Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಗೆ ತಕ್ಕಂತೆ ಆರೈಕೆ ಹೆಚ್ಚಿಸುವುದು ಸೌಂದರ್ಯ

ಸಾಮಾನ್ಯ ತ್ವಚೆ ಆರೈಕೆ:
1. 1 ಕ್ಯಾರೆಟ್ ತುರಿ, ಅರ್ಧ ಮೊಟ್ಟೆಯ ಬಿಳಿಭಾಗ, ಸ್ವಲ್ಪ ಹಾಲು ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಮುಖಕ್ಕೆ 15 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
2. 8 ಬಾದಾಮಿ ರಾತ್ರಿ ನೀರಲ್ಲಿ ತೊಳೆದು ನೆನೆಸಿ ಅದೇ ನೀರಲ್ಲಿ ಗುಲಾಬಿ ದಳಗಳೊಂದಿಗೆ ಅರೆಯಬೇಕು. ಇದಕ್ಕೆ ಶುದ್ಧ ಪಚ್ಚ ಕರ್ಪೂರ ಚಿಟಿಕೆಯಷ್ಟು ಬೆರೆಸಿ ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜು ಮಾಡಿ 20 ನಿಮಿಷದ ಬಳಿಕ ಮತ್ತೆ ಮಸಾಜು ಮಾಡಿ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
3. 15 - 20 ತುಳಸೀ ಎಲೆ, 15 ಕರಿಬೇವು, 15 - 20 ಪುದೀನಾ ಎಲೆಗಳನ್ನು ಅರೆದು, ಸೌತೆಕಾಯಿಯ ರಸ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಸಾಮಾನ್ಯ ತ್ವಚೆ ಮೇಲೆ ಉತ್ತಮವಾದ ಪರಿಣಾಮ ಬೀಳುತ್ತದೆ.
4. ಬಾಳೆಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮತ್ತು ಈ ಹಣ್ಣುಗಳ ಜ್ಯೂಸ್ ಕುಡಿದರೆ ಮುಖದ ಹೊಳಪು ಹೆಚ್ಚುವುದು.
5. ಸಾಮಾನ್ಯ ತ್ವಚೆ ಇರುವವರು ಎಳನೀರಿಗೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಕ್ಲೆನ್ಸ್ ಮಾಡಿದರೆ ಚರ್ಮ ತಾಜಾ ಆಗಿ ಹೊಳೆಯುತ್ತದೆ.
ಎಣ್ಣೆ ತ್ವಚೆಯ ಆರೈಕೆ:
1. ರಕ್ತಚಂದನವನ್ನು ನೀರಿನಲ್ಲಿ ತೇದಿ ಅದಕ್ಕೆ 4 ಚಮಚ ರೋಸ್ ವಾಟರ್ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದ ಜಿಡ್ಡು ನಿವಾರಣೆಯಾಗುತ್ತದೆ.
2. ಮುಲ್ತಾನಿಮಿಟ್ಟಿ ( ಫುಲ್ಲರ್ ಅರ್ತ್ ) ಪೌಡರನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಮಾಡಿ ಮುಖ, ಕತ್ತು, ಕೈಕಾಲುಗಳಿಗೆ ಹಚ್ಚಿ 19-20 ನಿಮಿಷ ಬಿಟ್ಟು ತೊಳೆದರೆ ಚರ್ಮದ ಹೊಳಪು ಹೆಚ್ಚುತ್ತದೆ.
3. ಸೇಬು ಹಣ್ಣಿನ ತಿರುಳಿಗೆ ಒಂದು ನಿಂಬೆಹಣ್ಣಿನ ರಸ ಬೆರೆಸಿ ಮುಖಕ್ಕೆ ಲೇಪಿಸಿದರೆ ಒಳ್ಳೆಯದು.
4. ಮುಖ ತುಂಬಾ ಜಿಡ್ಡಾಗಿದ್ದರೆ 2 ಚಮಚ ರೋಸ್ ವಾಟರ್ ಅನ್ನು 4 ಚಮಚ ಐಸ್ ನೀರಿಗೆ ಬೆರೆಸಿ ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಶುಚಿಗೊಳಿಸಿದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
5. ಅಧಿಕ ಜಿಡ್ಡಿನಂಶ ಇರುವವರು ಪುದೀನಾ ರಸ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆದರೆ ಎಣ್ಣೆ ತ್ವಚೆ ನಿವಾರಣೆಯಾಗುವುದು.
ಶುಷ್ಕ ತ್ವಚೆಯ ಆರೈಕೆ
1. ಸೀಬೆ ಹಣ್ಣಿನ ತಿರುಳಿಗೆ ಜೇನು ಬೆರೆಸಿ ಮಿಶ್ರ ಮಾಡಿ ಈ ಲೇಪನವನ್ನು ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಒಣ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ.
2. ಹಾಲಿನ ಕೆನೆಯನ್ನು ಹಚ್ಚಿದರೆ ಮುಖ ನುಣಪನ್ನು ಪಡೆಯುತ್ತದೆ. ಹಾಲಿನ ಕೆನೆಗೆ ಜೇನು ತುಪ್ಪ ಬೇಕಾದರೂ ಸೇರಿಸಬಹುದು.
3. ಬಾಳೆಹಣ್ಣಿಗೆ ಸ್ವಲ್ಪ ಮೊಸರು ಮಿಶ್ರ ಮಾಡಿ ಮುಖಕ್ಕೆ ದಪ್ಪವಾಗಿ ಹಚ್ಚಿದರೆ ಒಳ್ಳೆಯದು.
4. ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡುವುದು ತುಂಬಾ ಒಳ್ಳೆಯದು.
5. ತ್ವಚೆ ಸ್ವಲ್ಪ ಬಾಡಿದಾಗ ತಾಜಾ ಹಾಲಿನ ಕೆನೆಗೆ ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ಹಚ್ಚಿ 1 ಗಂಟೆಯ ಬಳಿಕ ಸ್ನಾನ ಮಾಡಿದರೆ ಚರ್ಮ ಹೊಳಪನ್ನು ಪಡೆಯುತ್ತದೆ.



Click it and Unblock the Notifications
