Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಕಮ್ಮಿಯಾಗುವಾಗ ತ್ವಚೆ ಆರೈಕೆ ಬಗ್ಗೆ ಎಚ್ಚರ!
ಪರಿಪೂರ್ಣ ದೇಹ ಸೌಂದರ್ಯಕ್ಕಾಗಿ ಮಹಿಳೆಯರು ಯಾವತ್ತೂ ಗಟ್ಟಿಯಾದ ಬಯಕೆ ಹೊಂದಿರುತ್ತಾರೆ.ದೇಹದಲ್ಲಿರುವ ಹೆಚ್ಚಿನ ತೂಕವನ್ನು ಕೊಬ್ಬನ್ನು ತೊಲಗಿಸಿಕೊಳ್ಳುವುದು ಪರಿಪೂರ್ಣ ದೇಹದ ಮೊದಲ ಹಂತ.
ಆದರೆ ತೂಕ ಇಳಿಸಿಕೊಳ್ಳುವುದಕ್ಕೆ ಬಹಳ ಪ್ರಯಾಸಪಟ್ಟ ನಂತರ ತ್ವಚೆ ಸುಕ್ಕುಗಟ್ಟುವುದು, ತ್ವಚೆ ಸಡಿಲವಾಗಿ ಸ್ಟ್ರೆಚ್ ಮಾರ್ಕ್ಸ್ ಹಾಗೂ ನೆರಿಗೆಗಳು ಗೋಚರಿಸಬಹುದು. ಹೀಗಾಗಿ ತೂಕ ಇಳಿಸಿಕೊಂಡ ನಂತರ ಚರ್ಮವನ್ನು ಬಿಗಿಗೊಳಿಸಲು ಇಲ್ಲಿವೆ ಸೂತ್ರಗಳು:

1. ತ್ವಚೆಯನ್ನು ಸ್ಕ್ರಬ್ ಮಾಡಿ
ಸಡಿಲವಾದ ಚರ್ಮವನ್ನು ಉಜ್ಜಿ ಸ್ವಚ್ಚಗೊಳಿಸಿ. ಚರ್ಮವನ್ನು ಉಜ್ಜುವುದರಿಂದ ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ, ಸ್ಥಿತಿಸ್ಥಾಪನ ಶಕ್ತಿಯ ಜೊತೆಗೆ ಚರ್ಮದ ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ. ದಿನವೊಂದಕ್ಕೆ ಎರಡರಿಂದ-ಮೂರು ಬಾರಿ ಈ ರೀತಿ ಮಾಡಿ.

2. ಮಸಾಜ್
ಉತ್ತಮವಾದ ಪಥ್ಯ ಸಹಿತ ಮಸಾಜ್ ಚರ್ಮವನ್ನು ಬಿಗಿಗೊಳಿಸಲು ಸಹಕಾರಿ.

3. ಸ್ಪಾ
ಒಳ್ಳೆಯ ಸ್ಪಾ ಹುಡುಕಿ ಮತ್ತವರು ನೀಡುವ ಆಫರ್ ಗಳ ಮೇಲೆ ಕಣ್ಣಾಡಿಸಿ. ವಿಶೇಷವಾದ ಸ್ಪಾ ಚಿಕಿತ್ಸೆಗಳಾದ ರ್ಯಾಪ್ಸ್, ಮಾಸ್ಕ್ಸ್, ಕಸ್ಟಮಸೈಡ್ ಬಾತ್ ನೇರವಾಗಿ ಚರ್ಮವನ್ನು ಬಿಗಿಗೊಳಿಸುತ್ತವೆ.

4. ಕೊಲೆಜಿನ್ ಇರುವ ಕ್ರೀಮ್
ಕೊಲೆಜಿನ್ ಕ್ರೀಮ್ ಗಳನ್ನು ಬಳಸಿ. ಅವು ಚರ್ಮ ಬಿಗಿಗೊಳಿಸುತ್ತವೆ. ಇವುಗಳಿಂದ ಆಗೋ ಉಪಯೋಗಗಳನ್ನು ತಿಳಿದುಕೊಳ್ಳೋಕೆ ತ್ವಚೆ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

5. ನೀರು
ಬಹಳ ನೀರು ಕುಡಿಯಿರಿ. ನೀರು ದೇಹದಲ್ಲಿ ತಂಪಾದ ಅಂಶ ಹೆಚ್ಚಿಸಿ ಚರ್ಮದ ಕಾಂತಿಯನ್ನು ಹೊಳೆಯುವಂತೆ ಮಾಡುತ್ತದೆ.

6. ತ್ವಚೆ ಆರರೈಕೆ ಮಾಡು ಹಣ್ಣು-ತರಕಾರಿಗಳು
ಹತ್ತು ಹಲವು ತರಕಾರಿ ಹಣ್ಣುಗಳನ್ನು ದಿನದಲ್ಲಿ 4-5 ಬಾರಿ ಸೇವಿಸಿ. ಇದಿರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.

7. ಸನ್ ಸ್ಕ್ರೀನ್
ಸೂರ್ಯನ ಬಿಸಿಲಿನಿಂದ ಆದಷ್ಟು ದೂರವಿರಿ. ಸನ್ ಸ್ಕ್ರೀನ್ ಮತ್ತು ಸೂರ್ಯನ ಬಿಸಿಲಿನಿಂದ ರಕ್ಷಣೆ ಪಡೆಯುವ ಸಾಮಾಗ್ರಿಗಳನ್ನು ಬಳಸಿ.

8. ಸಲ್ಫೇಟ್ ಇರುವ ಸೌಂದರ್ಯವರ್ಧಕಗಳಿಂದ ದೂರವಿರಿ
ಸೋಪು, ಶಾಂಪೂ, ಬಾಡಿ ವಾಷ್ ಮುಂತಾದವುಗಳಲ್ಲಿ ಸಲ್ಪೇಟ್ ಇಲ್ಲದಂತೆ ನೋಡಿಕೊಳ್ಳಿ. ಸಲ್ಪೇಟ್ ಗಳು ಒಣ ಒರಟು ಚರ್ಮವನ್ನು ನೀಡುತ್ತವೆ. ಹೀಗಾಗಿ ಚರ್ಮ ಬಿಗಿಗೊಳಿಸುವುದಾದರೆ ಸಲ್ಪೇಟ್ ದೂರವಿರಿಸಿ. ಸಲ್ಪೇಟ್ ಇಲ್ಲದ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ.

9. ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು
ಬಿಸಿ ನೀರಿನ ಸ್ನಾನದಿಂದ ಆದಷ್ಟು ದೂರವಿರಿ. ಬಿಸಿ ನೀರು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಉಗುರು ಬೆಚ್ಚಗಿನ ನೀರು ಚರ್ಮವನ್ನು ಹಸಿ ಹಸಿಯಾಗಿಡುತ್ತದೆ.

10. ಕ್ಲೋರೀನ್ ನೀರು
ಈಜೋದಕ್ಕೆ ಮನಸ್ಸು ಪದೇ ಪದೇ ಬಯಸಿದರೆ ಕ್ಲೋರಿನ ಬಗ್ಗೆ ಎಚ್ಚರಿಕೆಯಿಂದಿರಿ. ಸ್ವಿಮ್ಮಿಂಗ್ ಪೂಲ್ ನಿಂದ ಹೊರ ಬಂದ ತಕ್ಷಣ ಸ್ನಾನ ಮಾಡಿ.

11. ಉಸಿರಾಟದ ವ್ಯಾಯಾಮ
ಹೊಟ್ಟೆ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡಿ.

12. ಏರೋಬಿಕ್ಸ್
ನಿರಂತರವಾದ ವ್ಯಾಯಾಮಗಳನ್ನು ಮಾಡಿ. ಏರೋಬಿಕ್ಸ್ ಮತ್ತು ಕಾರ್ಡಿಯೋ ವ್ಯಾಯಾಮಗಳು ಉತ್ತಮ.

13.ಜಿಮ್
ಬಿಗಿಯಾದ ಚರ್ಮಕ್ಕೆ ಬೇಕಾದ ವ್ಯಾಯಾಮವನ್ನು ನಿಮ್ಮ ಜಿಮ್ ಮಾಸ್ಟರ್ ಬಳಿ ವಿಚಾರಿಸಿಕೊಳ್ಳಿ.

14. ಪ್ರೋಟೀನ್
ಉತ್ತಮ ಗುಣಮಟ್ಟದ ಪ್ರೋಟೀನ್ ಸೇವಿಸಿ.



Click it and Unblock the Notifications
