Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಣ್ಣೀರಿನಿಂದ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!
ಬೆಳಿಗ್ಗೆದ್ದ ತಕ್ಷಣ ಕನ್ನಡಿಯಲ್ಲಿ ಮುಖವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿ. ಕೊಂಚವೇ ಊದಿಕೊಂಡಿರುವಂತೆ ತೋರುತ್ತದೆ ಅಲ್ಲವೇ? ರಾತ್ರಿಯ ವಿಶ್ರಾಂತಿಯ ವೇಳೆ ನಮ್ಮ ಚರ್ಮದ ಸೂಕ್ಷ್ಮರಂಧ್ರಗಳು ವಿಶಾಲವಾಗಿ ತೆರೆದು ಜೀವಕೋಶಗಳ ಬೆಳವಣಿಗೆಗೆ ಸ್ಥಳಾವಕಾಶ ಮಾಡಿಕೊಡುತ್ತದೆ. ಆದ್ದರಿಂದಲೇ ಮುಖ ಕೊಂಚವೇ ಊದಿಕೊಂಡಂತೆ ಕಾಣುತ್ತದೆ. ಕೊಂಚ ಹೊತ್ತಿನ ಬಳಿಕ ಇದು ಸಾಮಾನ್ಯವಾಗಬೇಕು.
ಇದಕ್ಕೆ ಅತ್ಯುತ್ತಮವೆಂದರೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳುವುದು. ಬಿಸಿನೀರಿನಿಂದ ತೊಳೆದುಕೊಂಡರೆ ಇದಕ್ಕೆ ವಿರುದ್ಧವಾದ ಪರಿಣಾಮವಾಗುತ್ತದೆ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳುವುದರಿಂದ, ಅದರಲ್ಲೂ ಬೆಳಿಗ್ಗೆದ್ದ ಬಳಿಕ ತೊಳೆದುಕೊಳ್ಳುವುದರಿಂದ ಮುಖದ ಸೌಂದರ್ಯ, ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ಊದಿಕೊಂಡ ಚರ್ಮ ಮೊದಲಿನಂತಾಗುತ್ತದೆ. ಬನ್ನಿ, ಈ ವಿಧಾನ ಇನ್ನೂ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ನೋಡೋಣ:

* ತಣ್ಣೀರಿನಿಂದ ಬೆಳಿಗ್ಗೆ ಮುಖ ತೊಳೆದುಕೊಳ್ಳುವ ಮೂಲಕ ರಾತ್ರಿಯ ವಿಶ್ರಾಂತಿಯ ವೇಳೆ ತೆರೆದಿದ್ದ ಸೂಕ್ಷ್ಮರಂಧ್ರಗಳೆಲ್ಲಾ ಮುಚ್ಚುತ್ತವೆ. ಇದು ಕಣ್ಣುಗಳಿಗೂ ಆರಾಮವನ್ನು ನೀಡುತ್ತದೆ.
* ಚರ್ಮದಲ್ಲಿ ನೆರಿಗೆ ಮೂಡದೇ ಇರಲು ತಣ್ಣೀರಿಗಿಂತ ಇನ್ನೊಂದು ನೆರಿಗೆನಿವಾರಕವಿಲ್ಲ. ಅಷ್ಟೇ ಅಲ್ಲ ಚರ್ಮದ ಸೆಳೆತ ಹೆಚ್ಚಿಸಿ ತಾರುಣ್ಯ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಪ್ರಥಮವಾಗಿ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ವಯಸ್ಸಾಗುವುದನ್ನೂ ನಿಧಾನಗೊಳಿಸಬಹುದು.
* ಸೂರ್ಯನ ಪ್ರಖರ ಕಿರಣಗಳ ಪ್ರಭಾವವನ್ನು ಕಡಿಮೆಗೊಳಿಸಬಹುದು. ಏಕೆಂದರೆ ರಾತ್ರಿ ತೆರೆದುಕೊಂಡಿದ್ದ ಸೂಕ್ಷ್ಮರಂಧ್ರಗಳು ಬಿಗಿಯಾಗಿ ಮುಚ್ಚಿದ್ದ ಕಾರಣ ಸೂರ್ಯನ ಕಿರಣಗಳಿಗೆ ಚರ್ಮದ ಸೂಕ್ಷ್ಮಸಂವೇದಿ ಒಳಪದರಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ತನ್ಮೂಲಕ ಚರ್ಮ ಹಾನಿಯಿಂದ ರಕ್ಷಿಸಲ್ಪಡುತ್ತದೆ.
*ಬಿಸಿನೀರಿಗಿಂತಲೂ ತಣ್ಣೀರೇ ಉತ್ತಮ
ಬಿಸಿನೀರಿನಿಂದ ಮುಖ ತೊಳೆದುಕೊಳ್ಳುವಾಗ ಕೊಂಚ ಆಹ್ಲಾದಕರ ಎನಿಸಿದರೂ ಮುಖದ ಚರ್ಮಕ್ಕೆ ತಣ್ಣೀರೇ ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಮುಖದ ಚರ್ಮ ಅತ್ಯಂತ ಸೂಕ್ಷ್ಮಸಂವೇದಿಯಾಗಿದ್ದು ತಾಪಮಾನಕ್ಕೆ ಅತಿಹೆಚ್ಚಾಗಿ ಸ್ಪಂದಿಸುತ್ತದೆ. ಬಿಸಿನೀರಿನಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಹೆಚ್ಚು ಸ್ಪಂದಿಸಿ ಹೆಚ್ಚಾಗಿ ತೆರೆದುಕೊಳ್ಳುತ್ತವೆ. ದೊಡ್ಡದಾಗಿ ತೆರೆದ ರಂಧ್ರಗಳು ಇನ್ನೂ ದೊಡ್ಡ ಧೂಳಿನ ಕಣಗಳಿಗೆ ಆಹ್ವಾನ ನೀಡುತ್ತದೆ.
ಜೊತೆಗೇ ಹೆಚ್ಚಿನ ಪ್ರಮಾಣದ ಮತ್ತು ಆಳವಾಗಿ ಕುಳಿತುಕೊಳ್ಳಲು ನಾವೇ ರತ್ನಗಂಬಳಿ ಹಾಸಿ ಬೇಡದ ಅತಿಥಿಗಳನ್ನು ಕರೆದಂತಾಗುತ್ತದೆ. ಚರ್ಮ ಸಡಿಲವಾಗಿ ನೆರಿಗೆಗಳು ಶೀಘ್ರವಾಗಿ ಆವರಿಸುತ್ತವೆ. ಬದಲಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಈ ರಂಧ್ರಗಳು ಇನ್ನಷ್ಟು ಕಿರಿದಾಗಿ ಧೂಳಿನ ಕಣಗಳ ಪ್ರವೇಶಕ್ಕೆ ಪ್ರವೇಶವಿಲ್ಲ ಎಂಬ ಫಲಕ ತೋರಿಸುತ್ತವೆ. ಇದರಿಂದ ಚರ್ಮ ತನ್ನ ಸಹಜ ಸೆಳೆತವನ್ನು ಪಡೆದು ನೆರಿಗೆಗಳಿಂದ ಮುಕ್ತವಾಗಿರುತ್ತದೆ.



Click it and Unblock the Notifications

