Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಭಾರತದಲ್ಲಿ 511 ಹೊಸ ಕೋವಿಡ್ ಪ್ರಕರಣ ದಾಖಲು..! ಕರ್ನಾಟಕದಲ್ಲೇ ಅತೀ ಹೆಚ್ಚು..!
ಹಿಂದೊಮ್ಮೆ ಕೊರೊನಾ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಭಾರತದಲ್ಲಿಯೂ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಸುಮಾರು ಎರಡು ವರ್ಷಗಳ ಮನಕುಲವನ್ನೇ ಕಾಡಿದ್ದ ಕೊರೊನಾ ಇದೀಗ ಮತ್ತೆ ಅಬ್ಬರಿಸುವ ಮನ್ಸೂಚನೆ ನೀಡಿದೆ.
ಯೂರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಕೊರೊನಾ ಹೊಸ ರೂಪಾಂತರದ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲೂ ಈ ಪ್ರಕರಣ ಕಳೆದೊಂದು ತಿಂಗಳಿನಿಂದ ಏರುಗತಿಯಲ್ಲಿದೆ. ಕಳೆದ ವರ್ಷದಿಂದ ಕೊರೊನಾ ಕೇಸ್‌ಗಳು ಇಳಿಮುಖವಾಗಿ ಶೂನ್ಯ ಪ್ರಕರಣವೂ ದಾಖಲಾಗಿತ್ತು. ಆದರೆ 2023ರ ಕೊನೆಯಲ್ಲಿ ಮತ್ತೆ ಪ್ರಕರಣಗಳು ಕಾಣಿಸಿಕೊಂಡಿವೆ.

ಹೊಸ ರೂಪಾಂತರವಾಗಿರುವ JN.1 ಇದೀಗ ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಈ ರೂಪಾಂತರ ಪ್ರಕರಣಗಳ ಸಂಖ್ಯೆ ಬರೋಬ್ಬರಿ 511ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೇಸ್ ದಾಖಲಾಗಿವೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿವೆ.
ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್‌ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4, ತೆಲಂಗಾಣದಲ್ಲಿ 2 ಮತ್ತು ತಲಾ ಒಂದು ಪ್ರಕರಣಗಳು ಹರಿಯಾಣ ಮತ್ತು ಒಡಿಶಾದಿಂದ ವರದಿಯಾಗಿದೆ.
WHO JN.1 ಅನ್ನು ಪ್ರತ್ಯೇಕ "ಆಸಕ್ತಿಕರ ರೂಪಾಂತರ" ಎಂದು ವರ್ಗೀಕರಿಸಿದೆ. ಜೊತೆಗೆ ಅದು ವೇಗವಾಗಿ ಹರಡುವಿಕೆ ಹೆಚ್ಚುತ್ತಾ ಸಾಗಿದೆ ಎಂದಿದೆ. ಆದರೆ ಜಾಗತಿಕ ಸಾರ್ವಜನಿಕ ಆರೋಗ್ಯದ ಮೇಲೆ ಇದು ಕಡಿಮೆ ಅಪಾಯವನ್ನು ಉಂಟುಮಾಡುತ್ತದೆ ಎಂದಿದೆ.
ಕೊರೊನಾ ವೈರಸ್‌ನ JN.1 ರೂಪಾಂತರದ ಹಿಂದೆ BA.2.86 ಉಪ-ವಂಶಾವಳಿಗಳ ಭಾಗವಾಗಿ ಆಸಕ್ತಿಯ ರೂಪಾಂತರ (VOI) ಎಂದು ವರ್ಗೀಕರಿಸಲಾಗಿದೆ, ಇದು VOI ಎಂದು ವರ್ಗೀಕರಿಸಲಾದ ಪೋಷಕ ವಂಶಾವಳಿಯಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ದೇಶದಲ್ಲಿ ಜೆಎನ್.1 ರೂಪಾಂತರವನ್ನು ಪತ್ತೆಹಚ್ಚುವ ನಡುವೆಯೂ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಂಚಿಕೊಂಡಿರುವ COVID-19 ಗಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಕಟ್ಟನಿಟ್ಟಾಗಿ ಅನುಸರಿಸುವಂತೆ ರಾಜ್ಯಗಳನ್ನು ಒತ್ತಾಯಿಸಲಾಗಿದೆ. ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಇನ್ಫ್ಲುಯೆನ್ಸ ತರಹದ ಕಾಯಿಲೆ (ILI) ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ (SARI) ಯ ಜಿಲ್ಲಾವಾರು ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ಕೇಳಲಾಗಿದೆ.
JN.1 ಕೋವಿಡ್ 19ನಿಂದ ಭಾರತಕ್ಕೆ ಅಪಾಯವಿದೆಯೇ? JN.1 ಕೋವಿಡ್ 19 ರೂಪಾಂತಾರ ವಿಶ್ವದೆಲ್ಲಡೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದಲ್ಲಿಯೂ ಕುರಿತು ಎಚ್ಚರಿಕೆವಹಿಸಬೇಕಾಗಿದೆ, ಒಮಿಕ್ರಾನ್‌ನ ರೂಪಾಂತರವಾಗಿರುವ ಈ ಕೋವಿಡ್ ಭಾರತದಲ್ಲಿ ಮತ್ತೊಮ್ಮೆ ಅಪಾಯವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿರುವುದರಿಮದ ಸರ್ಕಾರ ಹಾಗೂ ಜನರು ಈ ಕುರಿತು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ.
JN.1 ಕೋವಿಡ್ 19
ಆರೋಗ್ಯ ತಜ್ಞರ ಪ್ರಕಾರ JN.1 ಕೋವಿಡ್ 19 ಲಕ್ಷಣಗಳು
* ಜ್ವರ
* ಕೆಮ್ಮು
* ಸುಸ್ತು
* ಮೂಗು ಕಟ್ಟುವುದು
* ಶೀತ
* ಬೇಧಿ
*ತಲೆನೋವು
ಕೋವಿಡ್ 19 ತಡೆಗಟ್ಟಲು ಏನು ಮಾಡಬೇಕು?
ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂದು ನಮ್ಮೆಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಬಾರಿ ಕೊರೊನಾ ತಡೆಗಟ್ಟಲು ಈ ಹಿಂದೆ ಮಾಡಿದ ಉಪಾಯಗಳನ್ನೇ ಮಾಡುವುದು ಒಳ್ಳೆಯದು
* ಮಾಸ್ಕ್ ಧರಿಸಿ: ಮತ್ತೆ ಮಾಸ್ಕ್ ಧರಿಸಿ, ಅದರಲ್ಲೂ ಚಳಿಗಾಲ ಜನರು ಗುಂಪಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸಿ, ಡಬಲ್ ಮಾಸ್ಕ್ ಧರಿಸಿ.
* ಸ್ಯಾನಿಟೈಸರ್ ಬಳಸಿ
* ಸಾಧ್ಯವಾದರೆ ಸಾಮಾಜಿಕ ಅಂತರ ಕಾಪಾಡಿಗೊಳ್ಳಿ
* ಅಫೀಸ್‌ನಲ್ಲಿ ಗಎಸಿ ರೂಮ್‌ಗಿಂತ ಗಾಳಿ ಚೆನ್ನಾಗಿ ಓಡಾಡುವಂತೆ ಇದ್ದರೆ ಒಳ್ಳೆಯದು
* ಕೆಮ್ಮು, ಶೀತ, ಜ್ವರವಿದ್ದರೆ ಮನೆಯಲ್ಲಿಯೇ ರೆಸ್ಟ್ ಮಾಡಿ, ಹೊರಗಡೆ ಓಡಾಡಬೇಡಿ. ಮನೆಯಲ್ಲಿಯೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಅಂದರೆ ಮಕ್ಕಳು, ಗರ್ಭಿಣಿ, ವಯಸ್ಸಾದವರು ಇದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications