Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ, ಪವರ್‌ಫುಲ್ ಮನೆಮದ್ದುಗಳು
ವಯಸ್ಸಾಗುತ್ತಿರುವ ಲಕ್ಷಣ ತೋರಿಸುವಂತಹ ನೆರಿಗೆ ಮುಖದ ಮೇಲೆ ಮೂಡಿದರೆ ಅದರಿಂದ ಭಾರೀ ಚಿಂತೆ ಕಾಡಲು ಆರಂಭವಾಗುವುದು. ನೆರಿಗೆಯು ವಯಸ್ಸಾಗುತ್ತಿರುವ ಲಕ್ಷಣ ತೋರಿಸುವುದು ಮಾತ್ರವಲ್ಲದೆ ಮುಖದ ಸೌಂದರ್ಯ ಕೆಡಿಸುವುದು. ಮುಖದ ಮೇಲಿನ ನೆರಿಗೆ ವಿಷಯವನ್ನೇ ಇಟ್ಟುಕೊಂಡು ಕಂಪನಿಗಳು ಹಲವಾರು ರೀತಿಯ ಕ್ರೀಮ್‌ಗಳನ್ನು ಮಾರುಕಟ್ಟೆಗೆ ತರುತ್ತಾ ಇದೆ. ಇದು ಸ್ವಲ್ಪ ಸಮಯದವರೆಗೆ ನೆರಿಗೆ ನಿವಾರಣೆ ಮಾಡಿದರೂ ಅದರಿಂದ ಅಡ್ಡಪರಿಣಾಮಗಳು ಉಂಟಾಗುವುದು ಖಚಿತ.
ಆದರೆ ಮನೆಯಲ್ಲಿ ತಯಾರಿಸುವ ಕೆಲವು ಮನೆಮದ್ದಿನಿಂದ ಚರ್ಮವನ್ನು ನೆರಿಗೆ ಮುಕ್ತಗೊಳಿಸಬಹುದು. ವಯಸ್ಸಾಗುತ್ತಾ ಇರುವಂತೆ ಪುರುಷರು ಹಾಗೂ ಮಹಿಳೆಯರಲ್ಲಿ ನೆರಿಗೆ ಮೂಡುವುದು ಸಾಮಾನ್ಯ. ಕೆಲವು ಮನೆಮದ್ದುಗಳು ನೆರಿಗೆ ನಿವಾರಣೆ ಮಾಡುವುದು ಮಾತ್ರವಲ್ಲದೆ ನೆರಿಗೆ ಮತ್ತೆ ಮೂಡದಂತೆ ತಡೆಯುವುದು. ಇದು ಹೇಗೆಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ತಿಳಿಸಲಿದೆ...
1.ಕಣ್ಣಿನ ಕೆಳಗಡೆ ನೆರಿಗೆ ಮೂಡಿದ್ದರೆ ಮೊಟ್ಟೆಯ ಬಿಳಿ ಲೋಳೆ ಹಚ್ಚಬಹುದು.
2.ಹರಳೆಣ್ಣೆ ನಿವಾರಣೆ ಮಾಡಲು ಮತ್ತೊಂದು ಉತ್ತಮ ವಿಧಾನವೆಂದರೆ ಹರಳೆಣ್ಣೆ. ಮುಖ ಹಾಗೂ ಕುತ್ತಿಗೆ ಭಾಗಕ್ಕೂ ಇದನ್ನು ಹಚ್ಚಿಕೊಳ್ಳಿ.
3.ಎರಡು ಚಮಚ ಮೊಸರು, ಒಂದು ಚಮಚ ಜೇನುತುಪ್ಪ, ಒಂದು ಚಮಚ ಲಿಂಬೆರಸದೊಂದಿಗೆ ಮೂರು ವಿಟಮಿನ್ ಕ್ಯಾಪ್ಸೂಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತಿ ಉಂಡೆ ಬಳಸಿ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ.

4.ನೆರಿಗೆ ಇರುವ ಮುಖದ ಭಾಗಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ ಪ್ರತೀ ದಿನ ರಾತ್ರಿ ಮೂರು ವಾರ ಕಾಲ ಇದನ್ನು ಹಚ್ಚಿಕೊಂಡರೆ ಫಲಿತಾಂಶ ಸಿಗಲಿದೆ.
5.ನೆರಿಗೆ ಮತ್ತು ವಯಸ್ಸಾಗುವ ಲಕ್ಷಣ ತಡೆಗಟ್ಟಲು ಅರಶಿನ ಮತ್ತು ಕಬ್ಬಿನ ಜ್ಯೂಸ್ ನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.
6.ನೆರಿಗೆ ನಿವಾರಣೆ ಮಾಡಲು ಅನಾನಸು ತುಂಬಾ ಒಳ್ಳೆಯದು. ನೆರಿಗೆ ಇರುವ ಭಾಗಕ್ಕೆ ಅನಾನಸನ್ನು ಸರಿಯಾಗಿ ಉಜ್ಜಿಕೊಳ್ಳಿ. 10ರಿಂದ 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
7.ನೆರಿಗೆಯೊಂದಿಗೆ ಮುಖದ ಚರ್ಮವು ಬಿರುಕು ಬಿಟ್ಟಂತೆ ಆಗಿದ್ದರೆ ಹಸಿರು ಅನಾನಸ್ ನ ಜ್ಯೂಸ್ ಮತ್ತು ಸೇಬಿನ ಜ್ಯೂಸ್ ಹಚ್ಚಿಕೊಂಡು 10ರಿಂದ 15 ನಿಮಿಷ ಹಾಗೆ ಬಿಡಿ. ಇದು ನೆರಿಗೆ ವಿಚಾರದಲ್ಲಿ ಅದ್ಭುತವನ್ನೇ ಮಾಡಲಿದೆ.



Click it and Unblock the Notifications

