲು ಅಡಚಣೆ ಉಂಟು ಮಾಡುತ್ತಿವೆ. ಹಾಗಾದ್ರೆ ಇದಕ್ಕೆ ನಾವು ಮಾಡುವ ಯಾವ ತಪ್ಪು ತೂಕ ಇಳಿಸುವಲ್ಲಿ ಅಡ್ಡಿಯಾಗುತ್ತಿದೆ ಎಂಬುದನ್ನು ನಾವಿಂದು ನೋಡೋಣ.

ಬ್ರೇಕ್‌ಫಾಸ್ಟ್ ತಪ್ಪಿಸುವುದು
ಕೆಲವು ತೂಕ ಇಳಿಸುವಾಗ ಮಾಡುವ ತಪ್ಪೆಂದರೆ ಬೆಳಗ್ಗಿನ ಉಪಹಾರ ಸೇವಿಸದೆ ಇರುವುದು. ನಿಮಗೆ ತಿಳಿದಿರಲಿ. ಬ್ರೇಕ್‌ಫಾಸ್ಟ್ ಎಂದರೆ ಉಪವಾಸ ಮುರಿಯುವುದು ಎಂದರ್ಥ. ರಾತ್ರಿ ಊಟದ ಬಳಿಕ ದೀರ್ಘ ಸಮಯ ಉಪವಾಸ ಮಾಡಿರುತ್ತೀರಿ, ಇಡೀ ರಾತ್ರಿ ಏನನ್ನೂ ಸೇವಿಸಿರುವುದಿಲ್ಲ. ಹೀಗಾಘಿ ಬೆಳಗಿನ ತಿಂಡಿ ತಿನ್ನುವುದು ಕಡ್ಡಾಯ, ಆದ್ರೆ ಕೆಲವರು ಇದನ್ನು ಮಾಡುವುದಿಲ್ಲ. ಕೆಲವು ಅಧ್ಯಯನಗಳು ನಿಯಮಿತವಾಗಿ ಉಪಹಾರವನ್ನು ಬಿಟ್ಟುಬಿಡುವುದು ಮತ್ತು ತೂಕ ಹೆಚ್ಚಾಗುವುದರ ನಡುವಿನ ಸಂಬಂಧವನ್ನು ಕಂಡುಕೊಂಡಿವೆ. ಈ ರೀತಿ ತಿಂಡಿ ಸೇವನೆ ಬಿಡುವುದು ತೂಕದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ. ಇದರಿಂದ ತೂಕ ಇಳಿಸಲು ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದುಬಂದಿದೆ.
ಮಲಗುವ ಮುನ್ನ ಊಟ ಮಾಡುವುದು
ನೀವು ತೂಕ ಇಳಿಸುವ ಕಾರ್ಯದಲ್ಲಿದ್ದರೆ ಸಂಜೆ 6 ಗಂಟೆಯ ಒಳಗೆ ಊಟ ಮುಗಿಸಿರಬೇಕು. ರಾತ್ರಿ 9ರ ನಂತರ ಸಲಾಡ್, ಫ್ರೂಟ್ ಹೀಗೆ ಸಣ್ಣದಾಗಿ ಏನಾದರು ತಿಂದು ಮಲಗಬೇಕು. ಆದ್ರೆ 8 ಗಂಟೆಯ ನಂತರವಷ್ಟೇ ಊಟ ಮಾಡಿ ಮಲಗುವವರು ಸಾಕಷ್ಟು ಮಂದಿ ಇದ್ದಾರೆ ಇವರಿಗೆ ತೂಕ ಇಳಿಸುವುದು ಬಹಳ ಕಷ್ಟವಾಗುತ್ತದೆ.
ತುಂಬಾ ಕಡಿಮೆ ತಿನ್ನುವುದು
ತೂಕ ಇಳಿಸುವವರಲ್ಲಿ ಒಂದು ತಪ್ಪಿ ಕಲ್ಪನೆ ಇದೆ. ಕಡಿಮೆ ತಿಂದರೆ ಬೇಗ ತೂಕ ಇಳಿಸಬಹುದು ಎಂದುಕೊಳ್ಳುತ್ತಾರೆ. ವಾಸ್ತವವಾಗಿ ಕಡಿಮೆ ಸೇವನೆ ನಿಮ್ಮ ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡುತ್ತದೆ. ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶ, ಪ್ರೋಟೀನ್ ಕೊರರೆ ಎದುರಾಗುತ್ತದೆ. ಇದರಿಂದ ಹಸಿವು ಹೆಚ್ಚಾಗುತ್ತದೆ. ಮಧ್ಯದಲ್ಲಿ ನೀವು ಕುರುಕಲು ತಿಂಡಿ ಸವಿಯಲು ಮುಂದಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಅನಿಯಂತ್ರಿತ ಸೇವನೆ ಕಡೆ ನೀವು ಗಮನ ಕೊಡಬೇಕಾಗುತ್ತದೆ, ಹೀಗಾದಾಗ ತೂಕ ಇಳಿಸುವುದು ದೂರದ ಮಾತು.
ತುಂಬಾ ವೇಗವಾಗಿ ತಿನ್ನುವುದು
ನಿಮ್ಮ ಊಟ ಮತ್ತು ತಿಂಡಿಗಳನ್ನು ಬೇಗನೆ ತಿನ್ನುವುದು ಕಾಲಾನಂತರದಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು. ವೇಗವಾಗಿ ತಿನ್ನುವುದು ನಿಮ್ಮ ತೂಕ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ತಿಂಡಿ, ಊಟ ಆಗಿರಲಿ ಅದನ್ನು ನಿಧಾನವಾಗಿ ಅಗಿದು ಸವಿಯಬೇಕು. ಇದು ಸಹ ನಿಮ್ಮ ತೂಕ ಇಳಿಕೆಯಾಗುವಲ್ಲಿ ಅಡ್ಡಿಯಾಗುತ್ತಿರಬಹುದು.
ಸಾಕಷ್ಟು ಪ್ರೋಟೀನ್ ಸೇವಿಸದಿರುವುದು
ತೂಕ ಇಳಿಸಲು ಮುಂದಾಗುವವರು ಕಡಿಮೆ ಸೇವಿಸುದುವು ಹಾಗೂ ಪ್ರೋಟೀಸ್ ಇರುವ ಆಹಾರ ಸೇವನೆಯನ್ನೇ ನಿಲ್ಲಿಸಿಬಿಡುತ್ತಾರೆ. ಇದರಿಂದ ತೂಕ ಹೆಚ್ಚಳಗಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಪ್ರೋಟೀನ್ ಕೊರತೆಯಿಂದ ಹಸಿವು ಹೆಚ್ಚಾಗುತ್ತದೆ.
ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದು
ಸಂಸ್ಕರಿಸಿದ ಆಹಾರಗಳು ಕುಕೀಸ್ ಮತ್ತು ಕ್ಯಾಂಡಿ, ಕರಿದ ಆಹಾರಗಳು, ರಸ್ತೆ ಬದಿಯ ತಿಂಡಿಗಳನ್ನು ಸೇವಿಸುವುದರಿಂದ ತೂಕ ಇಳಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಈ ತಪ್ಪುಗಳನ್ನು ಎಲ್ಲರೂ ಮಾಡಿಯೇ ಮಾಡುತ್ತಾರೆ. ತೂಕ ಇಳಿಸಬೇಕಾದರೆ ಆರೋಗ್ಯಯುತ ಆಹಾರ ಸೇವಿಸಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
