Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಾರುಣ್ಯದ ಚೆಲುವನ್ನು ಕಾಪಾಡಲು 5 ಮಂತ್ರ!
ಯಾರು ತಾನೆ ತಾರುಣ್ಯದ ಚೆಲುವನ್ನು ಕಳೆದುಕೊಳ್ಳಲು ಇಷ್ಟಪಡುತ್ತಾರೆ? ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ನೆರಿಗೆ ಬೀಳಲಾರಂಭಿಸುತ್ತದೆ, ತ್ವಚೆಯ ಹೊಳಪು ಕಳೆ ಕುಂದುವುದು. ಇನ್ನು ಕೆಲವರಿಗೆ ಅಧಿಕ ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ನಿಜವಾದ ವಯಸ್ಸಗಿಂತ ಅಧಿಕ ವಯಸ್ಸಾದವರಂತೆ ಕಾಣುವುದು. ಈ ರೀತಿ ಅಕಾಲಿಕ ಮುಪ್ಪು ಬಂದಾಗ ವಯಸ್ಸನ್ನು ಮರೆಮಾಚಲು ಕ್ರೀಮ್, ಮೇಕಪ್ ನ ಮೊರೆ ಹೋಗುತ್ತೇವೆ.
ಜೀವನದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಗುಣವಿದ್ದರೆ ಅನೇಕ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಮಂತ್ರವನ್ನು ತ್ವಚೆ ರಕ್ಷಣೆಗೆ ಕೂಡ ಅಳವಡಿಬಹುದು. ಈ ಲೇಖನದಲ್ಲಿ ಕೆಲವೊಂದು ಪಾನೀಯಗಳ ಬಗ್ಗೆ ಹೇಳಲಾಗಿದೆ. ಅವುಗಳು ನಿಮ್ಮ ತ್ವಚೆ ರಕ್ಷಣೆಗೆ ಕ್ರೀಮ್ ಗಿಂತ ತುಂಬಾ ಪರಿಣಾಮಕಾರಿಗಳಾಗಿವೆ.

ನೀರು:
ತುಂಬಾ ಜನರು ದಾಹವಾದರೆ ಮಾತ್ರ ನೀರು ಕುಡಿಯುತ್ತಾರೆ. ಮಳೆ ಹಾಗೂ ಚಳಿಗಾಲದಲ್ಲಿ ಬಾಯಾರಿಕೆಯಾಗವುದು ಕಡಿಮೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ, ಬಾಯಾರಿಕೆ ಆಗಲಿ, ಆಗದಿರಲಿ ದಿನಕ್ಕೆ 8 ಗ್ಲಾಸ್ ನೀರು ಕುಡಿದರೆ ಮಾತ್ರ ದೇಹ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು.

ಗ್ರೀನ್ ಟೀ:
ಗ್ರೀನ್ ಟೀ ದೇಹದ ಬೊಜ್ಜನ್ನು ಕರಗಿಸುವುದರ ಜೊತೆಗೆ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಇದರಲ್ಲಿ antioxidants ಅಂಶ ಅಧಿಕವಿರುವುದರಿಂದ ತ್ವಚೆಗೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು. ಇದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ದಪ್ಪವಾಗಿ ಕಾಣುವುದು.

ಬಿಸಿ ಕೋಕಾ:
ಕೋಕಾ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು (ಮಿತಿಯಲ್ಲಿ ತಿನ್ನಬೇಕು). ಅದರಲ್ಲೂ ಹಾಟ್ ಕೋಕಾ ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಬೇಗನೆ ತಾರುಣ್ಯದ ಚೆಲುವು ಕಡಿಮೆಯಾಗುವುದಿಲ್ಲವೆಂದು ಅಧ್ಯಯನದಿಂದ ಕೂಡ ಸಾಬೀತಾಗಿದೆ.

ಕೆಂಪು ವೈನ್:
ಕೆಂಪು ವೈನ್ ಅನ್ನು ಮಿತಿಯಲ್ಲಿ ತೆಗೆದುಕೊಂಡರೆ ಹೃದಯದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ತ್ವಚೆ ಹೊಳಪನ್ನು ಕೂಡ ಹೆಚ್ಚಿಸುತ್ತದೆ.

ಟೊಮೆಟೊ ಜ್ಯೂಸ್:
ಇದರಲ್ಲಿರುವ ಲೈಕೊಪೆನೆ ಅಂಶವು ತ್ವಚೆ ಸಡಿಲವಾಗುವುದನ್ನು ತಡೆಗಟ್ಟಿ, ಕಲೆ ರಹಿತ ತ್ವಚೆಯನ್ನು ನೀಡುತ್ತದೆ. ಟೊಮೆಟೊ ರಸವನ್ನು ಹಾಗೇ ಮುಖಕ್ಕೆ ಕೂಡ ಉಜ್ಜಬಹುದು. ಪ್ರತಿದಿನ ಒಂದು ಲೋಟ ಟೊಮೆಟೊ ಜ್ಯೂಸ್ ಅನ್ನು ಒಂದು ಒಂದು ತಿಂಗಳವರೆಗೆ ಕುಡಿದು ನೋಡಿ. ತ್ವಚೆಯಲ್ಲಿ ಹೊಳಪು ಹೆಚ್ಚಾಗಿರುವುದು ನಿಮ್ಮ ಗಮನಕ್ಕೆ ಬರುವುದು.



Click it and Unblock the Notifications
