Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ತ್ವಚೆಯ ಆರೈಕೆಗೆ ದಿನನಿತ್ಯ ಬಳಸುವ ಪದಾರ್ಥಗಳೇ ಸಾಕು
ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಈ ಉತ್ಪನ್ನಗಳು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆಯಷ್ಟೇ. ಹಾಗಾಗಿ ಮುಖದ ಸೌಂದರ್ಯವನ್ನು ಹೆಚ್ಚಿಸಲು ಶಾಶ್ವತ ಪರಿಹಾರವೆಂದರೆ ನೈಸರ್ಗಿಕ ಪರಿಹಾರದ ವಿಧಾನ. ಹೌದು, ಮನೆಗಳಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ನಿಮ್ಮ ಸೌಂದರ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಬಹುದು. ಇದು ನಿಜಕ್ಕೂ ಹೆಚ್ಚು ಉಪಕಾರಿಯಾಗಿದೆ. ಈ ಬಗ್ಗೆ ಹೆಚ್ಚು ಜನ ಅಲಕ್ಷಿಸುತ್ತಾರೆ.
ನೈಸರ್ಗಿಕ ವಿಧಾನಗಳನ್ನು ಒಮ್ಮೆ ಬಳಸಿ ನೋಡಿ. ಅದರ ಫಲಿತಾಂಶ ನಿಮಗೇ ತಿಳಿಯುತ್ತದೆ. ಹೌದು, ಚರ್ಮದ ಆರೈಕೆ ಮತ್ತು ಪೋಷಣೆಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅದು ಎಲ್ಲರ ಜವಾಬ್ದಾರಿ ಕೂಡ. ಇದಕ್ಕೆ ನೆರವಾಗಲು ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಅನೇಕ ಸಾಮಗ್ರಿಗಳು. ಇದರಿಂದ ನಿಮ್ಮ ಸೌಂದರ್ಯವು ಕಾಂತಿಯುತಗೊಳಿಸಿ ಒಳಗಿನಿಂದ ತೇವಾಂಶವನ್ನು ನೀಡುತ್ತದೆ. ಚರ್ಮದ ಉತ್ತಮ ಆರೈಕೆಗೆ ಈ ಪದಾರ್ಥಗಳು ಹೆಚ್ಚು ಉಪಕಾರಿ. ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆಯಲು(exfoliate) ನೆರವು ನೀಡುವ ಕೆಲವು ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ...

ಬಾದಾಮಿ ಪೇಸ್ಟ್
ಬಾದಾಮಿಯಲ್ಲಿ ವಿಟಮಿನ್-ಇ ಅಂಶವು ಹೇರಳವಾಗಿದ್ದು, ಇದು ಚರ್ಮದ ಕಾಂತಿಯನ್ನು ಹೆಚ್ಚಿಸಲು ಹೆಚ್ಚು ಸಹಕಾರಿ. ಇದರಲ್ಲಿರುವ ವಿಟಮಿನ್-ಡಿ ಸತ್ವವು ಚರ್ಮಕ್ಕೆ ಒಳಗಿನಿಂದ ತೇವಾಂಶ ನೀಡಿ ಹೆಚ್ಚಿನ ಆರೈಕೆಗೆ ನೆರವಾಗುತ್ತದೆ. ಬಾದಾಮಿ ಪುಡಿಗೆ ಕ್ರಮವಾಗಿ ಲಿಂಬೆರಸ, ಒಂದು ಚಿಟಿಕೆ ಕಡಲೆ ಹಿಟ್ಟು ಮತ್ತು ಒಂದು ಚಮಚ ತಂಪಾದ ಹಾಲನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಚರ್ಮದ ಭಾಗಕ್ಕೆ ನಯವಾಗಿ ತಿಕ್ಕಿ. ಈ ಪ್ರಕ್ರಿಯೆಯನ್ನು ಕ್ರಮವಾಗಿ ಅನುಸರಿಸಿದರೆ ನಿಮ್ಮ ಚರ್ಮದ ಕಾಂತಿಯು ಇಮ್ಮಡಿಯಾಗುವುದರಲ್ಲಿ ಸಂಶಯವೇ ಇಲ್ಲ.

ವಾಲ್ ನಟ್
ಈ ಬೀಜಗಳ ಅನೇಕ ಸ್ಕ್ರಬ್ ಶೈಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿರುವ ಒರಟಾದ ಲಕ್ಷಣವು ಮತ್ತು ಬೀಜದ ಸತ್ವವು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆಯಲು ಹೆಚ್ಚು ನೆರವಾಗುತ್ತದೆ. ಅಲ್ಲದೆ ಇದರಲ್ಲಿ ಬೇಕಾಗುವ ಅವಶ್ಯಕ ಮೇದಾಮ್ಲ ಸತ್ವವಿದ್ದು, ಚರ್ಮವನ್ನು ಮೃದುಗೊಳಿಸಲು ನಿಜಕ್ಕೂ ಹೆಚ್ಚು ಸಹಕಾರಿ.

ಹೆಸರು ಕಾಳು
ಹೆಸರು ಕಾಳುಗಳಲ್ಲಿ ಯಥೇಚ್ಛವಾಗಿ ವಿಟಮಿನ್-ಎ ಮತ್ತು ಸಿ ಸತ್ವವು ನಿಮ್ಮ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡಿ ಸತ್ತ ಜೀವಕೋಶಗಳನ್ನು ತೆಗೆಯಲು ಸಹಕಾರಿಯಾಗಿದೆ. ಈ ಕಾಳುಗಳ ಪೇಸ್ಟ್ ಗೆ ಜೇನು ಮತ್ತು ಬಾದಾಮಿ ತೈಲವನ್ನು ಬೆರೆಸಿ ನಿಮ್ಮ ಚರ್ಮಕ್ಕೆ ನಯವಾಗಿ ತಿಕ್ಕಿಕೊಂಡಲ್ಲಿ ನಿಮ್ಮ ಚರ್ಮವು ಮೃದುಗೊಂಡು ಹೆಚ್ಚು ನಾಜೂಕಾಗುತ್ತದೆ.

ಅಕ್ಕಿ
ಅಕ್ಕಿಯಲ್ಲಿ ವಿಟಮಿನ್-ಇ, ಕೆ ಮತ್ತು ಬಿ6 ಸತ್ವಗಳು ಯಥೇಚ್ಛವಾಗಿದ್ದು, ಅಕ್ಕಿಯು ಸತ್ತ ಜೀವಕೋಶಗಳನ್ನು ಹೊರತೆಗೆಯಲು ನಿಜಕ್ಕೂ ನೆರವಾಗುತ್ತದೆ. ಅಕ್ಕಿ ಹಿಟ್ಟಿಗೆ ಸ್ವಲ್ಪ ಜೇನನ್ನು ಬೆರೆಸಿ ನಿಮ್ಮ ತ್ವಚೆ ಮತ್ತು ದೇಹದ ಭಾಗಕ್ಕೆ ನಯವಾಗಿ ತಿಕ್ಕಿಕೊಳ್ಳಿ. ಈ ಮಿಶ್ರಣವು ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆಯಲು ಹೆಚ್ಚು ಪರಿಣಾಮಕಾರಿಯಾಗಿದ್ದು, ಚರ್ಮದ ಧೂಳು ಮತ್ತು ಸತ್ತ ಜೀವಕೋಶಗಳನ್ನು ಹೊರತೆಗೆಯಲು ಹೆಚ್ಚು ನೆರವಾಗುತ್ತದೆ.

ಕಡಲುಪ್ಪು
ಕಡಲುಪ್ಪಿನಲ್ಲಿರುವ ಖನಿಜ ಸತ್ವಗಳು ಚರ್ಮದ ಒಳಗಿನಿಂದ ತೇವಾಂಶ ನೀಡಿ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ. ಕಡಲುಪ್ಪನ್ನು ಆಲಿವ್ ಅಥವಾ ಬಾದಾಮಿ ತೈಲದೊಂದಿಗೆ ಬೆರೆಸಿ ನಿಮ್ಮ ಒಣಚರ್ಮದ ಮೇಲೆ ಚೆನ್ನಾಗಿ ತಿಕ್ಕಿಕೊಳ್ಳಿ. ಉಪ್ಪಿನಲ್ಲಿರುವ ವಿಶಿಷ್ಟ ಗುಣವು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆದು ರಕ್ತ ಸಂಚಾರವನ್ನು ಸುಗಮಗೊಳಿಸಿ, ಮಿಶ್ರಣ ಮಾಡಿರುವ ತೈಲದ ಅಂಶಗಳು ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಚರ್ಮವನ್ನು ಹೆಚ್ಚು ಹಿತಗೊಳಿಸಿ ನಾಜೂಕುಗೊಳಿಸುತ್ತದೆ.



Click it and Unblock the Notifications











