Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ನಿಮ್ಮ ತ್ವಚೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇಷ್ಟೆಲ್ಲಾ ಮಾಡಿದರೂ ಕೆಲವೊಮ್ಮೆ, ಮೊಡವೆ, ಕಲೆ, ಬ್ಲ್ಯಾಕ್ ಹೆಡ್ಸ್, ಮುಖದಲ್ಲಿ ರಂಧ್ರ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ತ್ವಚೆ ಆರೈಕೆ ಕಡೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಇಲ್ಲಿ ಕೆಲವೊಂದು ಆರ್ಯುವೇದದ ವಿಧಾನದಿಂದ ತ್ವಚೆ ಆರೈಕೆ ಹೇಗೆ ಎಂದು ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸಿದರೆ ಆರೋಗ್ಯಕರವಾದ ಆಕರ್ಷಕವಾದ ತ್ವಚೆ ನಿಮ್ಮದಾಗುವುದು.
ನೆರಿಗೆ ತಡೆಗಟ್ಟಲು: ಪ್ರತಿದಿನ ಹರಳೆಣ್ಣೆಯಿಂದ ಮುಖ ಹಾಗೂ ಕುತ್ತಿಗೆಯ ಭಾಗವನ್ನು ಮಸಾಜ್ ಮಾಡಿದರೆ ತ್ವಚೆ ಮೃದುವಾಗುವುದು ಹಾಗೂ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ.
ಮುಖದಲ್ಲಿ ರಂಧ್ರ ಮರೆ ಮಾಚಲು: ಪ್ರತಿದಿನ ಸ್ವಲ್ಪ ಹಾಲಿಗೆ ಹತ್ತಿಯನ್ನು ಅದ್ದಿ, ಆ ಹತ್ತಿಯಿಂದ ಮುಖವನ್ನು ಉಜ್ಜಬೇಕು. ಈ ರೀತಿ ಪ್ರತಿದಿನ ಕ್ಲೆನ್ಸ್ ಮಾಡಿದರೆ ಮುಖದಲ್ಲಿ ರಂಧ್ರಗಳು ಎದ್ದು ಕಾಣುವುದಿಲ್ಲ.
ಮಾಯಿಶ್ಚರೈಸರ್: ತ್ವಚೆ ಒಣಗದಿರಲು ಸ್ವಲ್ಪ ಮೊಸರಿಗೆ ಒಂದು ಚಮಚ ನಿಂಬೆ ರಸ, ಒಂದು ಚಮಚ ಕಿತ್ತಳೆ ರಸ ಹಾಕಿ ಮಿಶ್ರಣ ಮಾಡಿ ಮೈಗೆ ಹಚ್ಚಿ ಅರ್ಧಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ವಾರದಲ್ಲಿ 2 ಬರಿ ಮಾಡಿದರೂ ತ್ವಚೆ ಒಣಗುವ ಸಮಸ್ಯೆ ಕಂಡು ಬರುವುದಿಲ್ಲ.
ಸ್ಕಿನ್ ಕಂಡೀಷನರ್: 2 ಚಮಚ ಹಾಲಿನ ಕೆನೆಗೆ 1 ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. ನಂತರ ಒದ್ದೆ ಟವಲ್ ನಿಂದ ಮುಖ ಒರೆಸಬೇಕು. ಈ ರೀತಿ ಮಾಡಿದರೆ ಮುಖದ ಹೊಳಪು ಹೆಚ್ಚುವುದು.
ಕಪ್ಪು ಕಲೆ ನಿವಾರಣೆಗೆ: ಹಸಿ ಆಲೂಗೆಡ್ಡೆಯನ್ನು ವೃತ್ತಾಕಾರವಾಗಿ ಕತ್ತರಿಸಿ ಅದರಿಂದ ಮುಖವನ್ನು ಉಜ್ಜಿದರೆ ಕಪ್ಪು ಕಲೆಗಳು ಕಡಿಮೆಯಾಗುವುದು.
ತ್ವಚೆ ಮೃದುವಾಗಲು: ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ತ್ವಚೆ ಮೃದುವಾಗುವುದು.
ಮುಖದ ರೋಮ ಹೋಗಲಾಡಿಸಲು: ಎಳ್ಳೆಣ್ಣೆಗೆ ಅರಿಶಿಣ ಪುಡಿ ಹಾಗೂ ಗೋಧಿ ಪುಡಿಯನ್ನು ಸಮ ಪ್ರಮಾಣದಲ್ಲಿ ಹಾಕಿ ಮುಖಕ್ಕೆ ತಿಕ್ಕಿದರೆ ಮುಖದ ರೋಮ ಕಡಿಮೆಯಾಗುವುದು.



Click it and Unblock the Notifications
