Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ತರಕಾರಿ ಸಿಪ್ಪೆ ಬಿಸಾಡುವ ಮುನ್ನ ಎರಡು ಬಾರಿ ಆಲೋಚಿಸಿ!
ಚಳಿಗಾಲದಲ್ಲಿ ಚರ್ಮ ಒಡೆಯುವುದಕ್ಕೆ ಗಾಳಿ ಶುಷ್ಕವಾಗಿರುವುದು ಕಾರಣವಾದರೆ ಬೇಸಿಗೆಯಲ್ಲಿ ಚರ್ಮ ಒಣಗಲು ಬೇರೆಯೇ ಕಾರಣಗಳಿವೆ. ವಿಶೇಷವಾಗಿ ಬೆವರು, ಧೂಳು, ಬಿಸಿಲು ಮೊದಲಾದವು ಚರ್ಮದ ಕೋಮಲತೆಯನ್ನು ಕಸಿದುಕೊಂಡುಬಿಡುತ್ತವೆ. ಇದರ ಆರೈಕೆಗೆ ದುಬಾರಿ ಪ್ರಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇದಕ್ಕೆ ಹಣ ದಂಡ ಮಾಡುವ ಬದಲು ಇದಕ್ಕಿಂತಲೂ ಉತ್ತಮ ಪೋಷಣೆಯನ್ನು ಹಣ್ಣು ಮತ್ತು ತರಕಾರಿಗಳ ಸಿಪ್ಪೆಗಳೇ ನೀಡುತ್ತವೆ ಎಂದು ಚರ್ಮತಜ್ಞರೇ ತಿಳಿಸುತ್ತಾರೆ.
ಹಣ್ಣುಗಳ ತಿರುಳಿನಲ್ಲಿರುವಂತೆಯೇ ಸಿಪ್ಪೆಗಳಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದು ಚರ್ಮಕ್ಕೆ ಗರಿಷ್ಠ ಪೋಷಣೆ ನೀಡಲು ಸಮರ್ಥವಾಗಿವೆ. ಆದ್ದರಿಂದ ಮುಂದಿನ ಬಾರಿ ಕ್ಯಾರೆಟ್ ಅಥವಾ ಆಲುಗಡ್ಡೆಯ ಸಿಪ್ಪೆ ಸುಲಿದ ಬಳಿಕ ಇದರ ಸಿಪ್ಪೆಗಳನ್ನು ಎಸೆಯದೇ ಗಾಳಿಯಾಡದ ಜಾಡಿಯೊಂದರಲ್ಲಿ ಸಂಗ್ರಹಿಸಿ.
ಸಮಯ ಸಿಕ್ಕಿದಾಗ ಇದನ್ನು ಉಪ್ಪುಸೇರಿಸಿದ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಬಾಟಲಿಯಲ್ಲಿ ಸಂಗ್ರಹಿಸಿ. ದಿನದ ಕಾರ್ಯದಿಂದ ಹಿಂದಿರುಗಿದ ಬಳಿಕ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಲೇಪನವನ್ನು ತೆಳುವಾಗಿ ಹಚ್ಚಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವಾದ ದಪ್ಪನಾಗಿ ಲೇಪಿಸಿಕೊಳ್ಳಿ. ಇದರಿಂದ ದಿನದ ಬಿಸಿಲಿನಲ್ಲಿ ಚರ್ಮ ಕಳೆದುಕೊಂಡಿದ್ದ ಕಳೆಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯ ಹಾಗೂ ಕಪ್ಪಗಿದ್ದ ಕಲೆಗಳೂ ನಿಧಾನವಾಗಿ ತಿಳಿಯಾಗತೊಡಗುತ್ತವೆ. ಅಲ್ಲದೇ ಸಹಜವರ್ಣ ಪಡೆಯಲು ನೆರವಾಗಿ ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ವಿವಿಧ ತರಕಾರಿಗಳ ಸಿಪ್ಪೆಗಳು ಲಭ್ಯವಿದ್ದರೂ ನಿಮಗೆ ಸೂಕ್ತವಾದುದನ್ನು ಆರಿಸಿಕೊಳ್ಳಲು ಕೆಳಗಿನ ಸ್ಲೈಡ್ ಷೋ ನೆರವಾಗಲಿದೆ..

ಸೌತೆಕಾಯಿ
ಸೌತೆಕಾಯಿ ಸಿಪ್ಪೆಯ ಲೇಪನದಿಂದ ಚರ್ಮದ ಕುಂದು ಮತ್ತು ಕಲೆಗಳು ನಿವಾರಣೆಯಾಗುತ್ತವೆ. ಅಲ್ಲದೇ ಬಿಸಿಲಿನ ಕಾರಣ ಸೊರಗಿದ್ದ ಚರ್ಮ ಮತ್ತು ಕಣ್ಣುಗಳಿಗೆ ತಂಪು ನೀಡಲೂ ಈ ಲೇಪನ ಅತ್ಯುತ್ತಮವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೌತೆಕಾಯಿ
ಉತ್ತಮ ಪರಿಣಾಮಕ್ಕಾಗಿ ಸಂಜೆ ಮನೆಗೆ ಹಿಂದಿರುಗಿದ ಬಳಿಕ ಸ್ವಚ್ಛವಾಗಿ ತಣ್ಣೀರಿನಲ್ಲಿ ಮುಖ ತೊಳೆದುಕೊಂಡು ಫ್ರಿಜ್ಜಿನಲ್ಲಿಟ್ಟಿದ್ದ ಸಿಪ್ಪೆಯ ಲೇಪನವನ್ನು ದಪ್ಪನಾಗಿ ಮುಖಕ್ಕೆ ಮತ್ತು ಕಣ್ಣುರೆಪ್ಪೆಗಳ ಮೇಲೆ ಲೇಪಿಸಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌತೆಕಾಯಿ ನೆನೆಸಿಟ್ಟ ನೀರನ್ನು ಬಳಸಿದರೆ ಇನ್ನೂ ಉತ್ತಮ.

ಟೊಮೇಟೊ
ಟೊಮೇಟೊ ಬಳಸುವಾಗ ಬರೆಯ ಸಿಪ್ಪೆ ಬಳಸಬೇಕೆಂದಿಲ್ಲ. ಇಡಿಯ ಟೊಮಾಟೋವನ್ನೇ ಬಳಸಬಹುದು. ಏಕೆಂದರೆ ನಾವು ಸಾಮಾನ್ಯವಾಗಿ ಟೊಮಾಟೋವಿನ ಸಿಪ್ಪೆಯನ್ನು ಸುಲಿದು ಎಸೆಯುವುದಿಲ್ಲ. ಬೇಸಿಗೆಯಲ್ಲಿ ಟೊಮೇಟೊ ರಸ ಅತ್ಯುತ್ತಮವಾಗಿದ್ದು ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸೊರಗಿದ ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡುತ್ತವೆ.

ಟೊಮೇಟೊ
ಉತ್ತಮ ಪರಿಣಾಮಕ್ಕಾಗಿ ಟೊಮೇಟೊವಿನ ಬೀಜಗಳನ್ನು ಮತ್ತು ಒಳಗಿನ ದ್ರವವನ್ನು ನಿವಾರಿಸಿ ಕೇವಲ ಸಿಪ್ಪೆ ಮತ್ತು ತಿರುಳನ್ನು ಮಿಕ್ಸಿಯಲ್ಲಿ ಅರೆದು ನಯವಾದ ಲೇಪನ ತಯಾರಿಸಿ ಮುಖಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಇದರಿಂದ ಕಲೆಗಳನ್ನು ನಿವಾರಿಸಲು ಮತ್ತು ವಿಶೇಷವಾಗಿ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮಕ್ಕೆ ಹೆಚ್ಚಿನ ಆರೈಕೆ ದೊರಕಿದಂತಾಗುತ್ತದೆ.

ಆಲುಗಡ್ಡೆ
ಆಲುಗಡ್ಡೆಯ ಸಿಪ್ಪೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಒಂದು ವೇಳೆ ನಿಮ್ಮ ಮುಖದಲ್ಲಿ ಮೊಡವಿಗಳಿದ್ದರೆ ಈ ಲೇಪನದ ಬಳಕೆ ಅತಿ ಸೂಕ್ತವಾಗಿದೆ. ಇದಕ್ಕಾಗಿ ಸಂಜೆ ಮರಳಿದ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಂಡ ಬಳಿಕ ನುಣ್ಣನೆಯ ಲೇಪನವನ್ನು ನಯವಾಗಿ ಮಸಾಜ್ ಮಾಡುತ್ತಾ ತೆಳ್ಳಗೆ ಹಚ್ಚಿ. ಮೊಡವೆಗಳಿರುವಲ್ಲಿ ಹೆಚ್ಚಾಗಿ ಹಚ್ಚಿ ಒತ್ತಡ ನೀಡದೇ ನಯವಾಗಿ ಮಸಾಜ್ ಮಾಡಿ. ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಮೊಡವೆಗಳು ಕಡಿಮೆಯಾಗುವ ಜೊತೆಗೇ ಗಾಯದ ಕಲೆಗಳೂ ನಿಧಾನವಾಗಿ ಮಾಯವಾಗುತ್ತವೆ.

ಗೆಣಸು
ಒಂದು ವೇಳೆ ನಿಮ್ಮ ಚರ್ಮದಲ್ಲಿ ನೆರಿಗೆಗಳು ಮತ್ತು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮೂಡಿದ್ದರೆ ಗೆಣಸಿನ ಸಿಪ್ಪೆಯ ಲೇಪನ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಸಂಜೆ ಮನೆಗೆ ಮರಳಿದ ಬಳಿಕ ಗೆಣಸಿನ ಸಿಪ್ಪೆಯನ್ನು ನುಣ್ಣನೆ ಅರೆದು ಮಾಡಿದ್ದ ಲೇಪನವನ್ನು ದಪ್ಪನಾಗಿ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೆಣಸು
ಕಣ್ಣುಗಳ ಕೆಳಗಿನ ಭಾಗಕ್ಕೆ ಹೆಚ್ಚು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ.

ಲಿಂಬೆ
ಲಿಂಬೆಯ ರಸವನ್ನು ಹಿಂಡಿದ ಬಳಿಕ ಉಳಿದ ಸಿಪ್ಪೆಯನ್ನು ಎಸೆಯಬೇಡಿ, ಬದಲಿಗೆ ಇದನ್ನು ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಈ ಪುಡಿಯಲ್ಲಿ ಚರ್ಮವನ್ನು ಬಿಳಿಚಿಸುವ ಗುಣವಿದೆ. ವಿಶೇಷವಾಗಿ ಬಿಸಿಲಿಗೆ ಕಪ್ಪಾಗಿರುವ ಚರ್ಮವನ್ನು ಪುನಃ ಸಹಜವರ್ಣಕ್ಕೆ ತರಲು ಈ ಪುಡಿ ಉತ್ತಮವಾಗಿದೆ.

ಕ್ಯಾರೆಟ್
ಕ್ಯಾರೆಟ್‌ನ ಸಿಪ್ಪೆಯನ್ನು ಸುಲಿದ ಬಳಿಕ ಎಸೆಯದೇ ಮಿಕ್ಸಿಯಲ್ಲಿ ಅರೆದು ಜಾಡಿಯಲ್ಲಿ ಸಂಗ್ರಹಿಸಿ. ಬಿಸಿಲಿನಿಂದಾಗಿ ತೀರಾ ಒಣಗಿರುವ ಚರ್ಮಕ್ಕೆ ಈ ಲೇಪನ ಅತ್ಯುತ್ತಮ ಆರೈಕೆ ನೀಡುತ್ತದೆ.

ಕ್ಯಾರೆಟ್
ವಿಶೇಷವಾಗಿ ಚರ್ಮ ಹೆಚ್ಚು ಒಣಗಿರುವ ಕಡೆ ಅಂದಗೆ ಕೆನ್ನೆಯ ಮೇಲ್ಭಾಗ, ಹುಬ್ಬು, ಹಣೆಯ ಅಂಚು ಇತ್ಯಾದಿಗಳಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡುವ ಜೊತೆಗೇ ಸಹಜವರ್ಣ ಪಡೆಯಲೂ ಸಹಾಯ ಮಾಡುತ್ತದೆ.



Click it and Unblock the Notifications