Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮೈಕಾಂತಿ ಹೆಚ್ಚಲು ನಿತ್ಯ ಸ್ನಾನದ ನೀರಿನಲ್ಲಿ ಇವುಗಳನ್ನು ಬಳಸಿ
ತ್ವಚೆ ನಿಮ್ಮ ಸೌಂದರ್ಯದ ಗುಟ್ಟನ್ನು ಹೇಳುತ್ತದೆ. ಮೃದುವಾದ ಹೊಳಪಿನ ತ್ವಚೆ ನಮ್ಮದಾಗಬೇಕು ಎನ್ನುವ ಆಸೆ ಎಲ್ಲರಲ್ಲೂ ಇದ್ದೇ ಇರುತ್ತೆ. ಕೇವಲ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಾತೊರೆಯುವ ಮಂದಿ ಮೈಕಾಂತಿಯತ್ತ ಹೆಚ್ಚಿನ ಗಮನವನ್ನೇ ಹರಿಸುವುದಿಲ್ಲ. ನಿತ್ಯ ಸ್ನಾನದ ನೀರಿನಲ್ಲಿ ನೈಸರ್ಗಿಕ ಮನೆಮದ್ದುಮಗಳನ್ನು ಬಳಸುವ ಮೂಲಕ ಕೆಲವೇ ದಿನಗಳಲ್ಲಿ ದೇಹದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕೃತಕ ಕ್ರೀಮ್ ಗಳಿಗಿಂತ ನೈಸರ್ಗಿಕ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ ಹಾಗೂ ಯಾವುದೇ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ಸಹ ಬೀರುವುದಿಲ್ಲ.

ಮೈಕಾಂತಿ ಹೆಚ್ಚಿಸಲು ಸ್ನಾನದ ನೀರಿನಲ್ಲಿ ಬಳಸಬಹುದಾದ ಮನೆಮದ್ದುಗಳು ಯಾವುದು, ಯಾವ ಮನೆಮದ್ದು ಎಂತಹ ಅಂಶಗಳನ್ನು ಹೊಂದಿದೆ. ಇಲ್ಲಿದೆ ಕೆಲವು ಸಲಹೆಗಳು.

ಉಪ್ಪು
ಉಪ್ಪಿನಲ್ಲಿ ಅದ್ಭುತವಾದ ಗ್ಯಾಸ್ಟ್ರೋನೊಮಿಕ್ ಅಂಶವಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಸ್ನಾನ ಮಾಡುವ ನೀರಿನಲ್ಲಿ ಕಪ್ಪು ಉಪ್ಪು ಬೆರೆಸುವುದರಿಂದ ತ್ವಚೆಯ ತುರಿಕೆ, ಉರಿಯೂತ, ಉಳುಕು, ಸನಬರ್ನ್ ಮತ್ತು ಮಾನಸಿಕ ಒತ್ತಡ ಸೇರಿದಂತೆ ಸೂಕ್ಷ್ಮ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ದೇಹದ ರಕ್ತ ಪರಿಚಲನೆಯನ್ನು ಸರಾಗವಾಗುವಂತೆ ಮಾಡುವ ಉಪ್ಪುನೀರಿನ ಸ್ನಾನ, ಒಣ ತ್ವಚೆಯನ್ನು ಮೃದುವಾಗಿಸುತ್ತದೆ. ಸೋರಿಯಾಸಿಸ್ ಸಮಸ್ಯೆಗೂ ಉಪ್ಪು ನೀರು ರಾಮಬಾಣವಾಗಿದೆ.

ವಿನಿಗರ್
ತ್ವಚೆಯ ಪಿಹೆಚ್ ಪ್ರಮಾಣವನ್ನು ಸಮತೋಲನದಲ್ಲಿರುವ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆನ್ನುನೋವು, ಮಂಡಿನೋವು, ಮಣಿಕಟ್ಟಿನ ನೋವುಗಳನ್ನು ನಿವಾರಿಸುತ್ತದೆ. ಅಲ್ಲದೇ ಇದರಲ್ಲಿರುವ ಅಲ್ಫಾ ಹೈಡ್ರಾಕ್ಸಿ ಆಸಿಡ್ ತ್ವಚೆಯ ಅಂದ ಹೆಚ್ಚಿಸುವುದಲ್ಲದೆ, ತ್ವಚೆಯಲ್ಲಿ ಮೊಡವೆಗಳು ಬರದಂತೆ ತಡೆಯುತ್ತದೆ. ದೇಹದಲ್ಲಿರುವ ಬ್ಯಾಕ್ಟಿರಿಯಾಕಾರಕಗಳನ್ನು ಶಮನಗೊಳಿಸುತ್ತದೆ.

ಜೇನು
ಜೀವಕೋಶಗಳಿಗೆ ಆರೋಗ್ಯ ನೀಡುವ ಜೇನನ್ನು ನೀರಿನಲ್ಲಿ ಬೆರೆಸಿ ಸ್ನಾ ಮಾಡುವುದರಿಂದ ತ್ವಚೆಯನ್ನು ಮೃದುವಾಗಿಸುತ್ತದೆ ಜತೆಗೆ, ಎಣ್ಣೆಯುಕ್ತ ತ್ವಚೆ ನಿವಾರಣೆಗೆ ಜೇನು ಅತ್ಯುಪಕಾರಿ. ಚರ್ಮದ ಪುನರುತ್ಪಾದನೆ ಹಾಗೂ ತೇವಾಂಶವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಅರ್ಧ ಬಟ್ಟಲು ಜೇನನ್ನು ನೀರಿನಲ್ಲಿ ಬೆರೆಸಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಓಟ್ ಮೀಲ್
ಎಲ್ಲಾ ಬಗೆಯ ಚರ್ಮಕ್ಕೂ ಹೊಳಪು ತರಬಲ್ಲ ಗುಣವನ್ನು ಓಟ್ ಮೀಲ್ ಹೊಂದಿದೆ. ಸನ್ ಬರ್ನ್ ನಿಂದಾಗಿ ಚರ್ಮ ಕಪ್ಪಾಗಿರುವುದನ್ನು ತಡೆಯಲು, ಚರ್ಮದ ಉರಿಯೂತದ ಸಮಸ್ಯೆಯನ್ನು ಓಟ್ ಮೀಲ್ ನಿವಾರಿಸಬಲ್ಲದ್ದು. ಸುಟ್ಟ ಭಾಗದ ಕಪ್ಪನ್ನು ಓಟ್ ಮೀಲ್ ತ್ವರಿತವಾಗಿ ಶಮನಮಾಡುತ್ತದೆ. ಸ್ನಾನದ ನೀರಿಗೆ ಅರ್ಧ ಅಥವಾ ಒಂದು ಕಪ್ ಓಟ್ ಮೀಲ್ ಹಾಕಿ ಕೊಂಚ ಸಮಯದ ನಂತರ ಸ್ನಾನ ಮಾಡಿ.

ಎಣ್ಣೆ
ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗಲಿದೆ. ಇದು ನೈಸರ್ಗಿಕ ಮ್ಯಾಶ್ಚಿರೈಸರ್ ಆಗಿದ್ದು, ಸ್ನಾನ ನಂತರ ಮ್ಯಾಶ್ಚಿರೈಸರ್ ಕ್ರೀಮುಗಳನ್ನು ಬಳಸುವ ಅವಶ್ಯವಿಲ್ಲ. ಚರ್ಮದ ಶುಷ್ಕತೆಯನ್ನು ಹೋಲಾಡಿರುವ ಜೊತೆಗೆ, ಕಪ್ಪುಗಳನ್ನು ನಿವಾರಿಸುವಲ್ಲಿ ಸಹ ಕೊಬ್ಬರಿ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ.

ಅಡುಗೆ ಸೋಡಾ
ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಇದು ಚರ್ಮದ ರಂಧ್ರಗಳನ್ನು ಆಳದವರೆಗೆ ಸ್ವಚ್ಛಗೊಳಿಸುತ್ತದೆ. ಆಂಟಿ ಇನ್ಫ್ಲಾಮೇಟರಿ ಆಂಶಗಳನ್ನು ಒಳಗೊಂಡಿರುವ ಸೋಡಾ ಮೊಡವೆ ಕಲೆ, ದದ್ದುಗಳನ್ನು ನಿವಾರಿಸುತ್ತದೆ. ಮೃತಕೋಶಗಳನ್ನು ಸಹ ಶಮನಗೊಳಿಸುವಲ್ಲಿ ಪ್ರಾಮುಖ್ಯತೆವಹಿಸಿದೆ.



Click it and Unblock the Notifications
