For Quick Alerts
ALLOW NOTIFICATIONS  
For Daily Alerts

ಟ್ರೆಂಡ್‌ ಆಗುತ್ತಿದೆ ಮುಟ್ಟಿನ ರಕ್ತದ ಫೇಶಿಯಲ್‌, ವ್ಯಾಂಪೈರ್‌ ಫೇಶಿಯಲ್‌ನಂತೆ ಸುರಕ್ಷಿತವಲ್ಲ ಏಕೆ?

|

ತುಂಬಾ ವಿಚಿತ್ರವಾದ ಸ್ಕಿನ್‌ಕೇರ್‌ವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದ ಹ್ಯಾಶ್‌ಟ್ಯಾಗ್‌ #periodfacemask,#menstruationmasking ಎಂದು ನೀಡಲಾಗಿದ್ದು ಈ ಬಗೆಯ ಸ್ಕಿನ್‌ಕೇರ್ ತುಂಬಾನೇ ಗಮನ ಸೆಳೆಯುತ್ತಿದೆ. ಮುಖಕ್ಕೆ ಮುಟ್ಟಿನ ರಕ್ತವನ್ನು ಹಚ್ಚಿ ತ್ವಚೆ ಆರೈಕೆ ಮಾಡಲಾಗುವುದು.

ಇದರ ಬಗ್ಗೆ ಕೆಲವರು ಕೇಳಿರುತ್ತೀರಿ, ಇನ್ನು ಕೆಲವರು ಹೇಸಿಗೆ ಪಟ್ಟುಕೊಳ್ಳಬಹುದು, ಆದರೆ ಈ ರೀತಿಯ ತ್ವಚೆ ಆರೈಕೆ ವಿಧಾನ ಕೂಡ ಇರುವುದು ಸತ್ಯ.

Vampire Facials

ಮುಟ್ಟಿನ ರಕ್ತವನ್ನು ಮುಖಕ್ಕೆ ಹಚ್ಚುವುದರಿಂದ ನಿಜವಾಗಲೂ ತ್ವಚೆಗೆ ಒಳ್ಳೆಯದೇ? ಇದರ ಬಗ್ಗೆ ಎಕ್ಸ್‌ಪರ್ಟ್‌ ಏನು ಹೇಳುತ್ತಾರೆ ಎಂದು ನೋಡೋಣ ಬನ್ನಿ:

ಮುಟ್ಟಿನ ರಕ್ತದ ಫೇಸ್‌ಪ್ಯಾಕ್‌ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಚರ್ಮ ರೋಗ ತಜ್ಞರ ಪ್ರಕಾರ ಮುಟ್ಟಿನ ರಕ್ತವನ್ನು ಮುಖಕ್ಕೆ ಹಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಗರ್ಭಕೋಶದಿಂದ ಬರುವ ಈ ಬೇಡದ ರಕ್ತದಲ್ಲಿ ಡೆಡ್‌ಸೆಲ್‌ಗಳಿರುತ್ತದೆ, ಅಲ್ಲದೆ ಇದನ್ನು ಮುಖಕ್ಕೆ ಹಚ್ಚುವುದರಿಂದ ಬ್ಯಾಕ್ಟಿರಿಯಾಗಳು ಹೆಚ್ಚಾಗುವುದು, ಇದರಿಂದ ಮೊಡವೆ ಸಮಸ್ಯೆ, ತ್ವಚೆ ಅಲರ್ಜಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

ಇದನ್ನು ವ್ಯಾಂಪೈರ್ ಫೇಶಿಯಲ್‌ಗೆ ಪರ್ಯಾಯವಾಗಿ ಮಾಡಲಾಗುತ್ತಿದೆ, ಆದರೆ ಇದು ವ್ಯಾಂಪೈರ್ ಚಿಕಿತ್ಸೆಗೆ ಪರ್ಯಾಯವಲ್ಲ.

ಕಿಮ್ ಕಾರ್ಡಶಿಯಾನ್‌ನಿಂದ ಜನಪ್ರಿಯವಾದ ವ್ಯಾಂಪೈರ್‌ ಸ್ಕಿನ್‌ ಕೇರ್‌

ವ್ಯಾಂಪೈರ್‌ ಫೇಶಿಯಲ್ ಸೆಲೆಬ್ರಿಟಿಗಳ ಮೆಚ್ಚುಗೆಯ ಫೇಶಿಯಲ್ ಆಗಿದೆ. ಕಿಮ್‌ ಕಾರ್ಡಶಿಯಾನ್‌ ಈ ಫೇಶಿಯಲ್ ಬಗ್ಗೆ ಹೇಳಿದ ಮೇಲೆ ಜನರು ಇದರ ಬಗ್ಗೆ ತಿಳಿಯಲು ಹಾಗೂ ಈ ಫೇಶಿಯಲ್ ಮಾಡಿಸಲು ಹೆಚ್ಚಾಗಿ ಆಸಕ್ತಿ ತೋರಿಸುತ್ತಿದ್ದಾರೆ.

ವ್ಯಾಂಪೈರ್‌ ಫೇಶಿಯಲ್‌ನಲ್ಲಿ 20-30 ml ರಕ್ತವನ್ನು ಹೀರಿ ಸ್ಟ್ರೈರಿಯಲ್‌ ಟೆಕ್ನಿಕ್‌ನಿಂದ ರಕ್ತವನ್ನು ಶುದ್ಧ ಮಾಡಿ ಅದರಿಂದ ಪ್ಲಾಸ್ಮಾ ತೆಗೆದು ಆ ಸೆರಮ್‌ ಅನ್ನು ಮೈಕ್ರೋನೀಡ್ಲೆಂಗ್ ಮೂಲಕ ತ್ವಚೆಯೊಳಗೆ ಸೇರಿಸಲಾಗುವುದು. ಹೀಗೆ ಮಾಡುವುದರಿಂದ ನೆರಿಗೆ ಕಡಿಮೆಯಾಗುವುದು, ಯೌವನದ ಕಳೆ ಹೆಚ್ಚುವುದು, ಪಿಗ್ಮೆಂಟೇಷನ್ ಕೂಡ ಕಡಿಮೆಯಾಗುವುದು ಅಲ್ಲದೆ ಮುಖದ ಹೊಳಪು ಹೆಚ್ಚುವುದು.

ವ್ಯಾಂಪೈರ್ ಫೇಶಿಯಲ್‌ ಪ್ರಯೋಜನಗಳು
* ಯಾರಿಗೆ ಮುಖದಲ್ಲಿ ಕಲೆ ಇದೆಯೋ ಆ ಕಲೆಯನ್ನು ಹೋಗಲಾಡಿಸಲು ಸಹಾಯವಾಗುವುದು.
* ಮುಖದಲ್ಲಿ ನೆರಿಗೆ ಕಡಿಮೆಯಾಗುವುದು
* ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಾಗುವುದು, ಇದರಿಂದ ಮುಖದ ಹೊಳಪು ಹೆಚ್ಚುವುದು.
* ಮುಖದಲ್ಲಿ ತುಂಬಾ ನೆರಿಗೆ ಇದ್ದರೆ ಕಡಿಮೆಯಾಗುವುದು.
* ಮುಖ ತುಂಬಿಕೊಂಡು ಆಕರ್ಷಕವಾಗಿ ಕಾಣುವುದು, ವಯಸ್ಸು ಕಡಿಮೆಯಾಗುವುದು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ:
* ನಮ್ಮ ರಕ್ತವನ್ನು ಸ್ಟ್ರೈರ್‌ಲೈಸ್‌ ಅದರಿಂದ ಪ್ಲಾಸ್ಮಾ ತಯಾರಿಸಿ ಮೈಕ್ರೋನೀಡ್ಲಿಂಗ್ ಮುಖಾಂತರ ಮುಖದ ತ್ವಚೆಯೊಳಗೆ ಸೇರಿಸಲಾಗುವುದು. ಆಗ ಹಣೆ ಹಾಗೂ ಮುಖದ ತ್ವಚೆ ಪ್ರೊಟೀನ್ ಅನ್ನು ಹೀರಿಕೊಳ್ಳುತ್ತದೆ.

* ಇದನ್ನು ಮಾಡಿಸುವುದರಿಂದ ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸುತ್ತದೆ.

ಇದರ ಅಡ್ಡ ಪರಿಣಾಮಗಳು

* ಇದನ್ನು ಮಾಡಿಸಿದಾಗ ನೋವು, ಮುಖದಲ್ಲಿ ಊತ ಈ ಬಗೆಯ ಅಡ್ಡಪರಿಣಾಮ ಕಂಡು ಬರುವುದು
* ರಕ್ತ ಸಂಬಂಧಿ ಸಮಸ್ಯೆ ಇರುವವರಿಗೆ ಈ ವಿಧಾನ ಸೂಕ್ತವಲ್ಲ
* ತುಂಬಾ ಬಿಸಿಲಿಗೆ ಹೋದರೆ ಇದರ ಪರಿಣಾಮ ಕುಗ್ಗಬಹುದು
* ಈ ಟ್ರೀಟ್ಮೆಂಟ್‌ ಸೀರಿಸ್‌ ತೆಗೆದುಕೊಂಡರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ. ಒಂದು ಬಾರಿ ಮಾಡಿಸಿದರೆ ಪ್ರಯೋಜನವಿಲ್ಲ.

* ನೀವು ಫೇಸ್‌ಲಿಫ್ಟ್‌ ಬಯಸುವುದಾದರೆ ಈ ವಿಧಾನದಲ್ಲಿ ಪ್ರಯೋಜನವಿಲ್ಲ.

ತ್ವಚೆ ಆರೈಕೆಗೆ ಸರಳ ವಿಧಾನ
ನಿಮ್ಮ ಮುಖವನ್ನು ದಿನದಲ್ಲಿ ಎರಡು ಬಾರಿ ಫೇಶ್‌ವಾಶ್‌ ಬಳಸಿ ತೊಳೆಯಿರಿ.
* ಸನ್‌ಸ್ಕ್ರೀನ್ ಪ್ರತಿದಿನ ಬಳಸಿ.
* ನಿಮ್ಮ ಮುಖವನ್ನು ಅತಿಯಾಗಿ ಎಕ್ಸ್ಫೋಲೆಟ್ ಮಾಡಿ.
* ದಿನದಲ್ಲಿ ಕಡಿಮೆಯೆಂದರೂ 2 ಲೀಟರ್‌ ನೀರು ಕುಡಿಯಬೇಕು.
* ಕರಿದ ಪದಾರ್ಥಗಳು, ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ.
* ಉಪ್ಪಿನಂಶ ಅಧಿಕವಿರುವ ಆಹಾರ ಸೇವಿಸಬೇಡಿ
* ದಿನದಲ್ಲಿ 8 ಗಂಟೆ ನಿದ್ದೆ ಮಾಡಿ.
* ವಾರಕ್ಕೊಮ್ಮೆ ಎಕ್ಸ್‌ಫೋಲೆಟ್ ಮಾಡಿ
* ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
* ಹಣ್ಣುಗಳಿಂದ ಫೇಶಿಯಲ್ ಮಾಡಿ

English summary

What is Vampire Facials: Know Benefits, Risks & How It Works in Kannada

Vampire Facials: what is vampire facial, what are affects and side affects, does periodfacemask work as vampire facial read on....
Story first published: Tuesday, December 27, 2022, 21:46 [IST]
X
Desktop Bottom Promotion