ಮುಖ ಸುಂದರವಾಗಿ ಕಾಣಬೇಕೆಂದರೆ, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹೀಗೆ ಮಾಡಿ...

ಕಚೇರಿಗೆ ಹೋಗುವಾಗ ಅಥವಾ ಬೇರೆ ಯಾವುದೇ ಸಮಾರಂಭಕ್ಕೆ ಹೋಗಲು ತಯಾರಾಗುವಾಗ ತ್ವಚೆಯು ತುಂಬಾ ಕಾಂತಿಯುತವಾಗಿ ಹೊಳೆಯುತ್ತಾ ಇರಬೇಕೆಂದು ಬಯಸುವಂತಹ ಮಹಿಳೆಯರು ಇದಕ್ಕಾಗಿ ನಾನಾ ರೀತಿಯ ಕ್ರೀಮ್ ಹಾಗೂ ಇನ್ನಿತರ ಉತ್ಪನ್ನಗಳನ್ನು ಬಳಸಿಕೊಳ್ಳುವರು. ಪ್ರತಿದಿನವೂ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಅದರಲ್ಲೂ ಕಚೇರಿ ಹಾಗೂ ಮನೆಯ ಕೆಲಸಗಳನ್ನು ನಿರ್ವಹಿಸಬೇಕಾದ ವೇಳೆ ಸಮಯದ ಅಭಾವದಿಂದಾಗಿ ಹೆಚ್ಚಿನ ಮಹಿಳೆಯರಿಗೆ ತ್ವಚೆಯ ಆರೈಕೆ ಮಾಡಲು ಸಾಧ್ಯವಾಗದು.

Things To Do In The Morning For Glowing Skin | Boldsky Kannada

ಅದರಲ್ಲೂ ಬೆಳಗ್ಗೆ ಎದ್ದು ಕಚೇರಿಗೆ ತಯಾರಾಗಬೇಕಾಗುತ್ತದೆ. ಬಿಸಿಲಿಗೆ ಮೈಯೊಡ್ಡುವ ಕಾರಣದಿಂದಲೂ ತ್ವಚೆಯ ಕಾಂತಿಯು ಮಂಕಾಗುವುದು. ಇದಕ್ಕಾಗಿಯೇ ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಸರಳವಾಗಿರುವಂತಹ, ಬೆಳಗ್ಗೆ ಮಾಡಿಕೊಳ್ಳಬಹುದಾದ ತ್ವಚೆಯ ಆರೈಕೆಯ ವಿಧಾನಗಳನ್ನು ಹೇಳಲಿದೆ. ಇದರಿಂದ ತ್ವಚೆಯು ಕಾಂತಿಯುತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಲಿಂಬೆ ನೀರು ಮತ್ತು ಜೇನುತುಪ್ಪ

ಲಿಂಬೆ ನೀರು ಮತ್ತು ಜೇನುತುಪ್ಪ

ಈ ವಿಧಾನದಿಂದ ನೀವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಬಹುದು. ಇಷ್ಟು ಮಾತ್ರವಲ್ಲದೆ ತೂಕ ಇಳಿಕೆಗೂ ಇದು ಸಹಕಾರಿಯಾಗಲಿದೆ. ಉಗುರುಬೆಚ್ಚಗಿನ ನೀರಿಗೆ ಲಿಂಬೆರಸ ಮತ್ತು ಜೇನುತುಪ್ಪ ಹಾಕಿಕೊಂಡು ಕುಡಿದರೆ ಅದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಗೆ ಹೋಗುವುದು ಮತ್ತು ಚರ್ಮಕ್ಕೆ ತೇವಾಂಶ ನೀಡುವುದು. ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಮುಖದ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಐಸ್ (ಮಂಜುಗಡ್ಡೆ) ಪ್ಯಾಕ್

ಐಸ್ (ಮಂಜುಗಡ್ಡೆ) ಪ್ಯಾಕ್

ಬೆಳಗ್ಗೆ ಮುಖಕ್ಕೆ ಐಸ್ ನ್ನು ಇಡುವುದರಿಂದ ಮುಖವು ತುಂಬಾ ತಾಜಾವಾಗಿ ಕಾಣುವುದು ಮತ್ತು ಕಣ್ಣುಗಳ ಕೆಳಗಡೆ ಇರುವಂತಹ ಉಬ್ಬಿರುವ ಭಾಗವನ್ನು ನಿವಾರಣೆ ಮಾಡುವುದು. ಇದು ಮುಖಕ್ಕೆ ಕಾಂತಿ ನೀಡುವುದು. ನಿಮ್ಮ ಮುಖಕ್ಕೆ ವೃತ್ತಾಕಾರದಲ್ಲಿ ಐಸ್ ನ್ನು ಉಜ್ಜಿಕೊಳ್ಳಿ. ಇದರಿಂದ ಚರ್ಮವು ಹೆಚ್ಚು ಪೋಷಣೆಯಿಂದ ಕೂಡಿರುವಂತೆ ಕಾಣುವುದು ಮತ್ತು ತೆರೆದಿರುವಂತಹ ರಂಧ್ರಗಳನ್ನು ಇದು ಮುಚ್ಚುವುದು.

Most Read:ಮುಟ್ಟಿನ ದಿನಗಳಲ್ಲಿ ವಿಶಿಷ್ಟ ತಿಂಡಿ-ತಿನಿಸುಗಳನ್ನು ತಿನ್ನಬೇಕೆನಿಸುತ್ತದೆಯಂತೆ! ಯಾಕೆ ಗೊತ್ತೇ?

ಬೆವರು ಸುರಿಸಿ

ಬೆವರು ಸುರಿಸಿ

ನೀವು ಬೆಳಗ್ಗೆ ಎದ್ದ ಬಳಿಕ ಸಮೀಪದಲ್ಲೇ ಇರುವಂತಹ ಪಾರ್ಕ್ ಗೆ ಹೋಗಿ ನಡೆದಾಡಿ ಅಥವಾ ಜಾಗಿಂಗ್ ಮಾಡಿ. ಇಲ್ಲವೇ ನೀವು ಜಿಮ್ ಗೆ ಹೋಗಿ ಅಲ್ಲಿ ಬೆವರು ಸುರಿಸಬಹುದು. ಇದರಿಂದ ನೀವು ತುಂಬಾ ತಾಜಾವಾಗಿ ಕಾಣುವಿರಿ ಮತ್ತು ಚರ್ಮದ ಮೇಲೆ ಇದು ಅದ್ಭುತವಾದ ಪರಿಣಾಮ ಬೀರುವುದು.

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಬಿಸಿನೀರಿನ ಸ್ನಾನವು ತುಂಬಾ ನೆರವು ನೀಡುವುದು. ಆದರೆ ನಿಮ್ಮ ಚರ್ಮವು ಎಣ್ಣೆಯಂಶದಿಂದ ಕೂಡಿದ್ದರೆ ಆಗ ನೀವು ಜೆಲ್ ಇರುವಂತಹ ಸೋಪ್ ನ್ನು ಬಳಸಿಕೊಳ್ಳಿ ಮತ್ತು ಚರ್ಮವು ತುಂಬಾ ಒಣಗಿದ್ದರೆ ಆಗ ನೀವು ಲಘು ಮೊಶ್ಚಿರೈಸರ್ ಇರುವಂತಹ ಸೋಪ್ ಬಳಸಿಕೊಳ್ಳಿ. ಕಲ್ಮಷ ಹಾಗೂ ಬೆವರಿನಿಂದ ಚರ್ಮದ ಮೇಲೆ ನೆಲೆಸಿರುವಂತಹ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡಲು ಬಿಸಿ ನೀರಿನ ಸ್ನಾನವು ತುಂಬಾ ನೆರವಾಗುವುದು ಎಂದು ಹೇಳಲಾಗುತ್ತದೆ. ಇದು ನಿಮ್ಮ ತುಂಬಾ ತಾಜಾವಾಗಿಡುವುದು ಮತ್ತು ದಿನದ ಸವಾಲಿಗೆ ತಯಾರುಗೊಳಿಸುವುದು.

ನೈಸರ್ಗಿಕ ಫೇಸ್ ಪ್ಯಾಕ್ ಮತ್ತು ಟೋನರ್

ನೈಸರ್ಗಿಕ ಫೇಸ್ ಪ್ಯಾಕ್ ಮತ್ತು ಟೋನರ್

ಪಪ್ಪಾಯಿ ತಿರುಳಿನ ಅತವಾ ಟೊಮೆಟೊ ಮತ್ತು ಹಾಲಿನ ಪ್ಯಾಕ್ ನ್ನು ಸ್ನಾನ ಮಾಡಲು ತೆರಳುವ ಐದು ನಿಮಿಷಕ್ಕೆ ಮೊದಲು ನೀವು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ನಿಮ್ಮ ಚರ್ಮವನ್ನು ತುಂಬಾ ಆರೋಗ್ಯವಾಗಿಡುವುದು. ಇದು ಮುಖದಲ್ಲಿ ಟೋನರ್ ಮತ್ತು ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು ಮತ್ತು ಚರ್ಮಕ್ಕೆ ದೀರ್ಘಕಾಲ ಕಾಂತಿ ನೀಡುವುದು.

ಮಾಯಿಶ್ಚಿರೈಸ್ ಮಾಡಿ

ಮಾಯಿಶ್ಚಿರೈಸ್ ಮಾಡಿ

ನೀವು ಮನೆಯಿಂದ ಹೊರಗಡೆ ಹೋಗುವ ಮೊದಲು ಮಾಯಿಶ್ಚಿರೈಸ್ ಮಾಡಲು ಮರೆಯಬೇಡಿ. ಒಣ ಚರ್ಮದವರ ಮೈಯಲ್ಲಿ ಚರ್ಮವು ಕಿತ್ತುಬಂದಂತೆ ಕಾಣುವುದು ಮತ್ತು ದೀರ್ಘಕಾಲಕ್ಕೆ ಇದರಿಂದ ನೆರಿಗೆ ಬಿದ್ದಂತೆ ಆಗುವುದು. ಚರ್ಮವು ತುಂಬಾ ಕಾಂತಿಯುತವಾಗಿ ಕಾಣಬೇಕು ಎಂದಾದರೆ ಆಗ ಪ್ರತಿನಿತ್ಯ ಮಾಯಿಶ್ಚಿರೈಸ್ ಮಾಡುವುದು ಅತೀ ಅಗತ್ಯವಾಗಿರುವುದು.

ಆರೋಗ್ಯಕರ ಉಪಾಹಾರ

ಆರೋಗ್ಯಕರ ಉಪಾಹಾರ

ರಾಜನಂತೆ ಉಪಾಹಾರ ಸೇವಿಸಬೇಕು ಎನ್ನುವ ಮಾತು ಇದೆ. ಬೆಳಗ್ಗಿನ ಉಪಾಹಾರವು ಸರಿಯಾಗಿದ್ದರೆ ಆಗ ಸಂಪೂರ್ಣ ದಿನ ನೀವು ತುಂಬಾ ಫಿಟ್ ಹಾಗೂ ಉಲ್ಲಾಸದಿಂದ ಇರಬಹುದು. ಮೊಟ್ಟೆಗಳಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇರುವ ಕಾರಣದಿಂದಾಗಿ ಇದು ಬೆಳಗ್ಗಿನ ಉಪಾಹಾರಕ್ಕೆ ಒಳ್ಳೆಯ ಆಹಾರವಾಗಿದೆ. ಇದರೊಂದಿಗೆ ಸ್ವಲ್ಪ ಕಿತ್ತಳೆ ಅಥವಾ ಬೇರೆ ಯಾವುದೇ ರೀತಿಯ ಸಿಟ್ರಸ್ ಇರುವಂತಹ ಆಹಾರವು ಚರ್ಮವು ಕಾಂತಿಯುತವಾಗಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಪೋಷಕಾಂಶಗಳು ನಿಮ್ಮ ದೈಹಿಕ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುವುದು.

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ನೀವು ದಿನವಿಡಿ ತಪ್ಪದೆ ಮಾಡಬೇಕಾಗಿರುವ ಕೆಲಸವೆಂದರೆ ಹೊರಗಡೆ ಬಿಸಿಲಿಗೆ ಹೋಗುವ ವೇಳೆ ಸನ್ ಸ್ಕ್ರಿನ್ ಹಚ್ಚಿಕೊಳ್ಳಬೇಕು. ಬಿಸಿಲಿನಿಂದ ಚರ್ಮಕ್ಕೆ ಆಗುವಂತಹ ಹಾನಿಯನ್ನು ಸನ್ ಸ್ಕ್ರೀನ್ ತಪ್ಪಿಸುವುದು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವುದು. ಆರೋಗ್ಯಕಾರಿ ಚರ್ಮವೆಂದರೆ ಅದು ಕಾಂತಿಯುತ ಚರ್ಮವೆಂದು ಅರ್ಥ.

English summary

Thing to do In The Morning For Glowing Skin All Day

Most of us girls aim to step out for the day looking dewy fresh with our skin glowing and hair on point. But looking just as good as we’ve braved the sun, pollution and stress at office or college are quite challenging. So here are a few things you should do as part of your morning beauty regimen to make your skin glow through the day…
X
Desktop Bottom Promotion