Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಾರಿದ ದೇಹಕ್ಕೆ ಕಾಂತಿಯುಕ್ತ ತ್ವಚೆಗೆ ಮಜ್ಜಿಗೆಯ ಮೋಡಿ
ಬಿರು ಬೇಸಿಗೆಯ ಸಂದರ್ಭದಲ್ಲಿ ನಮ್ಮ ದೇಹ ತಂಪಿನ ಆಹಾರಗಳತ್ತ ವಾಲುವುದು ಸಹಜವೇ ಆಗಿದೆ. ನೀವು ಎಷ್ಟೇ ಆಹಾರ ಕುಡಿದರೂ ನಿಮ್ಮ ದೇಹಕ್ಕೆ ತಂಪು ಬೇಕು ಎಂದೆನಿಸುತ್ತದೆ. ಅದು ತಂಪು ಪಾನೀಯಗಳಾಗಿರಬಹುದು ಇಲ್ಲಾ ನೀರು ಅಥವಾ ದ್ರವಾಹಾರಗಳಾಗಿರಬಹುದು. ಆದರೆ ಈ ತಂಪಿನ ಪಾನೀಯಗಳು ಕ್ಷಣ ಹೊತ್ತಿಗೆ ಮಾತ್ರವೇ ನಿಮ್ಮ ದೇಹದ ಉಷ್ಣವನ್ನು ಕಡಿಮೆ ಮಾಡುತ್ತವೆಯಾದರೂ ನಂತರ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ
ಅಂತೆಯೇ ಇದರಲ್ಲಿರುವ ರಾಸಾಯನಿಕ ಅಂಶಗಳೂ ಕೂಡ ದೇಹಕ್ಕೆ ಉತ್ತಮವಾದುದಲ್ಲ. ಹಾಗಿದ್ದರೆ ನಿಮ್ಮ ದೇಹದ ಧಗೆಯನ್ನು ತಣಿಸಿ ಬಿರುಬಿಸಿಲಿಗೆ ಬಾಡುವ ನಿಮ್ಮ ತ್ವಚೆಯ ಕಾಂತಿಯನ್ನು ಇಮ್ಮಡಿಗೊಳಿಸುವ ಅತ್ಯುತ್ತಮ ಪಾನೀಯದ ಅದ್ಭುತ ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಅದು ಬೇರಾವುದೂ ಅಲ್ಲದೆ ಹಾಲಿನ ಉತ್ಪನ್ನವೆಂದೆನಿಸಿರುವ ಮಜ್ಜಿಗೆಯಾಗಿದೆ. ಕಡಿಮೆ ಖರ್ಚಿನಲ್ಲಿ ನಿಮ್ಮ ತ್ವಚೆಗೆ ಮಾಂತ್ರಿಕ ಪರಿಣಾಮವನ್ನುಂಟು ಮಾಡುವ ಮಜ್ಜಿಗೆ ಎಲ್ಲಾ ವಯಸ್ಸಿನವರು ಮೆಚ್ಚುವಂತಹ ಪಾನೀಯವಾಗಿದೆ. ಅಮೃತದಂತಹ ಮಜ್ಜಿಗೆಯ ಕರಾಮತ್ತಿಗೆ ತಲೆಬಾಗಲೇಬೇಕು!
ಉತ್ತಮ ನಿದ್ದೆ, ದೇಹಕ್ಕೆ ತಂಪು, ರಾಸಾಯನಿಕಗಳಿಲ್ಲ, ಕೊಬ್ಬಿನಂಶವಿಲ್ಲ ಹೀಗೆ ನಾನಾ ವಿಧದ ಅಂಶಗಳನ್ನೊಳಗೊಂಡು ಮಜ್ಜಿಗೆ ನಿಮ್ಮಲ್ಲಿ ತಾಜಾತನವನ್ನುಂಟು ಮಾಡುತ್ತದೆ. ಹಾಲಿನ ಅಂಶಗಳನ್ನು ಮಜ್ಜಿಗೆ ಒಳಗೊಂಡಿದ್ದು ಲ್ಯಾಕ್ಟಿಕ್ ಏಸಿಡ್ ಇದರಲ್ಲಿದೆ. ಮುಖದಲ್ಲಿನ ಮೃತ ಕೋಶಗಳನ್ನು ನಿವಾರಿಸುವಲ್ಲಿ ಮಜ್ಜಿಗೆಯದು ಎತ್ತಿದ ಕೈಯಾಗಿದೆ. ತ್ವಚೆಯನ್ನು ಲ್ಯಾಕ್ಟಿಕ್ ಏಸಿಡ್ ಶುಭ್ರಗೊಳಿಸುತ್ತದೆ ಅಂತೆಯೇ ಮೃದುತ್ವವನ್ನು ಇದು ನೀಡುತ್ತದೆ. ಹಾಗಿದ್ದರೆ ನಿಮ್ಮ ತ್ವಚೆಗೆ ಇದನ್ನು ಹೇಗೆ ಬಳಸಬೇಕು ಎಂಬುದು ನಿಮ್ಮ ಕುತೂಹಲವಾಗಿದೆ ಎಂದಾದಲ್ಲಿ ಇಲ್ಲಿದೆ ಕೆಲವೊಂದು ಪರಿಹಾರೋಪಾಯಗಳು....

ಮಜ್ಜಿಗೆ ಮತ್ತು ಜೇನು
ತ್ವಚೆಯನ್ನು ಕಾಂತಿಯುಕ್ತಗೊಳಿಸಲು ಮಜ್ಜಿಗೆಗೆ ಜೇನನ್ನು ಬೆರೆಸಿ. ಸನ್ ಟ್ಯಾನ್ ಅನ್ನು ನಿವಾರಿಸಿ ಮುಖಕ್ಕೆ ನೈಸರ್ಗಿಕ ಹೊಳೆವನ್ನು ಇದು ತರುತ್ತದೆ. ಜೇನನ್ನು ಮಜ್ಜಿಗೆಯೊಂದಿಗೆ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ.

ಮಜ್ಜಿಗೆಯೊಂದಿಗೆ ಕಡಲೆಹಿಟ್ಟು ಅರಿಶಿನದ ಪ್ಯಾಕ್
ಮುಖದ ಕಾಂತಿಯನ್ನು ವರ್ಧಿಸಲು ಮಜ್ಜಿಗೆಯೊಂದಿಗೆ ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಬಳಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಂತರ ಸ್ವಲ್ಪ ಹೊತ್ತಿನ ನಂತರ ತೊಳೆದುಕೊಳ್ಳಿ.

ಅರಿಶಿನ ಮತ್ತು ಮಜ್ಜಿಗೆ ಪ್ಯಾಕ್
ಒಂದು ಚಮಚದಷ್ಟು ಮಜ್ಜಿಗೆಗೆ ಚಿಟಿಕೆ ಅರಿಶಿನವನ್ನು ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಅದನ್ನು ತೊಳೆದುಕೊಳ್ಳಿ.

ಮಜ್ಜಿಗೆ ಮತ್ತು ಮೆಂತೆ ಹುಡಿ
ತನ್ನ ಮಾಯಿಶ್ಚರೈಸಿಂಗ್ ಗುಣಗಳಿಂದ ಮಜ್ಜಿಗೆ ಮೆಂತೆ ಹೆಸರುವಾಸಿಯಾಗಿದೆ. ಇದನ್ನು ಮಜ್ಜಿಗೆಯೊಂದಿಗೆ ಸೇರಿಸಿದಾಗ, ಇದು ತ್ವಚೆಯನ್ನು ಶುಭ್ರಗೊಳಿಸುವ ಕಾಂತಿಯುಕ್ತಗೊಳಿಸುವ ಅಂಶವಾಗಿ ಮಾರ್ಪಡುತ್ತದೆ. ಮುಖದಲ್ಲಿನ ಕಲೆ ಮತ್ತು ಮೊಡವೆಗಳನ್ನು ಇದು ದೂರಮಾಡುತ್ತದೆ. ಮಜ್ಜಿಗೆಯೊಂದಿಗೆ ಮೆಂತೆ ಹುಡಿಯನ್ನು ಸೇರಿಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು ನಂತರ ನೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣು ಮಾಸ್ಕ್ ಮತ್ತು ಮಜ್ಜಿಗೆ
ಈ ಪ್ಯಾಕ್ ನಿಮ್ಮ ತ್ವಚೆಯನ್ನು ಶುಭ್ರಗೊಳಿಸುವುದಲ್ಲದೆ ಮುಖಕ್ಕೆ ಮೃದುತ್ವವನ್ನು ಇದು ನೀಡುತ್ತದೆ ಅಂತೆಯೇ ಟ್ಯಾನ್ ಅನ್ನು ನಿವಾರಿಸುವಲ್ಲಿ ಬಾಳೆಹಣ್ಣು ಮಾಸ್ಕ್ ಮತ್ತು ಮಜ್ಜಿಗೆ ಪ್ಯಾಕ್ ಅತ್ಯುತ್ತಮವಾದುದು. ಸ್ವಲ್ಪ ಬಾಳೆಹಣ್ಣಿನ ತುಂಡುಗಳನ್ನು ಮಜ್ಜಿಗೆಯೊಂದಿಗೆ ಕಿವುಚಿಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆದುಕೊಳ್ಳಿ.



Click it and Unblock the Notifications
