Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Stomach Bloating: ಹೊಟ್ಟೆ ಉಬ್ಬಿದಂತಾದಾಗ ಈ 6 ಆಹಾರ ಸೇವಿಸಿ
ಹೊಟ್ಟೆ ಉಬ್ಬಿದಂತಾದರೆ ಒಂಥರಾ ಅನಿಸುವುದು, ನಮಗೆ ನಿಲ್ಲಲು ಸಾಧ್ಯವಾಗಲ್ಲ, ಕೂರಲು ಸಾಧ್ಯವಾಗಲ್ಲ, ಕೆಲಸದ ಕಡೆಗೆ ಗಮನ ನೀಡಲು ಕೂಡ ಸಾಧ್ಯವಾಗುವುದಿಲ್ಲ. ಅಜೀರ್ಣ ಸಮಸ್ಯೆ ಉಂಟಾದರೆ ತುಂಬಾನೇ ಕಷ್ಟವಾಗುವುದು. ಹೊಟ್ಟೆ ಉಬ್ಬಿದಾಗ ಕೆಲವೊಂದು ಅಹಾರಗಳನ್ನು ತಿಂದಾಗ ಸ್ವಲ್ಪ ಸಮಧಾನ ಅನಿಸುವುದು, ಆ ಆಹಾರಗಳು ಯಾವುವು ಎಂದು ನೋಡೋಣ:

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಇದೆ ಹಾಗೂ ಅಧಿಕ ಪೋಷಕಾಂಶಗಳಿದೆ, ಅಲ್ಲದೆ ನಾರಿನಂಶ ಕೂಡ ಅಧಿಕವಿದೆ. ಇದರಿಂದ ಬಾಳೆಹಣ್ಣು ತಿನ್ನುವುದರಿಂದ ಮಲವಿಸರ್ಜನೆಗೆ ಸಹಕಾರಿಯಾಗುವುದು, ಮಲವಿಸರ್ಜನೆಯಾದಾಗ ದೇಹದಲ್ಲಿರುವ ಕಶ್ಮಲಗಳು ಹೊರ ಹೋಗುತ್ತದೆ. ನೀವು ಪ್ರತಿದಿನ ದಿನಾ ಎರಡು ಬಾಳೆಹಣ್ಣು ಸೇವಿಸುವುದು ಒಳ್ಳೆಯದು.
ಸೆಲರಿ
ಸೆಲರಿ ತಿನ್ನುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆದರೆ ಈ ರೀತಿ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಇರಲ್ಲ.
ಶುಂಠಿ
ನೀವು ಘಟ ಊಟವಾದ ಬಳಿಕ ಶುಂಠಿ ಟೀ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಶುಂಠಿ ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು. ಅಲ್ಲದೆ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಕಡಿಮೆಯಾಗುವುದು.
ಪೈನಾಪಲ್
ಪೈನಾಪಲ್‌ನಲ್ಲಿ ವಿಟಮಿನ್ ಸಿ, ನಾರಿನಂಶ, ಮ್ಯಾಂಗನೀಸ್, ಎಂಜೈಮ್ಸ್ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಆದ್ದರಿಂದ ನೀವು ಏನಾದರೂ ಫಂಕ್ಷನ್‌ನಲ್ಲಿ ಅಥವಾ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದರೆ ಒಂದು ಪೀಸ್ ಪೈನಾಪಲ್ ತಿನ್ನಿ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಓಟ್‌ಮೀಲ್
ಓಟ್‌ಮೀಲ್ ಕೂಡ ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದು. ಓಟ್‌ಮೀಲ್ ನಲ್ಲಿ ನಾರಿನಂಶವಿದೆ. ಆದ್ದರಿಂದ ಇದನ್ನು ತಿನ್ನುವುದರಿಂದ ಹೊಟ್ಟೆ ಉಬ್ಬುವಿಕೆ ತಡೆಗಟ್ಟಲು ಸಹಕಾರಿ.
ಅರಿಶಿಣ
ಹೊಟ್ಟೆ ಉಬ್ಬವಿಕೆ ಉಂಟಾದಾಗ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಒಳ್ಳೆಯದು, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಹೊಟ್ಟೆ ಉಬ್ಬಿವಿಕೆ ಕಡಿಮೆಯಾಗುವುದು.
ಹೊಟ್ಟೆ ಉಬ್ಬುವಿಕೆ ಏಕೆ ಉಂಟಾಗುತ್ತದೆ?
* ಕೆಲವೊಮ್ಮೆ ಆಹಾರ ತಿಂದಾಗ ಈ ರೀತಿ ಉಂಟಾಗುವುದು.
* ಹೊಟ್ಟೆ ಉಬ್ಬವಿಕೆ ಉಂಟಾದಾಗ ಒಂದು ದಿನದೊಳಗೆ ಕಡಿಮೆಯಾಗುವುದು, ಆದ್ದರಿಂದ ತುಂಬಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಹೊಟ್ಟೆ ಉಬ್ಬುವಿಕೆಯ ಲಕ್ಷಣಗಳೇನು?
* ಆಗಾಗ ತೇಗು ಬರುವುದು
* ಗ್ಯಾಸ್ ಹೋಗುವುದು
* ಟಾಯ್ಲೆಟ್‌ಗೆ ಹೋಗಬೇಕೆನಿಸುವುದು
* ವಾಂತಿ ಬಂದಂತೆ ಅನಿಸುವುದು
ಹೊಟ್ಟೆ ಉಬ್ಬುವಿಕೆ ಸಮಸ್ಯೆ ಉಂಟಾಗುವ ಸಾಧ್ಯತೆಗಳು
* ಅಜೀರ್ಣವಾದರೆ
ಕ್ಯಾಬೇಜ್, ಹೂಕೋಸು, ಬೀನ್ಸ್, ಆಲೂಗೆಡ್ಡೆ ಈ ಬಗೆಯ ಆಹಾರ
* ಹೊಟ್ಟೆ ಸೋಂಕು
ಊಟದ ಜೊತೆಗೆ ಗಾಳಿ ನುಂಗಿದರೆ
ಸೋಂಕು
* ವಾಂತಿ
* ಬೇಧಿ
* ಹೊಟ್ಟೆ ನೋವು ಈ ರೀತಿಯಿದ್ದಾಗ ಹೊಟ್ಟೆ ಉಬ್ಬುವ ಸಾಧ್ಯತೆ ಇದೆ.
ಹೊಟ್ಟೆ ಉಬ್ಬುವಿಕೆ ಜೊತೆ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ
* ಜ್ವರ
* ಮಲದಲ್ಲಿ ರಕ್ತ
* ಆಗಾಗ ವಾಂತಿ
ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ
* ಸಾಕಷ್ಟು ನೀರು ಕುಡಿಯಿರಿ
* ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಿ.
* ಹೊಟ್ಟೆ ಉಬ್ಬುವಿಕೆಗೆ ಕಾರಣವಾದ ಆಹಾರಗಳನ್ನು ದೂರವಿಡಿ
* ಆಹಾರವನ್ನು ಅಗೆದು ತಿನ್ನಿ
* ಚುಯ್ಯಿಂಗ್ ಗಮ್ ಜಗಿಯಬೇಡಿ
* ದಿನನಿತ್ಯ ವ್ಯಾಯಾಮ ಮಾಡಿ.
ಮನೆಮದ್ದು
* ಸೋಡಾ ಕುಡಿಯಿರಿ
* ಹೊಟ್ಟೆಗೆ ಹೀಟಿಂಗ್ ಪ್ಯಾಡ್ ಒತ್ತೊ ಹೊಡಿಯಿರಿ.
ಯಾವಾಗ ವೈದ್ಯರನ್ನು ಕಾಣಬೇಕು?
* ಹೊಟ್ಟೆಯಲ್ಲಿ ನೋವು
* ಜ್ವರ
* ಒಂದಕ್ಕಿಂತ ಹೆಚ್ಚಿನ ಬಾರಿ ವಾಂತಿ ಮಾಡಿದರೆ
* ಮಲದಲ್ಲಿ ರಕ್ತ
* ಹೊಟ್ಟೆಯಲ್ಲಿ ಊತ
* ಸರ್ಜರಿ
ಲಿವರ್ ಅಥವಾ ಕಿಡ್ನಿ ಫೈಲ್ಯೂರ್
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
