Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ಲಾಕ್‌ಹೆಡ್ಸ್‌ಗಳನ್ನು ಸುಲಭವಾಗಿ ತೆಗೆಯಲು ಈ ಹೋಮ್‌ಮೇಡ್ ಫೇಸ್ ಸ್ಕ್ರಬ್‌ಗಳೇ ಸಾಕು
ತ್ವಚೆಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಎದುರಿಸದೇ ಇರುವವರು ಇಲ್ಲವೇ ಇಲ್ಲ. ನಾವೆಲ್ಲರೂ ಪ್ರತಿದಿನ ಹಲವಾರು ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಕೆಲವರು ಮೊಡವೆಗಳು, ಇನ್ನು ಕೆಲವರು ಡ್ರೈ ಸ್ಕಿನ್, ಮತ್ತೂ ಕೆಲವರು ಕಪ್ಪು ಚುಕ್ಕೆ ಅಥವಾ ಬ್ಲಾಕ್‌ಹೆಡ್ಸ್‌ಗಳಿಗೆ ಗುರಿಯಾಗುತ್ತಾರೆ.
ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಬ್ಲಾಕ್‌ಹೆಡ್ಸ್ ಸಮಸ್ಯೆ ಸಾಕಷ್ಟು ಸಾಮಾನ್ಯವಾಗಿದೆ. ಏಕೆಂದರೆ, ದಿನವಡೀ ಧೂಳು, ಮಾಲಿನ್ಯ, ಕೊಳಕುಗಳಿಗೆ ನಮ್ಮ ಮುಖ ತೆರೆದುಕೊಂಡಿರುವುದರಿಂದ ಈ ಸಮಸ್ಯೆ ಉಂಟಾಗುತ್ತವೆ. ಆದರೆ, ಅವುಗಳನ್ನು ತೊಡೆದುಹಾಕಲು ನೀವು ಸುಲಭವಾದ ಮನೆಮದ್ದುಗಳನ್ನು ಬಳಸಬಹುದು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಬ್ಲಾಕ್‌ಹೆಡ್ಸ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಸಕ್ಕರೆ ಮತ್ತು ತೆಂಗಿನ ಎಣ್ಣೆ ಸ್ಕ್ರಬ್:
ಬ್ಲ್ಯಾಕ್ ಹೆಡ್ಸ್‌ಗಳನ್ನು ಹೋಗಲಾಡಿಸಲು ಸ್ಕ್ರಬ್ ಅತ್ಯಂತ ಉಪಯುಕ್ತವಾಗಿದೆ. ವಿಶೇಷವಾಗಿ ಸಕ್ಕರೆ ಸ್ಕ್ರಬ್ ನಿಮಗೆ ಸಹಾಯಕವಾಗಿದೆಯೆಂದು ಸಾಬೀತಾಗಿದೆ. ಇದಕ್ಕಾಗಿ, ಸಕ್ಕರೆಯನ್ನು ಪುಡಿಮಾಡಿಕೊಳ್ಳಿ, ನಂತರ ಅದನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈಗ ಲಘು ಕೈಗಳಿಂದ ಮುಖದ ಮೇಲೆ ಸ್ಕ್ರಬ್ ಮಾಡಿ. ವಾರಕ್ಕೊಮ್ಮೆ ಇದನ್ನು ಬಳಸಿದರೆ, ಬಹಳಷ್ಟು ವ್ಯತ್ಯಾಸವನ್ನು ನೋಡುತ್ತೀರಿ. ನೀವು ತೆಂಗಿನ ಎಣ್ಣೆಯ ಬದಲಿಗೆ ಜೊಜೊಬಾ ಎಣ್ಣೆಯನ್ನು ಸಹ ಬಳಸಬಹುದು.

ದಾಲ್ಚಿನ್ನಿ ಸ್ಕ್ರಬ್:
ಕಪ್ಪು ಚುಕ್ಕೆಗಳನ್ನು ತೊಡೆದುಹಾಕಲು ದಾಲ್ಚಿನ್ನಿ ಪುಡಿ ಸಹ ಪ್ರಯೋಜನಕಾರಿಯಾಗಿದೆ. ಸ್ಕ್ರಬ್ ಮಾಡಲು, ದಾಲ್ಚಿನ್ನಿ ಪುಡಿಗೆ ಕೆಲವು ನಿಂಬೆ ಹನಿಗಳನ್ನು ಸೇರಿಸಿ, ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, ಕನಿಷ್ಠ 10-15 ನಿಮಿಷಗಳ ಕಾಲ ಬಿಡಿ. ನಂತರ ನಿಧಾನವಾಗಿ ಉಜ್ಜುವ ಮಾಡುವ ಮೂಲಕ ಅದನ್ನು ತೆಗೆದುಹಾಕಿ. ಇದು ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ ಗಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಚರ್ಮವನ್ನು ಬಿಗಿಗೊಳಿಸುತ್ತದೆ.

ಓಟ್ಮೀಲ್ ಸ್ಕ್ರಬ್:
ಓಟ್ ಮೀಲ್ ನಿಂದ ಮಾಡಿದ ಸ್ಕ್ರಬ್ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸುವುದಲ್ಲದೆ, ಮುಖಕ್ಕೆ ಹೊಳಪು ತರುತ್ತದೆ. ಇದನ್ನು ತಯಾರಿಸಲು, ಓಟ್ ಮೀಲ್ನಲ್ಲಿ ಮೊಸರು ಮತ್ತು ನಿಂಬೆ ಮಿಶ್ರಣ ಮಾಡಿ, ಪೇಸ್ಟ್ ಮಾಡಿ. ಈಗ ಅದನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು 15 ನಿಮಿಷಗಳ ಕಾಲ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಜೇನುತುಪ್ಪ ಮತ್ತು ಹಾಲಿನ ಸ್ಕ್ರಬ್:
ಹಾಲಿನಲ್ಲಿ ಜೇನುತುಪ್ಪ ಬೆರೆಸಿ ಸ್ವಲ್ಪ ಬಿಡಿ. ಇದಕ್ಕಾಗಿ ಬೆಚ್ಚಗಿನ ಹಾಲನ್ನು ಸಹ ಬಳಸಬಹುದು, ಇದರಿಂದ ಜೇನುತುಪ್ಪವು ಚೆನ್ನಾಗಿ ಮಿಶ್ರಣವಾಗುತ್ತದೆ. ಹಾಲು ತಣ್ಣಗಾದ ನಂತರ, ಮುಖವನ್ನು ಸ್ವಚ್ಛಗೊಳಿಸಿ, ಈ ಮಿಶ್ರಣವನ್ನು ಹಚ್ಚಿ, ಕನಿಷ್ಠ 10-15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.



Click it and Unblock the Notifications
