For Quick Alerts
ALLOW NOTIFICATIONS  
For Daily Alerts

ಮುಖದಲ್ಲಿನ ಬಿಳಿ ಬೊಕ್ಕೆ ನಿವಾರಣೆಗೆ ಕೆಲವು ಸರಳ ಮನೆಮದ್ದುಗಳು

By Hemanth
|

ತ್ವಚೆಯು ಸುಂದರವಾಗಿ ಹೊಳೆಯುತ್ತಿದ್ದರೆ ಆಗ ನಾಲ್ಕು ಜನರ ಮಧ್ಯೆ ಕೂಡ ಆಕರ್ಷಣೀಯವಾಗಿ ಕಾಣಬಹುದು. ಆದರೆ ಕೆಲವೊಂದು ಚರ್ಮದ ಸಮಸ್ಯೆಗಳಿಂದಾಗಿ ಕಾಂತಿಯುತ ಚರ್ಮ ಪಡೆಯುವುದು ತುಂಬಾ ಕಷ್ಟಕರ. ಅದರಲ್ಲೂ ಮುಖದಲ್ಲಿ ಮೂಡುವಂತಹ ಮೊಡವೆಗಳು, ಬಿಳಿ ಬೊಕ್ಕೆಗಳು, ಕಪ್ಪು ಕಲೆಗಳು ಅಂದ ಕೆಡಿಸುವಂತದ್ದು. ಅದರಲ್ಲೂ ಕೆಲವರಲ್ಲಿ ಬಿಳಿ ಬೊಕ್ಕೆ ಸಮಸ್ಯೆಯು ಕಂಡುಬರುವುದು. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಒಂದು ವಾರದ ತನಕವಿರುವುದು. ಬಳಿಕ ಮಾಯವಾಗುವುದು. ಅದೇ ವಯಸ್ಕರಲ್ಲಿ ಇದು ಒಂದು ವಾರ, ತಿಂಗಳು ಅಥವಾ ಇದಕ್ಕಿಂತಲೂ ದೀರ್ಘ ಕಾಲ ಉಳಿದುಬಿಡಬಹುದು. ಚರ್ಮದ ರಂಧ್ರಗಳು ಮುಚ್ಚಿ ಸತ್ತ ಚರ್ಮ ಹಾಗೆ ಉಳಿದುಕೊಂಡಾಗ ಬಿಳಿ ಬೊಕ್ಕೆಗಳು ಮೂಡುವುದು.

remedies in kannada

ಹಾಲಿನಂತೆ ಮೂಡುವ ಬೊಕ್ಕೆಗಳು ನೋವುಂಟು ಮಾಡದೆ ಇದ್ದರೂ ಕೆಲವೊಂದು ಸಲ ಇದು ತುರಿಕೆ ಉಂಟು ಮಾಡುವುದು ಮತ್ತು ಅಂದಗೆಡಿಸಬಹುದು. ಅತಿಯಾದ ಮೇಕಪ್, ಸೂರ್ಯನ ಬಿಸಿಲು, ಸತ್ತ ಚರ್ಮವನ್ನು ತೆಗೆಯದೆ ಇರುವುದು, ಸ್ಟಿರಾಯ್ಡ್ ಇರುವ ಕ್ರೀಮ್ ನ್ನು ದೀರ್ಘಕಾಲ ತನಕ ಬಳಕೆ ಮಾಡುವುದು ಇತ್ಯಾದಿಗಳು ಇಂತಹ ಬೊಕ್ಕೆ ಮೂಡಲು ಕಾರಣಗಳು.

ಆದರೆ ಇದನ್ನು ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ವಿಧಾನಗಳು ಇವೆ. ಇದನ್ನು ಅನುಸರಿಸಿಕೊಂಡು ಹೋದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪದಲ್ಲಿ ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್ ಇದೆ ಮತ್ತು ಇದು ಚರ್ಮ ಒಣಗುವುದನ್ನು ತಪ್ಪಿಸುವುದು. ನೀವು ತಾಜಾ ಜೇನುತುಪ್ಪ ಹಚ್ಚಬಹುದು ಅಥವಾ ಇತರ ಸಾಮಗ್ರಿ ಜತೆಗೆ ಇದನ್ನು ಬೆರೆಸಿ ಬಳಸಬಹುದು.

ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಜೊಜೊಬಾ ತೈಲ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ದಿನನಿತ್ಯ ಅಥವಾ ವಾರದಲ್ಲಿ ಮೂರರಿಂದ ನಾಲ್ಕು ಸಲ ಬಳಸಿದರೆ ಪರಿಣಾಮ ಖಚಿತ.

ಸಕ್ಕರೆ ಸ್ಕ್ರಬ್

ಸಕ್ಕರೆ ಸ್ಕ್ರಬ್

ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮವನ್ನು ತೆಗೆದುಹಾಕಲು ನೆರವಾಗುವುದು. ಇದರಿಂದ ಬಿಳಿ ಬೊಕ್ಕೆಗಳನ್ನು ನಿವಾರಿಸಬಹುದು.

ಅರ್ಧ ಲಿಂಬೆಯಿಂದ ರಸ ತೆಗೆಯಿರಿ ಮತ್ತು ಅದನ್ನು ಎರಡು ಚಮಚ ಸಕ್ಕರೆ ಹಾಗು ಒಂದು ಚಮಚ ಆಲಿವ್ ತೈಲ ಜತೆಗೆ ಮಿಶ್ರಣ ಮಾಡಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಸ್ಕ್ರಬ್ ಮಾಡಿ. 20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಎರಡು ಸಲ ಕೆಲವು ತಿಂಗಳುಗಳ ಕಾಲ ಹೀಗೆ ಮಾಡಿ.

ಶ್ರೀಗಂಧ ಮತ್ತು ರೋಸ್ ವಾಟರ್

ಶ್ರೀಗಂಧ ಮತ್ತು ರೋಸ್ ವಾಟರ್

ಮುಖದಲ್ಲಿ ಬಿಳಿ ಬೊಕ್ಕೆಗಳು ಮೂಡಲು ಕಾರಣವಾಗುವಂತಹ ಅತಿಯಾದ ಎಣ್ಣೆಯನ್ನು ಶ್ರೀಗಂಧ ಮತ್ತು ರೋಸ್ ವಾಟರ್ ತೆಗೆದುಹಾಕುವುದು. ಎರಡು ಚಮಚ ಶ್ರೀಗಂಧದ ಹುಡಿ ಮತ್ತು ರೋಸ್ ವಾಟರ್ ಹಾಕಿಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಂಡ ಬಳಿಕ 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ ಮತ್ತು ಮುಖವನ್ನು ಒರೆಸಿ ಒಣಗುವಂತೆ ಮಾಡಿ. ಇದನ್ನು ಕೆಲವು ವಾರಗಳ ಕಾಲ ಪ್ರತಿನಿತ್ಯ ಅನುಸರಿಸಿ.

ಓಟ್ ಮೀಲ್ ಸ್ಕ್ರಬ್

ಓಟ್ ಮೀಲ್ ಸ್ಕ್ರಬ್

ಓಟ್ ಮೀಲ್ ಚರ್ಮವು ಒಣಗುವುದರಿಂದ ಮತ್ತು ತುರಿಕೆಯಿಂದ ಮುಕ್ತಿ ನೀಡುವುದು. ಮೂರು ಚಮಚ ಓಟ್ ಮೀಲ್, ಒಂದು ಚಮಚ ಸಕ್ಕರೆ ಮತ್ತು ಜೇನುತುಪ್ಪ ಬೆರೆಸಿಕೊಳ್ಳಿ. ಎಲ್ಲವೂ ಸರಿಯಾಗಿ ಮಿಶ್ರಣವಾದ ಬಳಿಕ ಚರ್ಮಕ್ಕೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ. ಬಳಿಕ ಮುಖ ತೊಳೆಯಿರಿ.

ಹರಳೆಣ್ಣೆ

ಹರಳೆಣ್ಣೆ

ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿರುವಂತಹ ಹರಳೆಣ್ಣೆಯು ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಗುಣ ಹೊಂದಿದೆ. ಇದು ಅತಿಯಾದ ಎಣ್ಣೆ ಕಡಿಮೆ ಮಾಡುವುದು. 1/2 ಚಮಚ ಹರಳೆಣ್ಣೆ ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದನ್ನು ಚರ್ಮವು ಸರಿಯಾಗಿ ಹೀರಕೊಳ್ಳಲು ಬಿಡಿ.

ಹಬೆ

ಹಬೆ

ಒಂದೊಳ್ಳೆ ಹಬೆಯು ರಂಧ್ರಗಳನ್ನು ತೆರೆದು ಸತ್ತ ಚರ್ಮ ತೆಗೆಯುವಂತೆ ಮಾಡುವುದು. ಬಿಸಿ ನೀರಿನಲ್ಲಿ ಒಂದು ಟವೆಲ್ ನ್ನು ಮುಳುಗಿಸಿ, ಅದರ ಹೆಚ್ಚುವರಿ ನೀರು ತೆಗೆದು ಅದನ್ನು ಮುಖದ ಮೇಲೆ ಕೆಲವು ನಿಮಿಷ ಕಾಲ ಹಾಕಿಕೊಳ್ಳಿ ಮತ್ತು ಬಳಿಕ ತೆಗೆಯಿರಿ. ಈ ರೀತಿ ಕೆಲವು ಸಲ ಮಾಡಿ.

ಹಲ್ಲುಜ್ಜುವ ಪೇಸ್ಟ್

ಹಲ್ಲುಜ್ಜುವ ಪೇಸ್ಟ್

ಬಿಳಿ ಬೊಕ್ಕೆಗಳಿಗೆ ಸಂಬಂಧಿಸಿದ ಲಕ್ಷಣಗಳನ್ನು ನಿವಾರಿಸುವಂತಹ ಅಂಶವಾಗಿರುವ ಫ್ಲೋರೈಡ್ ಅಂಶವಿದೆ. ಬಾಧಿತ ಜಾಗಕ್ಕೆ ಇದನ್ನು ತೆಳುವಾಗಿ ಹಚ್ಚಿಕೊಳ್ಳಿ ಮತ್ತು 25 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಅಡುಗೆ ಸೋಡಾ

ಅಡುಗೆ ಸೋಡಾ

ಒಂದು ಚಮಚ ಅಡುಗೆ ಸೋಡಾವನ್ನು ಒಂದು ಪ್ರಮಾಣದ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

English summary

worried of white bumps on your face here are some natural remedies to treat them

Who wouldn't love to have a spot free and flawless skin. But we face umpteen number skin related issues everyday. One such issue is milia. Milia or otherwise called milk spots are small and tiny white bumps that appear under the eyes. Though it's found mostly under the eyes it can also appear on your nose, cheeks and forehead. Here are some natural home remedies to get rid of milia.
X
Desktop Bottom Promotion