Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಫಳ ಫಳ ಹೊಳೆಯುವ ಮುಖದ ಅಂದಕ್ಕೆ ಸರಳ ಟಿಪ್ಸ್
ಭಾರತೀಯರಾದ ನಮ್ಮೆಲ್ಲರ ಮೈಬಣ್ಣವೂ ಒಂದೇ ತೆರನಾಗಿಲ್ಲ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಉತ್ತರ ಭಾರತದವರು ಹೆಚ್ಚಾಗಿ ಬೆಳ್ಳಗಿದ್ದರೆ ದಕ್ಷಿಣ ಮತ್ತು ಕರಾವಳಿ ಜನತೆ ಗೋಧಿಬಣ್ಣ ಮತ್ತು ಗಾಢವರ್ಣ ಪಡೆದಿರುತ್ತಾರೆ. ಬಿಸಿಲಿನ ಝಳ ಮತ್ತು ಉಪ್ಪಿನಂಶ ಹೆಚ್ಚಾಗಿರುವ ತೀರದ ಊರುಗಳಲ್ಲಿನ ಜನತೆ ಗೋಧಿಬಣ್ಣ ಹೊಂದಿದ್ದರೂ ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗ ಗಾಢವರ್ಣ ಪಡೆದಿರುತ್ತದೆ.
ಸಾಮಾನ್ಯವಾಗಿ ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾವಯೋಲೆಟ್ ಪ್ರಭಾವಳಿ ಇದಕ್ಕೆ ನೇರಕಾರಣವಾದರೆ ಆ ಪ್ರದೇಶದ ವಾತಾವರಣ ಹಾಗೂ ಗಾಳಿಯಲ್ಲಿರುವ ಉಪ್ಪಿನಂಶ ಇನ್ನೊಂದು ಕಾರಣ. ಹೀಗೆ ಅನೈಚ್ಛಿಕವಾಗಿ ಮುಖದ ಕಾಂತಿ, ಹಾಗೂ ದೇಹದ ಚರ್ಮ ಕಪ್ಪುಗೊಂಡವರು ತಮ್ಮ ನೈಸರ್ಗಿಕ ಬಣ್ಣವನ್ನು ಪಡೆಯಲು ಹಲವು ಚಿಕಿತ್ಸೆಗಳನ್ನು ಮಾಡಿ, ಕೊನೆಗೆ ಯಾವುದೇ ಫಲಿತಂಶಗಳು ಸಿಗದೇ, ಪೆಚ್ಚು ಮೋರೆ ಹಾಕಿ ಕುಳಿತುಕೊಳ್ಳುವ ಸರದಿ ನಿಮ್ಮದಾಗುತ್ತದೆ ಅಲ್ಲವೇ..? ಚಿಂತಿಸದಿರಿ ಬನ್ನಿ, ಇಂದು ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದನ್ನು ನೀಡುತ್ತಿದ್ದೇವೆ ಮುಂದೆ ಓದಿ...

ನೆನೆಸಿದ ಬಾದಾಮಿ
ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಪನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.

ಪುದೀನಾ ಹಾಗೂ ಮೊಸರು
ಕೆಲವು ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಅರೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಂಡು, ಫೇಸ್ ಪ್ಯಾಕ್ ರೀತಿ ಮಾಡಿಕೊಂಡು, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುದರ ಜೊತೆಗೆ, ಮುಖ ಇನ್ನಷ್ಟು ಕಾಂತಿಯುಕ್ತಗೊಳ್ಳುತ್ತದೆ.

ತುಳಸಿ ಎಲೆಯ ಚಿಕಿತ್ಸೆ
ಹಬೆಯಾಡುತ್ತಿರುವ ಬಿಸಿನೀರಿಗೆ ಸುಮಾರು ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಕೈಯಲ್ಲಿಯೇ ಸಾಕಷ್ಟು ಹಿಚುಕಿ ಸೇರಿಸಿ ಕೊಂಚ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ, ಮೊಡವೆಗಳಿಗೆ ಕಾರಣವಾಗುವ ಚರ್ಮದಡಿಯ ಕೊಳಕನ್ನೂ ಮೂಲದಿಂದ ಕಿತ್ತೆಸೆಯುತ್ತದೆ.

ಕಡಲೆಹಿಟ್ಟು ಹಾಗೂ ತುಳಸಿಎಲೆ
ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಅನ್ನ ಬಸಿದ ನೀರು, ಮೊಸರು ಮತ್ತು ರೋಸ್ ವಾಟರ್
ನಾಲ್ಕು ದೊಡ್ಡಚಮಚ ಅನ್ನಬಸಿದ ನೀರು (ಬೆಳ್ತಿಗೆ ಅನ್ನ), ಒಂದು ದೊಡ್ಡ ಚಮಚ ಮೊಸರು ಮತ್ತು ಕೆಲವು ಹನಿ ಗುಲಾಬಿನೀರನ್ನು ಸೇರಿಸಿ ಹದವಾಗಿ ಮಿಶ್ರಣ ಮಾಡಿಕೊಳ್ಳಿ. ಈ ಲೇಪನವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷಗಳ ಕಾಲ ಮಸಾಜ್ ಮುಂದುವರೆಸಿ. ಇದು ಕ್ಷಿಪ್ರವಾಗಿ ಮುಖದ ಊತವನ್ನು ನಿವಾರಿಸುತ್ತದೆ ಹಾಗೂ ಮುಖದ ಸೌಂದರ್ಯವನ್ನು ವೃದ್ದಿಸುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವುದು ಅನಿವಾರ್ಯವಾಗಿದ್ದು ಹೆಚ್ಚಿನ ಸಮಯ ಇಲ್ಲದಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಸೌತೆ, ಲಿಂಬೆ ಮತ್ತು ಮೊಟ್ಟೆಯ ಬಿಳಿಭಾಗದ ಫೇಸ್ ಪ್ಯಾಕ್
ಒಂದು ಇಡಿಯ ಸೌತೆಕಾಯಿಯ ಸಿಪ್ಪೆ ಸುಲಿದು ಬೀಜ ನಿವಾರಿಸಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ಲಿಂಬೆಯ ರಸ ಮತ್ತು ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಬೆರೆಸಿ ನಯವಾದ ಮಿಶ್ರಣ ತಯಾರಿಸಿ. ತಾಜಾ ಇದ್ದಂತೆಯೇ ಈಗತಾನೇ ಕೊಂಚ ಬಿಸಿನೀರಿನಲ್ಲಿ ತೊಳೆದಿರುವ ಮುಖದ ಮೇಲೆ ಏಕಪ್ರಕಾರವಾಗಿ ಹಚ್ಚಿ. ಕಣ್ಣುಗಳ ಒಳಗೆ ಹೋಗದಂತೆ ಎಚ್ಚರವಹಿಸಿ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪವನ್ನು ಫ್ರಿಜ್ಜಿನಲ್ಲಿಟ್ಟರೂ ಒಂದು ದಿನದ ಹೆಚ್ಚು ಕಾಲ ಬಳಸಲು ಸಾಧ್ಯವಿಲ್ಲದ ಕಾರಣ ಎರಡನೆಯ ದಿನ ಅಗತ್ಯವಿದ್ದರೆ ಹೊಸದಾಗಿಯೇ ತಯಾರಿಸಿಕೊಳ್ಳಬೇಕು.



Click it and Unblock the Notifications
