Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಲ್ಯಾಕ್ಮೆ ಫ್ಯಾಷನ್ ವೀಕ್-ಮಿಂಚು ಹರಿಸಿದ ರೂಪದರ್ಶಿಯರು
ಈ ಬಾರಿಯ ಲ್ಯಾಕ್ಮೆ ಫ್ಯಾಷನ್ ವೀಕ್ ಸಮ್ಮರ್ 2017ನ ಪ್ರದರ್ಶನದಲ್ಲಿ ಪ್ರಖರ ಬಣ್ಣಗಳ ಅಂತಾರ್-ಅಗ್ನಿ ಸಂಗ್ರಹವೇ ಹೆಚ್ಚು ಗಮನ ಸೆಳೆಯಿತು. ಈ ಸಂಗ್ರಹದಲ್ಲಿ ಬಿಡಿಯಾಗಿ ಧರಿಸಬಲ್ಲ ಉಡುಗೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ವಿಶೇಷವಾಗಿ ಗಾಢ ನೀಲಿ ಬಣ್ಣಕ್ಕೆ ಹೆಚ್ಚಿನ ಮಹತ್ವ ನೀಡಿದರೂ ಉಳಿದ ಬಣ್ಣಗಳೂ ತಾವೇನೂ ಕಡಿಮೆ ಇಲ್ಲವೆಂಬಂತೆ ವಿಜೃಂಭಿಸಿದವು.
ಇವುಗಳ ನಡುವೆ ಎದ್ದು ಕಾಣುವಂತಹ ಅಚ್ಚಬಿಳಿಬಣ್ಣದ ಉಡುಗೆಗಳು ಮೆರುಗು ಹೆಚ್ಚಿಸಿದವು. ಆದರೆ ಈ ಉಡುಗೆಗಳಿಗಿಂತಲೂ ಹೆಚ್ಚು ಗಮನ ಸೆಳೆದ ಅಂಶವೆಂದರೆ ರೂಪದರ್ಶಿಯರು ಬದಲಿಸಿದ ತಮ್ಮ ಕೇಶದ ಬಣ್ಣ.
ಮ್ಯಾನ್ ಬನ್, ಗಾಢ ನೀಲಿ, ಬಿಳಿ ಮೊದಲಾದವು ಅವರು ಉಟ್ಟ ಉಡುಗೆಗೆ ಸೂಕ್ತವಾಗಿದ್ದವು. ಅದರಲ್ಲೂ ಪುರುಷ ರೂಪದರ್ಶಿಯರು ಹೆಚ್ಚಿನ ಅಸ್ಥೆ ವಹಿಸಿದ್ದು ಗಾಢ ಬಣ್ಣ-ತಿಳಿ ಬಣ್ಣದ ಜೋಡಿಯ ಉಡುಗೆಗಳನ್ನು ತೊಟ್ಟು ವೇದಿಕೆಯಲ್ಲಿ ಸಂಭ್ರಮಿಸಿದರು. ಬನ್ನಿ, ಈ ಪ್ರದರ್ಶನದ ಬಗ್ಗೆ ಇನ್ನೂ ಕೊಂಚ ವಿವರವಾಗಿ ತಿಳಿಯೋಣ....

ಸಮಗ್ರ ಪೀಚ್ ಬಣ್ಣದ ಉಡುಗೆ
ಪೀಚ್ ಬಣ್ಣ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣದ ಉಡುಗೆ, ಅದರಲ್ಲೂ ಒಂದೇ ಬಟ್ಟೆಯ ದೇಹಪೂರ್ತಿ ಆವರಿಸುವ ಈ ಉಡುಗೆ ಆರಾಮದಾಯಕ ಹಾಗೂ ತೋಳಿಲ್ಲದ ಕಾರಣ ವಿಶೇಷ ಆಕರ್ಷಣೆಯನ್ನು ಪಡೆದಿದ್ದು ಪ್ರತಿಯೊಬ್ಬರೂ ಇದನ್ನೊಮ್ಮೆ ಏಕೆ ಪ್ರಯತ್ನಿಸಬಾರದು ಎಂದು ಯೋಚಿಸುವಂತಿತ್ತು.
ಎತ್ತರದ ಕಾಲರ್ ಹಾಗೂ ತೋಳಿಲ್ಲದ ಉಡುಗೆ
ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುತ್ತಿಗೆಯ ಭಾಗ ಹೆಚ್ಚಾಗಿ ತೆರೆದಿರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ತೋಳಿಲ್ಲದ, ಪೂರ್ಣವಾಗಿ ಒಂದೇ ಬಟ್ಟೆಯ ಉಡುಗೆಯ ಕಾಲರ್ ಇಡಿಯ ಕುತ್ತಿಗೆಯನ್ನು ಮರೆಮಾಚಿದ್ದು ಹೆಚ್ಚಿನ ಆಕರ್ಷಣೆ ಹೊಂದಿತ್ತು.
ಅರೆಪಾರದರ್ಶಕ ನೀಲಿ
ಪೂರ್ಣ ಬಿಳಿಯಾದ ಸಾಮಾನ್ಯ ಬಟ್ಟೆಗಳನ್ನು ತೊಟ್ಟು ಇದರ ಮೇಲೆ ಒಂದು ಅರೆಪಾರದರ್ಶಕ ಬಟ್ಟೆಯನ್ನು ಹೆಗಲಿನ ಎರಡೂ ಕಡೆಗಳಿಂದ ಸುತ್ತಿ ಎದೆಯ ಮೇಲೆ ಒಂದು ಬಟನ್ ಮೂಲಕ ಬಂಧಿಸಿದರೆ ಎಷ್ಟು ಆಕರ್ಷಣೀಯವಾಗುತ್ತದೆ ಎಂಬುದನ್ನು ಈ ಚತುರ ವಿನ್ಯಾಸಕರು ತೋರಿಸಿದ್ದಾರೆ.
ನಾವೆಷ್ಟು ಮುದ್ದಾಗಿ ಕಾಣುತ್ತಿದ್ದೇವೆ ಅಲ್ಲವೇ
ಕುತ್ತಿಗೆಯನ್ನು ಪೂರ್ತಿ ಮುಚ್ಚಿದರೂ ಹೊಕ್ಕುಳ ಭಾಗವನ್ನು ಕೊಂಚ ತೆರೆದಿರುವ ಮೂಲಕ ಎಷ್ಟು ಮುದ್ದಾಗಿ ಕಾಣುತ್ತಿದ್ದೇವೆ ಅಲ್ಲವೇ?
ಕುತ್ತಿಗೆಯಿಂದ ಪಾದದವರೆಗೂ ಗಾಢನೀಲಿಯೇ ನೀಲಿ
ಬಿಳಿಯ ಕುತ್ತಿಗೆಯ ಕಾಲರ್, ಗಾಢ ನೀಲಿ ಬಣ್ಣದ ಸ್ಕರ್ಟ್ ಮತ್ತು ಇದೇ ಬಣ್ಣದ ಪ್ಯಾಂಟ್, ನೀಳ ತೋಳಿನ ಈ ಉಡುಗೆ ಬಿಸಿಲಿಗೆ ಸೂಕ್ತ ಎನ್ನಿಸದಿರದು.
ಇನ್ನಷ್ಟು ನೀಲಿಯ ಉಡುಗೆಗಳು
ತ್ರಿಕೋಣಾಕೃತಿಯಲ್ಲಿ ಹೊಕ್ಕುಳನ್ನು ಮಾತ್ರ ತೋರುವ ಈ ಉಡುಗೆಯೂ ಪೂರ್ಣವಾಗಿ ಗಾಢ ನೀಲಿಯೇ ಎಂಬುದೊಂದು ವಿಶೇಷ
ಹಳೆಯ ಉಡುಗೆಗೆ ಮತ್ತೊಮ್ಮೆ ಆದ್ಯತೆ
ಕೊಂಚ ಹಿಂದಿನ ಫ್ಯಾಷನ್ ಆಗಿದ್ದ ಕೇಪ್ ಶರ್ಟ್ ಮತ್ತು ಧೋತಿ ಪ್ಯಾಂಟ್ ಗಳು ಈಗ ಮತ್ತೊಮ್ಮೆ ಚರ್ಚಿಗೆ ಬಂದಿವೆ.



Click it and Unblock the Notifications





