Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೊಡವೆ ಮಾಯವಾಗಲು ಸ್ಪೆಷಲ್ ಫೇಶಿಯಲ್

ಮನೆಯಲ್ಲೇ ಮೊಡವೆಗೆ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ?
- ಫೇಶಿಯಲ್ ಹಾಕಿಕೊಳ್ಳುವ ಮುನ್ನ ಮುಖದ ಮೇಲಿನ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಹೋಗಲಾಡಿಸಬೇಕು. ಇವುಗಳೇ ಮುಖದಲ್ಲಿ ಮೊಡವೆ ಮೂಡಲು ಕಾರಣವಾಗಿರುತ್ತವೆ.
- ಬಿಸಿ ನೀರನ್ನು ಕಾಯಿಸಿ ಅದರಿಂದ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು. 5-7 ನಿಮಿಷ ಹಬೆ ತೆಗೆದುಕೊಂಡ ನಂತರ ಚರ್ಮದ ರಂಧ್ರಗಳು ತೆರೆದುಕೊಂಡಿರುತ್ತವೆ. ನಂತರ ಬೆರಳಿನ ಸಹಾಯದಿಂದ ಬ್ಲಾಕ್ ಹೆಡ್ ತೆಗೆಯಬಹುದು.
- ಓಟ್ ಮೀಲ್ ಪೌಡರ್ ನಿಂದ ಸ್ಕ್ರಬ್ ನಂತೆ ಮಾಡಿಕೊಂಡು ಮುಖದ ಮೇಲೆ ಮೃದುವಾಗಿ ಉಜ್ಜಿದರೆ ಬ್ಲಾಕ್ ಹೆಡ್ ಕಡಿಮೆಯಾಗುತ್ತದೆ.
- ಮೊಟ್ಟೆಯ ಬಿಳಿ ಭಾಗ ಚಿಕ್ಕ ಚಿಕ್ಕ ಗುಳ್ಳೆಗಳನ್ನು ಹೋಗಿಸಿ ಕಾಂತಿ ತರಲು ಸಹಾಯಮಾಡುತ್ತದೆ. ಎರಡು ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಕದಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
- ಅಡುಗೆ ಸೋಡಾದ ಫೇಶಿಯಲ್ ಕೂಡ ಮೊಡವೆಗೆ ಪರಿಣಾಮಕಾರಿ. 3-4 ಚಮಚ ಅಡುಗೆ ಸೋಡಾವನ್ನು ಪೇಸ್ಟ್ ನಂತೆ ತಯಾರಿಸಿಕೊಂಡು ಮೃದುವಾಗಿ ಮುಖಕ್ಕೆ ಉಜ್ಜಿಕೊಂಡು 10 ನಿಮಿಷದ ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇದು ಮೊಡವೆ ಹೋಗಿಸುವ ಒಂದು ಸುಲಭ ದಾರಿ.
- ಓಟ್ ಮೀಲ್ ಪೌಡರ್ ಜೊತೆ ಈರುಳ್ಳಿ ರಸ ಮತ್ತು ಜೇನನ್ನು ಸೇರಿಸಿ ಕಲೆಸಿಕೊಂಡು ಅದನ್ನು ಫೇಶಿಯಲ್ ನಂತೆ ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ಕಲೆ ಮತ್ತು ಮೊಡವೆಗಳನ್ನು ನಿವಾರಿಸುತ್ತದೆ.



Click it and Unblock the Notifications
