Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಭಾರತದಲ್ಲಿ 257 ಹೊಸ ಕೋವಿಡ್ ಪ್ರಕರಣ ವರದಿ! JN.1 ಕುರಿತ ಮಾಹಿತಿ ಇಲ್ಲಿದೆ..!
ಕೋವಿಡ್ -19 ಹೊಂದೊಮ್ಮೆ ಇಡೀ ವಿಶ್ವಕ್ಕೆ ಯಾವ ರೀತಿ ಕಾಡಿದೆ ಎಂಬುದನ್ನು ಜನರು ಇಂದಿಗೂ ಮರೆತಿಲ್ಲ. ವಿಶ್ವದ ಎಲ್ಲಾ ದೇಶಗಳನ್ನೂ ಬಿಡದೆ ಕಾದಿದ್ದ ಕೋವಿಡ್ ಸಾವು ನೋವಿಗೆ ಕಾರಣವಾಗಿತ್ತು. ಕೋವಿಡ್‌ನಿಂದ ಇಂದಿಗೂ ಹತ್ತಾರು ವಲಯಗಳು ಚೇತರಿಕೆ ಕಂಡಿಲ್ಲ. ಹಾಗೆ ಅನಾರೋಗ್ಯ ಸಮಸ್ಯೆಗಳು ಅಂತ್ಯಗೊಂಡಿಲ್ಲ. ಆದ್ರೆ ಈಗ ಹೊಸದಾದ ರೂಪಾಂತರವೊಂದು ಏಷ್ಯಾದಲ್ಲಿ ಕಾಡಲು ಕಾಡಲು ಆರಂಭಿಸಿದೆ.
ಸಿಂಗಾಪುರ್ ಹಾಗೂ ಹಾಂಗ್ ಕಾಂಗ್‌ನಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗುತ್ತಿದೆ. ಹಾಗೆ ಭಾರತದಲ್ಲೂ ಈಗ ಆತಂಕ ಹುಟ್ಟಿಸಿದೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯನ್ ಆಟಗಾರ ಟ್ರಾವಿಸ್ ಹೆಡ್‌ಗೆ ಕೋವಿಡ್ ದೃಢವಾಗಿದೆ, ಹಾಗೆ ಬಾಲಿವುಡ್ ನಟಿ ಶಿಲ್ಪಾ ಶೀರೋದ್ಕರ್‌ಗೆ ಕೋವಿಡ್ ದೃಢಪಟ್ಟಿದೆ.

ಇದು ಭಾರತದಲ್ಲೂ ಪ್ರಕರಣಗಳು ವರದಿಯಾಗುತ್ತಿರುವ ಮುನ್ಸೂಚನೆ ನೀಡುತ್ತಿದೆ. ಸಿಂಗಾಪುರ್ ಹಾಗೂ ಹಾಂಗ್‌ಕಾಂಗ್‌ನಲ್ಲಿ ನಿತ್ಯ 15 ಸಾವಿರದಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿರುವ ಕುರಿತು ತಿಳಿದುಬಂದಿದೆ. ಹಾಗೆ ಭಾರತದಲ್ಲೂ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವುದು ಹೊಸ ರೀತಿ ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲಿ ಪ್ರಸ್ತುತ 257 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಆದ್ರೆ ಯಾವ ಪ್ರಕರಣವು ಅಪಾಯಕಾರಿಯಾಗಿಲ್ಲ ಹಾಗೆ ಆಸ್ಪತ್ರೆಗೆ ದಾಖಲಾಗುವಷ್ಟು ಪ್ರಭಾವ ಉಂಟು ಮಾಡಿಲ್ಲ ಎಂದು ವರದಿಯಾಗಿದೆ. ಮೇ 12 ರಿಂದ ಕೇರಳದಲ್ಲಿ 69 ಹೊಸ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 44 ಹಾಗೂ ತಮಿಳುನಾಡಿನಲ್ಲಿ 32 ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೆ ಕರ್ನಾಟಕದಲ್ಲಿ 8, ಗುಜರಾತ್‌ನಲ್ಲಿ 6, ದೇಹಲಿಯಲ್ಲಿ 3 ಪ್ರಕರಣಗಳು ಕೂಡ ವರದಿಯಾಗಿವೆ.
ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಿಡ್‌ಗೆ ಸಂಬಂಧಿಸಿದಂತೆ ಇಬ್ಬರ ಸಾವಾಗಿದೆ. ಆದ್ರೆ ಇದಕ್ಕೆ ಕೋವಿಡ್ ಮಾತ್ರವಲ್ಲದೆ ಹಲವು ಸಮಸ್ಯೆಗಳು ಕೂಡ ಕಾರಣ ಎಂಬುದು ತಿಳಿದುಬಂದಿದೆ. ಇಬ್ಬರಲ್ಲಿ ಮೂತ್ರಪಿಂಡ ಸಮಸ್ಯೆ ಮತ್ತೊಬ್ಬರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರು ಎಂದು ತಿಳಿದುಬಂದಿದೆ.
ಈಗ ಏಷ್ಯಾ ಖಂಡದ ಹಲವು ಭಾಗದಲ್ಲಿ ಹರಡುತ್ತಿರುವ ಈ ರೂಪಾಂತರವು ಹಿಂದೊಮ್ಮೆ ನಿದ್ದೆಗೆಡಿಸಿದ್ದ ಓಮಿಕ್ರಾನ್ ತಳಿಗೆ ಸೇರಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಇದನ್ನು JN1 ಮತ್ತು ಅದರ ಉಪ-ರೂಪಾಂತರಗಳಾದ LF7 ಮತ್ತು NB1.8 ಸೋಂಕಿಗೆ ಕಾರಣವೆಂದು ಪರಿಗಣಿಸಲಾಗುತ್ತಿದೆ. ಈ ಹೊಸ ರೂಪಾಂತರಗಳು ಹೆಚ್ಚು ಅಪಾಯಕಾರಿ ಅಥವಾ ಈ ಮೊದಲು ವರದಿಯಾದ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಲ್ಲಿ. ಆದರೆ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರ ಮೇಲೆ ಇದು ಹೆಚ್ಚಾಗಿ ಹಾಗೂ ಅಪಾಯಕಾರಿಯಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ವಿವರಿಸುತ್ತಾರೆ.
JN.1 ರೂಪಾಂತರ ಯಾವುದು?
JN.1 ರೂಪಾಂತರವು ಓಮಿಕ್ರಾನ್ ಕುಟುಂಬದಕ್ಕೆ ಸೇರಿದ ಹೊಸ ತಳಿಯಾಗಿದೆ. ಇದರಲ್ಲಿ ಸುಮಾರು 30 ಅನುವಂಶೀಯ ರೂಪಾಂತರಗಳಿವೆ. ಇದನ್ನು 2023ರಲ್ಲಿಯೇ ಗುರುತಿಸಲಾಗಿದೆ. ಇದು ವೇಗವಾಗಿ ಹರಡುವ ಹಾಗೆ ರೋಗ ನಿರೋಧಕ ಶಕ್ತಿಯ ಮೇಲೆ ದಾಳಿ ಮಾಡುವಂತಹ ಬಲ ಹೊಂದಿರುವ ರೂಪಾಂತರ ಎಂದು ವರ್ಗೀಕರಿಸಲಾಗಿದೆ.
ವೈರಸ್ ಪತ್ತೆಯಾದವರಲ್ಲಿ ಇದನ್ನು ಅಪಾಯಕಾರಿ ಎಂದು ಪರಿಗಣಿಸುವಂತಹ ಘಟನೆಗಳು ನಡೆದಿಲ್ಲ. ಆದ್ರೆ ಈಗಾಗಲೇ ಯಾವುದಾದರು ಅನಾರೋಗ್ಯ ಸಮಸ್ಯೆ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಇದು ಅಪಾಯಕಾರಿಯಾಗಿ ಪರಿಣಮಿಸಿದೆ.
JN.1 ರೂಪಾಂತರದ ಲಕ್ಷಣಗಳು
ಗಂಟಲು ನೋವು
ಕೆಮ್ಮು
ಜ್ವರ
ಮೈ ನೋವು
ಆಯಾಸ
ಮೂಗು ಸೋರುವಿಕೆ
ತಲೆನೋವು
ಆದ್ರೆ ಈಗಾಗಲೇ ಲಸಿಕೆ ಪಡೆದವರಲ್ಲಿ ಈ ರೂಪಾಂತರವು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಕೂಡ ವಿವರಿಸಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications