Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಿಮ್ಮ ಮುಖದ ನೈಜ ಬಣ್ಣ ಕಳೆಗುಂದುತ್ತಿದೆಯಾ?

ಬಣ್ಣ ಕುಂದುವಿಕೆ ಸಮಸ್ಯೆ ನೀಗಿಸಲು ಕೆಲವು ನೈಸರ್ಗಿಕ ಸಲಹೆಗಳನ್ನು ಪಾಲಿಸಿದರೆ ಸಾಕು.
1. ಆಲೂಗಡ್ಡೆಯನ್ನು ತುರಿದು, ರಸವನ್ನು ಮುಖಕ್ಕೆ ಲೇಪಿಸಬೇಕು. ಆಲೂಗಡ್ಡೆ ರಸದಲ್ಲಿನ ಬ್ಲೀಚಿಂಗ್ ಅಂಶ ಚರ್ಮವನ್ನು ಬೆಳ್ಳಗೆ ಮಾಡುತ್ತದೆ.
2. ದಿನವೂ ಮೊಸರಿನಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ತಣ್ಣನೆ ನೀರಿನಿಂದ ತೊಳೆದುಕೊಂಡರೆ ಕಪ್ಪು ಕಲೆ ಕ್ರಮೇಣ ಕಡಿಮೆಗೊಳ್ಳುತ್ತದೆ. ಮುಖದ ಮೇಲಿನ ಕೂದಲನ್ನು ಬ್ಲೀಚ್ ಮಾಡಿ ನೈಜ ಬಣ್ಣವನ್ನು ನಿಮಗೆ ನೀಡುತ್ತದೆ.
3. ನಿಂಬೆ ಮತ್ತು ಟೊಮೆಟೊ ರಸ ನಿರ್ಜೀವ ಬಣ್ಣ ಹೋಗಿಸಲು ಪರಿಣಾಮಕಾರಿ. ಈ ಎರಡೂ ರಸವನ್ನು ಬೆರೆಸಿ ಅದರಲ್ಲಿ ಹತ್ತಿ ಅದ್ದಿ ಅದನ್ನು ಮುಖದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಂಡರೆ ಚರ್ಮ ಕಾಂತಿಯುತವಾಗುತ್ತದೆ.
4. ಪರಂಗಿ, ಓಟ್ ಮೀಲ್ ಮತ್ತು ಜೇನಿನ ಫೇಸ್ ಪ್ಯಾಕ್ ಹಾಕಿಕೊಂಡರೆ ನಿರ್ಜೀವ ಕಳೆ ಹೋಗಿ ಮುಖ ಹೊಳೆಯುವಂತೆ ಮಾಡುತ್ತದೆ.
5. ವಿಳ್ಳೆಯದೆಲೆಯೂ ಸೂರ್ಯನ ಕಿರಣಗಳಿಂದ ಕಪ್ಪಾದ ಚರ್ಮಕ್ಕೆ ಹೆಚ್ಚು ಪರಿಣಾಮಕಾರಿ. ವಿಳ್ಳೆಯದೆಲೆಯ ರಸವನ್ನು ಕಪ್ಪಾದ ಜಾಗಕ್ಕೆ ಹಚ್ಚಿಕೊಂಡು ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ಕ್ರಮೇಣ ಸಮಸ್ಯೆ ದೂರವಾಗುತ್ತದೆ.
6. ಕಡಲೆ ಹಿಟ್ಟು, ಹಾಲು ಮಿಶ್ರಿತ ಫೇಸ್ ಪ್ಯಾಕ್ ಈ ಸಮಸ್ಯೆಗೆ ಸರಳೋಪಾಯ. ನಿರ್ಜೀವ ಚರ್ಮವನ್ನು ತೊಲಗಿಸಿ ತ್ವಚೆ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ.
ಯಾವುದೇ ಅಡ್ಡ ಪರಿಣಾಮ ಉಂಟುಮಾಡದೆ, ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಈ ಅಂಶಗಳನ್ನು ಪಾಲಿಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.



Click it and Unblock the Notifications
