ವಯಸ್ಸಾದವರಂತೆ ಕಾಣಿಸಬಾರದು ಎಂದಾದ್ರೆ, ತಪ್ಪದೇ ಈ ಟ್ರಿಕ್ಸ್ ಅನುಸರಿಸಿ

By: Anuradha Yogesh
Subscribe to Boldsky

ನೀವು ತುಂಬ ವಯಸ್ಸಾದವರಂತೆ ಕಾಣುತ್ತಿರುವಿರಾ? ಅಕಾಲಿಕ ವಯಸ್ಸಾಗುವಿಕೆಗೆ ನಿಮ್ಮನ್ನು ಬಿಟ್ಟೂ ಬೇರೆ ಯಾರೂ ಜವಾಬ್ದಾರರಾಗಿಲ್ಲ. ವಯಸ್ಸಾಗುವ ಪ್ರಕ್ರಿಯೆಯನ್ನು ಯಾರೂ ತಪ್ಪಿಸಲಾಗದ ನೈಸರ್ಗಿಕ ಕ್ರಿಯೆ. ಆದರೆ ಸಮಯಕ್ಕೆ ಮೊದಲೇ ವಯಸ್ಸಾಗುವದು..ಎನೋ ಏರುಪಾಗಿದೆಯೆಂದೇ ಅರ್ಥ, ಅದನ್ನು ನೀವೇ ನಿಯಂತ್ರಿಸಿಕೊಳ್ಳಬೇಕು. ವಯಸ್ಸಾಗುವದಕ್ಕೆ ನಿಮ್ಮದೇ ಕೆಲವು ದಿನನಿತ್ಯದ ಅಭ್ಯಾಸಗಳೇ ಕಾರಣವಾಗಿರುವ ಸಾಧ್ಯತೆಗಳಿವೆ.

ಅಚ್ಚರಿಯಾದರೂ ನಿಜ, ವೃದ್ಧಾಪ್ಯಕ್ಕೆ ಇವೇ ಕಾರಣ..

ಹರೆಯ ಕಳೆದು, ವಯಸ್ಸಾಗತೊಡಗಿದ ಕೂಡಲೆ ಎಲ್ಲರಲ್ಲಿ ಎನೋ ಒಂದು ಅಭದ್ರತೆ ಕಾಡುವುದು ಸುಳ್ಳಲ್ಲ. ಆಗ ಹೆಚ್ಚಾಗಿ ಬಹಳ ಜನ ಕ್ರೀಮ್, ಬೊಟೊಕ್ಸ್ ಮತ್ತಿತರ ವಿಧಾನಗಳಿಗೆ ಮೊರೆ ಹೋಗುತ್ತಾರೆ. ಆದರೆ ಅವುಗಳ ಮೇಲೆ ರಾಶಿ ಹಣ ಸುರಿಯುವ ಬದಲು ಸ್ವಲ್ಪ ನಿಮ್ಮ ದಿನನಿತ್ಯದ ಅಭ್ಯಾಸಗಳ ಕಡೆ ಗಮನ ಕೊಟ್ಟರೆ ಬಹಳಷ್ಟು ಹಣ ಉಳಿಸಬಹುದು. ಈ ಲೇಖನದಲ್ಲಿ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾದ ಕೆಲುವು ದಿನನಿತ್ಯದ ಅಭ್ಯಾಸಗಳ ಬಗ್ಗೆ ಚರ್ಚಿಸಲಾಗಿದೆ, ಇದನ್ನು ಓದಿ ನಿಮ್ಮ ಅಭಾಸಗಳನ್ನು ಸುಧಾರಿಸಿಕೊಳ್ಳಿ.....  

 ಸನ್‌ಸ್ಕ್ರೀನ್ ಹಚ್ಚಿಕೊಳ್ಳದೆ ಇರುವುದು

ಸನ್‌ಸ್ಕ್ರೀನ್ ಹಚ್ಚಿಕೊಳ್ಳದೆ ಇರುವುದು

ಇದು ಎಲ್ಲರೂ ಮಾಡುವ ಮುಖ್ಯವಾದ ತಪ್ಪು. ಚರ್ಮ ತಾಜಾತನದಿಂದ ನಳನಳಿಸಲು ಒಳ್ಳೆ ಎಸ್ಪಿಎಫ್ ಇರುವ ಸನ್‌ಸ್ಕ್ರೀನ್ ಬಳಸಬೇಕು. ಚರ್ಮದ ಸುಕ್ಕುಗಟ್ಟುವಿಕೆ ಮತ್ತು ಡಾರ್ಕ್ ಸ್ಪಾಟ್‌ಗಳಿಗೆ ಸೂರ್ಯನ 'ಯೂ ವಿ' ಕಿರಣಗಳಿಂದ ಚರ್ಮದಲ್ಲಿರುವ ಜೀವಕೋಶಗಳು, ಕೊಲಾಜೆನ್ ಮತ್ತು ಎಲಾಸ್ಟಿನ್‌ಗೆ ಆಗುವ ಹಾನಿಯೇ ಕಾರಣ.

ಕಣ್ಣ ತುಂಬ ನಿದ್ದೆ ಮಾಡದಿರುವದು

ಕಣ್ಣ ತುಂಬ ನಿದ್ದೆ ಮಾಡದಿರುವದು

ಯೌವ್ವನತೆಯಿಂದ ನಳನಳಿಸಲು ಕಣ್ಣ ತುಂಬ ನಿದ್ದೆ ಬಹಳ ಮುಖ್ಯ. ಚರ್ಮದ ಜೀವಕೋಶಗಳು ನಿದ್ದೆ ಮತ್ತು ಜಾಗ್ರತಾವಸ್ಥೆಯ ಚಕ್ರದಲ್ಲೆ ಕೆಲಸ ಮಾಡುತ್ತವೆ. ರಾತ್ರಿಯ ಹೊತ್ತು ಜೀವಕೋಶಗಳ ದುರಸ್ತಿಯ ಕೆಲಸ ನಡೆಯುತ್ತದೆ.

ಸಾಕಷ್ಟು ಹಣ್ಣು- ಹಂಪಲುಗಳ ಸೇವನೆ ಮಾಡದಿರುವದು

ಸಾಕಷ್ಟು ಹಣ್ಣು- ಹಂಪಲುಗಳ ಸೇವನೆ ಮಾಡದಿರುವದು

ಪ್ರತಿದಿನ ಕನಿಷ್ಠ ಪಕ್ಷ 2-3 ಕಪ್‌ಗಳಷ್ಟು ಹಣ್ಣು,ತರಕಾರಿ ತಿನ್ನಬೇಕು. ಕೆಲವು ಅಧ್ಯಯನಗಳ ಪ್ರಕಾರ ಹಣ್ಣು ತರಕಾರಿ ಭರಿತ ಸಮತೋಲಿತ ಆಹಾರವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಅತಿಯಾದ ಸಿಹಿ ಸೇವನೆ

ಅತಿಯಾದ ಸಿಹಿ ಸೇವನೆ

ಅತಿಯಾದ ಸಿಹಿ ಸೇವನೆ ಬೊಜ್ಜು ತರುವುದಲ್ಲದೆ, ಮುಖದಲ್ಲಿ ಮೊಡವೆ ಕಾಣಿಸಿಕೊಂಡು ಚರ್ಮದ ಕಾಂತಿಯನ್ನು ಕೂಡ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಹಲ್ಲುಗಳು ಕೂಡ ಹಾಳಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಧೂಮಪಾನ ಮಾಡುವುದು

ಧೂಮಪಾನ ಮಾಡುವುದು

ಧೂಮಪಾನ ಮಾಡುವವರಿಗೆ ಕಣ್ಣಿನ ಕೆಳಗೆ ಊತ, ನೆರಿಗೆಗಟ್ಟಿ-ಕಪ್ಪಾದ ತುಟಿ, ಜೋತುಬಿದ್ದ ಕಪೋಲಗಳು ಸಲೀಸಾಗಿ ಬರುತ್ತವೆ. ಧೂಮಪಾನವು ರಕ್ತನಾಳಗಳನ್ನು ಸಂಕುಚಿತಗೊಳಿಸಿ ಚರ್ಮಕ್ಕೆ ಬೇಕಾದ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳ ಪೂರೈಕೆಗೆ ತಡೆಯುಂಟು ಮಾಡುತ್ತದೆ. ಇದರಿಂದ ಚರ್ಮವು ಸುಲಭವಾಗಿ ತಾಜಾತನವನ್ನು ಕಳೆದುಕೊಳ್ಳುತ್ತದೆ.

ಅತಿಯಾದ ಮದ್ಯಪಾನ ಸೇವನೆ

ಅತಿಯಾದ ಮದ್ಯಪಾನ ಸೇವನೆ

ಮದ್ಯಪಾನ ಮಾಡಿದ ಯಾವದೇ ವ್ಯಕ್ತಿ ಮರುದಿನ ಚೆನ್ನಾಗಿ ಕಾಣಲು ಸಾಧ್ಯವಿಲ್ಲ. ಮದ್ಯವು ದೇಹದಲ್ಲಿನ ಆಂಟಿಆಕ್ಸಿಡೆಂಟ್‌ಗಳನ್ನು ಕಡಿಮೆಗೊಳಿಸುತ್ತದೆ, ಅಷ್ಟೆ ಅಲ್ಲದೆ ಚರ್ಮದ ಇನ್‌ಫ್ಲೆಮೇಶನ್‌ಗೆ ಕಾರಣವಾಗುತ್ತದೆ. ಇದರಿಂದ ಚರ್ಮದ ಜೀವಕೋಶಗಳು ನಾಶವಾಗುತ್ತವೆ, ಚರ್ಮದ ಸೌಂದರ್ಯ ನಶಿಸುತ್ತದೆ.

English summary

Common Habits That Can Make You Look Way Older Than You Are

Are you looking way too older than your age? Then, turns out that you're also at fault for this. We agree that growing old is inevitable. But ageing before your time...well, this is something that you need to control by yourself. Turns out that many of the habits that you do or follow every day might be making you look older than your age. In this article, we have listed some of the habits that can make you look older. So, read to know what they are to prevent the ageing signs from consuming you earlier.
Subscribe Newsletter