Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಡಾರ್ಕ್ ಸರ್ಕಲ್ ನಿವಾರಣೆಗೆ, ಬರೀ ಒಂದು ಹಿಡಿ ಪುದೀನಾ ಎಲೆಗಳು ಸಾಕು!
ಸೌಂದರ್ಯದಲ್ಲಿ ಕಣ್ಣುಗಳ ಪಾತ್ರವೂ ಮಹತ್ವದ್ದಾಗಿರುವುದು. ಕಣ್ಣುಗಳ ಕೆಳಗಡೆ ಕಾಣಿಸುವಂತಹ ಡಾರ್ಕ್ ಸರ್ಕಲ್(ಕಪ್ಪುವೃತ್ತಗಳು) ಮುಖದ ಅಂದ ಕೆಡಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಇದ್ದರೆ ಆಗ ಮುಖವು ತುಂಬಾ ಬಳಲಿದಂತೆ ಹಾಗೂ ನಿಸ್ತೇಜವಾದಂತೆ ಕಾಣಿಸುವುದು. ಒತ್ತಡ, ಕಲುಷಿತ ವಾತಾವರಣ, ಅತಿಯಾಗಿ ಮದ್ಯಪಾನ ಅಥವಾ ಧೂಮಪಾನ, ಹಾರ್ಮೋನು ಬದಲಾವಣಿಗಳಿಂದಾಗಿ ಕಪ್ಪು ವೃತ್ತಗಳು ಕಾಣಬಹುದು. ಕಾರಣಗಳು ಏನೇ ಇದ್ದರೂ ಡಾರ್ಕ್ ಸರ್ಕಲ್ ಗಳನ್ನು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ಇವೆ.

ಹೆಚ್ಚಿನವರು ಕ್ರೀಮ್ ಹಾಗೂ ಇತರ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸಿಕೊಂಡು ಕಪ್ಪು ವೃತ್ತಗಳನ್ನು ಮರೆಮಾಚಲು ಪ್ರಯತ್ನಿಸುವರು. ಇದರಿಂದ ಸೂಕ್ಷ್ಮವಾಗಿರುವ ಚರ್ಮದವರಲ್ಲಿ ಅಲರ್ಜಿ ಕಾಣಿಸಬಹುದು. ಆದರೆ ಯಾವುದೇ ಹಾನಿ ಮಾಡದೆ ಕಪ್ಪು ವೃತ್ತಗಳನ್ನು ನಿವಾರಣೆ ಮಾಡಲು ಕೆಲವು ಪರಿಹಾರೋಪಾಯಗಳು ಇವೆ. ಪುದೀನಾ ಎಲೆಗಳು ಇದರಲ್ಲಿ ಮುಖ್ಯವಾಗಿದೆ. ಪುದೀನಾ ಎಲೆಗಳಲ್ಲಿ ಇರುವಂತಹ ಮೆಂಥಾಲ್ ಎನ್ನುವ ಅಂಶವು ಕಣ್ಣಿನ ಕೆಳಭಾಗದಲ್ಲಿ ರಕ್ತಸಂಚಾರವನ್ನು ಉತ್ತಮಪಡಿಸಿ, ಚರ್ಮದ ಕಾಂತಿ ಹೆಚ್ಚಿಸುವುದು. ಇದರಲ್ಲಿನ ವಿಟಮಿನ್ ಸಿ ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು. ಕಪ್ಪು ವೃತ್ತಗಳನ್ನು ನಿವಾರಣೆ ಮಾಡಲು ಪುದೀನಾ ಎಲೆಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಪುದೀನಾ, ಟೊಮೆಟೋ ಮತ್ತು ಲಿಂಬೆ
ಟೊಮೆಟೋ ಹಾಗೂ ಲಿಂಬೆಯಲ್ಲಿರುವ ಬ್ಲೀಚಿಂಗ್ ಗುಣವು ಚರ್ಮವನ್ನು ನಿರ್ವಿಷಗೊಳಿಸಲು ನೆರವಾಗುವುದು. 1/2 ಟೊಮೆಟೋ ಮತ್ತು ಸ್ವಲ್ಪ ಪುದೀನಾ ಎಲೆಗಳನ್ನು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಲಿಂಬೆ ರಸ ಮತ್ತು ಚಿಟಿಕೆ ಉಪ್ಪು ಹಾಕಿ. ಅಂತಿಮವಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಕಣ್ಣಿನ ಕೆಳಗಡೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಇದನ್ನು ಮಾಡಿ.

ಪುದೀನಾ ಮತ್ತು ಆಲೂಗಡ್ಡೆ
ಬ್ಲೀಚಿಂಗ್ ಗುಣ ಹೊಂದಿರುವ ಆಲೂಗಡ್ಡೆಯು ಚರ್ಮದ ಬಣ್ಣ ಸುಧಾರಿಸುವುದು. ಒಂದು ಆಲೂಗಡ್ಡೆ, ಒಂದು ಹಿಡಿಯಷ್ಟು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಿ. ಆಲೂಗಡ್ಡೆ ಸಿಪ್ಪೆ ತೆಗೆದು ತುಂಡು ಮಾಡಿಕೊಳ್ಳಿ. ಇದನ್ನು ಪುದೀನಾ ಎಲೆಗಳ ಜತೆಗೆ ಬೆರೆಸಿ ರುಬ್ಬಿಕೊಳ್ಳಿ. ನಯವಾದ ಪೇಸ್ಟ್ ತಯಾರಿಸಿಕೊಂಡು ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿಟ್ಟು ಒಂದು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿಡಿ. ಇದರ ಬಳಿಕ ಹತ್ತಿ ಉಂಡೆ ತೆಗೆದು ಅದನ್ನು ಕಣ್ಣುಗಳ ಕೆಳಗಡೆ ಇಡಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. ಅಂತಿಮವಾಗಿ ಸಾಮಾನ್ಯ ನೀರಿನಿಂದ ತೊಳೆಯಿರಿ.

ಪುದೀನಾ ಎಲೆಗಳು ಮತ್ತು ಲಿಂಬೆರಸ
ಇದು ತುಂಬಾ ಸರಳ ಹಾಗೂ ಪರಿಣಾಮಕಾರಿ ವಿಧಾನ. ಒಂದು ಹಿಡಿ ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು ರುಬ್ಬಿಕೊಳ್ಳಿ. ಕೆಲವು ಹನಿ ಲಿಂಬೆರಸ ಹಾಕಿ ಮತ್ತು ರಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಳ್ಳಲು ಹತ್ತಿ ಉಂಡೆ ಬಳಸಿ. 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ನೀರಿನಿಂದ ತೊಳೆದು ಒರೆಸಿಕೊಳ್ಳಿ.

ಪುದೀನಾ ಮತ್ತು ರೋಸ್ ವಾಟರ್
ಒಂದು ಹಿಡಿ ಪುದೀನಾ ಎಲೆಗಳು ಮತ್ತು 2 ಚಮಚ ರೋಸ್ ವಾಟರ್. ಎರಡು ಜತೆಯಾಗಿ ಸೇರಿಕೊಂಡು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ರೆಫ್ರಿಜರೇಟರ್ ನಲ್ಲಿಡಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಇದನ್ನು ಸೋಸಿಕೊಂಡು ಅದರಲ್ಲಿ ಎರಡು ಹತ್ತಿ ಉಂಡೆಗಳನ್ನು ಅದ್ದಿಕೊಳ್ಳಿ ಮತ್ತು ಇದರ ಬಳಿಕ ಹತ್ತಿ ಉಂಡೆಗಳನ್ನು ಕಣ್ಣಿನ ಕೆಳಭಾಗದಲ್ಲಿಡಿ. 15 ನಿಮಿಷ ಕಾಲ ಹಾಗೆ ಬಿಡಿ. 15 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆದು ಒರೆಸಿಕೊಳ್ಳಿ. ನಿಯಮಿತವಾಗಿ ಹೀಗೆ ಮಾಡಿ.

ಪುದೀನಾ ಎಲೆಗಳು, ಕಡಲೆಹಿಟ್ಟು ಮತ್ತು ಅರಿಶಿನ
ಇದು ಚರ್ಮದಲ್ಲಿ ಅತಿಯಾಗಿರುವ ಕೊಳೆಯನ್ನು ತೆಗೆಯುವುದು ಮತ್ತು ಚರ್ಮವನ್ನು ಬಿಳಿಯಾಗಿಸುವುದು. ಮೊದಲು ಪುದೀನಾ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಇನ್ನಷ್ಟು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ ನೋಡಿ

ಹರಳೆಣ್ಣೆ ಮತ್ತು ತೆಂಗಿನೆಣ್ಣೆ
ಹರಳೆಣ್ಣೆ ಮತ್ತು ತೆಂಗಿನೆಣ್ಣೆಯನ್ನು 1:1 ರ ಪ್ರಮಾಣದಲ್ಲಿ ಹಾಕಿಕೊಳ್ಳಿ. ಹರಳೆಣ್ಣೆ ಮತ್ತು ತೆಂಗಿನೆಣ್ಣೆಯ ಮಿಶ್ರಣವನ್ನು ಹಾಗೆ ಇಟ್ಟುಕೊಂಡು ಬಳಸಬಹುದು. ದಿನದಲ್ಲಿ ಎರಡು ಸಲ ಅಥವಾ ಅದಕ್ಕಿಂತ ಹೆಚ್ಚು ಸಲ ಇದನ್ನು ಬಳಸಬೇಕು. ಕಪ್ಪು ಕಲೆಗಳಿಗೆ ಮಸಾಜ್ ಮಾಡುವಾಗ ಕಿವಿಗಳ ಬದಿಯಿಂದ ಮೂಗಿನ ಬದಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹೋಗಿ.

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆ
ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಚ್ಚಲ ಬಿಗಿಯಾಗಿರುವ ಬಾಟಲಿಯಲ್ಲಿ ಹಾಕಿಡಿ. ಈ ಎಣ್ಣೆಯನ್ನು ಕಣ್ಣಿನ ಕೆಳಗಡೆ ಮಸಾಜ್ ಮಾಡಿಕೊಳ್ಳಿ. ಕಣ್ಣಿನ ಕೆಳಭಾಗ ಮತ್ತು ಕಪ್ಪು ಕಲೆಗಳು ಇರುವ ಜಾಗ ಸ್ವಚ್ಛವಾಗಿದೆಯಾ ಎಂದು ಮೊದಲು ನೋಡಿಕೊಳ್ಳಿ. ಇದರ ಬಳಿಕ ಎಣ್ಣೆ ಹಚ್ಚಿ. ಸ್ವಲ್ಪ ಹೊತ್ತು ಇದಕ್ಕೆ ಮಸಾಜ್ ಮಾಡಿಕೊಳ್ಳಿ.

ಹರಳೆಣ್ಣೆ ಮತ್ತು ತಾಜಾ ಹಾಲು
ಹರಳೆಣ್ಣೆ ಮತ್ತು ತಾಜಾ ಹಾಲಿನ ಕೆನೆ ಕಪ್ಪು ಕಲೆ ಕೆಲಸ ಮಾಡಿದಂತೆ ಹರಳೆಣ್ಣೆ ಮತ್ತು ಹಸಿ ಹಾಲಿನ ಮಿಶ್ರಣವು ಕೆಲಸ ಮಾಡುವುದು. ಹರಳೆಣ್ಣೆ ಮತ್ತು ಮತ್ತು ಹಸಿ ಹಾಲನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಹಾಲಿನ ಮೇಲೆ ಎಣ್ಣೆಯು ನಿಲ್ಲುವುದು ನಿಂತುಹೋಗಬೇಕು. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಕಪ್ಪು ಕಲೆಗಳಿಗೆ ಈ ಮಿಶ್ರಣ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಟಿಶ್ಯೂ ಪೇಪರ್ ನ್ನು ಹರಳೆಣ್ಣೆ ಮತ್ತು ಹಾಲಿನ ಮಿಶ್ರಣದಲ್ಲಿ ಮುಳುಗಿಸಿ ಕಣ್ಣಿನ ಮೇಲಿಡಿ.

ಆಲೂಗಡ್ಡೆ
ಹಸಿ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಕಣ್ಣಿನ ಮೇಲೆ ಇಟ್ಟು 15-20 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ, ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಡಾರ್ಕ್ ಸರ್ಕಲ್ ಅನ್ನು ಬೇಗನೆ ಹೋಗಲಾಡಿಸಬಹುದು.

ಸೌತೆಕಾಯಿ
ಸೌತೆಕಾಯಿರಸ ಡಾರ್ಕ್ ಸರ್ಕಲ್ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 10 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ನಂತರ ಮುಖ ತೊಳೆಯಿರಿ. ಇದು ಕಲೆ ಹೋಗಲಾಡಿಸಿ ಕಣ್ಣು ಶುಭ್ರವಾಗಿ ಕಾಣುವಂತೆ ಮಾಡುತ್ತದೆ.

ಟೀ ಬ್ಯಾಗ್
ಗ್ರೀನ್ ಟೀ ಬ್ಯಾಗ್ ಅನ್ನು ತಣ್ಣೀರಿನಲ್ಲಿ ನೆನೆಸಿ, ನಂತರ ಆ ಬ್ಯಾಗ್ ಅನ್ನು ಕಣ್ಣಿನ ಮೇಲೆ ಇಡಿ. ಈ ರೀತಿ ಮಾಡಿಯೂ ಕಣ್ಣಿನ ಸುತ್ತ ಬಿದ್ದಿರುವ ಕಲೆಯನ್ನು ಹೋಗಲಾಡಿಸಬಹುದು.



Click it and Unblock the Notifications