Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸಹಜ ಸೌಂದರ್ಯಕ್ಕಾಗಿ ಒಂದಿಷ್ಟು ಸರಳೋಪಾಯಗಳು
ಆರೋಗ್ಯಯುತ, ಕಲೆಯಿಲ್ಲದ ಮತ್ತು ಗೌರವರ್ಣದ ತ್ವಚೆಯನ್ನು ಹೊಂದುವುದು ಎಲ್ಲರ ಅಪೇಕ್ಷೆ. ಆದರೆ ಎಲ್ಲರಿಗೂ ನಿಸರ್ಗ ಸರಿಸಮನಾದ ತ್ವಚೆಯನ್ನು ನೀಡಿರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಾವೇ ಸರಿಯಾದ ಆರೈಕೆ ನೀಡದೇ ಇಂದಿನ ಈ ಸ್ಥಿತಿಗೆ ಕಾರಣರಾಗಿದ್ದೇವೆ. ನಮ್ಮ ಚರ್ಮದ ಬಣ್ಣವನ್ನು ಮೆಲನಿನ್ ಎಂಬ ವರ್ಣದ್ರವ್ಯ ನೀಡುತ್ತಿದ್ದು ನಿಸರ್ಗ ನೀಡಿದ ಸಹಜಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ.
ಆದರೆ ಬಿಸಿಲು ಮತ್ತಿತರ ಕಾರಣಗಳಿಂದ ಬಿಸಿಲಿಗೆ ಒಡ್ಡಿದ ಭಾಗ ಮಾತ್ರ ಸಹಜವರ್ಣಕ್ಕಿಂತಲೂ ಹೆಚ್ಚು ಗಾಢವಾಗಿರುತ್ತದೆ. ಇದನ್ನು ಕೈತೋಳುಗಳ ಅಂಚುಗಳಿರುವಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಈ ಪರಿಯಾಗಿ ಗಾಢಗೊಂಡ ವರ್ಣವನ್ನು ಕೊಂಚ ಪ್ರಯತ್ನಪಟ್ಟರೆ ಸರಿಸುಮಾರು ಸಹಜವರ್ಣದತ್ತ ತರಬಹುದು. ಈ ಸತ್ಯವನ್ನು ಮರಿಮಾಚಿ ಹಲವಾರು ಸಂಸ್ಥೆಗಳು ಆರೇ ವಾರದಲ್ಲಿ ಗೌರವರ್ಣ ಪಡೆಯಿರಿ ಮೊದಲಾದ ಕನಸನ್ನು ಮೂಡಿಸಿ ತಮ್ಮ ಜೇಬನ್ನು ಭರ್ತಿಮಾಡಿಕೊಳ್ಳುತ್ತವೆ.
ಈ ಪ್ರಸಾಧನಗಳು ಸಹಜವರ್ಣವನ್ನೇ ಪಡೆಯಲು ನೆರವಾಗುವುದೇ ಹೊರತು ನಮ್ಮ ಚರ್ಮದ ವರ್ಣವನ್ನು ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ ಜಾಹೀರಾತುಗಳು ಸುಳ್ಳು ಆಮಿಷಕ್ಕೆ ಬಲಿಯಾಗಿ ಚರ್ಮವನ್ನು ಇನ್ನಷ್ಟು ಹಾನಿಗೆ ಒಳಪಡಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ದಕ್ಕುವ ಮತ್ತು ಸುರಕ್ಷಿತವಾದ ಸಾಮಾಗ್ರಿಗಳನ್ನು ಬಳಸಿ ಚರ್ಮ ಸಹಜವರ್ಣ ಪಡೆಯುವಂತೆ ಮಾಡಬಹುದು. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯವಾದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಬಾದಾಮಿ ಮತ್ತು ಹಾಲು
ಬಾದಾಮಿಯನ್ನು ಹಾಲಿನಲ್ಲಿ ಅರೆದು ಪಡೆದ ಲೇಪನವೂ ಸಹಜವರ್ಣವನ್ನು ಪಡೆಯಲು ಸಮರ್ಥವಾಗಿದೆ. ಇದು ಭಾರತದಲ್ಲಿ ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಂತಹ ವಿಧಾನವಾಗಿದ್ದು ಕಣ್ಣುಗಳ ಸುತ್ತಲ ಕಪ್ಪುಕೆಲೆಗಳನ್ನು ಮತ್ತು ಮೊಡವೆಗಳು ಒಣಗಿದ ಬಳಿಕ ಉಳಿದ ಕಲೆಗಳನ್ನು ನಿವಾರಿಸಲೂ ಸಾಧ್ಯವಾಗುತ್ತದೆ. ಇದಕ್ಕಾಗಿ ಚಪ್ಪಟೆ ಕಲ್ಲಿನ ಮೇಲೆ ಕೊಂಚ ಹಾಲಿನೊಂದಿಗೆ ತೇದುವುದು ಉತ್ತಮ ವಿಧಾನವಾಗಿದೆ. ಸಮಯವಿಲ್ಲದಿದ್ದರೆ ಚಿಕ್ಕದಾಗಿ ಪುಡಿಮಾಡಿಕೊಂಡು ಹಾಲಿನೊಂದಿಗೆ ಮಿಶ್ರಣ ಮಾಡಿಯೂ ಬಳಸಬಹುದು. ಈ ಲೇಪನವನ್ನು ಮುಖ ಮತ್ತು ಕಪ್ಪಗಾದ ಭಾಗಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಶೀಘ್ರವೇ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು
ಬಿಸಿಲಿಗೆ ಕಪ್ಪಗಾಗಿರುವ ಭಾಗಗಳನ್ನು ತ್ವರಿತವಾಗಿ ಸಹಜವರ್ಣದತ್ತ ತರಲು ಈ ಜೋಡಿ ಸಮರ್ಥವಾಗಿದೆ. ಇದು ಎಲ್ಲಾ ವಿಧದ ಚರ್ಮದವರಿಗೆ ಸೂಕ್ತವಾಗಿದೆ. ಮೊದಲು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಅರೆದು ಹಿಂಡಿ ಎರಡು ದೊಡ್ಡ ಚಮಚ ರಸವನ್ನು ಸಂಗ್ರಹಿಸಿ. ಇದನ್ನು ಸಮಪ್ರಮಾಣದಲ್ಲಿ ಟೊಮಾಟೋ ಹಣ್ಣಿನ ತಿರುಳಿನಲ್ಲಿ (ಬೀಜ ಮತ್ತು ಸಿಪ್ಪೆ ನಿವಾರಿಸಿದ ತಿರುಳನ್ನು ಅರೆದು ಬಳಸಿ) ಮಿಶ್ರಣ ಮಾಡಿ ಬಿಸಿಲಿಗೆ ಕಪ್ಪಗಾಗಿರುವ ಅಷ್ಟೂ ಭಾಗಗಳಿಗೆ ತಳುವಾಗಿ ಹಚ್ಚಿ. ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

ಜೇನು
ಹಲವರು ಕೂದಲು ಬೆಳ್ಳಗಾಗುತ್ತದೆ ಎಂಬ ಕಾರಣ ನೀಡಿ ಜೇನನ್ನು ಮುಟ್ಟಲೂ ಹೆದರುತ್ತಾರೆ. ಆದರೆ ಚರ್ಮದ ಸಹಜ ಗೌರವರ್ಣ ಪಡೆಯಲು ಜೇನು ಸಹಾ ಅತ್ಯುತ್ತಮವಾಗಿದೆ. ಅಲ್ಲದೇ ಇದು ಚರ್ಮಕ್ಕೆ ನೀಡುವ ಪೋಷಣೆಯ ಕಾರಣ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಮೊಡವೆಗಳೂ ದೂರವಾಗುತ್ತವೆ. ಅಲ್ಲದೇ ಹಳೆಯ ಗೀರು ಮತ್ತು ಕಲೆಯ ಗುರುತುಗಳೂ ನಿವಾರಣೆಯಾಗುತ್ತವೆ. ನಿತ್ಯವೂ ಕೊಂಚವೇ ಪ್ರಮಾಣದಲ್ಲಿ ಕಲೆಗಳ ಮೇಲೆ ಮತ್ತು ಬಿಸಿಲಿನಿಂದ ಕಪ್ಪಗಾಗಿರುವ ಭಾಗಗಳಿಗೆ ಹಚ್ಚುವ ಮೂಲಕ ಸಹಜವರ್ಣವನ್ನು ಪಡೆಯಬಹುದು. ಇದಕ್ಕಾಗಿ ಜೇನಿನ ಕೆಲವು ಹನಿಗಳನ್ನು ಮುಖ, ಭುಜ, ಕುತ್ತಿಗೆಗಳಿಗೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕೂದಲಿರುವ ಭಾಗಕ್ಕೆ ಜೇನನ್ನು ನೇರವಾಗಿ ಹಚ್ಚುವ ಬದಲು ಕೊಂಚ ಹಾಲಿನೊಂದಿಗೆ ಮಿಶ್ರಣ ಮಾಡಿ ಬಳಸಬಹುದು.

ಲೋಳೆಸರ
ಆಲೋವೆರಾ ಎಂದೇ ಹೆಚ್ಚು ಜನಪ್ರಿಯವಾಗಿರುವ ಲೋಳೆಸರ ವಿವಿಧ ಚರ್ಮ ವ್ಯಾಧಿ ಮತ್ತು ಕೂದಲ ಪೋಷಣೆಗೆ ಸಿದ್ಧ ಔಷಧಿಯಾಗಿದೆ. ಚರ್ಮದ ಹಳೆಯ ಕಲೆ ನಿವಾರಣೆ, ತ್ವಚೆಯ ಕಾಂತಿ ಹೆಚ್ಚಿಸಲು ಮತ್ತು ಬಿಸಿಲಿಗೆ ಕಪ್ಪಗಾಗಿದ್ದ ವರ್ಣವನ್ನು ಸಹಜವರ್ಣದತ್ತ ತರಲು ಲೋಳೆಸರ ಅದ್ಭುತವಾದ ನೈಸರ್ಗಿಕ ಕೊಡುಗೆಯಾಗಿದೆ. ಇದಕ್ಕಾಗಿ ಲೋಳೆಸರದ ಕೋಡೊಂದನ್ನು ಮುರಿದು ಹಿಂಡಿ ರಸ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿದ್ದ ಭಾಗಗಳ ಮೇಲೆ ಹಚ್ಚಿ ಕೊಂಚ ನಯವಾಗಿ ಮಸಾಜ್ ಮಾಡಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ. ಒಂದೇ ತಿಂಗಳಲ್ಲಿ ಇದರ ಪರಿಣಾಮವನ್ನು ಕಂಡು ಬೆರಗಾಗುವಿರಿ.

ಪಪ್ಪಾಯಿ ಹಣ್ಣು
ಚರ್ಮದ ಆರೈಕೆಗೆ ಪಪ್ಪಾಯಿ ಹಣ್ಣು ಸಹಾ ಅದ್ಭುತ ಪರಿಣಾಮಗಳನ್ನು ನೀಡಬಲ್ಲದು. ಇದರಲ್ಲಿರುವ ಪೋಷಕಾಂಶಗಳು ಕಲೆ ಮತ್ತು ಇತರ ಹಳೆಯ ಗುರುತುಗಳನ್ನು ಅಳಿಸಿ ಸಹಜವರ್ಣ ಮತ್ತು ಕಾಂತಿ ಪಡೆಯಲು ನೆರವಾಗುತ್ತದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಪೊಪ್ಪಾಯಿಯ ತಿರುಳನ್ನು ಕಿವುಚಿ ಲೇಪನದಂತೆ ಮಾಡಿಕೊಳ್ಳಿ. ಈ ಲೇಪನವನ್ನು ಬಿಸಿಲಿಗೆ ಒಡ್ಡಿದ್ದ ಅಷ್ಟೂ ಭಾಗಗಳಿಗೆ ತೆಳುವಾಗಿ ಹಚ್ಚಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅರಿಶಿನ
ಅರಿಶಿನದ ಪುಡಿಯ ಲೇಪನವೂ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮ ಉತ್ತಮ ಆರೋಗ್ಯ ಪಡೆಯಲು ನೆರವಾಗುತ್ತದೆ. ಇದರ ಪರಿಣಾಮಗಳನ್ನು ಒಂದೇ ಬಾರಿ ಹಚ್ಚುವ ಮೂಲಕ ಪಡೆಯುವ ಕಾರಣಕ್ಕೇ ವಧುವಿನ ಸಿಂಗಾರದಲ್ಲಿ ಅರಿಶಿನಕ್ಕೆ ಪ್ರಮುಖ ಸ್ಥಾನವಿದೆ. ಉತ್ತಮ ಪರಿಣಾಮಕ್ಕಾಗಿ ಒಣಗಿದ ಅರಿಶಿನದ ಕೊಂಬನ್ನು ಕೊಂಚ ಹಾಲಿನೊಂದಿಗೆ ತೇದಿ ಹಚ್ಚಬೇಕು. ಸಮಯವಿಲ್ಲದಿದ್ದರೆ ಅರಿಶಿನದ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಬಿಸಿಲಿಗೆ ಒಡ್ಡಿದ್ದ ಎಲ್ಲಾ ಭಾಗಗಳಿಗೆ ತೆಳುವಾಗಿ ಹಚ್ಚಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅರಿಶಿನ ಪುಡಿ ಕೊಳ್ಳುವಾಗ ಉತ್ತಮ ಗುಣಮಟ್ಟದ ಪುಡಿಯನ್ನೇ ಕೊಳ್ಳಿ. ಅಗ್ಗದ ಪುಡಿಯಲ್ಲಿ ಕಳಪೆ ಮತ್ತು ಕಲಬೆರಕೆಯಾಗಿರುವ ಸಾಧ್ಯತೆಯಿದ್ದು ಇದು ಚರ್ಮಕ್ಕೆ ವಿರುದ್ಧವಾದ ಪರಿಣಾಮವನ್ನೇ ನೀಡಬಹುದು. ಆದ್ದರಿಂದ ಕೊಂಚ ಸಮಯ ವ್ಯಯವಾದರೂ ಕೊಂಬನ್ನು ತೇದಿ ಹಚ್ಚುವುದೇ ಉತ್ತಮ ವಿಧಾನವಾಗಿದೆ.

ಮೊಸರು
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಸಹಾ ಚರ್ಮ ಸಹಜವರ್ಣ ಪಡೆಯಲು ಸಕ್ಷಮವಾಗಿದೆ. ಇದಕ್ಕೆ ಮೊಸರನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೇ ಸಹಜಕಾಂತಿಯನ್ನು ಪಡೆಯಲೂ ನೆರವಾಗುತ್ತದೆ.

ಕೆಲವು ಸಲಹೆಗಳು
* ಯಾವುದೇ ವಿಧಾನವನ್ನು ಮೊದಲ ಬಾರಿಗೆ ಪ್ರಯೋಗಿಸುವುದಾದರೆ ಮೊದಲು ಇದು ನಿಮಗೆ ಅಲರ್ಜಿಕಾರಕವಲ್ಲ ಎಂಬುದನ್ನು ಖಚಿತಪಡಿಸಲು ದೇಹದ ಬೇರೊಂದು ಭಾಗದ ಚರ್ಮಕ್ಕೆ ಹಚ್ಚಿ ಪರೀಕ್ಷಿಸಿಕೊಳ್ಳಿ. ಅಲ್ಲಿ ಯಾವುದೇ ಉರಿ ಅಥವಾ ಗುಳ್ಳೆಗಳು ಏಳದಿದ್ದರೆ ಮಾತ್ರ ಮುಖಕ್ಕೆ ಹಚ್ಚುವ ಧೈರ್ಯ ಮಾಡಿ.
* ಸಾಮಾನ್ಯವಾಗಿ ಲೇಪನವನ್ನು ಹಚ್ಚಿ ಒಣಗಿಸುವ ಸಮಯದಲ್ಲಿ ನೊಣಗಳು ವಿಪರೀತವಾದ ಕಾಟ ನೀಡುತ್ತವೆ. ಇದನ್ನು ತಡೆಯಲು ಆ ಸಮಯದ ಅವಧಿಯಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡಿ.

ಕೆಲವು ಸಲಹೆಗಳು
* ಎಣ್ಣೆ ಚರ್ಮದವರು ಈ ವಿಧಾನವನ್ನು ಅನುಸರಿಸುವ ಮೊದಲು ಎಣ್ಣೆಪಸೆಯನ್ನು ನಿವಾರಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಲಿಂಬೆರಸ ಸೇರಿಸಿದ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಸ್ವಚ್ಛಬಟ್ಟೆಯಿಂದ ಒರೆಸಿಕೊಳ್ಳಿ.
* ಹಳೆಯ ಕಲೆಗಳು ನಿವಾರಣೆಯಾಗಲು ಸುಮಾರು ಆರು ತಿಂಗಳಾದರೂ ಬೇಕು. ದಟ್ಟವಾಗಿದ್ದರೆ ವರ್ಷಕ್ಕೂ ಹೆಚ್ಚಿನ ಅವಧಿ ಹಿಡಿಯಬಹುದು. ಆದ್ದರಿಂದ ಈ ಕಲೆಗಳ ಬಗ್ಗೆ ತಾಳ್ಮೆ ಅಗತ್ಯ.



Click it and Unblock the Notifications











