Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹರಳೆಣ್ಣೆ ಇರುವಾಗ ಸೌಂದರ್ಯದ ಸಮಸ್ಯೆಗೆ ಭಯವೇಕೆ?
ಚರ್ಮದ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಆತಂಕದ ವಾತಾವರಣ ಎಲ್ಲರಲ್ಲಿ ಮನೆಮಾಡುತ್ತಿದೆ. ಈ ಸಮಸ್ಯೆಗೆ ಅನೇಕ ಕಾರಣಗಳಿದ್ದು, ಸೇವಿಸುವ ಆಹಾರ, ವಾತಾವರಣ, ಮಾನಸಿಕ ಒತ್ತಡ ಇತ್ಯಾದಿಗಳಿಂದ ಚರ್ಮದ ಚರ್ಮದ ಸಮಸ್ಯೆಯು ಉಲ್ಬಣಗೊಳ್ಳುತ್ತಿದೆ. ಹಾಗಾಗಿ ಈ ಸಮಸ್ಯೆಗೆ ಒಳ್ಳೆಯ ಉಪಾಯವೊಂದನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಅದುವೇ ಹರಳೆಣ್ಣೆಯ ಬಳಕೆ.
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಹರಳೆಣ್ಣೆಯು ಇದ್ದೇ ಇರುತ್ತದೆ. ಹರಳೆಣ್ಣೆಯ ಉಪಯೋಗದ ಬಗ್ಗೆ ಅನೇಕರಿಗೆ ತಿಳಿದಿದ್ದರೂ ಸಹ ನಿಮ್ಮ ಚರ್ಮದ ಆರೈಕೆಯನ್ನು ಇದರಿಂದ ಮಾಡಬಹುದು ಎಂಬುದು ತಿಳಿದಿಲ್ಲ. ಈ ಲೇಖನದಲ್ಲಿ ಹರಳೆಣ್ಣೆಯನ್ನು ಉಪಯೋಗಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ 5 ಸುಲಭ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ. . ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಒಂದೇ ರಾಮಬಾಣ- ಹರಳೆಣ್ಣೆ
ಮೊಡವೆಗಳ ನಿವಾರಣೆಗೆ

ವಿವಿಧ ರೀತಿಯ ಚರ್ಮಕ್ಕೆ ತೇವಾಂಶ ನೀಡಿ
ನಿಮ್ಮ ಒಣಗಿದ ಚರ್ಮಕ್ಕೆ ಆರೈಕೆ ಮಾಡಲು ಮತ್ತು ತೇವಾಂಶ ನೀಡಲು ಹರಳೆಣ್ಣೆ ಮತ್ತು ಎಳ್ಳೆಣ್ಣೆಯನ್ನು ಮಿಶ್ರಣ ಮಾಡಿಕೊಂಡು ನಿಮ್ಮ ಚರ್ಮದ ಭಾಗಕ್ಕೆ ತಿಕ್ಕಿಕೊಳ್ಳಿ. ಅದೇ ರೀತಿಯಲ್ಲಿ ಸಹಜವಾದ ಚರ್ಮಕ್ಕೆ ದ್ರಾಕ್ಷಿ ಬೀಜದ ಎಣ್ಣೆ ಮತ್ತು ಹರಳೆಣ್ಣೆಯ ಮಿಶ್ರಣ ಹೆಚ್ಚು ಉಪಯುಕ್ತ. ಅಲ್ಲದೆ ಜಿಡ್ಡಿನ ಚರ್ಮಕ್ಕೆ ಜೊಜೊಬಾ ಎಣ್ಣೆ ಮಿಶ್ರಣ ನೆರವಾಗುತ್ತದೆ. ಹರಳೆಣ್ಣೆಯಲ್ಲಿದೆ ಹಲವು ಪ್ರಯೋಜನ
ಗೆರೆಯ ಗುರುತುಗಳನ್ನು ತಿಳಿಗೊಳಿಸಿ
ನಿಮ್ಮ ಚರ್ಮದ ಮೇಲಿರುವ ಚರ್ಮದ ಗೆರೆಯ ಕಲೆಗಳನ್ನು ನಿವಾರಿಸಲು ಹರಳೆಣ್ಣೆಯನ್ನು ದಿನಕ್ಕೆ ಎರಡು ಬಾರಿ ತಿಕ್ಕಿಕೊಳ್ಳಿ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಒಂದು ತಿಂಗಳಲ್ಲಿ ನಿಮಗೆ ಫಲಿತಾಂಶ ದೊರೆಯುತ್ತದೆ.
ನವೆಯುಕ್ತ ಒಣ ಚರ್ಮವನ್ನು ನಿವಾರಿಸಿ
ಹರಳೆಣ್ಣೆಯ ಜೊತೆ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ನವೆಯ ಜಾಗಕ್ಕೆ ಹಚ್ಚಿಕೊಳ್ಳಿ. ಸುಮಾರು 2 ರಿಂದ 3 ನಿಮಿಷಗಳವರೆಗೆ ನಯವಾಗಿ ತಿಕ್ಕಿಕೊಳ್ಳಿ. ನಂತರ 20 ನಿಮಿಷ ಹಾಗೆಯೇ ಬಿಡಿ. ತದನಂತರ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಒಣಗಿದ ನವೆಯಾದ ಚರ್ಮಕ್ಕೆ ಹೆಚ್ಚು ಉಪಯುಕ್ತ.
ತುಟಿಗಳಿಗೆ ತೇವಾಂಶ ನೀಡಿ
ಹರಳೆಣ್ಣೆಯನ್ನು ಉಪಯೋಗಿಸಿ ನಿಮ್ಮ ತುಟಿಗಳಿಗೆ ತೇವಾಂಶ ನೀಡಿ, ತುಟಿಯಲ್ಲಿನ ಸತ್ತ ಜೀವಕೋಶಗಳನ್ನು ಹೊರಹಾಕಿ. ಇದನ್ನು ರಾತ್ರಿ ಹೊತ್ತು ಅನುಸರಿಸಿದರೆ ಹೆಚ್ಚು ನೆರವಾಗುತ್ತದೆ. ನಿಮ್ಮ ತುಟಿಗಳಿಗೆ ಹರಳೆಣ್ಣೆ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿಕೊಂಡು ನಯವಾಗಿ ತಿಕ್ಕಿಕೊಳ್ಳಿ. ಬೆಳಗ್ಗೆ ಎದ್ದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.



Click it and Unblock the Notifications













